ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅತ್ಯುತ್ತಮ ಸಂಘ ಪ್ರಶಸ್ತಿ ಪ್ರದಾನ

ವಿಜಯಪುರ: ಕೆಯುಡಬ್ಲೂಜೆ ಉತ್ತಮ ಜಿಲ್ಲಾ ಸಂಘ ಪ್ರಶಸ್ತಿಗೆ ಪುರಸ್ಕೃತವಾದ ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ದಾವಣಗೆರೆಯಲ್ಲಿ ನಡೆದ 38ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿಗೆ ಪುರಸ್ಕೃತವಾದ ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪರವಾಗಿ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಸಂಘದ ಸದಸ್ಯರ ಹರ್ಷೋದ್ಘಾರಗಳ ಮಧ್ಯೆ ಗಣ್ಯರಿಂದ ಪ್ರಶಸ್ತಿ ಸ್ವೀಕರಿಸಿದರು.
ಶಶಿಕಾಂತ ಪ್ರಶಸ್ತಿ ಸ್ವೀಕಾರ: ಇದೇ ವೇಳೆ ಅತ್ಯುತ್ತಮ ತನಿಖಾ ವರದಿಗೆ ಟಿ.ಕೆ. ಮಲಗೊಂಡ ರಾಜ್ಯ ಪ್ರಶಸ್ತಿಯನ್ನು ಖಾಸಗಿ ವಾಹಿನಿಯ ವರದಿಗಾರ ಶಶಿಕಾಂತ ಮೆಂಡೆಗಾರ ಸ್ವೀಕರಿಸಿದರು.
ಬಳಿಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅತ್ಯುತ್ತಮ ಸಂಘ ಪ್ರಶಸ್ತಿ ಲಭಿಸಿರುವುದು ಮತ್ತು ನಾನೇ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಸಂತಸವನ್ನುಂಟು ಮಾಡಿದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಚಟುವಟಿಕೆಗಳು ಇತರ ಎಲ್ಲಾ ಸಂಘಗಳಿಗೂ ಮಾರ್ಗದರ್ಶಿಯಾಗಿವೆ ಎಂದು ಪ್ರಶಂಸಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಪುಂಡಲೀಕ ಬಾಳೋಜಿ, ಪ್ರಧಾನ ಕಾರ್ಯದರ್ಶಿ ಮೋಹನ ಪಿ. ಕುಲಕರ್ಣಿ, ರಾಜ್ಯ ಸಮಿತಿ ಸದಸ್ಯ ಡಿ.ಬಿ. ವಡವಡಗಿ, ನಾಮನಿರ್ದೇಶನ ಸದಸ್ಯ ಕೆ.ಕೆ. ಕುಲಕರ್ಣಿ, ಸಂಘದ ಉಪಾಧ್ಯಕ್ಷರಾದ ಇಂದುಶೇಖರ ಮಣೂರ, ಪ್ರಕಾಶ ಬೆಣ್ಣೂರ, ಖಜಾಂಚಿ ರಾಹುಲ್ ಆಪ್ಟೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಶಶಿಕಾಂತ ಮೆಂಡೇಗಾರ, ಸಮೀರ್ ಇನಾಂದಾರ, ಮಾಜಿ ಅಧ್ಯಕ್ಷ ಸಚೇಂದ್ರ ಲಂಬು, ಪತ್ರಕರ್ತರಾದ ದೇವೇಂದ್ರ ಹೆಳವರ, ಟಿ.ಕೆ. ಮಲಗೊಂಡ, ಮಾಧವರಾವ್ ಕುಲಕರ್ಣಿ, ಸೀತಾರಾಮ ಕುಲಕರ್ಣಿ, ಗೋಪಾಲ ಕಣಿಮನಿ, ರಶ್ಮಿ ಪಾಟೀಲ, ಶ್ರೀನಿವಾಸ ಸೂರಗೊಂಡ, ಬಿ.ಬಿ. ಪಾಟೀಲ, ವಿಠ್ಠಲ ಲಂಗೋಟಿ, ಸಂಜು ಕೋಳಿ, ಮುದ್ದೇಬಿಹಾಳ ತಾಲೂಕು ಅಧ್ಯಕ್ಷ ಮುತ್ತು ವಡವಡಗಿ, ಪ್ರಧಾನ ಕಾರ್ಯದರ್ಶಿ ರವಿ ನಂದೆಪ್ಪಗೋಳ, ನಿಡಗುಂದಿ ತಾಲೂಕು ಅಧ್ಯಕ್ಷ ರಾಜು ತೊರಗಲ್ಲಮಠ, ಚಡಚಣ ಪ್ರಧಾನ ಕಾರ್ಯದರ್ಶಿ ಡೊಣಜಮಠ ಸೇರಿದಂತೆ ಸಂಘದ ಸರ್ವ ಸದಸ್ಯರಿದ್ದರು.

