ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಪಟ್ಟಣದ ಶ್ರೀ ಎ. ಬಿ. ಜತ್ತಿ ಪ್ರೌಢ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳ ಶುಭ ಹಾರೈಕೆ ಸಮಾರಂಭ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕ ಬಿ. ಬಿ. ಪಾಟೀಲ, ಆಡಳಿತಾಧಿಕಾರಿ ವಿ. ಎಸ್. ಬಗಲಿ, ಎಸ್.ಎ. ಬಿರಾದಾರ, ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಗಂಗಾಧರ, ಉಪಪ್ರಾಚಾರ್ಯ ಜೆ. ಎಂ. ಪಾಟೀಲ, ಡಿ. ಬಿ. ಪಾಟೀಲ, ಬಿ. ಸಿ. ನಾವಿ, ಕುಮಾರಿ ಸೋನುಬಾಯಿ ಕುಂಬಾರ ಇದ್ದರು.
ವಿದ್ಯಾರ್ಥಿಗಳು ಸಿದ್ದಪಡಿಸಿದ ಕೈ ಬರಹ ಪತ್ರಿಕೆಯನ್ನು ಬಿಡುಗಡೆಗೊಳಿಸುವ ಮೂಲಕ ವಿದ್ಯಾರ್ಥಿಗಳಿಗೆ ಶಾಲೆಯ ಎಲ್ಲ ಚಟುವಟಿಕೆಗಲ್ಲಿ ಭಾಗವಹಿಸಲು ಹಾಗೂ ಮಂಬರುವ ಎಸ್ ಎಸ್ ಎಲ್ ಸಿ ಪರೀಕ್ಷಗೆ ಶುಭಹಾರೈಸುವ ಮೂಲಕ ವಿದ್ಯಾರ್ಥಿಗಳಲ್ಲಿ ಚೈತನ್ಯ ತುಂಬಿದರು.

