ಆಲಮಟ್ಟಿ: ಸಮೀಪದ ಚಿಮ್ಮಲಗಿಯ ಅರಳೆಲೆಕಟ್ಟಿಮನಿ ಹಿರೇಮಠದ ಲಿಂಗೈಕ್ಯ ನೀಲಕಂಠ ಸ್ವಾಮೀಜಿ ಅವರ ಪ್ರಥಮ ಪುಣ್ಯ ಸ್ಮರಣೆ, ಸಿದ್ಧರೇಣುಕ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ, ಸಾಮೂಹಿಕ ವಿವಾಹ ಕಾರ್ಯಕ್ರಮ ಗುರುವಾರ ಜರುಗಿತು.
ಬೆಳಿಗ್ಗೆಯಿಂದಲೇ ಲಿಂಗೈಕ್ಯ ಶ್ರೀಗಳ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಪೂಜೆಯ ನಂತರ, ಗ್ರಾಮದ ತುಂಬೆಲ್ಲಾ ಅಡ್ಡಪಲ್ಲಕ್ಕಿ ಮಹೋತ್ಸವ ಅದ್ಧೂರಿಯಾಗಿ ಜರುಗಿತು.
ನಂತರ ನಾಲ್ಕು ಜತೆ ಸಾಮೂಹಿಕ ವಿವಾಹಗಳು ಜರುಗಿದವು.
ಬಸನಬಾಗೇವಾಡಿ ಶಿವಪ್ರಕಾಶ ಸ್ವಾಮೀಜಿ ಮಾತನಾಡಿ, ಬದುಕಿನುದ್ದಕ್ಕೂ ಸವಾಲುಗಳನ್ನು ಎದುರಿಸಿ ಸತ್ಯ ಸಂಸ್ಕೃತಿ ಪುನರುತ್ಥಾನಕ್ಕಾಗಿ ಸದಾ ಶ್ರಮಿಸಿದವರು ನೀಲಕಂಠ ಶ್ರೀಗಳು. ಪರಮ ತಪಸ್ವಿ ಲಿಂ.ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಗರಡಿಯಲ್ಲಿ ಪಳಗಿ ಗುರು ಕಾರುಣ್ಯ ಪಡೆದರು. ಪೂಜಾ ತಪಸ್ಸು ಧ್ಯಾನ ಮೂಲಕ ಭಕ್ತರ ಬಾಳ ಬದುಕನ್ನು ಹಸನಗೊಳಿಸಿದವರು ಎಂದರು.
ಶ್ರೀ ಮಠದ ಪೀಠಾಧೀಪತಿ ಸಿದ್ಧರೇಣುಕ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ನಿಡಗುಂದಿಯ ರುದ್ರಮುನಿ ಸ್ವಾಮೀಜಿ, ಮುತ್ತಗಿಯ ಗುರುಲಿಂಗ ಸ್ವಾಮೀಜಿ, ಇಟಗಿಯ ಗುರುಶಾಂತವೀರ ಸ್ವಾಮೀಜಿ, ಗುಂಡಕನಾಳ ಗುರುಲಿಂಗ ಸ್ವಾಮೀಜಿ, ಆಲಮೇಲದ ಚಂದ್ರಶೇಖರ ಸ್ವಾಮೀಜಿ, ಇಂಗಳೇಶ್ವರದ ಭೃಂಗೀಶ್ವರ ಸ್ವಾಮೀಜಿ, ಕೊಟ್ಟೂರಿನ ಡಾ ಸಿದ್ಧಲಿಂಗ ಸ್ವಾಮೀಜಿ, ತಡವಲಗಾದ ಅಭಿನವ ರಾಚೋಟೇಶ್ವರ ಸ್ವಾಮೀಜಿ, ಗಿರಿಸಾಗರದ ರುದ್ರಮುನಿ ಸ್ವಾಮೀಜಿ, ಮುಳವಾಡದ ಸಿದ್ಧಲಿಂಗ ಸ್ವಾಮೀಜಿ, ಬಿಲ್ ಕೆರೂರಿನ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶಾಸಕ ರಾಜುಗೌಡ ಪಾಟೀಲ, ಅಪ್ಪುಗೌಡ ಪಾಟೀಲ ಮನಗೂಳಿ, ಸಂಯುಕ್ತಾ ಪಾಟೀಲ, ಅನ್ನಪೂರ್ಣ ಮನಗೂಳಿ, ಡಾ ವಿಜಯಕುಮಾರ ವಾರದ, ಮನೋಜ ವಾರದ, ಬ್ರಿಷಭೂಷಣ ಖಂಡಾಲ, ಜಯೇಂದ್ರ ಶರ್ಮ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

