ಮುದ್ದೇಬಿಹಾಳ: ಪಟ್ಟಣದ ಎಂಜಿವ್ಹಿಸಿ ಕಾಲೇಜು ಆವರಣದಲ್ಲಿ ದೇಶಭಕ್ತ ಯುವಕರ ತಂಡ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರನ್ನು ಸ್ಮರಿಸುವ ಮೂಲಕ ದೇಶಭಕ್ತಿಯನ್ನು ಮೆರೆದರು.
ಪ್ರತೀ ವರ್ಷ ಫೆ೧೪ ರಂದು ಈ ಕಾರ್ಯಕ್ರಮವನ್ನು ರೂಪಿಸುವ ತಂಡ, ತಮ್ಮಲ್ಲಿಯ ಅಲ್ಪ್ಪ ಸ್ವಲ್ಪ ಹಣವನ್ನು ಕೂಡಿಸಿ, ಕ್ಯಾಂಡಲ್, ಹೂಗಳನ್ನ ತಂದು ಹುತಾತ್ಮ ಯೋಧರ ಬ್ಯಾನರ್ ಮಾಡಿಸಿ ಶ್ರದ್ಧೆಯಿಂದ ಕೈಮುಗಿದು, ಹೂಮಳೆ ಸುರಿಸಿ ೨ ನಿಮಿಷಗಳ ಕಾಲ ಮೌನಾಚರಣೆ ಸಲ್ಲಿಸುತ್ತಾರೆ. ಈ ತಂಡದಲ್ಲಿ ಪ್ರಮುಖರಾದ ಫಯಾಜ ಬಾಗವಾನ, ದೀಪಕ ಎಸ್, ಧೀರಜ ಹುಲ್ಲೂರ, ಮಹೇಶ ಹರಿಜನ, ಸಾಹಿಲ ಮಕಾಶಿ, ಸಲೀಂ ನದಾಫ, ಮುಸ್ತಾಕಲಿ ಪಟೇಲ ಸೇರಿದಂತೆ ಮತ್ತೀರರು ಇದ್ದಾರೆ. ಇವರ ದೇಶ ಭಕ್ತಿಗೆ ಪಟ್ಟಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

