Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಅವರು ರವಿವಾರ ನಾನಾ ಧಾರ್ಮಿಕ ಸ್ಥಳಗಳಿಗೆ ತೆರಳಿ ಪೂಜೆ ಸಲ್ಲಿಸಿದರು.ನೂತನ ಸಂಪುಟದಲ್ಲಿ ಸಚಿವರಾದ ನಂತರ ಇದೇ ಮೊದಲ ಬಾರಿಗೆ ತವರು ಜಿಲ್ಲೆ ವಿಜಯಪುರಕ್ಕೆ ಆಗಮಿಸಿದ ಅವರು, ತಿಕೋಟಾ ತಾಲೂಕಿನ ಮುಮ್ಮೆಟ್ಟಿಗುಡ್ಡದಲ್ಲಿರುವ ಶ್ರೀ ಅಮೋಘಸಿದ್ಧೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಮೋಘಸಿದ್ಧೇಶ್ವರ ದೇವಸ್ಥಾನ ತನ್ನ ಐತಿಹಾಸಿಕ ಹಿನ್ನೆಲೆ ಹಾಗೂ ಧಾರ್ಮಿಕ ಮಹತ್ವಕ್ಕಾಗಿ ಪ್ರಸಿದ್ಧಿ ಪಡೆದಿದ್ದು, ಅಮೋಘಸಿದ್ಧೇಶ್ವರ ದೇವರ ದರ್ಶನ ಪಡೆದು ಧನ್ಯನಾಗಿದ್ದೇನೆ. ದೇವರು ನಾಡಿನ ಸಮಸ್ತ ಜನತೆಯ ಸುಖ, ಶಾಂತಿ, ಸಮೃದ್ಧಿ ಮತ್ತು ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.ನಂತರ ತಮ್ಮ ಜನ್ಮಸ್ಥಳ ತೊರವಿ ಗ್ರಾಮಕ್ಕೆ ಆಗಮಿಸಿದ ಸಚಿವರು, ಪುರಾಣ ಮತ್ತು ಐತಿಹಾಸಿಕ ಮಹತ್ವ ಹೊಂದಿರುವ ಶ್ರೀ ಲಕ್ಷ್ಮೀದೇವಿ ಹಾಗೂ ಶ್ರೀ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ನಾಡಿನ ಸಮಸ್ತ ಜನತೆಯ ಸುಖ, ಶಾಂತಿ,…

Read More

ಓಪನ್ ಕೋರ್ಟ್ ತತ್ವಕ್ಕೆ ತಿಲಾಂಜಲಿ? | ಇತರ ಅರ್ಜಿದಾರರು, ಎದುರುದಾರರನ್ನು ಹೊರದಬ್ಬಿ ರಹಸ್ಯ ವಿಚಾರಣೆ? | ಸಾರ್ವಜನಿಕರ ಹಾಗೂ ಮಾಹಿತಿ ಹಕ್ಕು ಹೋರಾಟಗಾರರ ತೀವ್ರ ಆಕ್ರೋಶ ಉದಯರಶ್ಮಿ ದಿನಪತ್ರಿಕೆ ವಿಶೇಷ ವರದಿ: ಚೇತನ ಶಿವಶಿಂಪಿಮುದ್ದೇಬಿಹಾಳ: ಸರ್ಕಾರಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ತರಲು ಸ್ಥಾಪಿತವಾಗಿರುವ ರಾಜ್ಯ ಮಾಹಿತಿ ಆಯೋಗದಲ್ಲೇ ಈಗ ಪಾರದರ್ಶಕತೆಯ ಕಗ್ಗೊಲೆಯಾಗುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ. ಆಡಳಿತದ ಕತ್ತಲೆಯನ್ನು ಸರಿಸಲು ಸಾರ್ವಜನಿಕರ ಕೈಗೆ ಸಿಕ್ಕ ‘ಮಾಹಿತಿ ಹಕ್ಕು ಕಾಯ್ದೆ’ಯನ್ನು ಕಾಯುವ ಆಯೋಗವೇ, ಈಗ ವಿಚಾರಣೆಗಳನ್ನು ಮುಚ್ಚಿದ ಬಾಗಿಲಿನ ಹಿಂದೆ ನಡೆಸುವ ಮೂಲಕ ‘ಓಪನ್ ಕೋರ್ಟ್’ ತತ್ವಕ್ಕೆ ತಿಲಾಂಜಲಿ ನೀಡುತ್ತಿದೆಯೇ ಎಂಬ ಅನುಮಾನಗಳು ದಟ್ಟವಾಗಿವೆ.ಬೆಳಗಾವಿ ಪೀಠದಲ್ಲಿ ಇತ್ತೀಚೆಗೆ ನಡೆದ ವಿಚಾರಣೆಯ ಸಂದರ್ಭದಲ್ಲಿ, ಯಾವ ನಿರ್ದಿಷ್ಟ ಪ್ರಕರಣದ ವಿಚಾರಣೆ ನಡೆಯುತ್ತಿದೆಯೋ ಆ ಪ್ರಕರಣದ ಅರ್ಜಿದಾರ ಮತ್ತು ಎದುರುದಾರರನ್ನು ಮಾತ್ರ ಒಳಗೆ ಕರೆದು ವಿಚಾರಣೆ ನಡೆಸಲಾಗುತ್ತಿದೆ. ಆ ಒಂದು ಪ್ರಕರಣದ ಪ್ರಕ್ರಿಯೆ ಸಂಪೂರ್ಣ ಮುಗಿದ ಮೇಲಷ್ಟೇ ಮತ್ತೊಂದು ಪ್ರಕರಣದ ಅರ್ಜಿದಾರ ಮತ್ತು ಎದುರುದಾರರನ್ನು ಒಳಗೆ…

Read More

ಕೆ-ಸಿಇಟಿ ಪರೀಕ್ಷೆಯಲ್ಲಿ ಎಕ್ಸಲಂಟ್ ವಿಜ್ಞಾನ ಪಪೂ ಕಾಲೇಜು ವಿದ್ಯಾರ್ಥಿಗಳ ಅಮೋಘ ಸಾಧನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ೨೦೨೫-೨೬ ನೇ ಸಾಲಿಗೆ ನಡೆಸಿದ ಕರ್ನಾಟಕ ಸಾಮಾನ್ಯ ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಈ ಬಾರಿ ವಿಜಯಪುರ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ರ‍್ಯಾಂಕ್‌ಗಳನ್ನು ಪಡೆದುಕೊಳ್ಳುವ ಮೂಲಕ ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಿದ್ದಾರೆ.ವಿದ್ಯಾರ್ಥಿನಿ ಅನುಷಾ ಹೊಸುರ ಕೆ-ಸಿಇಟಿ ಅಗ್ರಿಯಲ್ಲಿ ರಾಜ್ಯಕ್ಕೆ ೩ನೇ ಸ್ಥಾನ ಹಾಗೂ ವೆಟರನರಿ ಸೈನ್ಸ್ ನಲ್ಲಿ ರಾಜ್ಯಕ್ಕೆ ೪ನೇ ಸ್ಥಾನ ಪಡೆದುಕೊಂಡರೆ, ನಿಖಿಲ್ ಕಿತ್ತೂರ ಅಗ್ರಿಯಲ್ಲಿ ರಾಜ್ಯಕ್ಕೆ ೧೩ನೇ ಸ್ಥಾನ ಹಾಗೂ ವೆಟರನರಿ ಸೈನ್ಸ್ಲ್ಲಿ ೨೦ನೇ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.ಇವರ ಸಾಧನೆಯ ಕುರಿತು ಪ್ರತಿಕ್ರಿಯಿಸಿದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಬಸವರಾಜ ಕೌಲಗಿ; ಕಳೆದ ಬಾರಿಯು ಸಹ ವಿದ್ಯಾರ್ಥಿಗಳು ಕೆ-ಸಿಇಟಿ ಅಗ್ರಿ ಹಾಗೂ ವೆಟರ್‌ನರಿಯಲ್ಲಿ ರ‍್ಯಾಂಕ್ ಪಡೆದುಕೊಳ್ಳುವ ಮೂಲಕ ಕಾಲೇಜಿನ ಹೆಸರನ್ನು ಇನ್ನಷ್ಟು ಹೆಚ್ಚು…

Read More

ಲೇಖನ- ರಶ್ಮಿ ಕೆ. ವಿಶ್ವನಾಥ್.ಮೈಸೂರು ಉದಯರಶ್ಮಿ ದಿನಪತ್ರಿಕೆ ಹೌದಲ್ಲಾ.. ಅನ್ನಿಸಿದ್ದೆಲ್ಲವನ್ನು ಹೇಳುವಂತಿದ್ದಿದ್ದರೆ ಅಥವಾ ಮಾಡುವಂತಿದ್ದಿದ್ದರೆ ಎಷ್ಟು ಚಂದ ಇರ್ತಿತ್ತು. ಇದು ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಬಾರಿ ಬಂದುಹೋಗುವ ಆಸೆಯೆ.ಮನಸಿಗೆ ಬಂದ ಮಾತು ಬಾಯಿಗೆ ಬಂದುಬಿಡಬೇಕು. ಬಾಯಿಗೆ ಬಂದ ಮಾತು ತಲುಪಬೇಕಾದವರ ಕಿವಿಗೆ ತಲುಪುತ್ತದೆಯೋ ಇಲ್ಲವೋ. ಒಟ್ಟಿನಲ್ಲಿ ಅಂದುಕೊಂಡವರ ಮನಸು ನಿರಾಳವಾಗುತ್ತದೆ.ಈ ಹುಡುಗನಿಗೆ ಕಾಸ್ಟ್ಲಿ ಬೈಕ್ ಸಿಕ್ಕಿಬಿಡಬೇಕು, ಆ ಹುಡುಗಿಗೆ ಆಪಲ್ ಐ ಫೋನ್ ಕೊಡಿಸಿಬಿಡಬೇಕು,ಕಳ್ಳನಿಗೆ ಕದಿಯಬೇಕು, ಕೊಲೆಗಾರನಿಗೆ ಕೊಲೆ ಮಾಡಬೇಕು, ಪರಪತ್ನಿ ಪರಪತಿ ಆಗಿದ್ದರು ಸಹ ಅವರಿಬ್ಬರೂ ಒಂದಾಗಿಬಿಡಬೇಕು, ಇವನಿಗೆ ಲಾಟರಿ ಹೊಡೆದು ಆಗರ್ಭ ಶ್ರೀಮಂತನಾಗಿಬಿಡಬೇಕು..ಉಹೂಂ. ಇದಾವುದರ ಬಗ್ಗೆಯೂ ಇವಾಗ ನಾ ಹೇಳಹೊರಟಿಲ್ಲ.ನಿತ್ಯದ ಬದುಕಿನಲ್ಲಿ ಕಾಡುವ, ಸಾದಾ ಸೀದಾ ಪುಟ್ಟ ವಿಷಯಗಳ ಬಗ್ಗೆಯಷ್ಟೆ ಬೆಳಕು ಚೆಲ್ಲುತ್ತಿದ್ದೇನೆ.ಅಂದು ಆ ಮಗುವಿನ ನಾಮಕರಣ ಇತ್ತಲ್ಲ, ಹಾಗಾಗಿ ಆ ಫಂಕ್ಷನ್ನಿಗೆ ಹೋಗಿದ್ದೆ. ‘ಸಂಗೀತ’ ತನ್ನ ಸಂಗೀತ ಶುರುಮಾಡಿದಳು. “ಆ ತಾರಾ ಇದ್ದಾಳಲ್ಲ. ಅವಳು ಹಾಗೆ.. ಅವಳು ಹೀಗೆ.. ಅವಳನ್ನ ನಾನು ಜೀವನದಲ್ಲೆ ಮಾತಾಡಿಸೋಲ್ಲ.. ” ಹೀಗೆ…

Read More

ಉದಯರಶ್ಮಿ ದಿನಪತ್ರಿಕೆ ಎಚ್.ಡಿ.ಕೋಟೆ: ಓದಬೇಕೆಂಬ ಹಸಿವು ಇದ್ದಾಗ ಮಾತ್ರ, ಬಡತನವನ್ನು ಮೆಟ್ಟಿನಿಂತು ಜೀವನದಲ್ಲಿ ಏನಾದರು ಸಾಧನೆ ಮಾಡಲು ಸಾಧ್ಯ. ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಪದವಿ ಪೂರ್ವ ಶಿಕ್ಷಣ ಉಪ ನಿರ್ದೇಶಕರಾದ ಸಿ. ಚಲುವಯ್ಯ ಹೇಳಿದರು.ತಾಲೂಕಿನ ಚಕ್ಕೋಡನಹಳ್ಳಿ ಗ್ರಾಮದಲ್ಲಿ ಆಯೋಜನೆ ಮಾಡಿದ ವಯೋ ನಿವೃತ್ತಿ ಸೇವಾ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನಗೆ ವಿದ್ಯೆ ಕೊಟ್ಟವರು, ತುತ್ತು ಅನ್ನಕ್ಕೆ ಕಾರಣರಾದವರು ವೆಂಕಟ ತಿಮ್ಮಪ್ಪ ಮೇಷ್ಟ್ರು, ಭೂಮಿ ಮೇಲೆ ಹುಟ್ಟಿದ ಮೇಲೆ ತಂದೆ, ತಾಯಿ, ಗುರು, ದೇವರು, ಬಂಧು ಬಳಗ, ಸಮಾಜದ ಋಣವನ್ನು ತೀರಿಸಬೇಕು. ಆಗ ಮಾತ್ರ ಸ್ವರ್ಗ ಸಿಗುತ್ತದೆ. ನಾನು ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ ಮುಗಿದ ಮೇಲೆ ವ್ಯವಸಾಯ ಕೂಲಿ ಕೆಲಸ ಮಾಡುತ್ತಿದ್ದೆ. ಓದುವುದಕ್ಕೆ ಮೂಲ ಕಾರಣ ಹಸಿವು . ಕಷ್ಟಪಟ್ಟು ಓದುವುದರ ಜೊತೆಗೆ ಬಡತನವನ್ನು ಮೆಟ್ಟಿನಿಂತು ಶಿಕ್ಷಣವನ್ನು ಗಳಿಸಿ ಉದ್ಯೋಗ ಪಡೆದುಕೊಂಡು ನಾನು ಮಾಡಿದ ಸೇವೆ, ನಡೆ-ನುಡಿ ಗಮನಿಸಿದ ಜಿಲ್ಲಾಡಳಿತ ನನಗೆ ಸರ್ವೋತ್ತಮ ಪ್ರಶಸ್ತಿ ನೀಡಿದೆ.…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ರಾಜ್ಯದ ನಗರಾಭಿವೃದ್ದಿ ಸಚಿವರಾಗಿ ಪ್ರಪಥಮ ಬಾರಿಗೆ ವಿಜಯಪೂರ ಜಿಲ್ಹೆಗೆ ರವಿವಾರ ಆಗಮಿಸಿರುವ ಡಾ|| ಯತೀಂದ್ರ ಸಿದ್ದರಾಮಯ್ಯನವರನ್ನು ಕೊರ್ತಿಕೊಲ್ಹಾರ ಸೇತುವೆಯ ಕೊರೆಮ್ಮ ದೇವಸ್ಥಾನ ಹತ್ತಿರ ಕೊಲ್ಹಾರ ಪಟ್ಟಣದ ಕಾಂಗ್ರೇಸ್ ಕಾರ್ಯಕರ್ತರು ಆದ್ದೂರಿಯಾಗಿ ಬರಮಾಡಿಕೊಂಡರು.ರಾಜ್ಯ ಕಾಂಗ್ರೇಸ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಉಸ್ಮಾನಸಾಬ ಪಟೇಲ ಹೂ ಗುಚ್ಛ ನೀಡಿ ಬರಮಾಡಿಕೊಂಡು ಕೊರ್ತಿ ಕೊಲ್ಹಾರ ಸೇತುವೆಯ ಹಾಗೂ ಕೃಷ್ಣಾ ನದಿಯ ಮಹತ್ವ ಮತ್ತು ಇತಿಹಾಸ ಪರಂಪರೆಯ ಉಳ್ಳ ಪಟ್ಟಣದ ಕೆನೆಮೋಸರ ಸವಿಯ ರುಚಿ ಬಗ್ಗೆ ವಿವರಣೆಯನ್ನು ತಿಳಿಸಿದರು.ಹುಬ್ಬಳ್ಳಿ ಮಾರ್ಗವಾಗಿ ವಿಜಯಪೂರ ಜಿಲ್ಹೆಗೆ ಬರುವಾಗ ಕೊಲ್ಹಾರ ಊರು ಹೆಬ್ಬಾಗಿಲು ಇದ್ದಂತೆ ಆಲಮಟ್ಟಿ ಆಣೆಕಟ್ಟಿನ ಹಿನ್ನೀರಿನಲ್ಲಿ ನದಿ ದಂಡೆಯ ಜನರು ಮನೆಮಠ ಜಮೀನು ಕಳೆದುಕೊಂಡು ರಾಷ್ಟ್ರದ ಹಿತಕ್ಕಾಗಿ ತ್ಯಾಗ ಮಾಡಿರುವ ಬಗ್ಗೆ ಸಚಿವರಿಗೆ ಉಸ್ಮಾನ ಪಟೇಲ ಈರಣಗೌಡ ಕೋಮಾರ ಮಾಹಿತಿ ಕೊಟ್ಟಾಗ ಸಚಿವರು ಸಂತ್ರಸ್ತರಿಗೆ ಸೂಕ್ತವಾದ ಪರಿಹಾರ ಸಿಗಲು ನಮ್ಮ ಸರಕಾರ ಕ್ರಮಕೈಗೊಳ್ಳುತ್ತದೆ ನ್ಯಾಯವನ್ನು ದೊರಕಿಸುತ್ತದೆ ಎಂದರು.ಈ ಸಂದರ್ಭದಲ್ಲಿ ಉಸ್ಮಾನಸಾಬ ಪಟೇಲ, ಈರಣಗೌಡ ಬ ಕೊಮಾರ,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ವಿಜಯಪುರ ನಗರ ಯುವ ಮೋರ್ಚಾ ಆಯೋಜಿಸಿದ ಸಸಿ ನೆಡುವ ಕಾರ್ಯಕ್ರಮ ವಿಜಯಪುರ ನಗರ ಕರಾಡದೊಡ್ಡಿ ಹತ್ತಿರ ಇರುವ ಹನುಮಗಿರಿ ದೇವಸ್ಥಾನದಲ್ಲಿ ನಡೆಯಿತು.ಈ ವಿಶ್ವ ಪರಿಸರ ದಿನಾಚರಣೆಯಲ್ಲಿ ಭಾಗವಹಿಸಿದ ಮಾಜಿ ಕೇಂದ್ರ ಸಚಿವ, ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಹಾನಗರ ಪಾಲಿಕೆಯ ಸದಸ್ಯರಾದ ರಾಜು ಮಗೀಮಠ, ಜಿಲ್ಲೆಯ ಪ್ರಧಾನ ಕಾರ್ಯದರ್ಶಿಗಳಾದ ಈರಣ್ಣ ರಾವೂರ, ಜಿಲ್ಲೆಯ ಕಾರ್ಯದರ್ಶಿಗಳಾದ ಶ್ರೀ ಕೃಷ್ಣಾ ಗುನ್ನಾಳಕರ, ಜಿಲ್ಲೆಯ ಕಾರ್ಯದರ್ಶಿಗಳಾದ ರಮೇಶ ಬಿದನೂರ, ಚಿನ್ನು ಚಿನಗುಂಡಿ, ಎಸ್.ಸಿ. ಮೋರ್ಚಾದ ಅಧ್ಯಕ್ಷರಾದ ಮಂಜುನಾಥ ಮೀಸಿ, ವಿಜಯ ಜೋಶಿ, ರಾಮಚಂದ್ರ ಚೌಹಾಣ, ಯುವ ಮೋರ್ಚಾ ಅಧ್ಯಕ್ಷರಾದ ಆನಂದ ಮುಚ್ಚಂಡಿ, ವಿವೇಕ ತಾವರಗೇರಿ, ಮಂಥನ ಗಾಯಕವಾಡ, ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ಭಾರತಿ ಭೂಯಾರ, ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಜಯಶ್ರೀ ಅಫಜಲ್ಲಪೂರ ಹಾಗೂ ಕಾರ್ಯಕಾರಿಣಿ ಕಲ್ಪನಾ ಶಾಬಾದಿ, ಸೇರಿದಂತೆ ಪಕ್ಷದ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ವಿಜಯಪುರ ನಗರ ಯುವ ಮೋರ್ಚಾ ಆಯೋಜಿಸಿದ ಸಸಿ ನೆಡುವ ಕಾರ್ಯಕ್ರಮ ವಿಜಯಪುರ ನಗರ ಕರಾಡದೊಡ್ಡಿ ಹತ್ತಿರ ಇರುವ ಹನುಮಗಿರಿ ದೇವಸ್ಥಾನದಲ್ಲಿ ನಡೆಯಿತು.ಈ ವಿಶ್ವ ಪರಿಸರ ದಿನಾಚರಣೆಯಲ್ಲಿ ಭಾಗವಹಿಸಿದ ಮಾಜಿ ಕೇಂದ್ರ ಸಚಿವ, ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಹಾನಗರ ಪಾಲಿಕೆಯ ಸದಸ್ಯರಾದ ರಾಜು ಮಗೀಮಠ, ಜಿಲ್ಲೆಯ ಪ್ರಧಾನ ಕಾರ್ಯದರ್ಶಿಗಳಾದ ಈರಣ್ಣ ರಾವೂರ, ಜಿಲ್ಲೆಯ ಕಾರ್ಯದರ್ಶಿಗಳಾದ ಶ್ರೀ ಕೃಷ್ಣಾ ಗುನ್ನಾಳಕರ, ಜಿಲ್ಲೆಯ ಕಾರ್ಯದರ್ಶಿಗಳಾದ ರಮೇಶ ಬಿದನೂರ, ಚಿನ್ನು ಚಿನಗುಂಡಿ, ಎಸ್.ಸಿ. ಮೋರ್ಚಾದ ಅಧ್ಯಕ್ಷರಾದ ಮಂಜುನಾಥ ಮೀಸಿ, ವಿಜಯ ಜೋಶಿ, ರಾಮಚಂದ್ರ ಚೌಹಾಣ, ಯುವ ಮೋರ್ಚಾ ಅಧ್ಯಕ್ಷರಾದ ಆನಂದ ಮುಚ್ಚಂಡಿ, ವಿವೇಕ ತಾವರಗೇರಿ, ಮಂಥನ ಗಾಯಕವಾಡ, ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ಭಾರತಿ ಭೂಯಾರ, ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಜಯಶ್ರೀ ಅಫಜಲ್ಲಪೂರ ಹಾಗೂ ಕಾರ್ಯಕಾರಿಣಿ ಕಲ್ಪನಾ ಶಾಬಾದಿ, ಸೇರಿದಂತೆ ಪಕ್ಷದ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಅಥಣಿ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪಟ್ಟಣದ ನಿವೇದಿತಾ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಅರಣ್ಯ ಇಲಾಖೆ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಶುಕ್ರವಾರ 100 ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಲಯ ಅರಣ್ಯಾಧಿಕಾರಿ ರಾಕೇಶ ಅರ್ಜುನವಾಡ, ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಮಕ್ಕಳು ತಾವು ಶಿಕ್ಷಣದಲ್ಲಿ ಬೆಳೆಯುವಂತೆ ತಾವು ನೆಟ್ಟ ಸಸಿಗಳನ್ನೂ ಪೋಷಿಸಿ ದೊಡ್ಡ ಮರಗಳನ್ನಾಗಿ ಬೆಳೆಸಬೇಕು. ಒಂದು ಮರ ನೂರು ಜೀವಗಳಿಗೆ ಆಸರೆಯಾಗುತ್ತದೆ ಎಂದು ಕಿವಿಮಾತು ಹೇಳಿದರು.ಸಂಸ್ಥೆಯ ಅಧ್ಯಕ್ಷ ಬಿ.ಎಲ್. ಪಾಟೀಲ ಮಾತನಾಡಿ, ನಾವು ಇಂದು ಕೇವಲ ಗಿಡಗಳನ್ನು ನೆಡುತ್ತಿಲ್ಲ, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಬೀಜ ಬಿತ್ತುತ್ತಿದ್ದೇವೆ ಎಂದರು.ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಕೇಶ ಮೈಗೂರ ಮಾತನಾಡಿ, ವಿಶ್ವ ಪರಿಸರ ದಿನಾಚರಣೆಯನ್ನು ಕೇವಲ ಜೂನ್ 5ರ ಒಂದು ದಿನದ ಆಚರಣೆಗೆ ಸೀಮಿತಗೊಳಿಸಬಾರದು. ಪ್ರತಿಯೊಬ್ಬರೂ ತಮ್ಮ ಜನ್ಮದಿನದಂದು ಒಂದೊಂದು ಗಿಡ ನೆಡುವ ಸಂಕಲ್ಪ ಮಾಡಬೇಕೆಂದರು.ಶಾಲೆಯ ಮುಖ್ಯಸ್ಥ ಸಂತೋಷ…

Read More

ಚಡಚಣದ ನಿಶಾಂತ ಭಾರತ್ ಗ್ಯಾಸ್ ವಿತರಕರ ವಿರುದ್ಧ ಗ್ರಾಹಕರಿಂದ ದೂರು | ಸ್ಪಂದಿಸಿದ ಆಹಾರ ಇಲಾಖೆ ಅಧಿಕಾರಿಗಳು ಉದಯರಶ್ಮಿ ದಿನಪತ್ರಿಕೆ ಚಡಚಣ: ಪಟ್ಟಣದ ನಿಶಾಂತ್ ಭಾರತ್ ಗ್ಯಾಸ್ ವಿತರಕರ ವಿರುದ್ಧ ಗ್ರಾಹಕರಿಂದ ಪ್ರತಿ ಗೃಹೋಪಯೋಗಿ ಎಲ್‌ಪಿಜಿ ಸಿಲಿಂಡರ್‌ಗೆ ₹29.50 ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.ಈ ಬಗ್ಗೆ ಉಪ ನಿರ್ದೇಶಕರು ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ವಿಜಯಪುರ ವಿನಯಕುಮಾರ ಪಾಟೀಲ ಅವರಿಗೆ ಅಕ್ರಮ ನಡೆದಿದೆ ಮತ್ತು ನಡೆಯುತ್ತಿದೆ ಅನ್ನುವದಕ್ಕೆ ನೀಡಿರುವ ಫೋಟೊ ಹಾಗೂ ದಾಖಲಾತಿಗಳು ಮತ್ತು ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ಮೊತ್ತವನ್ನು ಗ್ರಾಹಕರಿಂದ ಪಡೆಯಲಾಗುತ್ತಿದೆ ಎಂಬ ದೂರುಗಳು ಸಾರ್ವಜನಿಕರಿಂದ ನಿರಂತರವಾಗಿ ಬರುತ್ತಿರುವದರಿಂದ ತಕ್ಷಣವೆ ಕ್ರಮ ಕೈಗೊಂಡ ವಿನಯಕುಮಾರ ಪಾಟೀಲ.ಉಪ ನಿರ್ದೇಶಕರು ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ವಿಜಯಪುರ ವಿನಯಕುಮಾರ ಪಾಟೀಲ ಅವರು ಚಡಚಣ ತಾಲೂಕಿನ ಆಹಾರ ನಿರೀಕ್ಷಕರಾದ ಶಿವಾನಂದ…

Read More