ಬಸವನಬಾಗೇವಾಡಿ: ಪಟ್ಟಣಕ್ಕೆ ಬುಧವಾರ ಸಂಜೆ ಆಗಮಿಸಿದ್ದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯು ಹಮ್ಮಿಕೊಂಡಿರುವ ಕನ್ನಡ ಜ್ಯೋತಿ ರಥ ಯಾತ್ರೆಯ ಭವ್ಯ ಮೆರವಣಿಗೆ ಗುರುವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಆಧಿಕಾರಿಗಳ, ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಗಳ, ವಿವಿಧ ಸಾಹಿತಿಗಳ, ವಿವಿಧ ಶಾಲಾ-ಕಾಲೇಜುಗಳ ಸಿಬ್ಬಂದಿ, ವಿದ್ಯಾರ್ಥಿಗಳ, ವಿವಿಧ ನೃತ್ಯ, ವಾದ್ಯಮೇಳಗಳ ಮಧ್ಯ ಸಂಭ್ರಮ, ಸಡಗರದಿಂದ ಜರುಗಿತು.
ಪಟ್ಟಣದ ಬಸವೇಶ್ವರ ದೇವಸ್ಥಾನದ ಮುಂಭಾಗದಿಂದ ಆರಂಭವಾದ ಕರ್ನಾಟಕ ಸಂಭ್ರಮ 50 ರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಜ್ಯೋತಿ ರಥ ಭುವನೇಶ್ವರಿದೇವಿ ಕನ್ನಡ ರಥದ ಮೆರವಣಿಗೆಯು ತೆಲಗಿ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ವೃತ್ಥ, ಸಂಗೊಳ್ಳಿ ರಾಯಣ್ಣ ವೃತ್ತ, ಬಸವ ಭವನ ಮಾರ್ಗದಿಂದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತಕ್ಕೆ ತಲುಪಿತು. ನಂತರ ರಥಯಾತ್ರೆಯು ತಾಲೂಕಿನ ಮಸಬಿನಾಳ, ಇಂಗಳೇಶ್ವರ, ದಿಂಡವಾರ, ಹೂವಿನಹಿಪ್ಪರಗಿ ಗ್ರಾಮಕ್ಕೆ ತೆರಳಿತು.
ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಲಂಬಾಣಿ ನೃತ್ಯ, ಲೇಜಿಮ್, ಕೋಲಾಟ, ಕನ್ನಡ ನಾಡು-ನುಡಿಗಾಗಿ ಶ್ರಮಿಸಿದ ಮಹನೀಯರ ಛದ್ಮವೇಷ ಧರಿಸಿದ ವಿದ್ಯಾರ್ಥಿಗಳು, ಕಾಖಂಡಕಿ ಸಂಬಾಳ ಮತ್ತು ಕರಡಿ ಮಜಲು ಗಮನ ಸೆಳೆದರೆ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು…… ಎಂಬ ಹಾಡಿಗೆ ತಹಸೀಲ್ದಾರ, ಬಿಇಓ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಕನ್ನಡ ಬಾವುಟ ಹಿಡಿದು ಹೆಜ್ಜೆ ಹಾಕಿದ್ದು ವಿಶೇಷ.
ಚೆನ್ನಮ್ಮ ವೃತ್ತದಲ್ಲಿ ಸುದ್ದಿಗಾರರೊಂದಿಗೆ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಮೆರವಣಿಗೆಯಲ್ಲಿ ಬಿಇಓ ವಸಂತ ರಾಠೋಡ, ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಅಭಿಷೇಕ ಚಕ್ರವರ್ತಿ. ರಾಜೇಸಾಬ ಶಿವನಗುತ್ತಿ, ತಾಲೂಕು ಕಸಾಪ ಪದಾಧಿಕಾರಿಗಳಾದ ಬಸವರಾಜ ಸೋಮಪೂರ, ಎಸ್.ಐ. ಡೋಣೂರ, ಶಿವಪ್ಪ ಮಡಿಕೇಶ್ವರ, ಬಿ.ಎಫ್.ಮೇಟಿ, ಶಾಂತಾ ಚೌರಿ,ಎಚ್.ಬಿ.ಬಾರಿಕಾಯಿ, ಕೋಟ್ರೇಶ ಹೆಗಡ್ಯಾಳ, ಪ್ರಭಾಕರ ಖೇಡದ, ವಿವೇಕಾನಂದ ಕಲ್ಯಾಣಶೆಟ್ಟಿ, ಮಹಾಂತೇಶ ಸಂಗಮ, ಬಿ.ವಿ.ಚಕ್ರಮನಿ, ಬಸವರಾಜ ಚಿಂಚೋಳಿ, ಮಹಾದೇವಿ ಬಿರಾದಾರ, ರವಿಗೌಡ ಚಿಕ್ಕೊಂಡ, ಉಮೇಶ ಕೌಲಗಿ, ಮಾಂತೇಶ ಚಕ್ರವರ್ತಿ, ರಾಜಶೇಖರ ಹುಲ್ಲೂರ, ಮಾಂತೇಶ ಇಂಗಳೇಶ್ವರ, ರಮಜಾನ ಹೆಬ್ಬಾಳ, ಎಸ್.ಎಲ್.ಓಂಕಾರ,ಗಂಗಾಧರ ಬಡಿಗೇರ, ಪಿ.ಕೆ.ಜಾಧವ,ಡಾ.ಪಿ.ಎಸ್. ಸಂಖ, ಡಾ.ಎಸ್.ಬಿ.ಕರ್ಜಗಿ, ಕಮಲಾ ಪದರಾ, ರಮೇಶ ಪೂಜಾರಿ, ಮಹೇಶ ಬಳಗಾನೂರ. ಪಿ.ಯು ರಾಠೋಡ, ಅಶೋಕ ಹಂಚಲಿ, ಎಂ.ವಿ. ಗಬ್ಬೂರ. ಅನುಜಾ ಗುಬ್ಬಾ, ಮಹಾಂತೇಶ ಸಾಸಾಬಾಳ, ಸುಭಾಶ್ಚಂದ್ರ ಹಡಪದ, ಬಸವರಾಜ ನಂದಿಹಾಳ, ರೇವಣಸಿದ್ದ ಮಣ್ಣೂರ, ಅಪ್ಪು ಧನಶೆಟ್ಟಿ, ಬಿ.ಎಸ್.ಚನ್ನಗೊಂಡ, ಎನ್.ಎನ್. ಅಂಗಡಿ, ಮಂಜು ಹಳ್ಳೂರ, ಅಂಗನವಾಡಿ ಕಾರ್ಯಕರ್ತರು, ವಿವಿಧ ಇಲಾಖೆಯ ಸಿಬ್ಬಂದಿ, ಇತರರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

