Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ನೂರಕ್ಕೆ ನೂರರಷ್ಟು ಫಲಿತಾಂಶ ಸಾಧಿಸಿದನಾಗನೂರು ಕಾಲೇಜು

ಪತ್ರಕರ್ತ ಇಂದುಶೇಖರ ಮಣೂರ ಗೆ ’ಬಸವ ಸೇವಾ ಪ್ರಶಸ್ತಿ’

ಏ.೨೩ ರಿಂದ ಪಂಚಕಲ್ಯಾಣ ಪ್ರತಿಷ್ಠಾ ಮಹಾ ಮಹೋತ್ಸವ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಬಿಜೆಪಿಗೆ ಪಕ್ಷಕ್ಕಿಂತ ರಾಷ್ಟ್ರ ಮುಖ್ಯ :ಭಾಂಡಗೆ
(ರಾಜ್ಯ ) ಜಿಲ್ಲೆ

ಬಿಜೆಪಿಗೆ ಪಕ್ಷಕ್ಕಿಂತ ರಾಷ್ಟ್ರ ಮುಖ್ಯ :ಭಾಂಡಗೆ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರದಲ್ಲಿ ಬಿಜೆಪಿ ಬೂತ್ ಮಟ್ಟದ ಏಜೆಂಟರಿಗೆ ಮಾರ್ಗದರ್ಶನ ಕಾರ್ಯಾಗಾರ ಉದ್ಘಾಟಿಸಿದ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಅಭಿಮತ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಬಿಜೆಪಿ ಪಕ್ಷದ ಬಗ್ಗೆ ಯಾವ ಕಾಂಗ್ರೆಸ್ ನಾಯಕರು ಅಂದು ಹಾಸ್ಯ ಮಾಡಿದ್ದರೋ ಅದೇ ನಾಯಕರು ಇಂದು ತಮ್ಮ ಮಕ್ಕಳನ್ನು ಬಿಜೆಪಿಗೆ ಕಳುಹಿಸುತ್ತಿದ್ದಾರೆ ಎಂದು
ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.
ವಿಜಯಪುರದ ಸಾಯಿ ವಿಹಾರ ಮಂಗಲ ಕಾರ್ಯಾಲಯದಲ್ಲಿ ನಡೆದ ಬಿಜೆಪಿ ನಗರ ಮಂಡಳ ವತಿಯಿಂದ ಬೂತ್ ಮಟ್ಟದ ಏಜೆಂಟರಿಗೆ ಆಯೋಜಿಸಲಾಗಿದ್ದ ಮಾರ್ಗದರ್ಶನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಇಡೀ ದೇಶದಲ್ಲಿಯೇ ಬಿಜೆಪಿ ಪರವಾದ ಅಲೆ ಇದೆ, ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಪಣಾ ಮನೋಭಾವ, ಅಭಿವೃದ್ಧಿಪರ ದೃಷ್ಟಿಕೋನದ ನಾಯಕತ್ವದಿಂದ ಬಿಜೆಪಿ ಬಲಿಷ್ಠವಾಗಿದೆ, ಕಾಂಗ್ರೆಸ್ ಇಷ್ಟಪಡುತ್ತಿದ್ದ ಅನೇಕರು ಸಹ ಇಂದು ಬಿಜೆಪಿಗೆ ಒಲವು ಬೆಳೆಸಿಕೊಳ್ಳುತ್ತಿದ್ದಾರೆ, ಅಂದು ಆರಂಭದ ದಿನದಲ್ಲಿ ಬೆರಳಣಿಕೆಯಷ್ಟು ಸೀಟುಗಳನ್ನು ಗೆಲ್ಲದ ಬಿಜೆಪಿಯನ್ನು ನೋಡಿ ನಗುತ್ತಿದ್ದ ಕಾಂಗ್ರೆಸ್ ನಾಯಕರೇ ಇಂದು ತಮ್ಮ ಮಕ್ಕಳನ್ನು ಬಿಜೆಪಿಗೆ ಕಳುಹಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ವೆಂಟಿಲೇಟರ್‌ನಲ್ಲಿರುವ ಹಡಗು, ಶೀಘ್ರವೇ ಅದು ಮುಳುಗುತ್ತದೆ, ಅವರ ರಾಹುಲ್ ಗಾಂಧೀಗೆ ಬದ್ಧತೆಯೇ ಇಲ್ಲ, ಸಂಸತ್‌ನಲ್ಲಿ ಏನು ಮಾತನಾಡುತ್ತಾರೋ ಅವರಿಗೆ ಪರಿವೆಯೇ ಇಲ್ಲ ಎಂದರು.
ಕಾಂಗ್ರೆಸ್‌ ನಂತೆ ಬಂಗಾರದ ಚಮಚ ಇರಿಸಿಕೊಂಡು ಜನ್ಮತಾಳಿದ ಪಕ್ಷ ಬಿಜೆಪಿ ಅಲ್ಲ, ಬಿಜೆಪಿ ಬೆಳವಣಿಗೆಯ ಹಿಂದೆ ನೂರಾರು ಶ್ರೇಷ್ಠ ದಿಗ್ಗಜ ನಾಯಕರ ತ್ಯಾಗ, ಪರಿಶ್ರಮ ಅಡಗಿದೆ, ಪಕ್ಷ ಕಟ್ಟಿದ ಅನೇಕರು ಕಾರ್ಪೋರೇಟರ್ ಸಹ ಆಗಲಿಲ್ಲ, ನಮಗಾಗಿ ಅವರು ಪಕ್ಷ ಕಟ್ಟಿದರು, ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ರಾಷ್ಟ್ರ ಮುಖ್ಯ ಎನ್ನುವ ಸಿದ್ಧಾಂತ ಬಿಜೆಪಿಯದ್ದು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ನಗರ ಮಂಡಳ ಅಧ್ಯಕ್ಷ ಸಂದೀಪ ಪಾಟೀಲ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮೇಯರ್ ಎಂ.ಎಸ್. ಕರಡಿ, ಉಪ ಮೇಯರ್ ಸುಮಿತ್ರಾ ಜಾದವ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಳನಗೌಡ ಪಾಟೀಲ್, ಈರಣ್ಣ ರಾವೂರ, ರಾಜ್ಯ ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ್, ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಸುರೇಶ್ ಬಿರಾದಾರ, ಪ್ರಮುಖರಾದ ಭೀಮಾಶಂಕರ್ ಹದನೂರ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸ್ವಪ್ನಾ ಕಣಮುಚನಾಳ, ಭಾರತಿ ಭುಯ್ಯಾರ, ಪಾಪುಸಿಂಗ ರಜಪೂತ, ಚಿನ್ನು ಚಿನಗುಂಡಿ, ಉಪಸ್ಥಿತರಿದ್ದರು.

ಕಾರ್ಯಕರ್ತರ ಸಂಕಷ್ಟಗಳಿಗೆ ಸ್ಪಂದಿಸುವುದು ನಮ್ಮ ಧರ್ಮ

ಕಾರ್ಯಕರ್ತರೇ ಪಕ್ಷದ ಜೀವಾಳ, ಕಾರ್ಯಕರ್ತರು ಪಕ್ಷದ ಮುಖಂಡರಿಗಾಗಿ ಅನೇಕ ರೀತಿಯಲ್ಲಿ ಶ್ರಮಿಸುತ್ತಾರೆ, ಹೀಗಾಗಿ ಅವರ ಸಂಕಷ್ಟಗಳಿಗೆ ಸ್ಪಂದಿಸುವುದು ಮುಖಂಡರ ಮಾನವೀಯ ಧರ್ಮ, ಕಾರ್ಯಕರ್ತರಿಗೆ ಏನಾದರೂ ತೊಂದರೆಯಾದರೆ ನೇರವಾಗಿ ಹೇಳಿ ಆ ತೊಂದರೆ ನಿವಾರಿಸಲು ನಾನು ಬದ್ಧನಾಗಿರುವೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಪಕ್ಷದ ನಾಯಕರನ್ನು ರೂಪಿಸುವವರೇ ಕಾರ್ಯಕರ್ತರು, ಕಾರ್ಯಕರ್ತರ ಶ್ರಮದಿಂದಲೇ ನಾಯಕರಾಗಲು ಸಾಧ್ಯ ಎಂದರು.
ಬಿಜೆಪಿ ಎನ್ನುವುದು ನಮ್ಮ ತಾಯಿ ಇದ್ದಂತೆ, ಸಮರ್ಪಣಾ ಮನೋಭಾವದಿಂದ ಪಕ್ಷ ಕಟ್ಟುವ ಈ ಕಾರ್ಯವನ್ನು ಮಾಡೋಣ ಎಂದರು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ನೂರಕ್ಕೆ ನೂರರಷ್ಟು ಫಲಿತಾಂಶ ಸಾಧಿಸಿದನಾಗನೂರು ಕಾಲೇಜು

ಪತ್ರಕರ್ತ ಇಂದುಶೇಖರ ಮಣೂರ ಗೆ ’ಬಸವ ಸೇವಾ ಪ್ರಶಸ್ತಿ’

ಏ.೨೩ ರಿಂದ ಪಂಚಕಲ್ಯಾಣ ಪ್ರತಿಷ್ಠಾ ಮಹಾ ಮಹೋತ್ಸವ

ಮಹಿಳೆಯರ ಸಬಲೀಕರಣಕ್ಕೆ ಶಿಕ್ಷಣವೇ ಮುಖ್ಯ ಅಸ್ತ್ರ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ನೂರಕ್ಕೆ ನೂರರಷ್ಟು ಫಲಿತಾಂಶ ಸಾಧಿಸಿದನಾಗನೂರು ಕಾಲೇಜು
    In (ರಾಜ್ಯ ) ಜಿಲ್ಲೆ
  • ಪತ್ರಕರ್ತ ಇಂದುಶೇಖರ ಮಣೂರ ಗೆ ’ಬಸವ ಸೇವಾ ಪ್ರಶಸ್ತಿ’
    In (ರಾಜ್ಯ ) ಜಿಲ್ಲೆ
  • ಏ.೨೩ ರಿಂದ ಪಂಚಕಲ್ಯಾಣ ಪ್ರತಿಷ್ಠಾ ಮಹಾ ಮಹೋತ್ಸವ
    In (ರಾಜ್ಯ ) ಜಿಲ್ಲೆ
  • ಮಹಿಳೆಯರ ಸಬಲೀಕರಣಕ್ಕೆ ಶಿಕ್ಷಣವೇ ಮುಖ್ಯ ಅಸ್ತ್ರ
    In (ರಾಜ್ಯ ) ಜಿಲ್ಲೆ
  • ಜಗತ್ತಿಗೆ ಅದ್ವೈತ ತತ್ವ ಪರಿಚಯಿಸಿದ ತತ್ವಜ್ಞ ಆದಿ ಶಂಕರಾಚಾರ್ಯರು
    In (ರಾಜ್ಯ ) ಜಿಲ್ಲೆ
  • ರಾಜ್ಯ ಮುಕ್ತ ವಿವಿ ಕರಾಮುವಿಕೆ-ಸೆಟ್ ಮತ್ತು ಯುಜಿಸಿ-ನೆಟ್ ಪರೀಕ್ಷೆಗಳಿಗೆ ತರಬೇತಿ
    In (ರಾಜ್ಯ ) ಜಿಲ್ಲೆ
  • ಸರಳತೆ ಮೆರೆದ ಚಿದಾನಂದ ಸವದಿ :ಇಂದಿರಾ ಕ್ಯಾಂಟೀನ್‌ನಲ್ಲಿ ಭೋಜನ
    In (ರಾಜ್ಯ ) ಜಿಲ್ಲೆ
  • ಮಕ್ಕಳಿಗೆ ಇಂದು ಕಂಪ್ಯೂಟರ್ ಜ್ಞಾನ ಅತ್ಯವಶ್ಯ :ಮಠಪತಿ
    In (ರಾಜ್ಯ ) ಜಿಲ್ಲೆ
  • ಹೈರಿಗೆಯಲ್ಲಿ ಅಂಬೇಡ್ಕರ್ ಜಯಂತಿ & ರಣದಕಾಳಮ್ಮ ಜಾತ್ರಾ ಮಹೋತ್ಸವ
    In (ರಾಜ್ಯ ) ಜಿಲ್ಲೆ
  • ವಿದ್ಯಾರ್ಥಿಗಳ ಜೀವನ ಬಂಗಾರದ ಜೀವನ :ಕುರಂದವಾಡೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.