Subscribe to Updates
Get the latest creative news from FooBar about art, design and business.
Author: editor.udayarashmi@gmail.com
’ವೀಣಾಂತರಂಗ’- ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ-ಗದಗ ಎಲ್ಲೋ ಓದಿದ ನೆನಪು…ಓರ್ವ ವೃದ್ಧ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನಿಗೆ ಎದ್ದು ಕುಳಿತುಕೊಳ್ಳುವ ತ್ರಾಣವು ಇರಲಿಲ್ಲ. ಆತನ ಮೆದುಳಿಗೆ ಹಾನಿಯಾಗಿದ್ದು ನೆನಪಿನ ಶಕ್ತಿ ಕಳೆದು ಹೋಗಿದೆ, ಅದು ಮರುಕಳಿಸುವ ಸಾಧ್ಯತೆ ಬಹುತೇಕ ಕಮ್ಮಿ ಎಂದು ವೈದ್ಯರು ಹೇಳಿದ್ದರು. ಆದರೆ ಮನೆಯ ಜನ ತಮ್ಮ ಭರವಸೆ ಕಳೆದುಕೊಂಡಿರಲಿಲ್ಲ. ಮರುದಿನ ಮುಂಜಾನೆ ಸೂರ್ಯೋದಯಕ್ಕೂ ಮುನ್ನವೇ ಆಸ್ಪತ್ರೆಯಲ್ಲಿ ಆತನನ್ನಿರಿಸಿದ ಕೋಣೆಯಲ್ಲಿ ಆತನ ಮನೆಯಲ್ಲಿ ದೈನಂದಿನ ಪೂಜಾ ಕ್ರಿಯೆಗಳು ಜರುಗುವಂತೆ ಜೋರಾಗಿ ಗಂಟೆ ಜಾಗಟೆಗಳ ಶಬ್ದ ಸುಗಂಧಭರಿತ ಪುಷ್ಪಗಳ ಸುವಾಸನೆ ತುಂಬಿಹೋಯಿತು. ಗಂಟೆಯ ಶಬ್ದದಿಂದ ಎಚ್ಚೆತ್ತ ಆ ವ್ಯಕ್ತಿ ತನ್ನ ಪತ್ನಿಯನ್ನು ಕುರಿತು ಅಯ್ಯೋ!! ಬೆಳಗಾಗಿ ಹೋಯಿತೇ? ನನ್ನನ್ನೇಕೆ ಎಬ್ಬಿಸಲಿಲ್ಲ, ಸ್ನಾನ ಪೂಜೆಗೆ ಹೊತ್ತಾಯಿತು ಟವೆಲ್ಲು ಕೊಡು ಎಂದು ಪತ್ನಿಗೆ ಹೇಳುತ್ತಾ ಎದ್ದು ಹೊರಟರು. ಮುಂದೆ ವೈದ್ಯಕೀಯ ಜಗತ್ತಿಗೆ ಸವಾಲಾಗುವಂತೆ ಆ ವ್ಯಕ್ತಿ ತನ್ನ ತೊಂದರೆಯಿಂದ ಪಾರಾದನು…. ಇದು ಒಬ್ಬ ವ್ಯಕ್ತಿಯ ನೆನಪಿನ ಕೋಶಗಳಲ್ಲಿ ಉಳಿದುಕೊಳ್ಳಬಹುದಾದ ಅತ್ಯುತ್ತಮ ಅಭ್ಯಾಸ.…
ವಿಜಯಪುರ: 2047ರ ವೇಳೆಗೆ ನಾವು ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ನಲ್ಲಿಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿರುವುದು ಸ್ವಾಗತಾರ್ಹ ಎಂದು ಬಿಜೆಪಿ ಮುಖಂಡ ಡಾ.ಗೌತಮ್.ಆರ್.ಚೌಧರಿ ಹೇಳಿದ್ದಾರೆ.ಕಳೆದ 10 ವರ್ಷಗಳಲ್ಲಿ ದೇಶದ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಮಹಿಳೆಯರಿಗೆ, ರೈತರಿಗೆ, ಪ್ರವಾಸೋದ್ಯಮಕ್ಕೆ, ರೈಲು ಅಭಿವೃದ್ಧಿಗೆ ಹಾಗೂ ಎಂಎಸ್‌ಎಂಇ ಉದ್ಯಮಗಳಿಗೆ, ಪರಿಸರಕ್ಕೆ ಸರ್ಕಾರ ಆದ್ಯತೆ ಕೊಟ್ಟಿರುವುದು ಇಡೀ ದೇಶದ ಜನರು ಖುಷಿ ಪಡುವ ವಿಚಾರ. ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನಮಾನ ದೃಷ್ಟಿಕೋನದಲ್ಲಿ ಇಟ್ಟುಕೊಂಡು ಮಂಡಿಸಿರುವ ಈ ಬಜೆಟ್ ಎಲ್ಲ ವರ್ಗದವರಿಗೂ ಅನಕೂಲಕರವಾಗಿದೆ ಎಂದು ಡಾ.ಗೌತಮ್ ಚೌಧರಿ ಪ್ರತಿಕ್ರಿಯಿಸಿದ್ದಾರೆ.
ಚಡಚಣ: ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬಂತೆ ಪ್ರತಿಯೊಬ್ಬರ ಜೀವನದಲ್ಲಿ ಗುರುಗಳ ಮಾರ್ಗದರ್ಶನ ಬಹಳ ಅವಶ್ಯಕ. ಶಿಕ್ಷಕರು ಪಠ್ಯಪುಸ್ತಕದ ಜ್ಞಾನದ ಜೊತೆಗೆ ಮಕ್ಕಳಲ್ಲಿರುವ ವಿಶೇಷ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎಸ್.ಹಾವಿನಾಳ ಹೇಳಿದರು .ತಾಲೂಕಿನ ಧೂಳಖೇಡ ಗ್ರಾಮದ ಶ್ರೀ ಕಮಲ್ ಪಬ್ಲಿಕ್ ಶಾಲೆಯ 20ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವಿಶತಮಾನೋತ್ಸವದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಣ ಸಂಸ್ಥೆಗಳು ಎಂದರೆ ಕೇವಲ ಕಟ್ಟಡವಲ್ಲ. ಅಲ್ಲಿ ಕಲಿಸುವ ವಿಧಾನ, ಆಡಳಿತ ಮಂಡಳಿಯ ಇಚ್ಛಾಶಕ್ತಿಯಿಂದ ಮಕ್ಕಳು ಗುಣಾತ್ಮಕ ಶಿಕ್ಷಣವನ್ನ ಪಡೆದು ಸವಾರ್ಂಗೀಣ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ನಮ್ಮ ಶೈಕ್ಷಣಿಕ ಉನ್ನತಿಯಲ್ಲಿ ದೇಶದ ಪ್ರಗತಿ ಅಡಗಿರುತ್ತದೆ. ಸಂಸ್ಥೆಯ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಅವಶ್ಯಕ ಎಂದರು.ಪ್ರಾಸ್ಥಾವಿಕವಾಗಿ ಮುಖ್ಯ ಶಿಕ್ಷಕ ಎಸ್ ಎಸ್ ಪಾಟೀಲ ಮಾತನಾಡಿ, 2004 ರಲ್ಲಿ 9 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಈ ಶಾಲೆಯಲ್ಲಿ ಸರ್ವೋತೋಮುಖ ಬೆಳವಣಿಗೆ ಹಾಗೂ ಉತ್ತಮ ಶಿಕ್ಷಣ ನೀಡುತ್ತಿರುವುದರಿಂದ…
ವಿಜಯಪುರ: ಹೊಸ ಸಂಸತ್ ಭವನದಲ್ಲಿ ಮಂಡನೆಯಾಗಿರುವ ಬಜೆಟ್ ನಲ್ಲಿ ಹೊಸತನವನ್ನು ನಿರೀಕ್ಷಿಸಿದ್ದ ಸಮಸ್ತ ಭಾರತೀಯರಿಗೆ ನಿರಾಸೆಯಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಮುಖ್ಯ ವಕ್ತಾರ ಸಂಗಮೇಶ ಬಬಲೇಶ್ವರ ಹೇಳಿದರು.ಈ ಕುರಿತು ಗುರುವಾರ ಪ್ರತಿಕ್ರಿಯಿಸಿದ ಅವರು, ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡಿರುವ ಚುನಾವಣೆ ಬಿತ್ತಿ ಪತ್ರದಂತೆ ಈ ಬಜೆಟ್ ಭಾಸವಾಗುತ್ತಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರು ಕಿವಿಗೆ ಇಂಪಾದ ಸೊಗಸಾದ ಇಂಗ್ಲಿಷ್ನಲ್ಲಿ ಬಜೆಟ್ಟನ್ನು ಮಂಡಿಸಿದ್ದಾರೆ. ಅದು ಕೇಳಲು ಇಂಪಾಗಿದೆ ಹೊರತು ಜನರ ಬದುಕು ಕಟ್ಟಿಕೊಡುವಲ್ಲಿ ವಿಫಲವಾಗಿರುವುದು ವಿಫಲತೆಯತ್ತಲೇ ಸಾಗಿರುವುದು ದೇಶದ ಜನತೆಯ ದೌರ್ಭಾಗ್ಯ ಎಂದು ಸಂಗಮೇಶ ಬಬಲೇಶ್ವರ ವ್ಯಂಗ್ಯವಾಡಿದ್ದಾರೆ.
ಆಲಮಟ್ಟಿ: ಫೆ.3 ರಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಆಲಮಟ್ಟಿಗೆ ಆಗಮಿಸಲಿದ್ದು, ಕೃಷ್ಣಾ ಮೇಲ್ದಂಡೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.ಶನಿವಾರ ಕಲಬುರಗಿಯಿಂದ ರಸ್ತೆ ಮೂಲಕ ಮಧ್ಯಾಹ್ನ 12 ಕ್ಕೆ ಬಸವನಬಾಗೇವಾಡಿ ತಾಲ್ಲೂಕಿನ ಮನಗೂಳಿಯ ಸಂಗನಬಸವ ಸ್ವಾಮೀಜಿಗಳ ಬೆಳ್ಳಿ ಮಹೋತ್ಸವ ಅಂಗವಾಗಿ ಮನಗೂಳಿ ಕಲ್ಯಾಣ ಮಂಟಪದಲ್ಲಿ ನೂತನ ರಥೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.ಅಲ್ಲಿಂದ ಮಧ್ಯಾಹ್ನ 3 ಕ್ಕೆ ಆಲಮಟ್ಟಿಗೆ ಆಗಮಿಸುವ ಅವರು, ಇಲ್ಲಿಯ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ಕೆಬಿಜೆಎನ್ ಎಲ್ ಅಧಿಕಾರಿಗಳ ಜತೆ ಕಾಮಗಾರಿಗಳ ಪರಿಶೀಲನಾ ಸಭೆ ನಡೆಸಲಿದ್ದಾರೆ. ಸಂಜೆ 6 ಕ್ಕೆ ಆಲಮಟ್ಟಿಯಿಂದ ಹುಬ್ಬಳ್ಳಿಗೆ ರಸ್ತೆ ಮೂಲಕ ತೆರಳಿ ಅಲ್ಲಿಂದ ಬೆಂಗಳೂರಿಗೆ ತೆರಳಲಿದ್ದಾರೆ.
ಆಲಮಟ್ಟಿ: ಸಮೀಪದ ಚಿಮ್ಮಲಗಿಯ ಅರಳೆಲೆಕಟ್ಟಿಮನಿ ಹಿರೇಮಠದ ಲಿಂಗೈಕ್ಯ ನೀಲಕಂಠ ಸ್ವಾಮೀಜಿ ಅವರ ಪ್ರಥಮ ಪುಣ್ಯ ಸ್ಮರಣೆ, ಸಿದ್ಧರೇಣುಕ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ, ಸಾಮೂಹಿಕ ವಿವಾಹ ಕಾರ್ಯಕ್ರಮ ಗುರುವಾರ ಜರುಗಿತು.ಬೆಳಿಗ್ಗೆಯಿಂದಲೇ ಲಿಂಗೈಕ್ಯ ಶ್ರೀಗಳ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಪೂಜೆಯ ನಂತರ, ಗ್ರಾಮದ ತುಂಬೆಲ್ಲಾ ಅಡ್ಡಪಲ್ಲಕ್ಕಿ ಮಹೋತ್ಸವ ಅದ್ಧೂರಿಯಾಗಿ ಜರುಗಿತು.ನಂತರ ನಾಲ್ಕು ಜತೆ ಸಾಮೂಹಿಕ ವಿವಾಹಗಳು ಜರುಗಿದವು.ಬಸನಬಾಗೇವಾಡಿ ಶಿವಪ್ರಕಾಶ ಸ್ವಾಮೀಜಿ ಮಾತನಾಡಿ, ಬದುಕಿನುದ್ದಕ್ಕೂ ಸವಾಲುಗಳನ್ನು ಎದುರಿಸಿ ಸತ್ಯ ಸಂಸ್ಕೃತಿ ಪುನರುತ್ಥಾನಕ್ಕಾಗಿ ಸದಾ ಶ್ರಮಿಸಿದವರು ನೀಲಕಂಠ ಶ್ರೀಗಳು. ಪರಮ ತಪಸ್ವಿ ಲಿಂ.ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಗರಡಿಯಲ್ಲಿ ಪಳಗಿ ಗುರು ಕಾರುಣ್ಯ ಪಡೆದರು. ಪೂಜಾ ತಪಸ್ಸು ಧ್ಯಾನ ಮೂಲಕ ಭಕ್ತರ ಬಾಳ ಬದುಕನ್ನು ಹಸನಗೊಳಿಸಿದವರು ಎಂದರು.ಶ್ರೀ ಮಠದ ಪೀಠಾಧೀಪತಿ ಸಿದ್ಧರೇಣುಕ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.ನಿಡಗುಂದಿಯ ರುದ್ರಮುನಿ ಸ್ವಾಮೀಜಿ, ಮುತ್ತಗಿಯ ಗುರುಲಿಂಗ ಸ್ವಾಮೀಜಿ, ಇಟಗಿಯ ಗುರುಶಾಂತವೀರ ಸ್ವಾಮೀಜಿ, ಗುಂಡಕನಾಳ ಗುರುಲಿಂಗ ಸ್ವಾಮೀಜಿ, ಆಲಮೇಲದ ಚಂದ್ರಶೇಖರ ಸ್ವಾಮೀಜಿ, ಇಂಗಳೇಶ್ವರದ ಭೃಂಗೀಶ್ವರ ಸ್ವಾಮೀಜಿ, ಕೊಟ್ಟೂರಿನ ಡಾ ಸಿದ್ಧಲಿಂಗ ಸ್ವಾಮೀಜಿ,…
ವಿಜಯಪುರ: ಇತಿಹಾಸವನ್ನು ಮರೆತವರು ಎಂದಿಗೂ ಇತಿಹಾಸ ನಿರ್ಮಿಸಲಾರರು ಅದರಂತೆ ಐತಿಹಾಸಿಕ ಪಾರಂಪರಿಕ ತಾಣಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಅದಕ್ಕೆ ಇತಿಹಾಸದ ಅಧ್ಯಯನ ಮಾಡಬೇಕು. ಅದರ ಆಳ-ಅಗಲ ಅರಿವಾಗುತ್ತದೆ ಎಂದು ನಗರದ ಜಿ ಎಫ್ ಜಿ ಸಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಜಿ.ಪತ್ತಾರ ಹೇಳಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಮತ್ತು ಹೆರಿಟೇಜ್ ಕ್ಲಬ್ ಸಂಯೋಜನೆಯಡಿಯಲ್ಲಿ ಐತಿಹಾಸಿಕ ಪಾರಂಪರಿಕ ತಾಣಗಳ ಮಹತ್ವ ಮತ್ತು ಅವುಗಳ ಸಂರಕ್ಷಣೆ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ದೇಶವು ಅತ್ಯಂತ ಭವ್ಯವದಾದ ಸಂಸ್ಕೃತಿಕ, ಐತಿಹಾಸಿಕ ಪಾರಂಪರಿಕ ನೆಲೆ ಬೀಡಾಗಿದೆ. ಹಲವಾರು ಇತಿಹಾಸದ ಕುರುಹುಗಳನ್ನು ಹೊಂದಿದೆ. ಅದರ ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆ ಮೇಲಿದೆ. ವಿದ್ಯಾರ್ಥಿಗಳು ಇಂತಹ ಪಾರಂಪರಿಕ ತಾಣಗಳ ಬಗ್ಗೆ ಆದ್ಯಯನ ಮಾಡಬೇಕು ಎಂದರು.ಈ ವೇಳೆಯಲ್ಲಿ ಐಕ್ಯುಎಸಿ ಸಂಯೋಜಕ ಡಾ.ಪಿ.ಎಸ್.ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾಗಬೇಕು. ಐತಿಹಾಸಿಕ ಪಾರಂಪರಿಕ ತಾಣಗಳು ಅಧ್ಯಯನ ಮತ್ತು ಅದರ ಸಂರಕ್ಷಣೆಗೆ ಮುಂದಾಗಬೇಕು ಎಂದರು.ಇತಿಹಾಸಕ್ಕೆ…
ಕೆಂಭಾವಿ: ಪ್ರಸ್ತುತದಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರ ಬಹು ಮುಖ್ಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಪಾಟೀಲ ಯಾಳಗಿ ಹೇಳಿದರು.ಶುಕ್ರವಾರ ಪಟ್ಟಣದ ಹೋಲಿಫೇತ್ ಪಬ್ಲಿಕ್ ಶಾಲೆಯ ೨೦ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪಾಲಕರು ತಮ್ಮ ಮಕ್ಕಳ ಉಜ್ವಲ ಭವಿಷ್ಯದ ಕನಸನ್ನು ಕಟ್ಟಿಕೊಂಡಿರುತ್ತಾರೆ. ಪಾಲಕರ ಕನಸು ನನಸಾಗಲು ಮಕ್ಕಳಿಗೆ ಸಂಸ್ಕಾರ ಮೊದಲ ಪಾಠವಾಗಬೇಕು ಎಂದ ಅವರು ಹೋಲಿಫೇತ್ ಶಿಕ್ಷಣ ಸಂಸ್ಥೆ ಇವತ್ತು ಅದ್ದೂರಿಯಾಗಿ ತನ್ನ ಇಪ್ಪತ್ತನೆ ವರ್ಷಾಚರಣೆ ಮಾಡಿಕೊಳ್ಳುತ್ತಿರುವುದು ಸಂಸ್ಥೆಯ ಸಾಧನೆಯ ಪಥಕ್ಕೆ ಸಾಕ್ಷಿಯಾಗಿದೆ ಎಂದರು.ಜಿಪಂ ಮಾಜಿ ಅಧ್ಯಕ್ಷ ಸಿದ್ಧನಗೌಡ ಪೊಲೀಸ್ ಪಾಟೀಲ ಮಾತನಾಡಿ, ಪಟ್ಟಣದಲ್ಲಿ ಒಳ್ಳೆಯ ಶಿಕ್ಷಣನೀಡುತ್ತಿರುವ ಹೋಲಿಫೇತ್ ಶಾಲೆ ಯಶಸ್ವಿ ಶತ ಸಂವತ್ಸರ ಕಾಣುವಂತಾಗಲಿ ಎಂದು ಶುಭಹಾರೈಸಿದರು.ಸುಮಿತ್ರಪ್ಪ ಅಂಗಡಿ ಪ್ರಾಸ್ತಾವಿಕ ಮಾತನಾಡಿದರು. ಪವಿತ್ರ ವಡ್ಡೆ ಶಾಲಾ ವರದಿ ವಾಚನ ಮಾಡಿದರು.ಹಿರೇಮಠದ ಪೀಠಾಧಿಪತಿ ಚನ್ನಬಸವ ಶಿವಾಚಾರ್ಯರು, ಮಳಖೇಡದ ಸೈಯ್ಯದ್ ಶಾ ಮುಸ್ತಾಫಾ ಖಾದ್ರಿ, ಕೂಡಲಗಿ ಬಾಬಾ ಮಠದ ಉಮಾಕಾಂತ ಸಿದ್ಧರಾಜ ಮಹಾರಾಜರು ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು.ನಂತರ ಮಕ್ಕಳಿಂದ…
Udayarashmi kannada daily newspaper Udayarashmi kannada daily newspaper
ಚಡಚಣ: ನಾನು, ನೀನು, ಆನು, ತಾನು ಎಂಬ ನಾಲ್ಕೇ ನಾಲ್ಕು ಅದ್ವೈತ ಸಿದ್ದಾಂತದ ಆಧ್ಯಾತ್ಮಿಕ ಪದಗಳನ್ನೊಳಗೊಂಡತೆ ಸರಳ ಹಾಗೂ ಸರ್ವಕಾಲಕ್ಕೂ ಬಾಳುವಂತಹ ಕವನಗಳನ್ನು ಬರೆದು ಶಬ್ದಗಾರುಡಿಗ ಎಂದು ಪ್ರಖ್ಯಾತಿ ಪಡೆದವರು ನಾಕುತಂತಿ ಖ್ಯಾತಿಯ ವರಕವಿ ದ.ರಾ.ಬೇಂದ್ರೆಯವರು ಬೆಂದು ಕವಿಯಾದರು ಎಂದು ಪಿಡಿಜೆ ಪದವಿ ಪೂರ್ವ ಕಾಲೇಜಿನ ಕನ್ನಡ ಉಪಾನ್ಯಾಸಕ ಸಂತೋಷ ಕುಲಕರ್ಣಿ ಹೇಳಿದರು.ಪಟ್ಟಣದ ಶ್ರೀ ಸಂಗಮೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಕನ್ನಡ ವಿಭಾಗ ಆಯೋಜಿಸಿದ ವರಕವಿ ಬೇಂದ್ರೆ ಅವರ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತ ಅವರು, ಅಂಬಿಕಾತನಯ ದತ್ತ ಎಂಬ ಕಾವ್ಯ ನಾಮದಿಂದ ಕವನಗಳನ್ನು ಬರೆದು ಜನಸಾಮಾನ್ಯರಿಗೂ ತಿಳಿಯುವಂತೆ ಮಾಡಿದರು. ಗರಿ, ನಾದಲೀಲೆ, ನಾಕುತಂತಿ, ಅರಳು ಮರಳು, ಉಯ್ಯಾಲೆ, ಸಖೀಗೀತ ಮುಂತಾದ ಪ್ರಸಿದ್ಧ ಕವನ ಸಂಕಲಗಳನ್ನು ಬರೆದಿದ್ದಾರೆ. ಅವರ ನರಬಲಿ ಕವನ ಬ್ರಿಟಿಷ್ ಆಡಳಿತವನ್ನು ಪ್ರಶ್ನಿಸುವಂತೆ ಇದ್ದುದರಿಂದ ಅವರನ್ನು ಸೆರೆಮನೆಗೆ ಹಾಕಲಾಯಿತು ಎಂದರು.ಪ್ರಾಸ್ಥಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಂ.…
