ನಿಡಗುಂದಿ: ಅಹಿಂಸೆ ಮತ್ತು ಶಾಂತಿ ಎಂಬ ಅಸ್ತ್ರದಿಂದಲೇ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಾತ್ಮಗಾಂಧಿಯವರ 76 ನೇ ಪುಣ್ಯ ತಿಥಿ ಆಚರಿಸಲಾಗುತ್ತಿದೆ ಎಂದು ಗ್ರಾಮದ ಹಿರಿಯರಾದ ಶಿವನಗೌಡ ಪಾಟೀಲ ಹೇಳಿದರು.
ಅವರು ಪಟ್ಟಣದ ಹೊರವಲಯದ ಮಣಗೂರ ಸರ್ಕಾರಿ ಪ್ರೌಡಶಾಲೆಯಲ್ಲಿ ಮಂಗಳವಾರ ನಡೆದ ಹುತಾತ್ಮ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
1948 ಜನವರಿ 30 ರಂದು ಪ್ರಾರ್ಥನೆಗೆಂದು ಬಿರ್ಲಾ ಹೌಸ್ ಗೆ ತೆರಳಿದ್ದ ಅವರ ಮೇಲೆ ಗೋಡ್ಸೆ ಗುಂಡಿಕ್ಕಿದ ಪರಿಣಾಮ ಅವರು ಇಹಲೋಕ ತ್ಯಜಿಸಿದ್ದರು. ಜನವರಿ 30 ರಂದು ಗಾಂಧಿ ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ಮಡಿದ ಅಸಂಖ್ಯ ಹುತಾತ್ಮರಿಗೆ ನಮಿಸುವ ದಿನ ಎಂದರು.
ಪ್ರಭಾರ ಮುಖ್ಯ ಶಿಕ್ಷಕ ಶಿವಪ್ಪ ಪೂಜೇರ, ಶಿಕ್ಷಕಿ ಪದ್ಮಾವತಿ ದಾಸರ ಮಾತನಾಡಿ, ದೇಶಕ್ಕಾಗಿ ಪ್ರಾಣತೆತ್ತ ಇನ್ನೀತರ ಮಹಾತ್ಮರ ಬಲಿದಾನವನ್ನು ಸ್ಮರಿಸಿದರು.
ಎಸ್.ಬಿ. ಪಾಟೀಲ, ಟಿ.ನಿಂಗಪ್ಪ, ಯು.ಎಂ. ಪ್ರಧಾನಿ, ಸಿ.ಐ. ಪಾಟೀಲ, ಎನ್.ಬಿ. ಬಾಗವಾನ, ಆರ್.ಎನ್. ಮಂಡಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

