ಚಡಚಣ: ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬಂತೆ ಪ್ರತಿಯೊಬ್ಬರ ಜೀವನದಲ್ಲಿ ಗುರುಗಳ ಮಾರ್ಗದರ್ಶನ ಬಹಳ ಅವಶ್ಯಕ. ಶಿಕ್ಷಕರು ಪಠ್ಯಪುಸ್ತಕದ ಜ್ಞಾನದ ಜೊತೆಗೆ ಮಕ್ಕಳಲ್ಲಿರುವ ವಿಶೇಷ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎಸ್.ಹಾವಿನಾಳ ಹೇಳಿದರು .
ತಾಲೂಕಿನ ಧೂಳಖೇಡ ಗ್ರಾಮದ ಶ್ರೀ ಕಮಲ್ ಪಬ್ಲಿಕ್ ಶಾಲೆಯ 20ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವಿಶತಮಾನೋತ್ಸವದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಸಂಸ್ಥೆಗಳು ಎಂದರೆ ಕೇವಲ ಕಟ್ಟಡವಲ್ಲ. ಅಲ್ಲಿ ಕಲಿಸುವ ವಿಧಾನ, ಆಡಳಿತ ಮಂಡಳಿಯ ಇಚ್ಛಾಶಕ್ತಿಯಿಂದ ಮಕ್ಕಳು ಗುಣಾತ್ಮಕ ಶಿಕ್ಷಣವನ್ನ ಪಡೆದು ಸವಾರ್ಂಗೀಣ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ನಮ್ಮ ಶೈಕ್ಷಣಿಕ ಉನ್ನತಿಯಲ್ಲಿ ದೇಶದ ಪ್ರಗತಿ ಅಡಗಿರುತ್ತದೆ. ಸಂಸ್ಥೆಯ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಅವಶ್ಯಕ ಎಂದರು.
ಪ್ರಾಸ್ಥಾವಿಕವಾಗಿ ಮುಖ್ಯ ಶಿಕ್ಷಕ ಎಸ್ ಎಸ್ ಪಾಟೀಲ ಮಾತನಾಡಿ, 2004 ರಲ್ಲಿ 9 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಈ ಶಾಲೆಯಲ್ಲಿ ಸರ್ವೋತೋಮುಖ ಬೆಳವಣಿಗೆ ಹಾಗೂ ಉತ್ತಮ ಶಿಕ್ಷಣ ನೀಡುತ್ತಿರುವುದರಿಂದ ಇಂದು ಸುಮಾರು 5 ನೂರು ವಿದ್ಯಾರ್ಥಿಗಳ ಶೌಕ್ಷಣಿಕ ತಾಣವಾಗಿಸಲು ನಮ್ಮ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಶ್ರಮ ಅಡಗಿದೆ ಎಂದರು.
ವಿಜಯಪುರದ ಎಕ್ಷಲಂಟ್ ಶಾಲೆಯ ಪ್ರಾಚಾರ್ಯ ಶ್ರೀಕಾಂತ ಕೆ.ಎಸ್ ಮಾತನಾಡಿ, 20 ವರ್ಷಗಳಲ್ಲಿ ಸಾವಿರಾರು ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ಒದಗಿಸುತ್ತಿರುವುದು ಶ್ಲಾಘನೀಯ ಎಂದರು.
ಉದ್ಯೋಗ ಪಡೆದ ಗಳೆಯ ವದ್ಯಾರ್ಥಿಗಳಿಗೆ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರಥಮ, ದ್ವಿತಿಯ ಹಾಗೂ ತ್ರತಿಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಭೀಮಾಶಂಕರ ಯಮದೆ ಸನ್ಮಾನಿಸಿದರು.
ವೇದಿಕೆಯ ಮೇಲೆ ಸಂಸ್ಥೆಯ ಅಧ್ಯಕ್ಷ ಉಮಾಶಂಕರ ಪೋದ್ದಾರ, ಕಾರ್ಯದರ್ಶಿ ರವಿಶಂಕರ ಪೋದ್ದಾರ, ಡಾ. ಅನೀಲ ನಾಟಿಕಾರ, ಸರ್ವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರೇವಣಸಿದ್ದ ಪೂಜಾರಿ, ಸುಭಾಸ ಥಂಬ, ಮುಖಂಡರಾದ ಸುಧಾಕರ ನೀಲುರೆ, ಸಂಜಯ ವಟಾರ, ರಮೇಶ ಜಿತ್ತಿ, ರವಿಗೌಡ ಬಿರಾದಾರ, ಅಬ್ದುಲಗಣಿ ಸೌಧಿ, ಕೆ.ಪಿ ಬೋಳೇಗಾಂವ, ರಾಜಶೇಖರ ವಾಲಿ, ವಿನಯ ಜೀರಂಕಲಗಿ, ಜಾಕೀರ ಕೋಇರ, ರ್ಜುನ ಜೆವೂರ, ಹಣಮಂತ ಬೈರಗೊಂಡ, ರಾಚಯ್ಯ ಮಠ, ಗುರುನಾಥ ಚುರಮುಲೆ, ಚುದಾನಂದ ಐರೋಡಗಿ ಸೇರಿದಂತೆ ಗ್ರಾಮದ ಗಣ್ಯರು, ಪೋಷಕರು ಉಪಸ್ಥಿತರಿದ್ದರು.
ಶಿಕ್ಷಕ ಎಸ್ ಎಸ್ ಬಗಲಿ ನಿರೂಪಿಸಿದರು. ಎಸ್ ಎಸ್ ಪುಜಾರಿ ಸ್ವಾಗತಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

