ಸಿಂದಗಿ: ತಾಯ್ತನವುಳ್ಳವರಿಂದ ಮಾತ್ರ ಮಕ್ಕಳ ಸಾಹಿತ್ಯ ರಚನೆ ಸಾಧ್ಯ. ವಿಜಯಪುರ ಜಿಲ್ಲೆಯಲ್ಲಿ ಮಕ್ಕಳ ಸಾಹಿತ್ಯ ಗಟ್ಟಿಯಾಗಿದೆ. ಜಿಲ್ಲೆ ಮಕ್ಕಳ ಸಾಹಿತ್ಯದ ಖಣಜವಾಗಿದೆ ಎಂದು ಜಾನಪದ ವಿದ್ವಾಂಸ ಡಾ.ಎಂ.ಎಂ. ಪಡಶೆಟ್ಟಿ ಅಭಿಪ್ರಾಯಪಟ್ಟರು.
ಪಟ್ಟಣದ ಸಾರಂಗಮಠದ ಆವರಣದಲ್ಲಿ ವಿದ್ಯಾಚೇತನ ಪ್ರಕಾಶನ ಹಮ್ಮಿಕೊಂಡಿದ್ದ ಐದು ಕೃತಿಗಳ ಲೋಕಾರ್ಪಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಪ.ಗು.ಸಿದ್ದಾಪೂರ ಗಟ್ಟಿಯಾಗಿ ನೆಲೆ ನಿಂತಿದ್ದಾರೆ. ಮಕ್ಕಳ ಸಾಹಿತ್ಯವನ್ನು ಪಠ್ಯಪುಸ್ತಕಗಳಲ್ಲಿ ಸೇರ್ಪಡೆಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕುವ ಜನಾಂದೋಲನ ಪ್ರಾರಂಭಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮಕ್ಕಳ ಸಾಹಿತಿ ಪ.ಗು. ಸಿದ್ದಾಪೂರ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಕ್ಕಳ ಸಾಹಿತಿ ಹ.ಮ. ಪೂಜಾರ ರಚಿತ ಚತುರ ಚಿಣ್ಣರು ಕಥಾ ಸಂಕಲನ, ಕೆಮ್ಮಿನ ಔಷಧಿ ಉಚಿತ ನಗೆ ಹನಿ ಪುಸ್ತಕ, ಮುಳವಾಡದ ಮಕ್ಕಳ ಸಾಹಿತಿ ಪ.ಗು. ಸಿದ್ದಾಪೂರ ರಚಿತ ಅಕ್ಕರೆ ಅಜ್ಜ ನಾವು ಮತ್ತು ಗಾಂಧಿ ತಾತ ಕವನ ಸಂಕಲನ, ಶಿಕ್ಷಕ ಸಾಹಿತಿ ಎಸ್.ಎಸ್.ಸಾತಿಹಾಳ ರಚಿತ ಏನು ಚಂದವೋ ಮಕ್ಕಳ ಕವನ ಸಂಕಲನವನ್ನು ಸಾರಂಗಮಠ-ಗಚ್ಚಿನಮಠದ ಶ್ರೀ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಲೋಕಾರ್ಪಣೆ ಮಾಡಿದರು.
ಸ್ಥಳಿಯ ಎಚ್.ಜಿ. ಪಿಯು ಕಾಲೇಜಿನ ಪ್ರಾಚಾರ್ಯ ಎ.ಆರ್. ಹೆಗ್ಗನದೊಡ್ಡಿ ಅವರು, ಮಕ್ಕಳ ಸಾಹಿತಿ ಹ.ಮ. ಪೂಜಾರ ರಚಿತ ಚತುರ ಚಿಣ್ಣರು ಕಥಾ ಸಂಕಲನ, ಕೆಮ್ಮಿನ ಔಷಧಿ ಉಚಿತ ನಗೆ ಹನಿ, ಪರಿಚಯಿಸಿದರು. ಬಬಲೇಶ್ವರದ ಶ್ರೀ ಶಾಂತವೀರ ಪದವಿಪೂರ್ವ ಮಹಾವಿದ್ಯಾಲಯದ ರಾಜ್ಯಪ್ರಶಸ್ತಿ ಪುರಸ್ಕೃತ ಉಪನ್ಯಾಸಕ ಮಹಾದೇವ ರೆಬಿನಾಳ ಮುಳವಾಡದ ಮಕ್ಕಳ ಸಾಹಿತಿ ಪ.ಗು. ಸಿದ್ದಾಪೂರ ರಚಿತ ಅಕ್ಕರೆ ಅಜ್ಜ ನಾವು ಮತ್ತು ಗಾಂಧಿ ತಾತ ಕವನ ಸಂಕಲನಗಳನ್ನು ಮತ್ತು ಶಿಕ್ಷಕ ಸಾಹಿತಿ ಎಸ್.ಎಸ್. ಸಾತಿಹಾಳ ರಚಿತ ಏನು ಚಂದವೋ ಮಕ್ಕಳ ಕವನ ಸಂಕಲನವನ್ನು ಪರಿಚಯ ಮಾಡಿದರು.
ಕಾರ್ಯಕ್ರಮದಲ್ಲಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ವಿದ್ಯಾಚೇತನ ಪ್ರಕಾಶನದ ಹ.ಮ. ಪೂಜಾರ ಮಾತನಾಡಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ವಿಜಯಪುರ ವೈದ್ಯ ಎಸ್.ಬಿ. ಮಿರಜಕರ, ರೇಖಾ, ಚುಕ್ಕಿ ಚಿತ್ರಕಲೆಯಲ್ಲಿ ರಾಜ್ಯಮಟ್ಟದಲ್ಲಿ ಹೆಸರು ಮಾಡಿದ ಚಿತ್ರಕಲಾವಿದ ರಮೇಶ ಸಾಸನೂರ, ಮಕ್ಕಳ ಸಾಹಿತಿ ರಾ.ಶಿ. ವಾಡೇದ ಅವರನ್ನು ಶ್ರೀಗಳು ಗೌರವಿಸಿದರು.
ಮಕ್ಕಳ ಸಾಹಿತಿ ಎಸ್.ಎಸ್. ಸಾತಿಹಾಳ ಸ್ವಾಗತಿಸಿದರು. ಎಸ್.ಕೆ. ಗುಗ್ಗರಿ ನಿರೂಪಿಸಿದರು. ರಾಚು ಕೊಪ್ಪಾ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

