Author: editor.udayarashmi@gmail.com

ಸಿಂದಗಿ: ಗ್ರಾಮ ಪಂಚಾಯತ್ ವತಿಯಿಂದ ಒಂದು ವರ್ಷದಲ್ಲಿ ಎರಡು ಬಾರಿ ಗ್ರಾಮ ಸಭೆಗಳು ನಡೆಸಬೇಕು. ವಾರ್ಡ್ ಸಭೆಗಳನ್ನು ವರ್ಷದಲ್ಲಿ ನಾಲ್ಕು ಬಾರಿ ಕಡ್ಡಾಯವಾಗಿ ಮಾಡಲೇಬೇಕು ಎಂದು ತಾಪಂ ಮೇಲ್ವೀಚಾರಕಿ ಲಕ್ಷ್ಮೀ ಪಾಟೀಲ ಹೇಳಿದರು.ಪಟ್ಟಣದ ಸಂಗಮ ಸಂಸ್ಥೆಯ ಸಭಾಭವನದಲ್ಲಿ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡ ಕಟ್ಟಡ ಕಾರ್ಮಿಕರಿಗೆ ಪಂಚಾಯತ್ ರಾಜ್ ಕುರಿತು ತರಬೇತಿ ಹಾಗೂ ವಾಹನ ಚಾಲನಾ ಪರವಾನಿಗೆ ಕುರಿತ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನ ಸಾಮಾನ್ಯರು ಸೌಲಭ್ಯವನ್ನು ಪಡೆಯಬೇಕಾದರೆ ಅಥವಾ ಯಾವುದಾದರೂ ನಿಮ್ಮ ಕುಂದು ಕೊರತೆಗಳಿದ್ದರೆ ಗ್ರಾಮ ಸಭೆಯಲ್ಲಿ ಮಂಡಿಸಬೇಕು. ಇಲ್ಲಿ ಮಂಡಿಸಿರುವ ಮಸೂದೆಯನ್ನು ಯಾವುದೇ ಕಾರಣಕ್ಕೂ ರದ್ದು ಮಾಡುವಂತಿಲ್ಲ ಎಂದು ಮಾಹಿತಿ ತಿಳಿಸಿದರು.ಈ ವೇಳೆ ರಾಮು ವಾಹನ ತರಬೇತಿ ಸಂಸ್ಥೆಯ ಮುಖ್ಯಸ್ಥ ರಾಮು ಆಸಂಗಿ ಮಾತನಾಡಿ, ಯಾವುದೇ ವಾಹನವನ್ನು ಚಲಾಯಿಸಬೇಕಾದೆರೆ ಚಲಾಯಿಸುವ ವ್ಯಕ್ತಿಗೆ ೧೮ ವರ್ಷ ಕಡ್ಡಾಯವಾಗಿ ತುಂಬಿರಬೇಕು. ೧೮ವರ್ಷದ ಒಳಗಿನ ಮಕ್ಕಳಿಗೆ ದಯವಿಟ್ಟು ವಾಹನವನ್ನು ಬಳಸಲು ಕೊಡಬೇಡಿ. ಮತ್ತು ೧೮ವರ್ಷ ಪೂರೈಸಿದವರು ವಾಹನವನ್ನು…

Read More

ಇಂಡಿ: ಲಿಂಬೆ ನಾಡಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅದಲ್ಲದೇ ಯಾವುದೇ ಲೋಪವಾಗದಂತೆ, ಅರ್ಥಪೂರ್ಣವಾದ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಮತ್ತು ತಾಲೂಕು ಅಧಿಕಾರಿಗಳಿಗೆ ಕೊಟ್ಟ ಜವಾಬ್ದಾರಿ ಹಾಗೂ ಸೂಚಿಸಿದ ಕಾರ್ಯ ಚಟುವಟಿಕೆಗಳು ವ್ಯವಸ್ಥಿತವಾಗಿ ಮಾಡಬೇಕು ಎಂದು ಕಂದಾಯ ಉಪವಿಭಾಗ ಅಧಿಕಾರಿ ಆಬೀದ್ ಗದ್ಯಾಳ ಬುಧವಾರ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ನಿಗದಿಪಡಿಸಿದ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ಎತ್ತಿನ ಬಂಡಿಯಲ್ಲಿ ಪಟ್ಟಣದ ಪ್ರವಾಸಿ ಮಂದಿರದಿಂದ ಬಾಬು ಜಗಜೀವನ ರಾಮ್ ವೃತ್ತ, ಬಸವೇಶ್ವರ ವೃತ್ತ, ಮಹಾವೀರ ವೃತ್ತ ಹಾಗೂ ಡಾ ಬಿ ಅರ್ ಅಂಬೇಡ್ಕರ್ ವೃತ್ತದ ಮೂಲಕ‌ ಹಾದು ತಾಲೂಕು ಪೋಲಿಸ್ ಮೈದಾನದಲ್ಲಿ ಕಾರ್ಯಕ್ರಮ ಜರುಗುತ್ತದೆ ಎಂದು ತಿಳಿಸಿದರು.ಶಾಲಾ ಕಾಲೇಜು ಹಾಗೂ ತಾಲೂಕು ಅಧಿಕಾರಿಗಳಿಂದ ಪ್ರಭಾತ್‌ ಪೇರಿ ನಡೆಸಲಿದ್ದು, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗುವುದು,ಕಾರ್ಯಕ್ರಮ ನಡೆಯುವ ಪೋಲಿಸ್ ಮೈದಾನವನ್ನು ಸ್ವಚ್ಛಗೊಳಿಸಿ…

Read More

ನಿತ್ಯ ೬ ಗಂಟೆಗಳ ಕಾಲ ವಿದ್ಯುತ್ ಪೂರೈಕೆಗೆ ಸಚಿವ ಎಂ.ಬಿ.ಪಾಟೀಲ ಸೂಚನೆ ವಿಜಯಪುರ: ರಾಜ್ಯದಲ್ಲಿ ಈ ಮೊದಲಿಗಿಂತ ೬ ಸಾವಿರ ಮೆಘಾವ್ಯಾಟ್ ವಿದ್ಯುತ್ ಬೇಡಿಕೆ ಹೆಚ್ಚಾಗಿದ್ದು, ಆದಾಗ್ಯೂ ನೀರಾವರಿ ಪಂಪಸೆಟ್‌ಗಳಿಗೆ ೪ ಬ್ಯಾಚ್‌ಗಳಲ್ಲಿ ಆರು ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮವಹಿಸುವಂತೆ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರು ಸೂಚನೆ ನೀಡಿದರು.ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ವಿದ್ಯುತ್ ಪೂರೈಕೆ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ವಿದ್ಯುತ್ ಅಭಾವ ಪರಿಸ್ಥಿತಿಯನ್ನು ಮುಖ್ಯಮಂತ್ರಿಗಳು ಖುದ್ದಾಗಿ ಪರಿಶೀಲಿಸಿ ನಿರ್ದೇಶನ ನೀಡಿರುವುದರಿಂದ ಕಬ್ಬು ಬೆಳೆಯುವ ಪ್ರದೇಶದಲ್ಲಿ ಬೇಡಿಕೆಯಂತೆ ರಾತ್ರಿ ೨ ಬ್ಯಾಚ್ ಹಾಗೂ ಹಗಲು ೨ ಬ್ಯಾಚ್ ಸೇರಿದಂತೆ ೫ ಗಂಟೆಗಳ ಬದಲಿಗೆ ೬ ಗಂಟೆಗಳ ಕಾಲ ನೀರಾವರಿ ಪಂಪಸೆಟ್‌ಗಳಿಗೆ ವಿದ್ಯುತ್ ಪೂರೈಸಬೇಕು. ಹಾಗೂ ತೋಟದ ಮನೆಗಳ ಗೃಹ ಬಳಕೆಗಾಗಿ ಸಂಜೆ ೬ ರಿಂದ ೧೦ ಗಂಟೆವರೆಗೆ…

Read More

ಕೋರವಾರದಿಂದ ದೇವರಹಿಪ್ಪರಗಿವರೆಗೆ ರೈತಸಂಘದ ಪದಾಧಿಕಾರಿಗಳಿಂದ ಪಾದಯಾತ್ರೆ ದೇವರಹಿಪ್ಪರಗಿ: ರೈತರ ಸಂಪೂರ್ಣ ಸಾಲಮನ್ನಾ , ಬರಗಾಲ ನಿಮಿತ್ಯ ತುರ್ತು ಪರಿಹಾರ, ಸೇರಿದಂತೆ ೧೧ ವಿವಿಧ ಬೇಡಿಕೆಗಳನ್ನು ಇಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಪದಾಧಿಕಾರಿಗಳು ಕೋರವಾರ ಗ್ರಾಮದಿಂದ ದೇವರಹಿಪ್ಪರಗಿವರೆಗೆ ಸುಮಾರು ೬ ಗಂಟೆಗಳ ಕಾಲ ಪಾದಯಾತ್ರೆ ಕೈಗೊಂಡು ನಂತರ ಅಂಬೇಡ್ಕರ್ ವೃತ್ತದಲ್ಲಿ ಒಂದು ಗಂಟೆಗಳ ಕಾಲ ಧರಣಿ ಕುಳಿತು ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು. ತಾಲ್ಲೂಕಿನ ಕೋರವಾರ ಗ್ರಾಮದ ಕೋರವಾರೇಶ ಗ್ರಾಮದಲ್ಲಿ ಸೇರಿದ ರೈತರು ಬುಧವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳಾದ ಈರಪ್ಪ ಕುಳೇಕುಮಟಗಿ, ಶಿವಾನಂದ ಹಿರೇಮಠ, ಸಂಗಮೇಶ ಹುಣಸಗಿ, ಚೌಕಿಮಠದ ಕಾಶೀಲಿಂಗಶ್ರೀ ನೇತೃತ್ವದಲ್ಲಿ ಜಾಲವಾದ, ಮಣೂರ, ದೇವೂರ ಗ್ರಾಮಗಳ ಮೂಲಕ ಒಟ್ಟು ೨೦ ಕಿ.ಮೀ ಪಾದಯಾತ್ರೆ ನಡೆಸಿ, ಅಂಬೇಡ್ಕರ್ ವೃತ್ತ ತಲುಪಿ ಧರಣಿ ಕುಳಿತರು. ಈ ಸಂದರ್ಭದಲ್ಲಿ ದೇವರ ಹಿಪ್ಪರಗಿ ಸದಯ್ಯನಮಠದ ವೀರಗಂಗಾಧರಶ್ರೀ, ಹುಲಜಂತಿ ಮಾಳಿಂಗರಾಯರು, ರೈತ ಸಂಘದ ಸಂಗಮೇಶ ಸಗರ,…

Read More

ವಿಜಯಪುರ: ನಗರದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಯುವ ಭಾರತ ಸಂಸ್ಥಾಪಕ ಅಧ್ಯಕ್ಷ ಉಮೇಶ ಕಾರಜೋಳ ಅವರ ನೇತೃತ್ವದಲ್ಲಿ ಸಾಮೂಹಿಕ ಬನ್ನಿ-ವಿನಿಮಯ ಕಾರ್ಯಕ್ರಮ ಮಂಗಳವಾರ ಸಂಜೆ ನಡೆಯಿತು.ಕೆಎಸ್‌ಆರ್‌ಟಿಸಿ ಡಿಪೋ ಬಳಿ ಇರುವ ಅವರ ನಿವಾಸದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ವಿಜಯಪುರ, ಜಿಲ್ಲೆಯ ಎಲ್ಲ ತಾಲೂಕಿನ ಜನರು ಬನ್ನಿ ವಿನಿಮಯ ಮಾಡಿ “ನಾವು ನೀವು ಬಂಗಾರದ ಹಾಗೆ ಇರೋಣ” ಎಂದು ಹಬ್ಬದ ಶುಭ ಕೋರಿದರು.ಈ ಸಂದರ್ಭ ಉಮೇಶ ಕಾರಜೋಳ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಸಹೋದರತೆ, ಭಾವೈಕ್ಯತೆ ಹಾಗೂ ಆಧ್ಯಾತ್ಮಿಕತೆಯನ್ನು ಹೆಚ್ಚಿಸಲು ತಮ್ಮದೇ ಆದ ಪಾತ್ರ ವಹಿಸುತ್ತವೆ. ಅದರಲ್ಲೂ ನವರಾತ್ರಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಪವಿತ್ರವಾದ ಶಮಿ ವೃಕ್ಷದ ಎಲೆಗಳನ್ನು ಬಂಗಾರ ರೂಪದಲ್ಲಿ ವಿನಿಮಯ ಮಾಡಿಕೊಳ್ಳುವುದರ ಹಿಂದೆ ಅನೇಕ ಅರ್ಥವಿದೆ, ಎಲ್ಲರೂ ಸುಖವಾಗಿರಲಿ, ಎಲ್ಲರೂ ಇರಲಿ ಎನ್ನುವ ಭಾವಾರ್ಥವಿದೆ, ಹಬ್ಬಗಳ ಹಿಂದಿನ ಭಾವವನ್ನು ನಾವು ಅರಿತುಕೊಂಡು ಮುನ್ನಡೆಯಬೇಕಿದೆ ಎಂದರು.ಈ ಸಂದರ್ಭದಲ್ಲಿ ಸಾಹೇಬಗೌಡ ಬಿರಾದಾರ, ಸಿದ್ದನಗೌಡ ಬಿರಾದಾರ, ಶರಣು ಸಬರದ, ಸತೀಶ ಬಾಗಿ, ವಿರೇಶ…

Read More

ಆಲಮಟ್ಟಿ: ಯುಕೆಪಿಯ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವ ಅವಧಿಯನ್ನು ಮತ್ತೆ ಪರಿಷ್ಕರಿಸಲಾಗಿದ್ದು, ವಾರಾಬಂಧಿ ಅವಧಿ ಬದಲಾಯಿಸಿ, ಯುಕೆಪಿಯ ನೀರಾವರಿ ಸಲಹಾ ಸಮಿತಿ ನಿರ್ಧರಿಸಿದೆ.ಈಗ ಅಕ್ಟೋಬರ್‌14 ರಿಂದ ಆರಂಭಗೊಂಡಿರುವ ಕಾಲುವೆಗೆ ನೀರು ಹರಿಸುವ ಅವಧಿ ಯಾವುದೇ ವಾರಾಬಂಧಿ ಅಳವಡಿಸದೇ ನ.18 ರವರೆಗೆ 36 ದಿನಗಳ ಕಾಲ ನಿರಂತರ ನೀರು ಪೂರೈಕೆಯಾಗಲಿದೆ. ನ.19 ರಿಂದ ನ.26 ರವರೆಗೆ 8 ದಿನ ಮಾತ್ರ ಬಂದ್‌ಮಾಡಿ ಮತ್ತೇ ನ.27 ರಿಂದ ಡಿ.4 ರವರೆಗೆ 8ದಿನಗಳ ಕಾಲ ನೀರು ಪೂರೈಕೆಯಾಗಲಿದೆ. ಅ.14 ರಿಂದ 44 ದಿನ ಕಾಲುವೆಗೆ ನೀರು ಹರಿಯಲಿದ್ದು, 8 ದಿನ ಮಾತ್ರ ಬಂದ್‌ ಇರಲಿದೆ.ಎಂದು ಐಸಿಸಿಯ ಸದಸ್ಯ ಕಾರ್ಯದರ್ಶಿಗಳು ಆಗಿರುವ ಭೀಮರಾಯನಗುಡಿಯ ಮುಖ್ಯ ಎಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ನಾಡಹಬ್ಬ ದಸರಾ ಅಂಗವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ‌ ಅವರು ಸಾರ್ವಜನಿಕರೊಂದಿಗೆ ಬನ್ನಿ ವಿನಿಮಯ ಮಾಡಿದರು.ಇಂದು ಬುಧವಾರ ಬೆಳಿಗ್ಗೆಯಿಂದಲೇ ಸಚಿವರ ಗೃಹ ಕಚೇರಿಗೆ ಆಗಮಿಸಿದ ಅಪಾರ ಸಂಖ್ಯೆಯಲ್ಲಿದ್ದ ರೈತರು, ಮುಖಂಡರು, ಸಾರ್ವಜನಿಕರು, ಸಚಿವರ ಅಭಿಮಾನಿಗಳು ಹಾಗೂ ಬೆಂಬಲಿಗರು ಸಚಿವರಿಗೆ ಬನ್ನಿ ನೀಡಿ ಶುಭ ಕೋರಿದರು. ಇದಕ್ಕೆ ಪ್ರತಿಯಾಗಿ ಸಚಿವರೂ ಕೂಡ ಎಲ್ಲರಿಗೂ ಬನ್ನಿ ನೀಡಿ ಶುಭ ಕೋರಿದರು. ವಿಜಯಪುರ, ಬಾಗಲಕೋಟೆ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳು ಹಾಗೂ ನೆರೆಯ ಮಹಾರಾಷ್ಟ್ರದಿಂದಲೂ ಆಗಮಿಸಿದ್ದ ಹಿತೈಷಿಗಳು ದಸರಾ ಶುಭಾಷಯ ಕೋರಿದರು.ಜಗನ್ಮಾತೆ ಬರವನ್ನು ದೂರ ಮಾಡಲಿ. ನಾಡಿನಾದ್ಯಂತ ಸುಖ, ಸಮೃದ್ಧಿ, ನೆಮ್ಮದಿ ನೆಲೆಸುವಂತೆ ಮಾಡಲಿ. ಎಲ್ಲರೂ ಪರಸ್ಪರ ಪ್ರೀತಿ, ವಿಶ್ವಾಸದಿಂದ ಸಂತಸಮಯ ಜೀವನ ಸಾಗಿಸುವಂತಾಗಲಿ ಎಂದು‌ ಸಚಿವರು ಈ ಸಂದರ್ಭದಲ್ಲಿ ಶುಭ ಕೋರಿದರು.ಈ‌ ಸಂದರ್ಭದಲ್ಲಿ ಕೆಲವು ರೈತರ ಸಮಸ್ಯೆಗಳಿಗೂ ಸ್ಪಂದಿಸಿದ ಸಚಿವರು ಕೂಡಲೇ‌ ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ ಕುಡಿಯುವ ನೀರು,…

Read More

ವಿಜಯಪುರ: ವಿಜಯ ದಶಮಿ ಅಂಗವಾಗಿ ನಗರ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಅವರು ಮಂಗಳವಾರ ರಾತ್ರಿ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಸಾರ್ವಜನಿಕರೊಂದಿಗೆ ಬನ್ನಿ ವಿನಿಮಯ ಮಾಡಿಕೊಂಡರು.ನಗರದ ಆರಾಧ್ಯ ದೈವ ಸಿದ್ದೇಶ್ವರನಿಗೆ ಪೂಜೆ ಸಲ್ಲಿಸಿ, ನಾಡಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿದ ಶಾಸಕರು, ಪಲ್ಲಕ್ಕಿಯೊಂದಿಗೆ ನೀಲಕಂಠೇಶ್ವರ ದೇವಸ್ಥಾನದ ಬಳಿ ತೆರಳಿ ಬನ್ನಿ ಮುಡಿಯುವ ಕಾರ್ಯದಲ್ಲಿ ಭಾಗಿಯಾದರು. ನಂತರ ಮರಳಿ ಸಿದ್ದೇಶ್ವರ ದೇವಸ್ಥಾನ ಆವರಣಕ್ಕೆ ಆಗಮಿಸಿ, ನಗರವೂ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಂದ ಆಗಮಿಸಿದ್ದ ರೈತರು, ಮುಖಂಡರು, ಅಭಿಮಾನಿಗಳು, ಹಿತೈಷಿಗಳು, ಮಹಿಳೆಯರು, ಮಕ್ಕಳೊಂದಿಗೆ ಬನ್ನಿ ವಿನಿಮಯ ಮಾಡಿಕೊಂಡು ಶುಭಾಶಯ ತಿಳಿಸುವ ಜೊತೆಗೆ ಶ್ರೀ ಸಿದ್ದರಾಮೇಶ್ವರರು ಸುಖ, ಶಾಂತಿ, ಸಮೃದ್ಧಿ ಆರೋಗ್ಯ ದೇವರು ಕರುಣಿಸಲೆಂದು ಹಾರೈಸಿದರು.ಇದೇ ವೇಳೆ ನಗರದ ವಿವಿಧೆಡೆ ಪ್ರತಿಷ್ಠಾಪಿಸಲಾದ ನಾಡದೇವಿ ದರ್ಶನ ಪಡೆದು, ಪೂಜೆ ಸಲ್ಲಿಸಿದರು.

Read More

ಲಕ್ಷಾಂತರ ಜನರಿಂದ ಆಕರ್ಷಕ ಜಂಬೂ ಸವಾರಿ ವೀಕ್ಷಣೆ! 750 ಕೆಜಿ ತೂಕದ ಚಿನ್ನದ ಅಂಬಾರಿ ಯಶಸ್ವಿಯಾಗಿ ಹೊತ್ತುನಡೆದ ಅಭಿಮನ್ಯು ಆನೆ | ದೇವಿಗೆ ಸಿಎಂ ಸಿದ್ದರಾಮಯ್ಯರಿಂದ ಪುಷ್ಪಾರ್ಚನೆ ಮೈಸೂರು: ನಗರದಲ್ಲಿ ನಡೆದ ವಿಜಯದಶಮಿಯ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯನ್ನು ಮಂಗಳವಾರ ಲಕ್ಷಾಂತರ ಜನರು ವೀಕ್ಷಿಸಿ ಕಣ್ತುಂಬಿಕೊಂಡರು.ನಾಡದೇವತೆ ಚಾಮುಂಡೇಶ್ವರಿ ವಿರಾಜಮಾನಳಾಗಿದ್ದ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಅರಮನೆ ಆವರಣದಿಂದ ಬನ್ನಿಮಂಟಪದವರೆಗೂ ಅಭಿಮನ್ಯು ಆನೆ ಯಶಸ್ವಿಯಾಗಿ ಹೊತ್ತು ಸಾಗಿತು. ಇತರ 14 ಗಜಪಡೆಗಳು ಅಭಿಮನ್ಯುವಿಗೆ ಸಾಥ್ ನೀಡಿದವು. ಕರ್ನಾಟಕದ ಅಶ್ವದಳ ಪೊಲೀಸರ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು.ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು.ಇದಕ್ಕೂ ಮುನ್ನ ಮುಖ್ಯಮಂತ್ರಿಗಳು ನಂದಿಧ್ವಜ ಪೂಜೆಯಲ್ಲಿ ಪಾಲ್ಗೊಳ್ಳುವುದರೊಂದಿಗೆ ಕಲಾತಂಡಗಳು, ಸ್ತಬ್ಧಚಿತ್ರಗಳ ಮೆರವಣಿಗೆ ಆರಂಭವಾಯಿತು.ಅರಮನೆ ಮುಂಭಾಗದಿಂದ ನಡೆದ ಮೆರವಣಿಗೆಯಲ್ಲಿ ರಾಜ್ಯದ 31 ಜಿಲ್ಲೆಗಳು ಮತ್ತು ವಿವಿಧ ಪ್ರಮುಖ ಸರ್ಕಾರಿ ಇಲಾಖೆಗಳ ಭವ್ಯವಾದ ಸ್ತಬ್ಧಚಿತ್ರಗಳು ಆಕರ್ಷಣೀಯವಾಗಿದ್ದವು.ಬಳ್ಳಾರಿ…

Read More

ಢವಳಗಿ: ಸಮೀಪದ ಹಂದ್ರಾಳ ಗ್ರಾಮದ ಶ್ರೀ ಸೋಮನಾಥ ದೇವಾಲಯದ ಪುನರುಜ್ಜೀವನ ಹಾಗೂ ಗೋಪುರ ಕಳಸಾರೋಹಣವನ್ನು ಚೆನ್ನಬಸವ ಮಹಾಸ್ವಾಮಿಗಳು ಇಂಗಳೇಶ್ವರ ಅವರು ಅ.24 ಮಂಗಳವಾರದಂದು ಲೋಕಾರ್ಪಣೆಗೊಳಿಸಿದರು.ಗುರುಬಸವ ಮಹಾಸ್ವಾಮಿಗಳು ನಂದವಾಡಗಿ, ಮಲ್ಲಿಕಾರ್ಜುನ ಮಹಾಸ್ವಾಮಿಗಳು ಪಡೇಕನೂರ, ಘನಮಠೇಶ್ವರ ಮಹಾಸ್ವಾಮಿಗಳು ಢವಳಗಿ ಅವರು ಉದ್ಘಾಟಿಸಿದರು.ಗಣ್ಯರಾದ ಸಿ ಎಸ್ ನಾಡಗೌಡ ಅಪ್ಪಾಜಿ ಶಾಸಕರು ಮುದ್ದೇಬಿಹಾಳ, ಆರ್ ಎಸ್ ಪಾಟೀಲ ಕೂಚಬಾಳ, ಪ್ರಭುಗೌಡ ದೆಸಾಯಿ, ಸಿ ಬಿ ಅಸ್ಕಿ, ಬಸವರಾಜ ಅಸ್ಕಿ, ಬಿ ಬಿ ಹಂದ್ರಾಳ ಸೇರಿದಂತೆ ಗ್ರಾಮಸ್ಥರು ಇದ್ದರು.

Read More