ಮುದ್ದೇಬಿಹಾಳ: ಕಸ ವಿಲೇವಾರಿ ವಾಹನ ಬರದ ಕಾರಣ ತಮ್ಮ ಮನೆಯ ಕಸವನ್ನು ತಂದು ಪುರಸಭೆ ಕಾರ್ಯಾಲಯದಲ್ಲಿ ಎಸೆದ ಘಟನೆ ಪಟ್ಟಣದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.
ಪಟ್ಟಣದ ಹೊರಪೇಟ ಗಲ್ಲಿಯ ನಿವಾಸಿ ಮುತ್ತು ಪೂಜಾರಿ ಪುರಸಭೆ ಕಾರ್ಯಾಲಯದಲ್ಲಿ ಕಸ ಎಸೆಯುವ ಮೂಲಕ ಅಧಿಕಾರಿಗಳಿಗೆ ಎಚ್ಚರಿಸಿದ್ದಾನೆ. ಈ ಬಗ್ಗೆ ಮಾಧ್ಯಮದ ದೊಂದಿಗೆ ಮಾತನಾಡಿದ ಅವರು ಪುರಸಭೆಗೆ ಅತ್ಯಂತ ಸಮೀಪವಿರುವ ನಮ್ಮ ಬಡಾವಣೆಗೆ ಕಳೆದ ೧೫ ದಿನಗಳಿಂದ ಕಸ ವಿಲೇವಾರಿ ವಾಹನ ಬಂದಿಲ್ಲ. ಸಂಬಂಧಿಸಿದ ಅಧಿಕಾರಿಗಳಿಗೆ ಕೇಳಿದರೆ ಇಲ್ಲದ ಕುಂಟು ನೆಪ ಹೇಳುತ್ತಾರೆ. ಸ್ವಚ್ಛ ಭಾರತ ಅಂತಾ ದೊಡ್ಡದಾಗಿ ಪ್ರಚಾರ ಮಾಡುವ ಇವರು ೧೫ ದಿನಗಳ ವರೆಗೆ ಕಸವನ್ನು ಎಲ್ಲಿ ಇಟ್ಟುಕೊಂಡು ಕೂಡಬೇಕು? ಹಸಿ ಕಸ ಬೇರೆ ಮಾಡಿ ಒಣ ಕಸಬೇರೆ ಮಾಡಿ, ಸ್ವಚ್ಛತೆಯೇ ನಮ್ಮ ಸಂಸ್ಕಾರ ಎಂದು ಹಾಡು ಬರುತ್ತೆ ಆದರೆ ಪುರಸಭೆ ಅಧಿಕಾರಿಗಳ ಬಳಿಯೇ ಸ್ವಚ್ಛತೆಯ ಸಂಸ್ಕಾರ ಇಲ್ಲ. ಕಸ ವಿಲೇವಾರಿ ವಾಹನವನ್ನು ಕಳಿಸಿ ಎಂದು ದಿನಂಪ್ರತಿ ಹೇಳಿ ವಾಹನ ಬರದೇ ಇರುವದಕ್ಕೆ ಇವತ್ತು ನನ್ನೊಬ್ಬನ ಮನೆಯ ಕಸವನ್ನು ತಂದು ಕಚೇರಿಯ ಒಳಗೆ ಹಾಕಿದ್ದೇನೆ. ಮುಂದಿನ ದಿನಗಳಲ್ಲಿ ಇದೇ ರೀತಿ ಮುಂದುವರೆದರೆ ಬಡಾವಣೆಯ ಸಾರ್ವಜನಿಕರ ಎಲ್ಲ ಕಸವನ್ನು ತಂದು ಪುರಸಭೆ ಕಚೇರಿಯ ಒಳಗೆ ಹಾಕಿ ಉಗ್ರವಾಗಿ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದರು.
ಪಟ್ಟಣದ ವಿದ್ಯಾನಗರದಲ್ಲಿಯೂ ಕೂಡ ಸುಮಾರು ದಿನಗಳಿಂದ ಕಸ ವಿಲೇವಾರಿ ವಾಹನ ಬರುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ದೂರಿದರು. ದೊಡ್ಡ ಪ್ರಮಾಣದಲ್ಲಿ ಶೇಖರಣೆಯಾಗಿರುವ ಕಸವನ್ನು ಮಂಗಳವಾರ ಬಂದ ಕಸವಿಲೇವಾರಿ ವಾಹನಕ್ಕೆ ಹಾಕುವ ವಿಡಿಯೋ, ಫೋಟೋ ತೆಗೆದು ’ಉದಯರಶ್ಮಿ’ ಗೆ ನೀಡಿದ ಸಾರ್ವಜನಿಕರು ಮನೆಯಲ್ಲಿ ಕಸ ಶೇಖರಣೆಯಾಗಿ ಸಾಂಕ್ರಾಮಿಕ ರೋಗಗಳಿಗೆ ತುತ್ತಾದರೆ ಅದಕ್ಕೆ ಪುರಸಭೆಯೇ ನೇರ ಹೊಣೆ ಹೊರಬೇಕಾಗುತ್ತದೆ. ಇಲ್ಲಿ ಆಗುತ್ತಿರುವ ತೊಂದರೆಯನ್ನು ಜಿಲ್ಲಾಧಿಕಾರಿಗಳು ಕೂಡಲೇ ಸರಿಪಡಿಸಬೇಕು. ಇಲ್ದಿದ್ರೆ ಉಗ್ರವಾಗಿ ಪ್ರತಿಭಟಿಸುವದಾಗಿ ಎಚ್ಚರಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

