ವಿಜಯಪುರ: ಅಂತಾರಾಷ್ಟ್ರೀಯ ಖ್ಯಾತಿಯ ಹಂಪಿ ಉತ್ಸವದ ಕವಿಗೋಷ್ಠಿಯಲ್ಲಿ ಕವನ ವಾಚಿಸಲು ಆಲಮೇಲದ ವೈದ್ಯಸಾಹಿತಿ ಡಾ.ಸಮೀರ ಹಾದಿಮನಿಯವರು ಆಯ್ಕೆಯಾಗಿದ್ದಾರೆ.
ಹಿಂದಿನ ವಿಜಯನಗರ ಸಾಮ್ರಾಜ್ಯದ ಭವ್ಯತೆಯನ್ನು ಮರುಸೃಷ್ಟಿಸುವ ಸಲುವಾಗಿ ರಾಜ್ಯ ಸರ್ಕಾರವು ಹಂಪಿ ಉತ್ಸವವನ್ನು ಆರಂಭಿಸಿದ್ದು, 2024ರ ಹಂಪಿ ಉತ್ಸವವು ಫೆಬ್ರವರಿ 2 ರಿಂದ 4ರವರೆಗೆ ಐತಿಹಾಸಿಕ ಪ್ರವಾಸಿ ತಾಣ ಹಂಪಿಯಲ್ಲಿ ನಡೆಯಲಿದೆ. ಉತ್ಸವದ ಪ್ರಯುಕ್ತ ಕವಿಗೋಷ್ಠಿಯು ವಿರೂಪಾಕ್ಷೇಶ್ವರ ದೇವಸ್ಥಾನದ ವೇದಿಕೆಯಲ್ಲಿ ಜರುಗುವುದು.
ಡಾ.ಸಮೀರ ಹಾದಿಮನಿಯವರು ಈಗಾಗಲೇ ನವರಸಪುರ ಅಂತರಾಷ್ಟ್ರೀಯ ಉತ್ಸವ, ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ ಸೇರಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತಿನ ಹಲವು ಸಮ್ಮೇಳನಗಳಲ್ಲಿ ಕವನವಾಚನ ಮಾಡಿದ್ದಾರೆ. ಉಪ್ಪು ನೀರಿನ ಸೆಲೆ, ಶ್ಲಾಘನೆ-ಖಂಡನೆ ಸೇರಿದಂತೆ ಐದು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

