ದೇವರಹಿಪ್ಪರಗಿ: ಮಕ್ಕಳ ಆಸಕ್ತಿಕರ ಕಲಿಕೆಯಲ್ಲಿ ಶಾಲಾ ಆವರಣ ಹಾಗೂ ವ್ಯವಸ್ಥೆ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.
ಪಟ್ಟಣದ ಸರ್ಕಾರಿ ಉರ್ದು ಶಾಲೆಗೆ ಇತ್ತೀಚಿಗೆ ಭೇಟಿ ನೀಡಿ ಶಾಲೆ ಹಾಗೂ ಕೋಣೆಗಳು ರೈಲು ಮಾದರಿಯಲ್ಲಿ ಬಣ್ಣ ಬಳಿದುಕೊಂಡು ಅಲಂಕೃತಗೊಂಡ ಬಗ್ಗೆ ತಮ್ಮ ಹರ್ಷ ವ್ಯಕ್ತಪಡಿಸಿ ಶಾಲಾ ಸಿಬ್ಬಂದಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಸರ್ಕಾರಿ ಶಾಲೆಯಲ್ಲಿ ಮೂಲಸೌಕರ್ಯಗಳ ಕೊರತೆ ಇವೆ ಎಂದು ಬಹುತೇಕ ಶಾಲೆಗಳ ಕುರಿತು ದೂರು ಬರುತ್ತಿರುವ ಈ ಸಂದರ್ಭದಲ್ಲಿ ಇರುವ ಸೌಲಭ್ಯಗಳನ್ನು ಬಳಕೆ ಮಾಡಿಕೊಂಡು ವ್ಯವಸ್ಥಿತವಾಗಿ ಶಾಲೆಯನ್ನು ಸುಂದರವನ್ನಾಗಿಸಿ, ಮಕ್ಕಳ ಮನಸೆಳೆಯವಲ್ಲಿ ಮುಖ್ಯಗುರು ಹಾಗೂ ಸಿಬ್ಬಂದಿ ಶ್ರಮಿಸಿದ್ದಾರೆ. ಅವರ ಶ್ರಮ ಹಾಗೂ ವಿಶೇಷ ಪ್ರಯತ್ನವನ್ನು ಪಾಲಕರು ಅರಿತುಕೊಂಡು ಸಹಕಾರ ನೀಡುವಂತೆ ಸಲಹೆ ನೀಡಿದರು. ನಂತರ ಶಾಲಾ ಸಿಬ್ಬಂದಿಯಿಂದ ಸನ್ಮಾನ ಸ್ವೀಕರಿಸಿದರು.
ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಎ.ಎಮ್.ವಾಲೀಕಾರ, ಉಪತಹಶೀಲ್ದಾರ ಸುರೇಶ ಮ್ಯಾಗೇರಿ, ಮುಖ್ಯಗುರು ಆರ್.ಎಮ್.ಹಳ್ಳಿ, ಸಿಬ್ಬಂದಿ ಎಮ್.ಎ.ಹೆಬ್ಬಾಳ, ಎಂ.ಜಿ.ಯಂಕಂಚಿ, ಬಂದೇನವಾಜ್ ಸೇರಿದಂತೆ ಎಸ್‌ಡಿಎಮ್‌ಸಿ ಅಧ್ಯಕ್ಷ ಮುಸ್ತಫಾ ಮುಲ್ಲಾ, ಅಮೀರ್ ಮಕಾಂದಾರ್, ಯಾಕೂಬ್ ಹೊನ್ನುಟಗಿ, ನಬಿಲಾಲ್ ಮಣೂರ, ಮಕ್ಕಳು ಹಾಗೂ ಸದಸ್ಯರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

