ವಿಜಯಪುರ: ಹೊಸ ಸಂಸತ್ ಭವನದಲ್ಲಿ ಮಂಡನೆಯಾಗಿರುವ ಬಜೆಟ್ ನಲ್ಲಿ ಹೊಸತನವನ್ನು ನಿರೀಕ್ಷಿಸಿದ್ದ ಸಮಸ್ತ ಭಾರತೀಯರಿಗೆ ನಿರಾಸೆಯಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಮುಖ್ಯ ವಕ್ತಾರ ಸಂಗಮೇಶ ಬಬಲೇಶ್ವರ ಹೇಳಿದರು.
ಈ ಕುರಿತು ಗುರುವಾರ ಪ್ರತಿಕ್ರಿಯಿಸಿದ ಅವರು, ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡಿರುವ ಚುನಾವಣೆ ಬಿತ್ತಿ ಪತ್ರದಂತೆ ಈ ಬಜೆಟ್ ಭಾಸವಾಗುತ್ತಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರು ಕಿವಿಗೆ ಇಂಪಾದ ಸೊಗಸಾದ ಇಂಗ್ಲಿಷ್ನಲ್ಲಿ ಬಜೆಟ್ಟನ್ನು ಮಂಡಿಸಿದ್ದಾರೆ. ಅದು ಕೇಳಲು ಇಂಪಾಗಿದೆ ಹೊರತು ಜನರ ಬದುಕು ಕಟ್ಟಿಕೊಡುವಲ್ಲಿ ವಿಫಲವಾಗಿರುವುದು ವಿಫಲತೆಯತ್ತಲೇ ಸಾಗಿರುವುದು ದೇಶದ ಜನತೆಯ ದೌರ್ಭಾಗ್ಯ ಎಂದು ಸಂಗಮೇಶ ಬಬಲೇಶ್ವರ ವ್ಯಂಗ್ಯವಾಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

