ಕೆಂಭಾವಿ: ಪ್ರಸ್ತುತದಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರ ಬಹು ಮುಖ್ಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಪಾಟೀಲ ಯಾಳಗಿ ಹೇಳಿದರು.
ಶುಕ್ರವಾರ ಪಟ್ಟಣದ ಹೋಲಿಫೇತ್ ಪಬ್ಲಿಕ್ ಶಾಲೆಯ ೨೦ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪಾಲಕರು ತಮ್ಮ ಮಕ್ಕಳ ಉಜ್ವಲ ಭವಿಷ್ಯದ ಕನಸನ್ನು ಕಟ್ಟಿಕೊಂಡಿರುತ್ತಾರೆ. ಪಾಲಕರ ಕನಸು ನನಸಾಗಲು ಮಕ್ಕಳಿಗೆ ಸಂಸ್ಕಾರ ಮೊದಲ ಪಾಠವಾಗಬೇಕು ಎಂದ ಅವರು ಹೋಲಿಫೇತ್ ಶಿಕ್ಷಣ ಸಂಸ್ಥೆ ಇವತ್ತು ಅದ್ದೂರಿಯಾಗಿ ತನ್ನ ಇಪ್ಪತ್ತನೆ ವರ್ಷಾಚರಣೆ ಮಾಡಿಕೊಳ್ಳುತ್ತಿರುವುದು ಸಂಸ್ಥೆಯ ಸಾಧನೆಯ ಪಥಕ್ಕೆ ಸಾಕ್ಷಿಯಾಗಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಸಿದ್ಧನಗೌಡ ಪೊಲೀಸ್ ಪಾಟೀಲ ಮಾತನಾಡಿ, ಪಟ್ಟಣದಲ್ಲಿ ಒಳ್ಳೆಯ ಶಿಕ್ಷಣ
ನೀಡುತ್ತಿರುವ ಹೋಲಿಫೇತ್ ಶಾಲೆ ಯಶಸ್ವಿ ಶತ ಸಂವತ್ಸರ ಕಾಣುವಂತಾಗಲಿ ಎಂದು ಶುಭಹಾರೈಸಿದರು.
ಸುಮಿತ್ರಪ್ಪ ಅಂಗಡಿ ಪ್ರಾಸ್ತಾವಿಕ ಮಾತನಾಡಿದರು. ಪವಿತ್ರ ವಡ್ಡೆ ಶಾಲಾ ವರದಿ ವಾಚನ ಮಾಡಿದರು.
ಹಿರೇಮಠದ ಪೀಠಾಧಿಪತಿ ಚನ್ನಬಸವ ಶಿವಾಚಾರ್ಯರು, ಮಳಖೇಡದ ಸೈಯ್ಯದ್ ಶಾ ಮುಸ್ತಾಫಾ ಖಾದ್ರಿ, ಕೂಡಲಗಿ ಬಾಬಾ ಮಠದ ಉಮಾಕಾಂತ ಸಿದ್ಧರಾಜ ಮಹಾರಾಜರು ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು.
ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಸಂಸ್ಥೆಯ ಕಾರ್ಯದರ್ಶಿ ನರಸಿಂಹ ವಡ್ಡೆ, ಮುಖ್ಯಾಧಿಕಾರಿ ಮಹ್ಮದ್ ಯುಸೂಫ್, ವೈದ್ಯಾಧಿಕಾರಿ ಡಾ. ಗಿರೀಶ ಕುಲಕರ್ಣಿ, ಪಿಎಸ್‌ಐ ವೆಂಕಣ್ಣ ಶಹಾಪೂರ, ವಾಮನರಾವ ದೇಶಪಾಂಡೆ, ಅಶೋಕ ಸೊನ್ನದ, ಸಂಜೀವರಾವ ಕುಲಕರ್ಣಿ, ಶಣಬಸ್ಸು ಡಿಗ್ಗಾವಿ, ಬಿ. ವಿ. ರೆಡ್ಡಿ, ಕೆ.ವಿ. ರೆಡ್ಡಿ, ಶಾಮ್ ಶ್ರೀವಾತ್ಸವ, ಕಲ್ಯಾಣರೆಡ್ಡಿ, ಪಿ. ಚಂದ್ರಶೇಖರ ರೆಡ್ಡಿ ಸೇರಿದಂತೆ ಹಲವರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

