Author: editor.udayarashmi@gmail.com

ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್(ಐಸಿಎಸ್‌ಇ) ಸ್ಕೂಲ್ ನಲ್ಲಿ ವಿಶ್ವ ಪರಿಸರ ದಿನ ಅರ್ಥಪೂರ್ಣ ಆಚರಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್(ಐಸಿಎಸ್‌ಇ) ಸ್ಕೂಲ್ ನಲ್ಲಿ ಶುಕ್ರವಾರ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಾರ್ಯಕ್ರಮ ಉದ್ಘಾಟಿಸಿದ ಶಾಲೆಯ ಪ್ರಾಚಾರ್ಯ ವಿಕ್ರಂ ನಾರ್ವೆಕರ ಮಾತನಾಡಿ, ಪರಿಸರ ನಮ್ಮ ಜೀವನಕ್ಕೆ ಆಧಾರವಾಗಿದೆ. ಗಾಳಿ, ನೀರು, ಮಣ್ಣು, ಮರಗಳು, ಪ್ರಾಣಿಗಳು ಪರಿಸರದ ಪ್ರಮುಖ ಅಂಗಗಳಾಗಿವೆ. ಆರೋಗ್ಯಕರ ಪರಿಸರವಿಲ್ಲದೆ ಜೀವ ಜಗತ್ತು ಉಳಿಯಲು ಸಾಧ್ಯವಿಲ್ಲ. ಹೀಗಾಗಿ ಪರಿಸರ ಉಳಿಸಿ, ಮರಗಳನ್ನು ಬೆಳೆಸುವದರಿಂದ ಗುಣಮ್ಟಟದ ಆಮ್ಲಜನಕ ಪಡೆಯಲು ಸಾಧ್ಯ. ಪ್ರತಿಯೊಬ್ಬರು ತಂತಮ್ಮ ಹುಟ್ಟು ಹಬ್ಬದಂದು ಒಂದೊಂದು ಗಿಡ ನೆಡುವ ಮೂಲಕ ಪರಿಸರ ಸ್ನೇಹಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಇದೇ ವೇಳೆ ವಿದ್ಯಾರ್ಥಿಗಳು ಪರಿಸರ ಸಂಬಂಧಿ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.ಪರಿಸರ ಸಂರಕ್ಷಣೆ ಕುರಿತು ನಾಟಕ ಪ್ರದರ್ಶಿಸಿದ ಮಕ್ಕಳು, ಭಾಷಣವನ್ನೂ ಮಾಡಿದರು. ಅಲ್ಲದೇ, ಪರಿಸರ ಜಾಗೃತಿ ಕುರಿತು ಘೋಷಣೆ…

Read More

ವಿಜಯಪುರದಲ್ಲಿ ಪರಿಸರ ಪ್ರೇಮಿ ದಿ.ಉದಯ ನಾವಲಗಿ ಸ್ಮರಣೆ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪರಿಸರ ರಕ್ಷಣೆಯನ್ನೇ ಉಸಿರಾಗಿಸಿಕೊಂಡಿದ್ದ ಪರಿಸರ ಪ್ರೇಮಿ ದಿ.ಉದಯ ನಾವಲಗಿ ಅವರ ಸ್ಮರಣೆ ಹಾಗು ಪರಿಸರ ದಿನಾಚರಣೆಯನ್ನು ನನ್ನ ಗಿಡ-ನನ್ನ ಭೂಮಿ ಸಂಸ್ಥೆಯ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.ಈ ಅಪೂರ್ವ ಕಾರ್ಯಕ್ರಮದಲ್ಲಿ ಅರಳಿಕಟ್ಟೆ ಆಂಜನೇಯ ಮಂದಿರ ಆವರಣದಲ್ಲಿ 100ಕ್ಕೂ ಅದಿಕ ಸಸಿಗಳನ್ನು ಏಕಕಾಲಕ್ಕೆ ನೆಡಲಾಯಿತು. ಪರಿಸರ ರಕ್ಷಣೆಯ ಜಾಗೃತಿಯ ಜೊತೆಗೆ ಆರೋಗ್ಯ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿಯೂ ಈ ಸಮಾರಂಭ ಗಮನ ಸೆಳೆಯಿತು.ಮುಖ್ಯ ಅತಿಥಿಯಾಗಿದ್ದ ಖ್ಯಾತ ಚಲನಚಿತ್ರ ನಿರ್ಮಾಪಕ ಹಾಗೂ ಪರಿಸರ ಪ್ರೇಮಿ ಬಸಂತಕುಮಾರ ಪಾಟೀಲ ಸಸಿಗಳನ್ನು ನೆಡುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪರಿಸರ ಉಳಿವಿನಲ್ಲಿಯೇ ನಮ್ಮ ಉಳಿವು ಅಡಗಿದೆ, ಪರಿಸರ ರಕ್ಷಣೆ ಎಂಬುದು ದೈನಂದಿನ ಜೀವನದ ಭಾಗವಾಗಬೇಕು, ಪರಿಸರ ಪ್ರೇಮಿಗಳ ಜೀವನ ಹಾಗೂ ಪರಿಸರ ಪ್ರೇಮದಿಂದ ಸ್ಪೂರ್ತಿ ಪಡೆದು ನಾವು ಸಹ ಪರಿಸರ ಉಳಿಸುವ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.ಆರೋಗ್ಯ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸೈನಿಕ ಶಾಲೆ ಬಿಜಾಪುರದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಸೈನಿಕ ಶಾಲೆಯ ಮುಖ್ಯ ದ್ವಾರದ ಬಳಿ ವಿಶಾಲವಾದ ಪ್ರದೇಶದಲ್ಲಿ ದಿನಾಂಕ 5ನೇ ಜೂನ್ 2026, ಶುಕ್ರವಾರ ರಂದು ವಿಶ್ವ ಪರಿಸರ ದಿನಾಚರಣೆಯ ನಿಮಿತ್ಯ ಹಸಿರೀಕರಣ ಮಾಡುವ ಮೂಲ ಉದ್ದೇಶದಿಂದ ಶಾಲೆಯ ಮುಖ್ಯ ದ್ವಾರದ ವಿಶಾಲವಾದ ಪ್ರದೇಶದಲ್ಲಿವಿವಿಧ ಸಸಿಗಳನ್ನು ನೆಡಲಾಯಿತು.ಈ ಕಾರ್ಯಕ್ರಮವನ್ನು ಶಾಲೆಯ ಪ್ರಾಚಾರ್ಯೆ ಗ್ರೂಪ್ ಕ್ಯಾಪ್ಟನ್ ರಾಜಲಕ್ಷ್ಮಿ ಪೃಥ್ವಿರಾಜ್ ರವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಇಂದು ವಿಶ್ವ ಪರಿಸರ ದಿನಾಚರಣೆ ಯಾಗಿದ್ದು ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ, ಹಾಗೂ ಹವಾಮಾನದ ವೈಪರೀತ್ಯಗಳ ನಿಯಂತ್ರಣಕ್ಕೆ ಒತ್ತು ನೀಡಬೇಕಾಗಿದೆ. ನಾವೆಲ್ಲರೂ ಹಸರೀಕರಣದತ್ತ ಸಂಕಲ್ಪ ಕೈಗೊಂಡು ನಾವೆಲ್ಲರೂ ಸಸಿಗಳನ್ನು ನೆಡುವುದರ ಮೂಲಕ ಅವುಗಳ ಪಾಲನೆ ಪೋಷಣೆ ಮಾಡಿ ಉತ್ತಮ ಪರಿಸರವನ್ನು ನಿರ್ಮಾಣ ಮಾಡೋಣ ಹಾಗೂ ಇವುಗಳನ್ನು ಸರಿಯಾಗಿ ಸಂರಕ್ಷಿಸಿ ಮುಂದೆ ಇವುಗಳು ಹೆಮ್ಮರಗಳಾಗಿ ಅವುಗಳು ನಮ್ಮನ್ನು ರಕ್ಷಿಸುತ್ತವೆ, ಹಸಿರೇ ನಮ್ಮ ಉಸಿರು ಎಂದು ಈ ಕಾರ್ಯಕ್ರಮದಲ್ಲಿ ಶಾಲೆಯ ಉಪ-ಪ್ರಾಚಾರ್ಯೆಯಾದ…

Read More

ಲೇಖನ- ಡಾ ಶಶಿಕಾಂತ ಪಟ್ಟಣಅಧ್ಯಕ್ಷರು, ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರರಾಮದುರ್ಗ – ಪುಣೆ ಉದಯರಶ್ಮಿ ದಿನಪತ್ರಿಕೆ ಹನ್ನೆರಡನೆಯ ಶತಮಾನದ ಶರಣರ ಚರಿತ್ರೆ ಮತ್ತು ಇತಿಹಾಸ ದಾಖಲಿಸುವ ಸಂದರ್ಭದಲ್ಲಿ ಅವರ ಕಾಲಘಟ್ಟ ಅಣ್ಣ ಅಕ್ಕ ತಂಗಿ ಎನ್ನುವ ತಪ್ಪು ಮಾಹಿತಿ ಇಲ್ಲಿಯವರೆಗೆ. ಸಂಗ್ರಹವಾಗಿವೆ. ಇವತ್ತು ಡಿ ದೇವರಾಜು ಎಂಬ ಖ್ಯಾತ ಕಥಾ ಕೀರ್ತನಕಾರರು ನನಗೆ ಫೋನ್ ಮಾಡಿ ತಮಗೆ ಬಸವಣ್ಣನವರ ಬಗ್ಗೆ ಕೆಲ ವಿಚಾರಗಳ ವಿಷಯಗಳ ಸ್ಪಷ್ಟತೆ ಮತ್ತು ಮಾಹಿತಿ ಬೇಕು ನನಗೆ ತಮ್ಮ ಫೋನ್ ನಂಬರ್ ಪ್ರೊ ಎಸ್ ಜಿ ಸಿದ್ದರಾಮಯ್ಯ ಸರ್ ಕೊಟ್ಟಿದ್ದಾರೆ ಎನ್ನುತ್ತಾ ಬಸವಣ್ಣನವರ ಉಪನಯನ ಬಾಲ್ಯ ಮತ್ತೆ ಕೂಡಲ ಸಂಗಮಕ್ಕೆ ಹೋಗುವ ವಿಷಯಗಳನ್ನು ಚರ್ಚಿಸುತ್ತಾ, ಅಕ್ಕ ನಾಗಮ್ಮ ಬಸವಣ್ಣನವರ ತಂಗಿ ಎಂದು ಕೇಳಿದರು.ಅದಕ್ಕೆ ನಾನು ಅಕ್ಕ ನಾಗಮ್ಮ ಬಸವಣ್ಣನವರ ಹಿರಿಯಕ್ಕ ತಂಗಿಯಲ್ಲ ಎಂದು ಹೇಳಿದೆ. ಅವರು ಸರ್ ಹಿರಿಯ ಸಂಶೋಧಕ ಎಂ ಚಿದಾನಂದ ಮೂರ್ತಿ, ಡಾ ಎಂ ಎಂ ಕಲಬುರ್ಗಿ ಸರ್, ಡಾ ವೀರಣ್ಣ ರಾಜೂರ…

Read More

ಲೇಖನ- ವೀಣಾ ಹೇಮಂತಗೌಡ ಪಾಟೀಲ್.ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಇತ್ತೀಚಿಗಿನ ದಿನಗಳಲ್ಲಿ ಪಾಲಕರಲ್ಲಿ ಒಂದು ಹೊಸ ರೀತಿಯ ಭ್ರಾಂತಿ ಆರಂಭವಾಗಿದೆ. ತಮ್ಮ ಮಕ್ಕಳು ಯಾವುದೇ ವಿಷಯದಲ್ಲಿ ಸೋಲಬಾರದು ಅವರು ಬಯಸುವ ಪ್ರತಿಯೊಂದು ವಸ್ತು ಅವರಿಗೆ ದೊರೆಯಲೇಬೇಕು , ಇನ್ನೂ ಮುಂದೆ ಹೋಗಿ ಈ ಹಿಂದೆ ನಮಗೆ ದೊರೆಯದ್ದು ನಮ್ಮ ಮಕ್ಕಳಿಗೆ ದೊರೆಯಲಿ ಎಂಬ ಆಶಯ. ಆದರೆ ಇದು ಶುದ್ಧ ತಪ್ಪು. ಬೀಳುವವನು ಏಳುತ್ತಾನೆಸೋತವನು ಗೆಲ್ಲುವ ಕುರಿತು ಯೋಚಿಸುತ್ತಾನೆ.. ಸೋಲೇ ಗೆಲುವಿನ ಮೆಟ್ಟಿಲು. ಪ್ರತಿಯೊಂದು ಸೋಲು ಕೂಡ ಮನುಷ್ಯನಿಗೆ ಒಂದು ಹೊಸ ಪಾಠವನ್ನು ಕಲಿಸುತ್ತದೆ.ಮಕ್ಕಳ ಸೋಲು ತಮ್ಮ ಅಹಮಿಕೆಗೆ ನೀಡುವ ಪೆಟ್ಟು ಎಂಬಂತೆ ಭಾವಿಸುವ ಪಾಲಕರು ನಮ್ಮಲ್ಲಿ ಇದ್ದಾರೆ. ಆದರೆ ನಿಜವಾಗಿಯೂ ಸೋಲನ್ನು ಒಪ್ಪಿಕೊಳ್ಳುವ ಮಗು ಆ ಸೋಲಿನಿಂದ ಉಂಟಾಗುವ ಧಕ್ಕೆಯನ್ನು ತಾಳಿಕೊಳ್ಳುವ ಸೈರಣ ಶಕ್ತಿಯನ್ನು ಪಡೆಯುತ್ತದೆ. ಸೋಲು ಗೆಲುವುಗಳು ಆಟದ ಅವಿಭಾಜ್ಯ ಅಂಗ. ಇಂದಿನ ಸೋಲು ನಾಳೆಯ ಗೆಲುವಿಗೆ ಕಾರಣವಾಗುತ್ತದೆ ಎಂಬುದನ್ನು ನಾವು ಮಕ್ಕಳಿಗೆ ಕಲಿಸಬೇಕು.ಚಿಕ್ಕಂದಿನಿಂದಲೂ ಮಕ್ಕಳಿಗೆ ಬಿದ್ದು ಗಿದ್ದೀಯಾ, ಕೈ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮೇ 20, 2024 ರಂದು ವಿಜಯಪುರದ ಸೈಬರ್ ಪೊಲೀಸ್ ಠಾಣೆಯಲ್ಲಿ ಬಬಲೇಶ್ವರ ತಾಲೂಕಿನ ತಿಗಣಿಬಿದರಿ ಗ್ರಾಮದ ಸುರೇಶ್ ಅಥಣಿ ಎಂಬುವವರು ವಂಚನೆ ಪ್ರಕರಣದ ದೂರು ದಾಖಲಿಸಿದ್ದರು.ಆರೋಪಿಯು ಎಸ್.ಪಿ. ಲಕ್ಷ್ಮಣ್ ನಿಂಬರಗಿ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಹಾಗೂ ಇಮೇಲ್ ಐಡಿ (nimbargilaxman29@gmail.com) ಸೃಷ್ಟಿಸಿದ್ದನು. ಈ ನಕಲಿ ಐಡಿ ಮೂಲಕ ದೂರುದಾರರಿಗೆ ಸಂಪರ್ಕಿಸಿ, PWD ಇಲಾಖೆಯಲ್ಲಿ SDC ನೌಕರಿ ಕೊಡಿಸುವುದಾಗಿ ನಂಬಿಸಿ ₹5,04,600 ಹಣವನ್ನು ಪಡೆದು ವಂಚಿಸಿದ್ದನು. ಈ ಕುರಿತು ಪ್ರಕರಣ ದಾಖಲಾಗಿತ್ತು, ಪ್ರಕರಣದ ಬೆನ್ನತ್ತಿದ CEN ಪೊಲೀಸರು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ದುರದುಂಡಿ ಗ್ರಾಮದ ನಿವಾಸಿ ಹನುಮಂತ ಭಜಂತ್ರಿ ಎಂಬಾತನನ್ನು ಬಂಧಿಸಿದ್ದಾರೆ.ಆರೋಪಿಯು ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಬಂಧಿತ ಆರೋಪಿಯು ಇದೇ ರೀತಿ ಹುಬ್ಬಳ್ಳಿ, ಶಿವಮೊಗ್ಗ ಮತ್ತು ಇತರೆಡೆಗಳಲ್ಲೂ ನಕಲಿ ಪ್ರೊಫೈಲ್ ಸೃಷ್ಟಿಸಿ ವಂಚಿಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಇತರ ಅಧಿಕಾರಿಗಳ ಹೆಸರನ್ನೂ ಬಳಸಿಕೊಂಡು ವಂಚನೆ ಮಾಡಿದ್ದಾನೆಯೇ ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಪ್ರಾಮಾಣಿಕ, ನಿಷ್ಪಕ್ಷಪಾತ ಹಾಗೂ ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ವಿಜಯಪುರದ ಹಿರಿಯ ಪತ್ರಕರ್ತ ದೀಪಕ್ ಶಿಂತ್ರೆ ಅವರಿಗೆ ಸೊಲಾಪುರದ ಸ್ಟಾರ್ ನ್ಯೂಸ್ ಚಾನೆಲ್ ವತಿಯಿಂದ ನೀಡಲಾಗುವ “ಪತ್ರಕರ್ತ ಭೂಷಣ” ಪ್ರಶಸ್ತಿ ಘೋಷಿಸಲಾಗಿದೆ.ದೀಪಕ್ ಶಿಂತ್ರೆ ಅವರು ಹಲವು ವರ್ಷಗಳಿಂದ ಕರ್ನಾಟಕ ರಾಜ್ಯದಲ್ಲಿ ವಾಸವಿದ್ದು, ಮರಾಠಿ ಪತ್ರಿಕೋದ್ಯಮಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಕರ್ನಾಟಕದ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಜಿಲ್ಲೆಯ ವಿವಿಧ ವಿಷಯಗಳ ಕುರಿತು ಅವರು ನಿರಂತರವಾಗಿ ವರದಿಗಾರಿಕೆ ನಡೆಸಿದ್ದಾರೆ. ಮರಾಠಿ ದಿನಪತ್ರಿಕೆಗಳಿಗೆ ಸುದ್ದಿಗಳನ್ನು ಪೂರೈಸುವ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಕರ್ನಾಟಕದ ಸ್ವಾಭಿಮಾನಕ್ಕೆ ಸದಾ ಗೌರವ ನೀಡುತ್ತಾ ಕಾರ್ಯನಿರ್ವಹಿಸಿದ್ದಾರೆ.ವಿಶೇಷವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿ ಭಾಗದ ಸೂಕ್ಷ್ಮ ವಿಚಾರಗಳು, ಭಾಷಾ ಸಂಬಂಧಿತ ವಿಷಯಗಳು ಹಾಗೂ ಜನರ ಸಮಸ್ಯೆಗಳ ಕುರಿತು ವರದಿಗಾರಿಕೆ ಮಾಡುವಾಗ ಅತ್ಯಂತ ಸಂಯಮ, ಸಮತೋಲನ ಮತ್ತು ಜವಾಬ್ದಾರಿಯುತ ನಿಲುವು ತಾಳಿದ್ದಾರೆ.ಅವರ ದೀರ್ಘಕಾಲೀನ ಪತ್ರಿಕೋದ್ಯಮ ಸೇವೆ, ಸಾಮಾಜಿಕ ಕಳಕಳಿ ಹಾಗೂ…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ತಾಲೂಕಾ ಛಾಯಾಚಿತ್ರ ಗ್ರಾಹಕರ ಸಂಘ (ರಿ), ಜಮಖಂಡಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಜಾಗೃತಿ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಶುಕ್ರವಾರ ಬೆಳಿಗ್ಗೆ 10.30 ಗಂಟೆಗೆ ಹುಲ್ಯಾಳ ಗ್ರಾಮದ ಶ್ರೀ ಗುರು ಶಂಭುಲಿಂಗೇಶ್ವರ ಮಾಧ್ಯಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮವು ರೇಣುಕಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು, ಯೋಗಾಶ್ರಮ ಹುಲ್ಯಾಳ ಅವರ ಸಾನಿಧ್ಯದಲ್ಲಿ ಹಾಗೂ ಹರ್ಷಾನಂದ ಮಹಾಸ್ವಾಮಿಗಳು, ಗುರು ದೇವಾಶ್ರಮ ಹುಲ್ಯಾಳ ಅವರ ಸಾನಿಧ್ಯದಲ್ಲಿ ನಡೆಯಲಿದೆ.ಕಾರ್ಯಕ್ರಮವನ್ನು ವಿಶ್ರಾಂತ ತಹಶೀಲ್ದಾರರಾದ ಬಿ.ಎಲ್. ಗೋಠೆ ಅವರು ಉದ್ಘಾಟಿಸಲಿದ್ದು, ಜಮಖಂಡಿ ತಾಲೂಕಾ ಛಾಯಾಚಿತ್ರಗ್ರಾಹಕರ ಸಂಘದ ಅಧ್ಯಕ್ಷರಾದ ಹಾಸಿಮ್ ಅ. ಜಮಖಂಡಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಶ್ರೀಮತಿ ಎಸ್.ಎಂ. ಆನಿ ಮುಖ್ಯೋಪಾಧ್ಯಾಯರು, ಶ್ರೀ ಗುರು ಶಂಭುಲಿಂಗೇಶ್ವರ ಮಾಧ್ಯಮಿಕ ಶಾಲೆ, ಶಿವಪ್ಪ ಸೋರಗಾಂವಿ ಅಧ್ಯಕ್ಷರು, ಸುರೇಶ ಶಂ. ಕಡಪಳ್ಳಿ ಪಿ.ಡಿ.ಓ. ಹಾಗೂ ಉಪಾಧ್ಯಕ್ಷರಾದ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಶ್ರೀಶೈಲ ಭೂಮಾರ ಅಧ್ಯಕ್ಷರು, ತಾಲೂಕಾ ರೈತ ಸಂಘ, ಗುರುನಾಥ ಸುತಾರ ವಿಶ್ರಾಂತ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ, ಪ್ರಥಮ ಬಾರಿಗೆ ವಿಜಯಪುರಕ್ಕೆ ಆಗಮಿಸುತ್ತಿರುವ ಸಚಿವ ಎಂ. ಬಿ. ಪಾಟೀಲರಿಗೆ ವಿಜಯಪುರ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳು ಮತ್ತು ನಾಗರಿಕರ ವತಿಯಿಂದ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ.ದಿ.6 ಶನಿವಾರ ನಗರದ ಪಾಟೀಲ ಗಾರ್ಡೇನಿಯಾದಲ್ಲಿ ಬೆ.೧೧ ಗಂ. ನಡೆಯಲಿರುವ ಸಮಾರಂಭದಲ್ಲಿ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಹಿತೈಷಿಗಳು ಭಾಗವಹಿಸಿ ಸಚಿವ ಎಂ ಬಿ ಪಾಟೀಲ ಅವರನ್ನು ಸನ್ಮಾನಿಸಲಿದ್ದಾರೆ.

Read More