ಅಧಿಕಾರಿಗಳಿಂದ ಮಾ.೧೫ ಕ್ಕೆ ಕನ್ನೂರ ೧೧೦ ಕೆ.ವಿ ಘಟಕ ಉದ್ಘಾಟನೆ ಮಾಡುವ ಲಿಖಿತ ಭರವಸೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಾಲೂಕಿನ ಕನ್ನೂರನಲ್ಲಿ ಕಳೆದ ಒಂದು ವರ್ಷದ ಹಿಂದೆ ಉದ್ಘಾಟನೆ ಆಗಬೇಕಿರುವ ೧೧೦ ಕೆ.ವಿ ವಿದ್ಯತ್ ಘಟಕ ಇಲ್ಲಿಯವರೆಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನೀರ್ಲಕ್ಷ್ಯದಿಂದ ಆಗಿಲ್ಲ, ಎಂದು ಆಗ್ರಹಿಸಿ ರೈತರು ಸುಮಾರು ೩ ಗಂಟೆಗಳ ಕಾಲ ಪ್ರತಿಭಟನೆ ಮಾಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲೆಯ ತಿಡಗುಂದಿ ಕೆ.ಇ.ಬಿ.ಯ ಮುಂದೆ ಜಮಾಯಿಸಿದ ರೈತರು ಕಚೇರಿ ಗೇಟಿಗೆ ಹಸಿರು ಶಾಲು ಕಟ್ಟಿ ಘೋಷಣೆ ಕೂಗಿದರು.
ಈ ವೇಳೆ ಜಿಲ್ಲಾಧ್ಯಕ್ಷರಾದ ಸಂಗಮೆಶ ಸಗರ ಮಾತನಾಡಿ, ಗುತ್ತಿಗೆದಾರನ ವಿಳಂಬ ನೀತಿಯಿಂದ ೨ ವರ್ಷದ ಹಿಂದೆ ಉದ್ಘಾಟನೆ ಆಗಬೇಕಿರುವ ಕನ್ನೂರಿನ ಹೊಸ ಕೆ.ಇ.ಬಿ ಇಲ್ಲಿಯವರೆಗೆ ಆಗಿಲ್ಲ ಎಂದರೆ ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕೂಡಾ ಪ್ರಮುಖ ಕಾರಣವಾಗಿದೆ ಎಂದರು.
ಇಂದು ಸಾಯಂಕಾಲದ ಒಳಗಾಗಿ ಉದ್ಘಾಟನೆ ಮಾಡಬೇಕು, ಇಲ್ಲವಾದಲ್ಲಿ ಇಲ್ಲಿಯೇ ಟೆಂಟ್ ಹೊಡೆದು ಅಡುಗೆ ಮಾಡಿ ಹೋರಾಟ ಮಾಡಲಾಗುವುದು ಎಂದು ರೈತರೊಂದಿಗೆ ಪಟ್ಟು ಹಿಡಿದರು.
ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳಾದ ಇ.ಇ. ಸಂತೋಷ ಪಾಟೀಲ, ಎ.ಇ.ಇ ಅನೀಲ ಪೂಜಾರಿ, ಎ.ಇ.ಇ ಗಂಗಾಧರ ಲೋಣಿ. ಎ.ಇ.ಇ ಎಸ್.ಎಸ್ ಸಿದ್ದಾಪುರ ಹಾಗೂ ಸ್ಥಳೀಯ ಶಾಸಕರಾದ ವಿಠ್ಠಲ ಕಟಕದೊಂಡ ಅವರು ಗುತ್ತಿಗೆದಾರನ್ನ ಹಿಗ್ಗಾ ಮುಗ್ಗಾ ಜಾಡಿಸಿ ಶೀಘ್ರದಲ್ಲಿ ಕನ್ನೂರಿನ ಕೆ.ಇ.ಬಿ ಪ್ರಾರಂಭಿಸಬೇಕು ಎಂದರು.
ಆಗ ಗುತ್ತಿಗೆದಾರ ಮಾರ್ಚ ೧೫ ರ ಒಳಗಾಗಿ ಮುಗಿಸುವುದಾಗಿ ತಿಳಿಸಿದಾಗ ಅಧಿಕಾರಿಗಳು ಮಾರ್ಚ ೨೨ ರ ವರೆಗೆ ಕಾಲಾವಕಾಶ ಕೊಡಿ ಎಂದು ರೈತರಿಗೆ ಮನವಿ ಮಾಡಿದರು.
ಆಗ ರೈತರು ಮತ್ತು ಅಧಿಕಾರಿಗಳ ಮಧ್ಯೆ ವಾಗ್ವಾದ ಉಂಟಾಗಿ ಅಧಿಕಾರಿಗಳಿಗೂ ಗೌರವ ಕೊಡಬೇಕು ಎಂದು ರೈತರೆಲ್ಲರು ಮಾರ್ಚ ೧೫ ಒಳಗಾಗಿ ಎಲ್ಲಾ ಕೆಲಸ ಮುಗಿಸಿ ಶಾಸಕರಿಂದಲೇ ಈ ಕೆ.ಇ.ಬಿ ಉದ್ಗಾಟನೆ ಮಾಡಿಸಬೇಕು, ಇದನ್ನು ಮುಖ್ಯಸ್ಥರು ಅಧಿಕೃತವಾಗಿ ಬರೆದುಕೊಡಬೇಕು ಎಂದು ಹೇಳಿದಾಗ ಅಧಿಕಾರಿಗಳು ಒಪ್ಪಿಗೆ ಸೂಚಿಸಿ ಬರೆದುಕೊಟ್ಟ ನಂತರ ಹೋರಾಟ ಹಿಂಪಡೆಯಲಾಯಿತು
ಈ ವೇಳೆ ಸ್ಥಳೀಯ ಶಾಸಕರಾದ ವಿಠ್ಠಲ ಕಟಕದೊಂಡ ಅವರು, ಗುತ್ತಿಗೆದಾರನಿಗೆ ತಾಕೀತು ಮಾಡಿ ಮಾರ್ಚ ೧೨ ರ ಒಳಗಾಗಿ ಕೆಲಸ ಮುಗಿಸಬೇಕು ಹಗಲು ರಾತ್ರಿ ಆದರೂ ಪರವಾಗಿಲ್ಲ ಕೂಡಲೇ ಕೆಲಸ ಮುಗಿಸಿ ಎಂದು ಸೂಚಿಸಿದರು.
ಈ ವೇಳೆ ವಿಜಯಪುರ ತಾಲೂಕಾ ಅಧ್ಯಕ್ಷರಾದ ಅನಮೇಶ ಜಮಖಂಡಿ, ಮುಖಂಡರಾದ ರಾಮಸಿಂಗ ರಜಪೂರ, ಸತೀಶ ದಾಶ್ಯಾಳ, ಗೆನ್ನಪ್ಪ ಬಿರಾದಾರ, ಮಹಾಂತಗೌಡ ಬಿರಾದಾರ, ಗಿರೀಶ ತಾಳಿಕೋಟಿ, ರಾಮನಗೌಡ ಬಿರಾದಾರ, ರಾಮನಗೌಡ ಪಾಟೀಲ, ಮುದಕಣ್ಣ ಬಿರಾದಾರ, ಕಾಶಿರಾಯಗೌಡ ಪಾಟೀಲ, ಕಲ್ಲಪ್ಪ ಹತ್ತಿ, ಶ್ರೀನಾಥ ದಾಶ್ಯಾಳ, ಸಂಗನಗೌಡ ಬಿರಾದಾರ, ಪ್ರಕಾಶಗೌಡ ಪಾಟೀಲ, ಪ್ರಕಾಶ ಜಾಧವ, ವಿರೇಶ ಮುರಗುಂಡಿ, ದೇವೆಗೌಡ ಬಿರಾದಾರ ಸೇರಿದಂತೆ ಬೊಮ್ಮನಳ್ಳಿ, ಮಿಂಚನಾಳ, ಗುಣಕಿ, ತಿಡಗುಂದಿ, ಗ್ರಾಮದ ರೈತರು ಇದ್ದರು.

