ಸಿಂದಗಿ: ತಾಲೂಕಿನ ಹಿಕ್ಕಣಗುತ್ತಿ ಗ್ರಾಮದಲ್ಲಿ ಫೆ.೧೨ ರಿಂದ ಮಾ.೮ ರವರೆಗೆ ಕಡಕೋಳ ಶ್ರೀ ಮಡಿವಾಳೇಶ್ವರರ ಜೀವನ ಚರಿತ್ರೆ ಪ್ರವಚನವು ಸಾಯಂಕಾಲ ೭:೩೦ಗಂಟೆಯಿಂದ ಶ್ರೀಮಠದ ಶ್ರೀ ಪ್ರಭಲಿಂಗ ಶರಣರ ಅಮೃತ ವಾಣಿಯಿಂದ ಜರಗುವುದು. ಕಾರಣ ಹಿಕ್ಕಣಗುತ್ತಿ-ತಡವಲಗಾ ಹಾಗೂ ಗ್ರಾಮದ ಸುತ್ತ ಮುತ್ತಲಿನ ಸದ್ಭಕ್ತರು ಭಾಗವಹಿಸಬೇಕು. ಸಂಗೀತ ಸೇವೆಯನ್ನು ಬೋರಗಿಯ ವಿರೇಶ ವಿಶ್ವಕರ್ಮ, ಚಿಟಗುಪ್ಪಾದ ಪ್ರವೀಣ ವಿಶ್ವಕರ್ಮ, ನಂದಿ ಸೇವಯನ್ನು ಅಣ್ಣಾರಾಯಗೌಡ ಬಿರಾದಾರ ನಡೆಸಿಕೊಡುವರು ಎಂದು ಪಂಚಮಸಾಲಿ ಸಮಾಜ ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ ಹೇಳಿದರು.
ಈ ವೇಳೆ ಕಾನಿಪ ಅಧ್ಯಕ್ಷ ಆನಂದ ಶಾಬಾದಿ, ಗ್ರಾಂಪ ಅಧ್ಯಕ್ಷ ಎನ್.ಎಸ್ ಬಿರಾದಾರ, ಉಪಾಧ್ಯಕ್ಷ ಅಮೃತ ಮರಬದ, ಚಂದ್ರಕಾಂತ ಸಣ್ಣಮನಿ, ಸಿದ್ದರಾಮ ಬಾದನ, ಶಿವಲಿಂಗಪ್ಪ ಸತಾಲಗಾವ್, ನಾಗಣ್ಣ ಬಿರಾದಾರ, ಎಚ್.ಎಂ.ಪಾಟೀಲ್ ಯಡಗಿ ಸೇರಿದಂತೆ ಗ್ರಾಮಸ್ಥರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

