Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕೊಲ್ಹಾರ: ಭಾರತ ಬಹು ಧರ್ಮಿಯರ, ಬಹುಭಾಷಿಕರ ಹಾಗು ಬಹು ಸಂಸ್ಕೃತಿಯ ದೇಶವಾಗಿದ್ದರಿಂದ ಇಂದು ಧಾರ್ಮಿಕ ಭಾವೈಕ್ಯತೆಯ ಅವಶ್ಯಕತೆ ಇದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.ಸಮೀಪದ ಹಳ್ಳದ ಗೆಣ್ಣೂರ ಗ್ರಾಮದಲ್ಲಿ ಬೀರಲಿಂಗೇಶ್ವರ ಹಾಗೂ ಜಟ್ಟಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಭಾವೈಕ್ಯತಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನಾವೆಲ್ಲರೂ ದೇವರ ಸಂತಾನ. ಜಾತಿ, ಮತ, ಪಂಥ, ಭಾಷೆ, ಲಿಂಗ, ವರ್ಣ, ಎನ್ನದೇ ವಿಶ್ವವೇ ಒಂದು ಕುಂಟುಂಬ ಎಂದು ಅರಿತು ಭಾವೈಕ್ಯತೆಯ ನೀತಿಯನ್ನು ಅನುಸರಿಸಬೇಕೆಂದರು.ಚಿಂತಕ ಮೋಹನ ಮೇಟಿ ಮಾತನಾಡಿ, ಮಾನವ ಮಾನವೀಯ ಮೌಲ್ಯ ಕಾಪಾಡಿ, ಸಾಮರಸ್ಯ ಜೀವನಕ್ಕೆ ಮಹತ್ವ ನೀಡಬೇಕು. ಎಲ್ಲ ಧರ್ಮದ ತಿರುಳು ಮಾನವೀಯ ಧರ್ಮ ಆಧರಿಸಿವೆ ದೇವನ ಕುಟುಂಬವಿದು ಎಂದರು.ಹುಲಜಂತಿ ಸುಕ್ಷೇತ್ರದ ಜಗದ್ಗುರು ಮಾಳಿಂಗರಾಯ ಮಹಾರಾಜರು ಸಾನ್ನಿಧ್ಯ ವಹಿಸಿ ಮಾತನಾಡಿದರು.ಹುಲಜಂತಿ ಜಕರಾಯ ಮಹಾರಾಜರು, ನಾಗಠಾಣ ಗುಳಪ್ಪಮುತ್ತ್ಯಾ ಪೂಜಾರಿ ಸಾನ್ನಿಧ್ಯ ವಹಿಸಿದ್ದರು.ಕೊಲ್ಹಾರದ ಪ್ರಭುಕುಮಾರ ಶಿವಾಚಾರ್ಯ, ನ್ಯಾಯವಾದಿ ಮಹಮ್ಮದ ಗೌಸ ಹವಾಲ್ದಾರ ಮಾತನಾಡಿದರು.ಹಳ್ಳದ ಗೆಣ್ಣೂರ ಸಿದ್ದಪ್ಪ ಪೂಜಾರಿ, ಬ್ಲಾಕ…
ವಿಜಯಪುರ: ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಬುಧವಾರದಂದು ‘ಪುಲ್ವಾಮಾ ದಾಳಿ’ ಕಹಿನೆನಪು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ಬಂಜಾರಾ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ ಗುರು ಇ.ಡಿ.ಲಮಾಣಿ ಮಾತನಾಡಿ, ಪಾಪಿ ಪಾಕ್‌ನ ಕುತಂತ್ರಿ ಕೆಲಸ ನೆನಪಿಸಿಕೊಂಡರೆ ಇನ್ನೂ ಸಹ ಭಾರತೀಯರ ರಕ್ತ ಕುದಿಯುತ್ತದೆ. ನಮ್ಮನ್ನು ಕಾಯುವ ಯೋಧರ ಕ್ರೂರ ಮರಣ ಪ್ರತಿ ಭಾರತೀಯನು ಮರೆಯುವುದೇ ಇಲ್ಲ.ಫೆಬ್ರವರಿ ೧೪ ಎಂದರೆ ಎಲ್ಲರಿಗೂ ನೆನಪಾಗೋದೆ ಈ ಪ್ರೇಮಿಗಳ ದಿನ. ಆದರೆ ಪ್ರೇಮಿಗಳ ದಿನವನ್ನೇ ಮರೆಸಿ ಕರಾಳ ದಿನಕ್ಕೆ ಕಾರಣವಾದ ನಾಲ್ಕು ವರ್ಷಗಳ ಹಿಂದಿನ ಘಟನೆ ಅಕ್ಷರಶಃ ದೇಶವನ್ನೇ ಬೆಚ್ಚಿಬೀಳಿಸಿತ್ತು. ಪಾಕ್ ವಿರುದ್ಧ ಭಾರತೀಯರ ರಕ್ತ ಕುದಿಯುವಂತೆ ಮಾಡಿತ್ತು. ಅಂದು ಭಾರತೀಯರ ಮನೆಗಳಲ್ಲಿ ಶೋಕ ಮಡುಗಟ್ಟಿತ್ತು ಎಂದರು. ಈ ಸಂದರ್ಭದಲ್ಲಿ ಪುಲ್ವಾಮಾ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ೪೦ ಯೋಧರಿಗೆ ಮೌನಾಚರಣೆಯ ಮೂಲಕ ಗೌರವ ಸಲ್ಲಿಸಲಾಯಿತು. ಈ ವೇಳೆ ಆಂಗ್ಲ ಮಾಧ್ಯಮ ಪ್ರೌಢ…
ವಿಜಯಪುರ: ಶ್ರೀ ಸಿದ್ದೇಶ್ವರ ಶ್ರೀಗಳು ಜ್ಞಾನದ ಕಣಿ. ಅವರು ಯಾವಾಗಲೂ ನಮ್ಮ ಜೊತೆ ಇರುತ್ತಾರೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಎಲ್ ಪಿ ಬಿರಾದಾರ ಹೇಳಿದರು.ಕರ್ನಾಟಕ ಕಲಾ ಸಂಘ ವಿಜಯಪುರ ಇವರ ವತಿಯಿಂದ ಬಿಡಿಇ ಸೊಸಾಯಿಟಿ ಬಾಲಕಿಯರ ಸಭಾಭವನದಲ್ಲಿ ಶ್ರೀ ಸಿದ್ದೇಶ್ವರ ಶ್ರೀ ಗಳಿಗೆ ನುಡಿ ನಮನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.ಉದ್ಘಾಟಕರಾಗಿ ಆಗಮಿಸಿದ ಸಾಹಿತಿ ಶಿವಪ್ರಕಾಶ್ ಜಂಗಮಶೆಟ್ಟಿ, ಶ್ರೀಗಳು ಸರಳ ಸಾಧಾರಣ ವ್ಯಕ್ತಿತ್ವ ಹೊಂದಿದವರು ಎಂದು ಹೇಳಿದರು.ಇದೇ ವೇಳೆ ಹಿರಿಯ ಸದಸ್ಯರಾದ ಬಿ ಎಸ್ ಸಜ್ಜನ್ ವಿ ಕೆ ಕೋರ್ತಿ ಬಿ ಎಸ್ ಕಳ್ಳಿಮಠ ಇವರನ್ನು ಸನ್ಮಾನಿಸಲಾಯಿತುಇದೇ ಸಂದರ್ಭದಲ್ಲಿ ರಾಜಶೇಖರ ಕಲ್ಮಠ ಇವರಿಂದ ವಿ ಕೆ ಕೊರ್ತಿ, ಬಿ ಎಸ್ ಸಜ್ಜನ್, ಬಿಎಸ್ ಕಳ್ಳಿಮಠ ಇವರ ಮೇಲೆ ಬರೆದ ಕವಿತೆಗಳನ್ನು ವಾಚನ ಮಾಡಲಾಯಿತು.ಸಂಘದ ಸದಸ್ಯರಾದ ಕಲ್ಯಾಣ ರಾವ್ ದೇಶಪಾಂಡೆ, ಎ ಎಮ್ ಕುಲಕರ್ಣಿ, ಯೆಲಗೋಡ, ಎಸ್ ಆರ್ ಮಾನಕರ, ಆರ್ ಕೆ ಇ ನಮ್ದಾರ್,…
ಮಣ್ಣೂರ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಬಸವನಬಾಗೇವಾಡಿ: ಸಮಾಜದಲ್ಲಿ ಶೋಷಣೆಗೆ ಒಳಗಾದರವ ಪರವಾಗಿ ಒಕ್ಕೂರಲಿನಿಂದ ಧ್ವನಿ ಎತ್ತಿದ ಮಹಾನ್ ನಾಯಕ ಡಾ, ಬಾಬಾಸಾಹೇಬ ಅಂಬೇಡ್ಕರ ಎಂದು ೫ನೇ ತರಗತಿ ವಿದ್ಯಾರ್ಥಿನಿ ಲಕ್ಷ್ಮೀ ಮನಹಳ್ಳಿ ಸಭೆಯ ಗಮನ ಸೆಳೆದಳು.ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಬುಧವಾರ ಸಂವಿಧಾನ ಜಾಗೃತಿ ನಿಮಿತ್ಯ ಹಮ್ಮಿಕೊಂಡ ಕಾರ್ಯಕ್ರಮಲ್ಲಿ ವಿಶೇಷ ಭಾಷಣ ನೀಡಿ ಮಾತನಾಡಿದ ಅವರು, ಸಂವಿಧಾನದ ಹಕ್ಕುಗಳ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು, ಸಂವಿಧಾನದಲ್ಲಿ ಸರ್ವರಿಗೂ ಸಮಾನ ಹಕ್ಕಿದೆ, ಸಂವಿಧಾನ ಎನ್ನುವುದು ಕೇವಲ ಒಂದು ಜಾತಿಗೆ ಸೀಮಿತವಾಗಿಲ್ಲ, ಪ್ರತಿಯೊಬ್ಬರು ಬದುಕು ಸಾಗಿಸುತ್ತಿರುವುದು ಸಂವಿಧಾನದ ಅಡಿಯಲ್ಲಿಯೇ ಎನ್ನುವುದನ್ನು ಯಾರು ಮರೆಯಬಾರದು ಎಂದು ಹೇಳಿದರು.ತಹಶೀಲ್ದಾರ ಯಮನಪ್ಪ ಸೋಮನಕಟ್ಟಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಅಪೇಕ್ಷಾ ಹೊಸಮಿನಿ, ಅನುಶ್ರೀ ಮಣ್ಣೂರ, ಹಾಗೂ ಶಿಕ್ಷಕ ಎಚ್ ಬಿ ಬಾರಿಕಾಯಿ ಮಾತನಾಡಿದರು. ಪಂಚಾಯಿತಿ ಅಧ್ಯಕ್ಷ ಬಾಲು ರಾಠೋಡ, ಉಪಾಧ್ಯಕ್ಷ ನಿವೇದಿತಾ ಪತ್ತಾರ, ಶಿವಾನಂದ ಡೋಣೂರ, ಮುಖಂಡರಾದ ಪರಶುರಾಮ ದಿಂಡವಾರ, ಅಶೋಕ ಚಲವಾದಿ, ಮಹಾಂತೇಶ ಸಾಸಾಬಾಳ, ಯಲ್ಲಪ್ಪ ಆರ್ಯರ, ಹೈದರ ಚಪ್ಪರಬಂದ, ನೂಡಲ್ ಅಧಿಕಾರಿ…
ಮುದ್ದೇಬಿಹಾಳ: ಫೆ.೧೫ ರಂದು ಪಟ್ಟಣಕ್ಕೆ ಆಗಮಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾದಲ್ಲಿ ಭಾಗವಹಿಸಲು ಎಲ್ಲ ನ್ಯಾಯವಾದಿಗಳು ಅಂದು ಮಧ್ಯಾಹ್ನ ೩ ಗಂಟೆಗೆ ಪಟ್ಟಣದ ಬನಶಂಕರಿ ದೇವಸ್ಥಾನದ ಬಳಿ ಹಾಜರಿರುವಂತೆ ಮತ್ತು ಸಂಜೆ ೭ಗಂಟೆಗೆ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ ಮನವಿ ಮಾಡಿದ್ದಾರೆ.
ಮುದ್ದೇಬಿಹಾಳ: ತಾಲೂಕಿನ ರೂಢಗಿ ಗ್ರಾಮಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾವನ್ನು ತಾಲೂಕು ಆಡಳಿತದ ವತಿಯಿಂದ ಸ್ವಾಗತಿಸಿಕೊಳ್ಳಲಾಯಿತು. ಈ ವೇಳೆ ತಾಲೂಕು ದಂಡಾಧಿಕಾರಿ ಬಸವರಾಜ ನಾಗರಾಳ, ಪ್ರಭಾರ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಯುವರಾಜ ಹನಗಂಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಾವಳಗಿ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ತಾಲೂಕು ಪಂಚಾಯತ ನ ಯೋಜನಾಧಿಕಾರಿ ಖೂಬಾಸಿಂಗ ಜಾಧವ, ಡಿಎಸ್‌ಎಸ್ ಮುಖಂಡರಾದ ಹರೀಶ ನಾಟೆಕಾರ, ಬಸವರಾಜ ಸಿದ್ದಾಪೂರ ಸೇರಿದಂತೆ ಮತ್ತೀತರರು ಇದ್ದರು.
ಸಿಂದಗಿ: ಕನ್ನಡ ಸಾಹಿತ್ಯ, ಪರಂಪರೆ, ಉಡುಗೆ ತೊಡುಗೆ, ಆಹಾರ ಪದ್ಧತಿ ಮತ್ತು ಇವುಗಳ ಹಿಂದಿರುವ ವೈಜ್ಞಾನಿಕ ಹಿನ್ನೆಲೆ ಕುರಿತು ಪ್ರಸ್ತುತ ದಿನಮಾನಗಳಲ್ಲಿ ಅವುಗಳ ಅವಶ್ಯಕತೆ ಇದೆ ಎಂದು ಉಪನ್ಯಾಸಕ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಶರಣಬಸವ ಜೋಗೂರು ಹೇಳಿದರು.ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಅಂಗ ಸಂಸ್ಥೆಯಾದ ಜಿ.ಪಿ.ಪೋರವಾಲ್ ಕಲಾ, ವಾಣಿಜ್ಯ ಹಾಗೂ ವಿ.ವಿ.ಸಾಲಿಮಠ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ವಾಣಿಜ್ಯ ಉತ್ಸವ ೨೦೨೪ರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಲೇಜಿನಲ್ಲಿ ನಡೆಯವ ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರಹಾಕಲು ಒಳ್ಳೆಯ ಅವಕಾಶ ದೊರೆಯುತ್ತದೆ. ಎಲ್ಲರೂ ಇಂತಹ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು.ಈ ವೇಳೆ ಪ್ರಾಚಾರ್ಯ ಡಿ.ಎಂ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು.ಸಂಯೋಜಕ ಡಾ.ರವಿ ಲಮಾಣಿ ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಬಸವರಾಜ ಮಹಾಜನಶೆಟ್ಟಿ, ಸಾಂಸ್ಕೃತಿಕ ಮತ್ತು ಕ್ರೀಡಾ ವಿಭಾಗದ ಮುಖ್ಯಸ್ಥರು ಹಾಗು ದೈಹಿಕ ನಿರ್ದೇಶಕ ರವಿ ಗೋಲಾ, ಪ್ರಕಾಶ್ ತೇಜು ರಾಠೋಡ, ಉಪನ್ಯಾಸಕ ಡಾ.ಶ್ರೀಕಾಂತ್ ಪಾಟೀಲ, ಮಲ್ಲಮ್ಮ ಯರಗಲ್, ಯಮನಪ್ಪ ದಿಂಡವಾರ ಸೇರಿದಂತೆ…
ಮುದ್ದೇಬಿಹಾಳ: ಫೆ೧೫ ರಂದು ಮದ್ಯಾಹ್ನ ೪ ಗಂಟೆಗೆ ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ದಿ ಕರ್ನಾಟಕ ಕೋ ಆಫ್ ಬ್ಯಾಂಕ್ ನಲ್ಲಿ ಬಸವ ಪುರಾಣ ಕಾರ್ಯಕ್ರಮದ ಖರ್ಚು ವೆಚ್ಚದ ವರದಿಯನ್ನು ನೀಡಲು ಸಭೆಯನ್ನು ಕರೆಯಲಾಗಿದೆ.ಪುರಾಣ ಕಾರ್ಯಕ್ರಮಕ್ಕೆ ಅನ್ನ ಪ್ರಸಾದದ ವ್ಯವಸ್ಥೆ ಮಾಡಿದ ದಾನಿಗಳು, ಧನ ಸಹಾಯ ಮಾಡಿದ ದಾನಿಗಳು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲ ಮಹನೀಯರು ಸೇರಿದಂತೆ ಸಮಸ್ತ ಸಮಾಜದ ಬಾಂಧವರು ಹಾಗೂ ಊರಿನ ಹಿರಿಯರು, ಗಣ್ಯರು, ಎಲ್ಲಾ ಸಂಘ ಸಂಸ್ಥೆಯ ಪದಾಧಿಕಾರಿಗಳು, ಮುಖಂಡರು ಸಭೆಗೆ ಹಾಜರಾಗುವಂತೆ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.
ಮುದ್ದೇಬಿಹಾಳ: ಪಟ್ಟಣದ ಎಂಜಿವ್ಹಿಸಿ ಕಾಲೇಜು ಆವರಣದಲ್ಲಿ ದೇಶಭಕ್ತ ಯುವಕರ ತಂಡ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರನ್ನು ಸ್ಮರಿಸುವ ಮೂಲಕ ದೇಶಭಕ್ತಿಯನ್ನು ಮೆರೆದರು.ಪ್ರತೀ ವರ್ಷ ಫೆ೧೪ ರಂದು ಈ ಕಾರ್ಯಕ್ರಮವನ್ನು ರೂಪಿಸುವ ತಂಡ, ತಮ್ಮಲ್ಲಿಯ ಅಲ್ಪ್ಪ ಸ್ವಲ್ಪ ಹಣವನ್ನು ಕೂಡಿಸಿ, ಕ್ಯಾಂಡಲ್, ಹೂಗಳನ್ನ ತಂದು ಹುತಾತ್ಮ ಯೋಧರ ಬ್ಯಾನರ್ ಮಾಡಿಸಿ ಶ್ರದ್ಧೆಯಿಂದ ಕೈಮುಗಿದು, ಹೂಮಳೆ ಸುರಿಸಿ ೨ ನಿಮಿಷಗಳ ಕಾಲ ಮೌನಾಚರಣೆ ಸಲ್ಲಿಸುತ್ತಾರೆ. ಈ ತಂಡದಲ್ಲಿ ಪ್ರಮುಖರಾದ ಫಯಾಜ ಬಾಗವಾನ, ದೀಪಕ ಎಸ್, ಧೀರಜ ಹುಲ್ಲೂರ, ಮಹೇಶ ಹರಿಜನ, ಸಾಹಿಲ ಮಕಾಶಿ, ಸಲೀಂ ನದಾಫ, ಮುಸ್ತಾಕಲಿ ಪಟೇಲ ಸೇರಿದಂತೆ ಮತ್ತೀರರು ಇದ್ದಾರೆ. ಇವರ ದೇಶ ಭಕ್ತಿಗೆ ಪಟ್ಟಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಮುದ್ದೇಬಿಹಾಳ: ದುಡ್ಡಿಗೆ ಮಹತ್ವ ಕೊಡುವ ಬದಲು ಮಕ್ಕಳಿಗೆ ಯೋಗ್ಯವಾದ ಶಿಕ್ಷಣ, ಸಂಸ್ಕೃತಿ ನೀಡಿ ಬೆಳೆಸಿದಲ್ಲಿ ಅದುವೇ ನಮಗೆ ಸಂಪತ್ತು ಎಂದು ಬಲ್‌ಕೆರೂರಿನ ಬಿಲ್ವಾಶ್ರಮ ಹಿರೇಮಠದ ಪ.ಪೂಜ್ಯ ಸಿದ್ಧಲಿಂಗ ಶಿವಾಚಾರ್ಯ ನುಡಿದರು.ಪಟ್ಟಣದ ಮಾರುತಿ ನಗರದಲ್ಲಿರುವ ವಿದ್ಯಾಜ್ಯೋತಿ ಪಬ್ಲಿಕ್ ಶಾಲೆಯ ಎರಡನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿದರು.ದುಡ್ಡಿಗೆ ಪ್ರಾಮುಖ್ಯತೆ ನೀಡಿದವರ ಅದೆಷ್ಟೋ ಜನರ ಮಕ್ಕಳು ಇಂದು ದುಷ್ಚಟಗಳಿಗೆ ದಾಸರಾಗಿ ಹಾಳಾಗಿರುವದನ್ನು ನಾವು ಕಂಡಿದ್ದೇವೆ. ನಮ್ಮ ದೇಶದ ಸಂಸ್ಕೃತಿಯನ್ನು ಕಲಿಸುವ ಮೂಲಕ ಯೋಗ್ಯವಾದ ವಿದ್ಯೆಯನ್ನು ನೀಡಿದಲ್ಲಿ ಆ ಮಗು ಜಗತ್ತನ್ನೇ ಬೆಳಗುವ ಆದರ್ಶ ವ್ಯಕ್ತಿಯಾಗುತ್ತಾನೆ ಎಂದರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಾವಳಗಿ ಮಾತನಾಡಿದರು.ಕಾಂಗ್ರೇಸ್ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ, ಚಿಂತಕ ಅರವಿಂದ ಕೊಪ್ಪ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಂ.ಎಚ್.ಹಾಲ್ಯಾಳ ಮಾತನಾಡಿದರು. ಈ ವೇಳೆ ಯಾದಗಿರಿಯ ಮುರಾರ್ಜಿ ದೇಸಾಯಿ ಶಾಲೆಗೆ ಆಯ್ಕೆಯಾದ ಆಕಾಶ ಚಲವಾದಿ, ಬಿದರಕುಂದಿಯ ಆರ್‌ಎಂಎಸ್‌ಎ ಗೆ ಆಯ್ಕೆಯಾದ ಸಮೀಕ್ಷಾ ಕುಲಕರ್ಣಿ ಮತ್ತು ಯಾದಗಿರಿಯ ನವೋದಯ ಶಾಲೆಗೆ…
