Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸಿಂದಗಿ: ನಗರದಲ್ಲಿರುವ ಎಲ್ಲ ವೃತ್ತಗಳಿಗೆ ದೀಪಾಲಂಕಾರ ಮಾಡಲಾಗುತ್ತದೆ. ಆದರೆ ದಲಿತ ಶರಣ, ಮಾದರ ಚನ್ನಯ್ಯ ವೃತ್ತಕ್ಕೆ ಉದ್ದೇಶ ಪೂರ್ವಕವಾಗಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿಯಂದು ದೀಪಾಲಂಕಾರ ಮಾಡದೇ ಅವಮಾನ ಮಾಡಿದ್ದಾರೆ ಎಂದು ಕರ್ನಾಟಕ ಆದಿಜಾಂಬವ ಜನಸಂಘದ ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಸಾಯಬಣ್ಣ ದೇವರಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ನಗರದಲ್ಲಿರುವ ಬಹುತೇಕ ಎಲ್ಲ ವೃತ್ತಗಳಿಗೆ ದೀಪಾಲಂಕಾರ ಮಾಡಿದ್ದಾರೆ. ಆದರೆ ಮಾದಾರ ಚನ್ನಯ್ಯ ವೃತ್ತಕ್ಕೆ ದೀಪಾಲಂಕಾರ ಮಾಡದೇ ಅಧಿಕಾರಿಗಳು ಅವಮಾನಿಸಿದ್ದು ಖಂಡನೀಯ. ಈ ರೀತಿಯಾಗಿ ಮಾಡುತ್ತಿರುವುದು ಇದೇನೂ ಮೊದಲಲ್ಲ. ಈ ಹಿಂದೆಯೂ ಹಲವಾರು ಬಾರಿ ಇಂತಹ ತಪ್ಪುಗಳನ್ನು ಮಾಡಿದ್ದಾರೆ. ಆದ ಕಾರಣ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಜಾತಿಯತೆಯನ್ನು ಪೋಷಿಸದೇ ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ವಜಾಮಾಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಬಿದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದರು.ಈ ವೇಳೆ ಏಕನಾಥ ದ್ವಾಶ್ಯಾಳ, ರಮೇಶ ಗುಬ್ಬೇವಾಡ, ಮಲ್ಲೇಶಿ ಕೆರೂರ, ರಮೇಶ ಖಾನಾಪೂರ, ಚಂದ್ರಶೇಖರ ದೇವೂರ, ಪರಶುರಾಮ ಬನ್ನೇಟ್ಟಿ, ಸಾಯಬಣ್ಣ ಪರದಾಳ,…
ವಿಜಯಪುರ: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಅಂಗನವಾಡಿ ಕೇಂದ್ರಗಳಲ್ಲಿ ಪಾಲಕರ ಸಭೆ ಹಮ್ಮಿಕೊಂಡು ಮಕ್ಕಳ ಸ್ನೇಹಿ ಪೀಠೋಪಕರಣ ಬಳಕೆ ಹಾಗೂ ಪಾಲಕರು ತಮ್ಮ ಮಕ್ಕಳ ಕ್ರಿಯಾತ್ಮಕ ಚಟುವಟಿಕೆ ಅರಿತುಕೊಳ್ಳಲು ಪಾಲಕರ ಸಭೆ ಸಹಕಾರಿಯಾಗಿದೆ.ಮಕ್ಕಳ ಸ್ನೇಹಿ ಪೀಠೋಪಕರಣ: ಅಂಗನವಾಡಿ ಕೇಂದ್ರಗಳಿಗೆ ಬರುವ ಆರಾಮದಾಯಕ ಮಕ್ಕಳ ಸ್ನೇಹಿ ಪೀಠೋಪಕರಣ ಪೀಠೋಪಕರಣಗಳನ್ನು ಗ್ರಾಮ ಪಂಚಾಯತಿಯ ಮೂಲಕ ಅಂಗನವಾಡಿಗಳಿಗೆ ಒದಗಿಸಲಾಗುತ್ತಿದೆ. ಮಕ್ಕಳ ಸ್ನೇಹಿ ಪೀಠೋಪಕರಣ ಬಳಕೆ ಮಾಡಿಕೊಂಡು ಮಕ್ಕಳು ತುಂಬಾ ಉಲ್ಲಾಸಿತರಾಗಿ ಉತ್ಸುಕತೆಯಿಂದ ಬರುತ್ತಿದ್ದು, ಕಲಿಕೆಯಷ್ಟೇ ಅಲ್ಲದೇ ಮಕ್ಕಳು ಕೇಂದ್ರಕ್ಕೆ ಬರುವ ಹಾಜರಾತಿ ಪ್ರಮಾಣ ಹೆಚ್ಚಳವಾಗುತ್ತಿದೆ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸೂಚನೆಯಂತೆ ಪ್ರತಿ ಮಾಹೆ ಮೂರನೇ ಶನಿವಾರ ಜಿಲ್ಲೆಯಾದ್ಯಂತ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಪಾಲಕರ ಸಭೆ ನಡೆಸಲಾಗುತ್ತಿದೆ. ಸಭೆಯಲ್ಲಿ ಮಕ್ಕಳು ಕ್ರೀಯಾತ್ಮಕ ಚಟುವಟಿಕೆಯಿಂದಿರಲು ಹಾಗೂ ಮಕ್ಕಳಲ್ಲಿರುವ ಅಂಜಿಕೆ, ಕೀಳರಿಮೆ ಹೋಗಲಾಡಿಸಿ ಓದಿನಡೆಗೆ ಚುರುಕುಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪಾಲಕರೊಂದಿಗೆ ಚರ್ಚಿಸಿ ಅನುಷ್ಠಾನಗೊಳಿಸಲಾಗುತ್ತಿದೆ.ಅಕ್ಟೋಬರ್ ತಿಂಗಳಿನ…
ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಗೆ ಚಾಲನೆ ನೀಡಿ ಎಡಿಸಿ ಮಹಾದೇವ ಮುರಗಿ ಅಭಿಮತ ವಿಜಯಪುರ: ನಾಡು-ನುಡಿಗಾಗಿ, ಈ ದೇಶಕ್ಕಾಗಿ ಸಮಾಜದ ಸುಧಾರಣೆಗಾಗಿ, ಸ್ವಾಭಿಮಾನಕ್ಕಾಗಿ ಧೀರೋದಾತ್ತೆತೆಯಿಂದ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮರಂತಹ ಮಹನೀಯರ ಆದರ್ಶ ವಿಚಾರಗಳು ಇಂದಿನ ಪೀಳಿಗೆಗೆ ದಾರಿದೀಪವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸೋಮವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.ಈ ದೇಶದ ಇತಿಹಾಸ, ಸಮಾಜದ ಸುಧಾರಣೆಗಾಗಿ ಹೋರಾಡಿದ ಮಹನೀಯರ ಬಗ್ಗೆ ಇಂದಿನ ಯುವ ಪೀಳಿಗೆ ಅರಿತುಕೊಳ್ಳುವ ಉದ್ದೇಶದಿಂದ ಜಯಂತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಕಿತ್ತೂರು ಚೆನ್ನಮ್ಮ ಅವರು ಮಾಡಿದ ಕಾರ್ಯಗಳಿಂದ ಇತಿಹಾಸದ ಪುಟದಲ್ಲಿ ಅವರು ಅಜರಾಮರವಾಗಿದ್ದಾರೆ. ಇಂತಹ ಮಹನೀಯರ ಕುರಿತಾಗಿ ಅಧ್ಯಯನ ಮಾಡುವ ಮೂಲಕ ಮತ್ತಷ್ಟು ತಿಳಿದುಕೊಳ್ಳಬೇಕು.ಧೈರ್ಯ ಶೌರ್ಯ ಕೆಚ್ಚೆದೆಯ ಹೋರಾಟದ…
ವಿಜಯಪುರ: ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಲಾಗುವ ವಿಜಯಪುರ ರೈತ ಸಂಪರ್ಕ ಕೇಂದ್ರ ಕಟ್ಟಡಕ್ಕೆ ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕದೊಂಡ ಅವರು ಸೋಮವಾರ ಭೂಮಿ ಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕ ಪ್ರಕಾಶ ಆರ್.ಚವ್ಹಾಣ, ಉಪ ಕೃಷಿ ನಿರ್ದೇಶಕ ಚಂದ್ರಕಾಂತ ಪವಾರ, ಸಹಾಯಕ ಕೃಷಿ ನಿರ್ದೇಶಕ ಎಸ್.ಎ.ಇನಾಂದಾರ, ಕೃಷಿ ಅಧಿಕಾರಿ ಶ್ರೀಮತಿ ಜಯಪ್ರದಾ ದಶವಂತ, ಮಾಜಿ ತಾಲೂಕಾ ಪಂಚಾಯತ್ ಸದಸ್ಯರಾದ ರಾಮನಗೌಡ ಬಗಲಿ, ನಿಂಗಪ್ಪ ಪೂಜಾರಿ, ಸಿದ್ದು ಕಬಾಡಗಿ ಸೇರಿದಂತೆ ವಿಜಯಪುರ ತಾಲೂಕಿನ ವಿವಿಧ ರೈತರು ಉಪಸ್ಥಿತರಿದ್ದರು.ಸಹಾಯಕ ಕೃಷಿ ನಿರ್ದೇಶಕ ಜಿ.ಎ.ಕುಲಕರ್ಣಿ ಕಾರ್ಯಕ್ರಮ ನಿರ್ವಹಿಸಿದರು.
ಕಲಕೇರಿ: ಭಾರತದ ವೀರಪುತ್ರಿ, ಕನ್ನಡನಾಡಿನ ಹೆಮ್ಮೆಯ ಮಹಿಳೆ, ನಿಷ್ಠೆ, ದೈರ್ಯ, ಸಾಹಸದ ಮೂಲಕ ಬ್ರೀಟಿಷ್ ಸೈನ್ಯದ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಿಳೆ, ನಮ್ಮ ಹೆಮ್ಮೆಯ ಕನ್ನಡತಿ ವೀರ ಕಿತ್ತೂರರಾಣಿ ಚನ್ನಮ್ಮಳು ದೇಶದ ಮಣ್ಣಿಗಾಗಿ ತನ್ನ ಪ್ರಾಣವನ್ನೆ ಮುಡುಪಾಗಿಟ್ಟವಳು ಅಂತಹ ಮಹಾನ್ ಮಹಿಳೆ ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿದ್ದಾಳೆ ಎಂದು ಗುರುಮರುಳಾರಾಧ್ಯ ಹಿರೇಮಠದ ಸಿದ್ದರಾಮ ಶಿವಾಚಾರ್ಯರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ಸ್ಥಳಿಯ ಮುಖ್ಯ ಬಜಾರದಲ್ಲಿ ಹಮ್ಮಿಕೊಂಡಿರುವ ವೀರರಾಣಿ ಕಿತ್ತೂರ ಚನ್ನಮ್ಮ ಜಯಂತಿ ಆಚರಣೆಯ ವೇಳೆ ಅವರು ಮಾತನಾಡಿದರು.ಈ ವೇಳೆ ಶರಭಯ್ಯ ಗದ್ಗಿಮಠ, ಈರಣ್ಣ ಝಳಕಿ, ಎಸ್,ಎಮ್, ಬಡಿಗೇರ, ಶಿವು ಸರ್ ಕಡಕೋಳ, ಶಿವಣ್ಣ ಗುಮಶೆಟ್ಟಿ, ಆರ್.ಜಿ. ಗುಮಶೆಟ್ಟಿ, ಬಿ.ಡಿ. ಗುಮಶೆಟ್ಟಿ, ಶೇಖಪ್ಪ ಝಳಕಿ, ದೇವಿಂದ್ರ ಕಡಕೋಳ, ವಿಶ್ವನಾಥ ಸಬರದ, ಈರಘಂಟೆಪ್ಪ ಗುಮಶೆಟ್ಟಿ, ದಯಾನಂದ ಆಲಗೂರ, ಮಡು ಗುಮಶೆಟ್ಟಿ, ಜಗು ವಡ್ಡೋಡಗಿ, ಶರಣು ಕವದಿ, ಸುನೀಲ ಪಾಟೀಲ, ಶ್ರೀಶೈಲ ಆರಳಗುಂಡಗಿ, ಪ್ರವೀಣ ಜಗಶೆಟ್ಟಿ, ಆನಂದ ಗುಡಗುಂಟಿ, ವಾಗೀಶ ನಾಗಠಾಣ, ಮುಕ್ಕಣ್ಣ ಗುಮಶೆಟ್ಟಿ, ಪ್ರಕಾಶ ಯರನಾಳ, ಸುಧಾಕರ ಅಡಕಿ…
ವಿಜಯಪುರ: ದಸರಾ ಹಬ್ಬದ ಅಂಗವಾಗಿ ದುಗಾ೯ಮಾತೆ ದೇವಿಯನ್ನು ತನುಮನಗಳಲ್ಲಿ ಪೂಜಿಸಿ ಮಹಿಳೆಯರು ಭಕ್ತಿ ಸಮಪಿ೯ಸಿದರು. ನವರಾತ್ರಿ ಎಂಟನೇ ದಿನದಂದು ಭಾನುವಾರ ಇಲ್ಲಿನ ಆಲಕುಂಟೆ ನಗರದ ವಸುಂಧರೆಯರು ನಸುಕಿನಲ್ಲಿ ಗುಲಾಬಿ ಬಣ್ಣದ ಸೀರೆಯನ್ನುಟ್ಟು ದೇವಿ ದಿವ್ಯತೆಯ ಬೆಳಕಿನ ದೀಪೋತ್ಸವದಲ್ಲಿ ಕಂಗೊಳಿಸಿದರು.
ವಿಜಯಪುರ: ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಹಿಟ್ಟಿನಹಳ್ಳಿ ತಾಂಡಾದಲ್ಲಿ ಲಂಬಾಣಿ ಮಹಿಳೆಯರು ಪೂರ್ಣಕುಂಬ ಕಳಸ ಹೊತ್ತು ದುಗಾ೯ಮಾತೆ ಆರಾಧನೆಯಲ್ಲಿ ಮಿಂದ ದೃಶ್ಯ.ಅರ್ಚನಾ ಚವ್ಹಾಣ ಒಡನಾಡಿಗಳಾದ ಸವಿತಾ,ರೋಹಿಣಿ, ಅಂಕಿತಾ ಸೇರಿದಂತೆ ಹಲವಾರು ಮಹಿಳಾ ಮಣಿಗಳು ನವರಾತ್ರಿ ಎಂಟನೇ ದಿನ ಸಂಭ್ರಮಿಸಿದರು.
ಆಲಮಟ್ಟಿ: ಕೃಷ್ಣೆ ತಟದ ಗುಲಾಬಿ ಹೂಮೊಗ್ಗು ನಾರಿಮಣಿಗಳ ಖುಷಿ, ಸಂಭ್ರಮ ಕಂಪಾಗಿ, ಇಂಪಾಗಿ ಭಾನುವಾರ ಪರಿಮಳಿಸಿತು.ನವರಾತ್ರಿ ಎಂಟನೇ ದಿನದಂದು ಗುಲಾಬಿ ಬಣ್ಣದ ಸೀರೆಯನ್ನುಟ್ಟು ಅತ್ಯೋತ್ಸಾಹದಲ್ಲಿ ಮಿನುಗಿದರು. ಆಲಮಟ್ಟಿ ಎಂ.ಎಚ್.ಎಂ.ಆಂಗ್ಲ ಮಾದ್ಯಮ ಪ್ರಾಥಮಿಕ ಶಾಲೆ ಮುಖ್ಯ ಗುರುಮಾತೆ ಶ್ರೀಮತಿ ತನುಜಾ ಪೂಜಾರಿ ತಮ್ಮ ಸ್ನೇಹಿತೆ ಬಳಗದೊಂದಿಗೆ ರವಿವಾರ ಗುಲಾಬಿ ಕಲರ್ಸನಲ್ಲಿ ಪ್ರಸನ್ನ ಭಾವ ಬೀರಿ ಸಂತಸ ಹಂಚಿಕೊಂಡರು.
ವಿಜಯಪುರ: ಜಾನಪದ ಸಾಹಿತ್ಯ ನಮ್ಮ ಸಂಸ್ಕೃತಿಯ ಉಸಿರು ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖ್ಯ ವಕ್ತಾರರಾದ ಸಂಗಮೇಶ ಬಬಲೇಶ್ವರ ಹೇಳಿದರು.ನಗರದ ಕಾಳಿಕಾ ನಗರದಲ್ಲಿರುವ ಅಂಬಾಭವಾನಿ ದೇವಸ್ಥಾನದ ಆವರಣದಲ್ಲಿ ನಡೆದ ನವರಾತ್ರಿ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ಅರುಣೋದಯ ಜಾನಪದ ಸಾಹಿತ್ಯ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕನ್ನಡ ನಾಡಿನ ಜಾನಪದ ಸಾಹಿತ್ಯದ ಸೊಗಡು ಅನನ್ಯವಾದದ್ದು. ನಾವೆಲ್ಲರೂ ಗ್ರಾಮೀಣ ಭಾಗದಲ್ಲಿ ನಮ್ಮ ತಾಯಂದಿರ ಜಾನಪದ ಹಾಡುಗಳನ್ನು ಕೇಳಿ ಬೆಳೆದವರು. ಇಂದು ಜಾನಪದ ಕಲಾವಿದರನ್ನು ಕರೆಸಿ ಕಾರ್ಯಕ್ರಮ ನೆರವೇರಿಸುತ್ತಿರುವುದು ನನಗೆ ಸಂತಸ ತಂದಿದೆ. ಜಾನಪದ ಕಲೆ ಉಳಿದು ಕಲಾವಿದರು ಬೆಳೆಯಬೇಕು ಎನ್ನುವುದು ನಮ್ಮೆಲ್ಲರ ಸದಾಶಯವಾಗಿದೆ ಎಂದು ಬಬಲೇಶ್ವರ ನುಡಿದರು.ಸಮಾರಂಭದ ಅಧ್ಯಕ್ಷತೆಯನ್ನು ಮಧು ಕಲಾದಗಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆಎಎಸ್ ಅಧಿಕಾರಿ ತಹಸಿಲ್ದಾರ್ ಸಿದ್ದರಾಯ ಭೋಸಗಿ, ಪ್ರಥಮ ದರ್ಜೆ ಗುತ್ತಿಗೆದಾರರಾದ ಬಿ ಎಸ್ ಬಿರಾದಾರ, ಹನುಮಂತ ಚಿಂಚಲಿ, ಅರವಿಂದ್ ಗಬ್ಬುರ, ಡಾ. ಅಜಿತ್ ಗಟಾಟೆ, ಸುಭಾಷ್ ಕರಿಕಬ್ಬಿ,…
ವಿದ್ಯಾರ್ಥಿ ನಿಧಿ ರಾಮಾಪುರವೆಂಬ ಊರಿನ ಮಧ್ಯೆ ಭಾಗದಲ್ಲಿ ವಿಶಾಲವಾಗುವಂತಹ ಮಾವಿನಮರ ಬೆಳೆದಿತ್ತು. ಆ ಮರದ ಕೆಳಗೆ ಆ ಊರಿನ ಗ್ರಾಮಸ್ಥರು ಬಂದು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಅಕ್ಕಪಕ್ಕದ ಊರುಗಳಿಗೆ ಹೋಗುವಂತಹ ಗ್ರಾಮಸ್ಥರು ಮಾರ್ಗಯಾಸ ಪರಿಹಾರ ಮಾಡಿಕೊಳ್ಳಲು ಇದೇ ಮರದ ಕೆಳಗೆ ಕೆಲಕಾಲತಂಗಿ ಮುಂದೆ ಹೋಗುತ್ತಿದ್ದರು. ಹೀಗೆ ಈ ವಿಶಾಲವಾದಂತಹ ಮಾವಿನಮರ ನೂರಾರು ಪಕ್ಷಿಗಳಿಗೆ ಜಾನುವಾರುಗಳಿಗೆ, ಜನರಿಗೆ ಆಶ್ರಯ ತಾಣವಾಗಿ ನಿಂತಿತ್ತು. ಹೀಗಿರಲು ಒಂದು ದಿನ ಆ ಮರದ ಕೆಳಗಿನ ಹುತ್ತದೊಳಗೆ ದೂರದ ಕಾಡಿನಿಂದ ಬಂದಂತಹ ಕರಿನಾಗರ ಆಶ್ರಯ ಪಡೆದಿತ್ತು. ಹೀಗೆ ಸೇರಿಕೊಂಡ ಹಾವು ಆ ಮರದ ಕೆಳಗೆ ವಿಶ್ರಾಂತಿ ಪಡೆಯಲು ಬರುತ್ತಿದ್ದ ಜನರಿಗೆ ಕಚ್ಚಿ ಉಪಟಳ ಕೊಡುತ್ತಿತ್ತು. ಹೀಗೆ ಕಚ್ಚಿ ಹಲವಷ್ಟು ಜನ ಪ್ರಾಣವನ್ನೇ ಕಳೆದುಕೊಂಡಿದ್ದರು . ಹೀಗಾಗಿ ಮಾವಿನ ಮರದ ಕೆಳಗೆ ಹೋಗಲು ಜನ ಭಯಪಡಬೇಕಾದಂತಹ ವಾತಾವರಣ ನಿರ್ಮಾಣವಾಯಿತು. ಈ ಹಾವಿನ ವಿಷಯ ತಿಳಿದ ಸುತ್ತಮುತ್ತಲ ಗ್ರಾಮಸ್ಥರು ಆ ಮರದ ಹತ್ತಿರ ಬರುವುದನ್ನು ನಿಲ್ಲಿಸಿಬಿಟ್ಟರು.ಕಾಲ ಕಳೆಯುತ್ತಿರಲು ಒಂದು ದಿನ ಆ ಮರದ…
