ಬಸವನಬಾಗೇವಾಡಿ: ಮೈಸೂರು ರಾಜ್ಯ ಕರ್ನಾಟಕ ಎಂದು ಮರುನಾಮಕರಣವಾಗಿ ೫೦ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಹೆಸರಿನಡಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಯಾತ್ರೆಯು ತಾಲೂಕಿನ ಫೆ.೭ ರಂದು ಸಂಜೆ ೪ ಗಂಟೆಗೆ ಮುತ್ತಗಿ ಗ್ರಾಮದ ಮೂಲಕ ಬಸವನಾಡಿಗೆ ಜ್ಯೋತಿ ರಥಯಾತ್ರೆಯು ಪ್ರವೇಶ ಮಾಡಲಿದೆ. ರಥಯಾತ್ರೆಯನ್ನು ಅದ್ದೂರಿಯಾಗಿ ಬರಮಾಡಿಕೊಂಡ ನಂತರ ಫೆ. ೮ ರಂದು ಬೆಳಗ್ಗೆ ೧೦ ಬಸವನಬಾಗೇವಾಡಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜ್ಯೋತಿ ರಥಯಾತ್ರೆ ಸಂಚರಿಸಿ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ,ಸಂಸ್ಕ್ರತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಯುವಜನತೆಗೆ ಕನ್ನಡದ ಅರಿವು ಬಿಂಬಿಸಲಾಗುವುದು. ಇದೇ ದಿನ ತಾಲೂಕಿನ ಮಸಬಿನಾಳ, ಇಂಗಳೇಶ್ವರ, ದಿಂಡವಾರ, ಹೂವಿನಹಿಪ್ಪರಗಿಯಲ್ಲಿ ಸಂಚರಿಸಿ ಹೂವಿನಹಿಪ್ಪರಗಿಯಲ್ಲಿ ವಾಸ್ತವ್ಯ ಮಾಡಲಿದೆ. ಫೆ.೯ ರಂದು ಹುಲಬೆಂಚಿ, ಬಳಗಾನೂರ ಗ್ರಾಮದ ಮೂಲಕ ತಾಳಿಕೋಟಿ ತಾಲೂಕಿಗೆ ಜ್ಯೋತಿ ರಥಯಾತ್ರೆಯನ್ನು ಬೀಳ್ಕೊಡಲಾಗುತ್ತದೆ. ಜ್ಯೋತಿ ರಥ ಯಾತ್ರೆಯ ಸ್ವಾಗತ, ಬೀಳ್ಕೊಡುಗೆ,ವಿವಿಧ ಗ್ರಾಮದಲ್ಲಿ ಸಂಚರಿಸುವ ಸಂದರ್ಭದಲ್ಲಿ ತಾಲೂಕಿನ ಜನಪ್ರತಿನಿಧಿಗಳು, ಕನ್ನಡಪರ ಒಕ್ಕೂಟಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾಹಿತಿಗಳು, ಚಿಂತಕರು, ಸರ್ವಜನಾಂಗದ ಕನ್ನಡಪ್ರೇಮಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
