Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣದ ಸರ್ವಜನಪೂಜಿತ ರಾವುತರಾಯನ ಅಲಂಕಾರ(ಬಣ್ಣ)ಕಾರ್ಯ ಸಂಪನ್ನಗೊಂಡಿದ್ದು, ವಿವಿಧ ಧಾರ್ಮಿಕ ಕಾರ್ಯಗಳ ನಂತರ ಬಂಡಿ ಉತ್ಸವದ ಮೂಲಕ ಸ್ವಸ್ಥಾನಕ್ಕೆ ಮರಳಲಿದ್ದಾನೆ.ರಾವುತರಾಯ ಅಲಂಕಾರ ಕಾರಣವಾಗಿ ಮಲ್ಲಯ್ಯ ದೇವಸ್ಥಾನ ಪ್ರವೇಶಿಸಿದ್ದು ಸುಮಾರು ೪ ತಿಂಗಳು ತರುವಾಯ ಪುನಃ ಅದ್ದೂರಿ ಬಂಡಿ ಉತ್ಸವದೊಂದಿಗೆ ಸೆಪ್ಟೆಂಬರ್ ದಿ:೪ ರಂದು ಶುಕ್ರವಾರ ತನ್ನ ಮೂಲಸ್ಥಾನಕ್ಕೆ ಬರಲಿದ್ದಾನೆ. ಅದಕ್ಕಿಂತ ಮುಂಚೆ ಇದೇ ದಿ: ೩೦ರಂದು ಭಾನುವಾರ ಮಲ್ಲಾರಿ ಹೋಮ, ದಿ:೩೧ ರಂದು ಸೋಮವಾರ ಮಲ್ಲಯ್ಯನ ಹೋಮ ನಂತರ ಸೆಪ್ಟೆಂಬರ ೩ರಂದು ಗುರುವಾರ ಬಂಡಿ ತುಂಬುವ ಕಾರ್ಯ ಜರುಗಲಿದೆ ಎಂದು ಮಲ್ಲಯ್ಯ, ರಾವುತರಾಯ ದೇವಸ್ಥಾನ ಸಮಿತಿ ಪ್ರಕಟಣೆ ಮೂಲಕ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಮಕ್ಕಳು ಬಾಲ್ಯದಲ್ಲಿ ತಪ್ಪು ಮಾಡಿದಾಗ ಶಿಕ್ಷಕರು, ಪಾಲಕರು ಅವರನ್ನು ಬುದ್ದಿ ಮಾತುಗಳ ಮೂಲಕ ತಿದ್ದಿ ಸರಿಯಾದ ದಾರಿಗೆ ತರಬಹುದಾಗಿದೆ ಎಂದು ಮುಖ್ಯಶಿಕ್ಷಕ ಅಶೋಕ ಹೊಸಗೌಡ್ರ ಹೇಳಿದರು.ತಾಲ್ಲೂಕಿನ ಜಾಲವಾದ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಜರುಗಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಾಸ್ಥö್ಯ ಸಂಕಲ್ಪ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳಲ್ಲಿ ದುಶ್ಚಟಗಳನ್ನು ತಡೆಯುವ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮಗಳು ಅಗತ್ಯವಾಗಿವೆ. ಸರ್ಕಾರ ಮಾಡದ ಜಾಗೃತಿ ಕಾರ್ಯಕ್ರಮಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.ಸಂಪನ್ಮೂಲ ವ್ಯಕ್ತಿ ಅಬ್ದುಲ್ ರಜಾಕ್ ನದಾಫ್ ಮಾತನಾಡಿ, ಧೂಮ್ರಪಾನ, ಮಧ್ಯಪಾನ, ಮೊಬೈಲ್, ಬಳಕೆಗಳಿಂದ ಆಗುವ ದುಷ್ಪರಿಣಾಮಗಳ ಕುರಿತಾಗಿ ಜಾಗೃತಿ ಮೂಡಿಸಿ, ಆರೋಗ್ಯ ಸಮಸ್ಯೆಗಳ ಕುರಿತು ಮಾಹಿತಿ ನೀಡದರು.ವಲಯ ಮೇಲ್ವಿಚಾರಕಿ ಸವಿತಾ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಯೋಜನೆಯಲ್ಲಿ ನಡೆಯುವ ಕಾರ್ಯಕ್ರಮಗಳು ಸೇರಿದಂತೆ ಶಾಲೆಗೆ ಡೆಸ್ಕ್ ಬೆಂಚ್ ವಿತರಣೆ, ನಿರ್ಗತಿಕರ ಮಾಶಾಸನ, ನಮ್ಮೂರು ನಮ್ಮ ಕೆರೆ ಹಾಗೂ ಶುದ್ಧ…
ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳು, ಯುವ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಕೂಡಲೇ ಪರಿಹರಿಸುವಂತೆ ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಜಿಲ್ಲೆಯ ನೂರಾರು ವಿದ್ಯಾರ್ಥಿಗಳು ಹಾಗೂ ಕ್ರೀಡಾಪಟುಗಳು ಪ್ರತಿದಿನ ಕ್ರೀಡಾಭ್ಯಾಸಕ್ಕಾಗಿ ಜಿಲ್ಲಾ ಕ್ರೀಡಾಂಗಣವನ್ನು ಅವಲಂಬಿಸಿದ್ದಾರೆ. ಆದರೆ ಕ್ರೀಡಾಂಗಣದಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳ ಕೊರತೆ, ಸಮರ್ಪಕ ನಿರ್ವಹಣೆಯ ಅಭಾವ ಹಾಗೂ ವಿವಿಧ ಶುಲ್ಕಗಳ ಹೆಚ್ಚಳದಿಂದಾಗಿ ವಿದ್ಯಾರ್ಥಿಗಳು ಮತ್ತು ಕ್ರೀಡಾಪಟುಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕ್ರೀಡಾಂಗಣವು ಕ್ರೀಡಾಪಟುಗಳ ಪ್ರತಿಭೆ ಬೆಳೆಸುವ ಕೇಂದ್ರವಾಗಬೇಕಾದರೆ, ಮೊದಲು ಅಲ್ಲಿನ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಬೇಕು ಎಂದು ಪರಿಷತ್ ಆಗ್ರಹಿಸಿದೆ.ಕ್ರೀಡಾಪಟುಗಳಿಗೆ ಅಗತ್ಯವಿರುವ ಕ್ರೀಡಾ ಸಾಮಗ್ರಿಗಳನ್ನು ವೈಜ್ಞಾನಿಕ ಮಾನದಂಡಗಳಿಗೆ ಅನುಗುಣವಾಗಿ ಖರೀದಿಸಿ ಒದಗಿಸುವ ಮೂಲಕ ಜಿಲ್ಲೆಯ ಪ್ರತಿಭಾವಂತ ಕ್ರೀಡಾಪಟುಗಳಿಗೆ ಉತ್ತೇಜನ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ತಿನ ರಾಜ್ಯಾಧ್ಯಕ್ಷ ಶ್ರೀನಾಥ್ ಪೂಜಾರಿ…
ಆ.೩೧ ರಂದು ಇಂಡಿಯಲ್ಲಿ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ಧರಣಿ ಎಚ್ಚರಿಕೆ ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಬೇಕು. ಇಲ್ಲವಾದಲ್ಲಿ ಆಗಸ್ಟ ೩೧ ಸೋಮವಾರದಿಂದ ನಗರದ ಆಡಳಿತ ಸೌಧ ಎದುರು ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ರೈತರನ್ನು ಸೇರಿಸಿ ಧರಣಿ ನಡೆಸಲಾಗುವುದು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಹಣಮಂತ್ರಾಯಗೌಡ ಪಾಟೀಲ ಎಚ್ಚರಿಸಿದರು.ತಾಲೂಕಿನಾದ್ಯಂತ ಭೀಕರ ಪರಿಸ್ಥಿತಿ ಇದ್ದರೂ ಸರ್ಕಾರ ಇಂಡಿ ತಾಲೂಕನ್ನು ಬರಗಾಲದ ಪಟ್ಟಿಗೆ ಸೇರಿಸದಿರುವುದು ದುರ್ದೈವ. ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಿ ಇಂಡಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಬೇಕು. ಸ್ಥಳೀಯ ಶಾಸಕ ಯಶವಂತ್ರಾಯಗೌಡರು ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ವಿತರಿಸಲು ಕ್ರಮವಹಿಸಬೇಕು ಎಂದು ಬಿಜೆಪಿ ಮುಖಂಡರು ಬಲವಾಗಿ ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಸಿದ್ದಲಿಂಗ ಹಂಜಗಿ, ಅನಿಲ ಜಮಾದಾರ, ಮಲ್ಲಿಕಾರ್ಜುನ ಕಿವುಡೆ, ಶೀಲವಂತ ಉಮರಾಣಿ, ದೇವೇಂದ್ರ ಕುಂಬಾರ, ರೈತ ಮೋರ್ಚಾ ಉಪಾಧ್ಯಕ್ಷ , ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಈರಣ್ಣಗೌಡ ಪಾಟೀಲ, ಜೆಟ್ಟು ಮರಡಿ,…
ಉದಯರಶ್ಮಿ ದಿನಪತ್ರಿಕೆ ಇಂಡಿ: ಕೂಡಲೆ ಇಂಡಿ ತಾಲೂಕನ್ನು ಬರಗಾಲ ತಾಲೂಕು ಎಂದು ಘೋಷಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಹಸಿರು ಸೇನೆ ಹಾಗೂ ರೈತ ಸಂಘದ ಪದಾಧಿಕಾರಿಗಳು ಶುಕ್ರವಾರ ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಎಸ್.ಬಿ. ಕೆಂಬೋಗಿ ಮಾತನಾಡಿ, ತಕ್ಷಣವೇ ಸರಕಾರ ಬರಗಾಲ ಘೋಷಿಸಲು ಕ್ರಮ ಕೈಗೊಳ್ಳದಿದ್ದರೆ ತಾಲ್ಲೂಕು ಕಚೇರಿ ಮುಂದೆ ಹಾಗೂ ಬಸವೇಶ್ವರ ವೃತ್ತದಲ್ಲಿ ಉಗ್ರ ಧರಣಿ ಸತ್ಯಾಗ್ರಹ ನಡೆಸಲಾಗುವುದು. ತಾಲೂಕಿನಾದ್ಯಂತ ಕುಡಿಯುವ ನೀರಿನ ತೀವ್ರ ಅಭಾವ ಸೃಷ್ಟಿಯಾಗಿದ್ದು, ಬಿತ್ತನೆ ಕಾರ್ಯಗಳು ಸಂಪೂರ್ಣ ಕುಂಠಿತಗೊಂಡಿವೆ. ಇಡೀ ತಾಲೂಕಿಗೆ ಸರ್ಕಾರ ಅನ್ಯಾಯ ಎಸಗಿದೆ” ಎಂದು ದೂರಿದರು.ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಲ್ಲಿಕಾರ್ಜುನ್ ನಾವದಗಿ, ತಮ್ಮಾರಾಯ ಆಸಂಗಿ, ಹನುಮಂತ್‌ಸಿಂಗ್ ರಜಪೂತ್, ಮಲ್ಲಿಕಾರ್ಜುನ ಹೊರ್ತಿ, ಬಸುಗೌಡ ಪಾಟೀಲ, ಅದೃಷ್ಟಪ್ಪ ವಾಲಿ, ಭೀಮರಾಯ ಪೂಜಾರಿ, ಪರಪ್ಪ ಕೆಂಭೋಗಿ, ಸಿದ್ದಣ್ಣ ತಳವಾರ ಸೇರಿದಂತೆ ತಾಲೂಕಿನ ನೂರಾರು ರೈತ ಬಾಂಧವರು ಉಪಸ್ಥಿತರಿದ್ದರು.
ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯಲ್ಲಿ ಖೇಲೋ ಇಂಡಿಯಾ ಸಂವಾದ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಕಸಿತ ಭಾರತ್ ಯುವ ಸಂಪರ್ಕ ಹಾಗೂ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ “ಖೇಲೋ ಇಂಡಿಯಾ ಸಂವಾದ – ಖೇಲ್ ಕಿ ಬಾತ್ ಪಿಎಂ ಮೋದಿ ಕೆ ಸಾಥ್” ಕಾರ್ಯಕ್ರಮವನ್ನು ಜಿಲ್ಲೆಯ ಏಕೈಕ ಕಾಲೇಜಾಗಿ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.ಕಾಲೇಜಿನ ಎನ್.ಎಸ್.ಎಸ್ ಘಟಕ-೧, ೨ ಮತ್ತು ಐಕ್ಯೂಎಸಿ ವತಿಯಿಂದ ಆ.೨೭ರಂದು ಬೆಳಿಗ್ಗೆ ೧೦:೩೦ಕ್ಕೆ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚುವಲ್ ಭಾಷಣದ ನೇರ ಪ್ರಸಾರ ವೀಕ್ಷಿಸಲಾಯಿತು. ಕ್ರೀಡೆ, ಶಿಸ್ತು, ತಂಡದ ಕೆಲಸ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರದ ಕುರಿತು ಪ್ರಧಾನಿ ಕರೆ ನೀಡಿದರು.ಈ ವೇಳೆ ಮೈ ಭಾರತ್ ಉಪಕ್ರಮ, ಯುವ ಸಂವಾದ ವೇದಿಕೆ ಕುರಿತು ಮಾಹಿತಿ ನೀಡಲಾಯಿತು. ವಿದ್ಯಾರ್ಥಿಗಳಿಂದ ನಶಾ ಮುಕ್ತ ಯುವ ಪ್ರತಿಜ್ಞೆ ಸ್ವೀಕರಿಸಲಾಯಿತು.ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ. ಅನಿಲ್…
ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಚಡಚಣ ಕಾನಿಪ ಸಂಘ ಹಾಗೂ ರೈತ ಸಂಘದಿಂದ ಗೃಹ ಸಚಿವರಿಗೆ ಮನವಿ ಉದಯರಶ್ಮಿ ದಿನಪತ್ರಿಕೆ ಚಡಚಣ: ವಿಜಯಪುರ ಜಿಲ್ಲೆಯಲ್ಲಿ ಸರ್ಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿಯ ಕಾಳಸಂತೆ ಹಾಗೂ ಅಕ್ರಮ ದಂಧೆ ಕುರಿತು ವರದಿ ಪ್ರಕಟಿಸಿದ ಹೊಸದಿಗಂತ ಪತ್ರಿಕೆಯ ಜಿಲ್ಲಾ ವರದಿಗಾರ ಪರಶುರಾಮ ಶಿವಶರಣ ಅವರ ಮನೆಗೆ ತೆರಳಿ ಜೀವ ಬೆದರಿಕೆ ಹಾಕಿದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡುವಂತೆ ಆಗ್ರಹಿಸಿ ಚಡಚಣ ತಹಶೀಲ್ದಾರ್ ಮೂಲಕ ಗೃಹ ಸಚಿವರಿಗೆ ಕರ್ನಾಟಕ ಕಾನಿಪ ಸಂಘ (ಚಡಚಣ) ಹಾಗೂ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಡೋಣಜಮಠ ಅವರು, ಅನ್ನಭಾಗ್ಯ ಯೋಜನೆಯ ಅಕ್ಕಿಯ ಅಕ್ರಮ ದಂಧೆ ಕುರಿತು ಪರಶುರಾಮ ಶಿವಶರಣ ಅವರು ಜವಾಬ್ದಾರಿಯುತವಾಗಿ ತನಿಖಾ ವರದಿ ಪ್ರಕಟಿಸಿದ್ದು ಇದರಿಂದ ಅಕ್ರಮದಲ್ಲಿ ಭಾಗಿಯಾದ ಕೆಲವರು ಪತ್ರಕರ್ತರ ಮನೆಗೆ ತೆರಳಿ…
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್.ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಇವತ್ತಿನ ಮಾಹಿತಿ ಯುಗದಲ್ಲಿ ನಮಗೆ ಬೇಕಾದ ಬೇಡವಾದ ಹತ್ತು ಹಲವು ವಿಷಯಗಳು ನಮಗೆ ಮಾಹಿತಿಯ ರೂಪದಲ್ಲಿ ಲಭ್ಯವಾಗುತ್ತದೆ. ಈ ಹಿಂದೆ ಯಾವುದೇ ಹೊಸ ವಿಷಯವನ್ನು ನಮಗೆ ಪಾಲಕರು ಕಲಿಸುತ್ತಿದ್ದರು, ಪುಸ್ತಕಗಳ ಮೂಲಕ ವಿಷಯದ ಅರಿವಾಗುತ್ತಿತ್ತು ನಿಜ ಆದರೆ ಪುಸ್ತಕಗಳ ಲಭ್ಯತೆಯು ಕೂಡ ಅಷ್ಟೇ ಕಠಿಣವಾಗಿದ್ದು ಪುಸ್ತಕಗಳ ಮೂಲಕ ಮಸ್ತಕದ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂಬ ಅರಿವು ಬಹಳಷ್ಟು ಜನರಿಗೆ ಇರಲಿಲ್ಲ.ಮೊಬೈಲ್ ನಲ್ಲಿಯೇ ಜಗತ್ತನ್ನು ಕಾಣುತ್ತಿರುವ ಪ್ರಸ್ತುತ ದಿನಮಾನಗಳಲ್ಲಿ ಮಕ್ಕಳನ್ನು ಹೇಗೆ ಬೆಳೆಸುವುದು ಎಂಬ ಕುರಿತು ಪಾಲಕರಿಗೆ ಅರಿವು ಮೂಡಿಸಬೇಕಾಗಿದ್ದು ಮಕ್ಕಳ ನಡವಳಿಕೆಯನ್ನು ಬದಲಾಯಿಸುವ ನಿಟ್ಟಿನಲ್ಲಿ ಪಾಲಕರ ನಡವಳಿಕೆ ಹೇಗಿರಬೇಕು ಎಂಬುದು ಒಂದು ಸವಾಲಿನ, ಗೋಜಲಿನ ಸಂಗತಿಯೇ ಆಗಿದೆ.ಕೆಲ ದಶಕಗಳ ಹಿಂದೆ ಮಕ್ಕಳ ಮೇಲೆ ಪ್ರಭಾವ ಬೀರುವವರಲ್ಲಿಮೊದಲು ಪಾಲಕರು ನಂತರ ಶಿಕ್ಷಕರು ಮೂರನೆಯದಾಗಿ ಸ್ನೇಹಿತರು ಮತ್ತು ಕೊನೆಯದಾಗಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತಿದ್ದವು. ಮನೆಯಲ್ಲಿ ಪಾಲಕರು ಹೇಳಿದ ಮಾತೇ ಮೊದಲ ಮತ್ತು ಕೊನೆಯ…
ಲೇಖನ- ಡಾ.ರಾಜಶೇಖರ ನಾಗೂರಸಂಚಾಲಕರು’ನಮ್ಮ ಕಥಾ ಅರಮನೆ ’ ಉದಯರಶ್ಮಿ ದಿನಪತ್ರಿಕೆ ಮನುಷ್ಯನ ಬದುಕು ಬಹುಶಃ ಬೇಕು ಮತ್ತು ಬೇಡ ಎಂಬ ಎರಡು ಪದಗಳ ನಡುವೆ ನಡೆಯುವ ನಿರಂತರ ಪಯಣ.ಚಿಕ್ಕವನಿದ್ದಾಗ ಆಟಿಕೆ ಬೇಕು, ಶಾಲೆಗೆ ಹೋದಾಗ ಒಳ್ಳೆಯ ಅಂಕ ಬೇಕು, ಬೆಳೆದಾಗ ಒಳ್ಳೆಯ ಉದ್ಯೋಗ ಬೇಕು, ನಂತರ ಮನೆ, ಹಣ, ಹೆಸರು, ಗೌರವ ಹೀಗೆ ‘ಬೇಕು’ಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ ಬದುಕು ಒಂದು ಹಂತಕ್ಕೆ ಬಂದಾಗ ಹಿಂದೆ ಬೇಕೆಂದು ಬಯಸಿದ್ದ ಅನೇಕ ಸಂಗತಿಗಳೇ ಇಂದು ಬೇಡ ಎನಿಸಲು ಆರಂಭಿಸುತ್ತವೆ.ಒಮ್ಮೆ ಹೆಚ್ಚು ಹಣ ಬೇಕೆನಿಸುತ್ತದೆ. ನಂತರ ಹಣಕ್ಕಾಗಿ ಕಳೆದುಕೊಂಡ ನೆಮ್ಮದಿ ಬೇಡವೆನಿಸುತ್ತದೆ. ಹೆಚ್ಚು ಜನರ ಪರಿಚಯ ಬೇಕೆನಿಸುತ್ತದೆ. ನಂತರ ಮನಸ್ಸನ್ನು ಅರ್ಥಮಾಡಿಕೊಳ್ಳುವ ಕೆಲವೇ ಜನರು ಸಾಕೆನಿಸುತ್ತದೆ.ಎಲ್ಲರ ಮೆಚ್ಚುಗೆ ಬೇಕೆನಿಸುತ್ತದೆ. ನಂತರ ನಮ್ಮ ಮನಸ್ಸಿಗೆ ನಾವು ಸತ್ಯವಾಗಿರುವುದೇ ಮುಖ್ಯವೆನಿಸುತ್ತದೆ.ವಿಚಿತ್ರವೆಂದರೆ ಬೇಕೆಂಬ ಆಸೆ ನಮ್ಮನ್ನು ಓಡಿಸಿದರೆ ಬೇಡವೆಂಬ ಅರಿವು ನಮ್ಮನ್ನು ನಿಲ್ಲಿಸುತ್ತದೆ. ಬದುಕಿನಲ್ಲಿ ಪ್ರತಿಯೊಂದನ್ನೂ ಪಡೆಯುವುದೇ ಯಶಸ್ಸಲ್ಲ. ಯಾವುದನ್ನು ಪಡೆಯಬೇಕು, ಯಾವುದನ್ನು ಬಿಟ್ಟುಕೊಡಬೇಕು ಎಂಬ ಅಂಶವು…
