ಇಂಡಿ: ನಿಂಬೆ ನಾಡಿನ ಹೆಸರಾಂತ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ, ಹಿರಿಯ ಸಂಶೋಧಕ, ಯುವ ಸಾಹಿತಿಗಳಿಗೆ ಮತ್ತು ಸಂಶೋಧಕರಿಗೆ ಮಾರ್ಗದರ್ಶಕ ಡಿ.ಎನ್.ಅಕ್ಕಿ ಅವರು ೪ ನೇ ಶಹಾಪುರ ತಾಲೂಕಾ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ.
ಈ ಕುರಿತು ಇಂದು ಪಟ್ಟಣದ ಅವರ ಮನೆಗೆ ಶಹಾಪುರದ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡಾಭಿಮಾನಿಗಳು ಬಂದು ಸನ್ಮಾನಿದರು.
ಸಭೆಯಲ್ಲಿ ಮಾತನಾಡಿದ ಶಹಾಪುರ ಕಸಾಪ ಅಧ್ಯಕ್ಷ ಡಾ. ರವೀಂದ್ರ ಹೊಸಮನಿ, ಫೆ. ಕೊನೆಯ ವಾರದಲ್ಲಿ ಸಮ್ಮೇಳನ ನಡೆಸಲು ತಿರ್ಮಾನಿಸಿ ಡಿ.ಎನ್.ಅಕ್ಕಿಯವರ ಹೆಸರನ್ನು ಸೂಚಿಸಿದಾಗ ಒಮ್ಮತದಿಂದ ಸಹಮತ ಸೂಚಿಸಿದರು ಎಂದರು.
ಸಂಶೋಧಕ ಡಿ.ಎನ್.ಅಕ್ಕಿಯವರು ಮಾತನಾಡಿದರು.
ಶಹಾಪುರದ ಪರ್ತಕರ್ತರಾದ ನಾರಾಯಣಚಾರ್ಯ ಸಗರ, ಶರಣು ಬಿರಾದಾರ, ಮಲ್ಲನಗೌಡ ಪೋಲಿಸ ಪಾಟೀಲ, ರಾಘವೇಂದ್ರ ಹರಣಗೇರಾ, ಗೌಡಪ್ಪಗೌಡ ಬಿರಾದಾರ, ಮಡಿವಾಳಪ್ಪ ಪಾಟೀಲ, ಸಾಯಬಣ್ಣ ಕುರ್ಲೆ, ನಿಂಗಣ್ಣ ತಿಪ್ಪನಹಳ್ಳಿ, ತಿಪ್ಪಣ್ಣಕ್ಯಾತನಾಳ, ಪರಶುರಾಮ ನಾಗನಟಕಿ, ಮಹಾವೀರ ಅಕ್ಕಿ, ಗೌತಮ ಕಡ್ಡಿಹಳ್ಳಿ ಮಾತನಾಡಿದರು.
ಇಂಡಿ ಕರ್ನಾಟಕ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಪಿ.ಬಿ.ಕತ್ತಿ, ನಿವೃತ್ತ ಪ್ರಾಚಾರ್ಯ ಐ.ಸಿ.ಪೂಜಾರಿ, ಉಪನ್ಯಾಸಕ ಶರಣು ಕಾಂಬಳೆ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

