ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದಿಂದ ಶ್ರೀಶೈಲಕ್ಕೆ ಪಾದಯಾತ್ರೆ ಕೈಗೊಂಡಿರುವ ನೂರಾರು ಭಕ್ತರಿಗೆ ಬಿಸಿಲಿನ ತಾಪ ತಗ್ಗಿಸಲು ಓಂ ಸಾಯಿ ಎಂಟರಪ್ರೈಜಸ್ ಮಾಲಿಕ ಶಿವಾನಂದ ಎಸ್. ಸುಕಂದ ಅವರು ಎಲ್ಲ ಭಕ್ತಾಧಿಗಳಿಗೆ ಟೋಪಿ ವಿತರಿಸಿದರು.
ಪ್ರತಿ ವರ್ಷ ಶ್ರೀಶೈಲ ಪಾದಯಾತ್ರಿಗಳಿಗೆ ವಿವಿಧ ಸೇವೆ ನೀಡುತ್ತಿರುವ ಸುಕಂದ ಅವರು ಈ ಬಾರಿ ಟೋಪಿ ಹಾಗೂ ಕುಡಿಯಲು ನೀರಿನ ಬಾಟಲ್ ಸೇವೆ ನೀಡಿದರು.

