ವಿಜಯಪುರ: ಶ್ರೀ ಸಿದ್ದೇಶ್ವರ ಶ್ರೀಗಳು ಜ್ಞಾನದ ಕಣಿ. ಅವರು ಯಾವಾಗಲೂ ನಮ್ಮ ಜೊತೆ ಇರುತ್ತಾರೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಎಲ್ ಪಿ ಬಿರಾದಾರ ಹೇಳಿದರು.
ಕರ್ನಾಟಕ ಕಲಾ ಸಂಘ ವಿಜಯಪುರ ಇವರ ವತಿಯಿಂದ ಬಿಡಿಇ ಸೊಸಾಯಿಟಿ ಬಾಲಕಿಯರ ಸಭಾಭವನದಲ್ಲಿ ಶ್ರೀ ಸಿದ್ದೇಶ್ವರ ಶ್ರೀ ಗಳಿಗೆ ನುಡಿ ನಮನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಉದ್ಘಾಟಕರಾಗಿ ಆಗಮಿಸಿದ ಸಾಹಿತಿ ಶಿವಪ್ರಕಾಶ್ ಜಂಗಮಶೆಟ್ಟಿ, ಶ್ರೀಗಳು ಸರಳ ಸಾಧಾರಣ ವ್ಯಕ್ತಿತ್ವ ಹೊಂದಿದವರು ಎಂದು ಹೇಳಿದರು.
ಇದೇ ವೇಳೆ ಹಿರಿಯ ಸದಸ್ಯರಾದ ಬಿ ಎಸ್ ಸಜ್ಜನ್ ವಿ ಕೆ ಕೋರ್ತಿ ಬಿ ಎಸ್ ಕಳ್ಳಿಮಠ ಇವರನ್ನು ಸನ್ಮಾನಿಸಲಾಯಿತು
ಇದೇ ಸಂದರ್ಭದಲ್ಲಿ ರಾಜಶೇಖರ ಕಲ್ಮಠ ಇವರಿಂದ ವಿ ಕೆ ಕೊರ್ತಿ, ಬಿ ಎಸ್ ಸಜ್ಜನ್, ಬಿಎಸ್ ಕಳ್ಳಿಮಠ ಇವರ ಮೇಲೆ ಬರೆದ ಕವಿತೆಗಳನ್ನು ವಾಚನ ಮಾಡಲಾಯಿತು.
ಸಂಘದ ಸದಸ್ಯರಾದ ಕಲ್ಯಾಣ ರಾವ್ ದೇಶಪಾಂಡೆ, ಎ ಎಮ್ ಕುಲಕರ್ಣಿ, ಯೆಲಗೋಡ, ಎಸ್ ಆರ್ ಮಾನಕರ, ಆರ್ ಕೆ ಇ ನಮ್ದಾರ್, ಮುಂತಾದವರು ಶ್ರೀಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಶೋಕ ತಾವರಗೇರಿ ಸುಧೀಂದ್ರ ಜಕಾತಿ, ಶಂಕರ ದಡ್ಡಿ, ಎಸ್‌ಬಿ ಕುಲಕರ್ಣಿ, ಉಪನ್ಯಾಸಕರು ಎ ಎಂ ಕುಂಬಾರ, ಪಿ ಸಿ ಹತ್ತಿ, ಆರ್ ಪಿ ಹಿರೇಮಠ, ಶ್ರೀಮತಿ ಎಸ್ ಹೆಚ್ ಕೋರಿ, ಎಸ್ ಬಿ ಕುಲಕರ್ಣಿ, ಬಿಡಿಈ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕರ್ನಾಟಕ ಕಲಾ ಸಂಘದ ಅಧ್ಯಕ್ಷ ಮತ್ತು ಹಿರಿಯ ಪತ್ರಕರ್ತ ಬಾಬುರಾವ ಕುಲಕರ್ಣಿ ಸ್ವಾಗತಿಸಿದರು. ಪ್ರಕಾಶ ಕೆ ಇನಾಮ್ದಾರ ನಿರೋಪಿಸಿದರು. ರಾಮಚಂದ್ರ ದೀಕ್ಷಿತ್ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment