ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪಟ್ಟಣದ ಹಸಿರು ತೋರಣ ಗೆಳೆಯರ ಬಳಗ ಕೊಡಮಾಡುವ ಪರಿಸರ ರಕ್ಷಕ ಪ್ರಶಸ್ತಿಗೆ ಐವರನ್ನು ಆಯ್ಕೆ ಮಾಡಲಾಗಿದೆ.
ಮಿಥುನ ನೇಮಪ್ಪ ಚವ್ಹಾಣ ಅಡವಿ ಹುಲಗಬಾಳ (ಪ್ರಾದೇಶಿಕ ಅರಣ್ಯ), ಸಂಗಪ್ಪ ನಂದಪ್ಪ ನಾಗಾವಿ ಕಾರಕೂರ (ಸಾಮಾಜಿಕ ಅರಣ್ಯ), ಮಾನಪ್ಪ ಸಂಜೀವಪ್ಪ ಕರಡಿ ಆನೇಹೊಸೂರ (ಕೆಬಿಜೆಎನ್ನೆಎಲ್ ಅರಣ್ಯ), ರಾಮಣ್ಣ ಪರಪ್ಪಗೋಳ (ಸಂತ ಕನಕದಾಸ ಶಾಲೆ ಮುದ್ದೇಬಿಹಾಳ) ಹಾಗೂ ತಂಗಡಗಿ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ವಿಠ್ಠಲ ತೆಗ್ಗಿ ಪ್ರಶಸ್ತಿಗೆ ಆಯ್ಕೆಯಾದವರು.
ಜೂ.೭ ಬೆ೮ ಗಂಟೆಗೆ ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಉದ್ಯಾನವನದಲ್ಲಿ ನಡೆಯುವ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿ ಗೌರವಿಸಲಾಗುವದು ಎಂದು ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷರಾದ ಅಮರೇಶ ಗೂಳಿ, ಕಾರ್ಯದರ್ಶಿ ಬಸವರಾಜ ಬಿಜ್ಜೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

