Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಗರಿಷ್ಠ ತಾಪಮಾನ: ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮವಹಿಸಿ

ಕನ್ನೂರ ವಿದ್ಯುತ್ ಘಟಕ ಉದ್ಘಾಟನೆಗೆ ಆಗ್ರಹಿಸಿ ರೈತರ ಪ್ರತಿಭಟನೆ

ಇಂಡಿ ಯುಕೆಪಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ!

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಪಂ.ಪುಟ್ಟರಾಜರ ಸ್ಮರಿಸಿಕೊಳ್ಳುವುದು ಮುಕ್ತಿಗೆ ಸಮಾನ :ಕಡಣಿ ಶಾಸ್ತ್ರೀ
(ರಾಜ್ಯ ) ಜಿಲ್ಲೆ

ಪಂ.ಪುಟ್ಟರಾಜರ ಸ್ಮರಿಸಿಕೊಳ್ಳುವುದು ಮುಕ್ತಿಗೆ ಸಮಾನ :ಕಡಣಿ ಶಾಸ್ತ್ರೀ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಕಲಾ ವಿಕಾಸ ಪರಿಷತ್ ನಿಂದ ಪಗ್ಮಭೂಷಣ ಪಂ.ಪುಟ್ಟರಾಜರ ೧೧೨ನೇ ಹುಟ್ಟುಹಬ್ಬ ಆಚರಣೆ

ಉದಯರಶ್ಮಿ ದಿನಪತ್ರಿಕೆ

ಗದಗ: ಶರಣರ ನೆನೆಯುವುದೇ ಘನಮುಕ್ತಿ ಪದಶಿವಧವಾ ಎನ್ನುವಂತೆ ಡಾ. ಪಂ. ಪುಟ್ಟರಾಜರ ಸ್ಮರಿಸಿಕೊಳ್ಳುವುದು ಮುಕ್ತಿಗೆ ಸಮಾನವಾಗಿದೆ ಎಂದು ಕಲಾ ವಿಕಾಸ ಪರಿಷತ್ತಿನ ಸಂಸ್ಥಾಪಕ ಕಾರ್ಯಾಧ್ಯಕ್ಷ ಪಂ. ಸಿ. ಕೆ. ಎಚ್. ಶಾಸ್ತ್ರಿ (ಕಡಣಿ) ಹೇಳಿದರು.
ಅವರು ಮಂಗಳವಾರ ನಗರದ ವೀರಶೈವ ಜನರಲ್ ಲೈಬ್ರಿಯ ಆವರಣದಲ್ಲಿರುವ ವೀರಶೈವ ಲಿಂಗಾಯತ ಮಹಾಸಭಾ ಕಾರ್ಯಾಲಯದಲ್ಲಿ ಉತ್ತರ ಕರ್ನಾಟಕ ಕಲಾವಿದರ ಹಾಗೂ ಕಲಾ ಪೋಷಕರ ಸಂಘಟನೆಯಾದ ಕಲಾ ವಿಕಾಸ ಪರಿಷತ್ತು ಏರ್ಪಡಿಸಿದ್ದ, ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ೧೧೨ನೇ ಜಯಂತಿಯ ಕಾರ್ಯಕ್ರಮದಲ್ಲಿ ಮಾತನಾಡಿ, ಪೂಜ್ಯರ ಹುಟ್ಟುಹಬ್ಬವನ್ನು ಸುಮಾರು ೨೫ ವರ್ಷಗಳ ಹಿಂದೆ ಸಾರ್ವಜನಿಕವಾಗಿ ಆಚರಿಸುವ ಪರಂಪರೆಯನ್ನು ಹುಟ್ಟು ಹಾಕಿದ ಸಂಸ್ಥೆ ಕಲಾವಿಕಾಸ ಪರಿಷತ್ತು, ಪೂಜ್ಯರ ಸಾಹಿತ್ಯ, ಸಂಗೀತ, ಸಮಾಜಸೇವೆ ನಿರಂತರ ಸ್ಮರಣೆಗಾಗಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಹುಟ್ಟು ಹಾಕಿ, ಎರಡು ಸಂಸ್ಥೆಗಳ ಮೂಲಕ ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಗುರುಗಳ ಸೇವೆಯನ್ನು ಸ್ಮರಿಸಿಕೊಳ್ಳುತ್ತಾ ಬಂದಿದೆ. ಪುಟ್ಟರಾಜರ ಹುಟ್ಟು ಹಬ್ಬವನ್ನು ಕಲಾ ವಿಕಾಸ ದಿನವನ್ನಾಗಿ ಆಚರಿಸ ಬೇಕೆಂದು ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದಷ್ಟು ಬೇಗ ಭಕ್ತರ ಈ ಬೇಡಿಕೆ ಈಡೇರಿಸಲಿ ಎಂದು ಸರಕಾಕ್ಕೆ ಒತ್ತಾಯಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಗದಗ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಅವರು, ಪರಿಷತ್ತಿನ ರಜತ ಮಹೋತ್ಸವ ವರ್ಷಾಚರಣೆಯ ಲೊಗೊ ಬಿಡುಗಡೆಮಾಡಿ, ಪುಟ್ಟರಾಜ ಗುರುಗಳ ಜೊತೆಗಿನ ತಮ್ಮ ಒಡನಾಟವನ್ನು ಸ್ಮರಿಸಿಕೊಂಡರು.
ಮುಖ್ಯ ಅತಿಥಿ ಬಿಜೆಪಿಯ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡಿದ್ದ, ಕಲಾ ವಿಕಾಸ ಪರಿಷತ್ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ವಿ. ಕೆ. ಗುರುಮಠ ಮಾತನಾಡಿ, ಕಲಾ ವಿಕಾಸ ಪರಿಷತ್ ರಜತ ಮಹೋತ್ಸವ ವರ್ಷಾಚರಣೆ ಅಂಗವಾಗಿ ಈ ವರ್ಷದ ಅಂತ್ಯಕ್ಕೆ ಮೂರು ದಿನಗಳ ಐತಿಹಾಸಿಕ ಸಮ್ಮೇಳನವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಆರಂಭದಲ್ಲಿ ಪುಟ್ಟರಾಜರ ಭಾವಚಿತ್ರಕ್ಕೆ ಪೂಜೆಸಲ್ಲಿಸಿ, ಮಹಾ ಮಂಗಳಾರತಿ ಮಾಡಿ ಪುಷ್ಪವೃಷ್ಟಿಗೈದು, ಸಿಹಿ ವಿತರಿಸಲಾಯಿತು.
ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಮುರುಘರಾಜೇಂದ್ರ ಬಡ್ನಿ ಸ್ವಾಗತಿಸಿದರು. ಖಚಾಂಚಿ ಚೆನ್ನವೀರಪ್ಪ ಹುಣಸಿಕಟ್ಟಿ ನಿರೂಪಸಿ ವಂದಾನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ತಶಿಲ್ದಾರ ಏ.ಟಿ. ನರೇಗಲ್ ನಿವೃತ್ ಪ್ರಾಚಾರ್ಯ ಜಿ.ಎ. ಪಾಟೀಲ್. ಎಂ. ಬಿ. ಚೆನ್ನಪ್ಪಗೌಡ್ರ, ಸಿದ್ದಣ್ಣ ಜೀವನ ಗೌಡ್ರ, ಎಸ್ ಆಯ್. ಯಾಳಗಿ ಜಿ. ಎಸ್. ಹಿರೇಮಠ, ಸೇರಿದಂತೆ ಮಹಾಸಭಾ ಹಾಗೂ ಕಲಾ ವಿಕಾಸ ಪರಿಷತ್‌ನ ಸರ್ವ ಸದಸ್ಯರು ಹಾಗೂ ಅಭಿಮಾನಿಭಕ್ತರು ಪಾಲ್ಗೊಂಡಿದ್ದರು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಗರಿಷ್ಠ ತಾಪಮಾನ: ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮವಹಿಸಿ

ಕನ್ನೂರ ವಿದ್ಯುತ್ ಘಟಕ ಉದ್ಘಾಟನೆಗೆ ಆಗ್ರಹಿಸಿ ರೈತರ ಪ್ರತಿಭಟನೆ

ಇಂಡಿ ಯುಕೆಪಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ!

ರಂಗಿನಲ್ಲಿ ಮಿಂದೆದ್ದ ಸಿಂದಗಿ ಜನತೆ: ಎಲ್ಲೆಡೆ ಹೋಳಿ ಹಬ್ಬದ ಸಂಭ್ರಮ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಗರಿಷ್ಠ ತಾಪಮಾನ: ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮವಹಿಸಿ
    In (ರಾಜ್ಯ ) ಜಿಲ್ಲೆ
  • ಕನ್ನೂರ ವಿದ್ಯುತ್ ಘಟಕ ಉದ್ಘಾಟನೆಗೆ ಆಗ್ರಹಿಸಿ ರೈತರ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • ಇಂಡಿ ಯುಕೆಪಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ!
    In (ರಾಜ್ಯ ) ಜಿಲ್ಲೆ
  • ರಂಗಿನಲ್ಲಿ ಮಿಂದೆದ್ದ ಸಿಂದಗಿ ಜನತೆ: ಎಲ್ಲೆಡೆ ಹೋಳಿ ಹಬ್ಬದ ಸಂಭ್ರಮ
    In (ರಾಜ್ಯ ) ಜಿಲ್ಲೆ
  • ಇಂದು ಮುದ್ದೇಬಿಹಾಳ ಬಂದ್: ಬೃಹತ್ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • ಇಂದು ಸಿಎಂ ರಾಜ್ಯ ಬಜೆಟ್ ಮಂಡನೆ :ಹೆಚ್.ಡಿ.ಕೋಟೆ ಜನರ ನಿರೀಕ್ಷೆಗಳೇನು?
    In (ರಾಜ್ಯ ) ಜಿಲ್ಲೆ
  • ಪಂ.ಪುಟ್ಟರಾಜರ ಸ್ಮರಿಸಿಕೊಳ್ಳುವುದು ಮುಕ್ತಿಗೆ ಸಮಾನ :ಕಡಣಿ ಶಾಸ್ತ್ರೀ
    In (ರಾಜ್ಯ ) ಜಿಲ್ಲೆ
  • ತುಳಿತಕ್ಕೊಳಗಾದ ಮಾದಿಗ ಸಮಾಜಕ್ಕೆ ಒಳಮೀಸಲಾತಿ ನೀಡಿ :ತಳಗೇರಿ
    In (ರಾಜ್ಯ ) ಜಿಲ್ಲೆ
  • ಬಡ ರೋಗಿಯ ಬದುಕಿಗೆ ಆಸರೆಯಾದ ಶಾಸಕ ಚಿಕ್ಕಮಾದು
    In (ರಾಜ್ಯ ) ಜಿಲ್ಲೆ
  • ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾಶ್ರೀ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.