ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ನಿಂತ ನೀರಿನಲ್ಲಿ ಮುಳುಗಿ ಬಾಲನೊಬ್ಬ ಸಾವನ್ನಪ್ಪಿದ ಘಟನೆ ಪಟ್ಟಣದ ಕುಂಟೋಜಿ ರಸ್ತೆಯ ಬಸವ ಇಂಟರ್‌ನ್ಯಾಶನಲ್ ಶಾಲೆಯ ಬಳಿಯ ಜಮೀನೊಂದರಲ್ಲಿ ನಡೆದಿದೆ.
ಮೃತ ಬಾಲಕನನ್ನು ಸುದೀಪ ಗಂಗನಹಳ್ಳಿ(೧೫) ಎಂದು ಗುರುತಿಸಲಾಗಿದೆ. ಕುರಿ ಕಾಯಲು ಬಂದಿದ್ದ ಈತ ನೀರಿಗೆ ಹೇಗೆ ಬಿದ್ದ ಎಂಬುದು ನಿಗೂಢವಾಗಿದ್ದು ತನಿಖೆಯಿಂದ ಬಹಿರಂಗವಾಗಬೇಕಿದೆ.
ನೀರಿಗೆ ಬಿದ್ದಿರುವ ವಿಷಯ ಅಗ್ನಿಶಾಮಕದವರಿಗೆ ತಿಳಿಸಿದಾಗ ಘಟನಾ ಸ್ಥಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತ ಬಾಲಕನನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು.
ಘಟನಾ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಬಾಲಕನ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

