ಕೊಲ್ಹಾರ: ಭಾರತ ಬಹು ಧರ್ಮಿಯರ, ಬಹುಭಾಷಿಕರ ಹಾಗು ಬಹು ಸಂಸ್ಕೃತಿಯ ದೇಶವಾಗಿದ್ದರಿಂದ ಇಂದು ಧಾರ್ಮಿಕ ಭಾವೈಕ್ಯತೆಯ ಅವಶ್ಯಕತೆ ಇದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮೀಪದ ಹಳ್ಳದ ಗೆಣ್ಣೂರ ಗ್ರಾಮದಲ್ಲಿ ಬೀರಲಿಂಗೇಶ್ವರ ಹಾಗೂ ಜಟ್ಟಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಭಾವೈಕ್ಯತಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನಾವೆಲ್ಲರೂ ದೇವರ ಸಂತಾನ. ಜಾತಿ, ಮತ, ಪಂಥ, ಭಾಷೆ, ಲಿಂಗ, ವರ್ಣ, ಎನ್ನದೇ ವಿಶ್ವವೇ ಒಂದು ಕುಂಟುಂಬ ಎಂದು ಅರಿತು ಭಾವೈಕ್ಯತೆಯ ನೀತಿಯನ್ನು ಅನುಸರಿಸಬೇಕೆಂದರು.
ಚಿಂತಕ ಮೋಹನ ಮೇಟಿ ಮಾತನಾಡಿ, ಮಾನವ ಮಾನವೀಯ ಮೌಲ್ಯ ಕಾಪಾಡಿ, ಸಾಮರಸ್ಯ ಜೀವನಕ್ಕೆ ಮಹತ್ವ ನೀಡಬೇಕು. ಎಲ್ಲ ಧರ್ಮದ ತಿರುಳು ಮಾನವೀಯ ಧರ್ಮ ಆಧರಿಸಿವೆ ದೇವನ ಕುಟುಂಬವಿದು ಎಂದರು.
ಹುಲಜಂತಿ ಸುಕ್ಷೇತ್ರದ ಜಗದ್ಗುರು ಮಾಳಿಂಗರಾಯ ಮಹಾರಾಜರು ಸಾನ್ನಿಧ್ಯ ವಹಿಸಿ ಮಾತನಾಡಿದರು.
ಹುಲಜಂತಿ ಜಕರಾಯ ಮಹಾರಾಜರು, ನಾಗಠಾಣ ಗುಳಪ್ಪಮುತ್ತ್ಯಾ ಪೂಜಾರಿ ಸಾನ್ನಿಧ್ಯ ವಹಿಸಿದ್ದರು.
ಕೊಲ್ಹಾರದ ಪ್ರಭುಕುಮಾರ ಶಿವಾಚಾರ್ಯ, ನ್ಯಾಯವಾದಿ ಮಹಮ್ಮದ ಗೌಸ ಹವಾಲ್ದಾರ ಮಾತನಾಡಿದರು.
ಹಳ್ಳದ ಗೆಣ್ಣೂರ ಸಿದ್ದಪ್ಪ ಪೂಜಾರಿ, ಬ್ಲಾಕ ಕಾಂಗ್ರೆಸ್ಸಿನ ಅಧ್ಯಕ್ಷ ರಫೀಕ ಪಕಾಲಿ, ಮಹಮ್ಮದ ಹನೀಪ ಮಕಾಂದರ, ರಶೀದ ಅಹಮ್ಮದ ಹವಾಲ್ದಾರ, ರಮೇಶ ಸಂಗಳದ, ಸಿದ್ದನಗೌಡ ಪಾಟೀಲ, ಸಾಹೇಬಗೌಡ ಬಗಲಿ, ಶಮ್ಶಶುದ್ದೀನ ಬೀಳಗಿ, ಬಾಬು ಕೋಲಕಾರ, ಅಮೋಘಿ ಮಾದರ, ಶಿವಲಿಂಗಯ್ಯ ಮಠಪತಿ, ರಾಜಶೇಖರ ಶೇಖಧಾರ, ಅಮೀನಸಾಬ ನದಾಪ ಅಬ್ದಲ ಬಿಜಾಪುರ, ಗುರಪ್ಪ ಚಲವಾದಿ, ಅಬುಬಕರ ವಿಜಯಪುರ, ಡಾ ಪುರುಷೋತ್ತಮ ಬೊಮ್ಮನಹಳ್ಳಿ, ಬಿ ಎಮ್ ಶಾವಿಗೊಂಡ, ಕಾಶಪ್ಪ ಕಾರಜೋಳ, ವೇದಿಕೆಯ ಮೇಲಿದ್ದರು.
ರವಿ ಕಿತ್ತೂರ ಹಾಗು ಮಹೇತಾಬ ಕಾಗವಾಡ ಕನಕದಾಸರ ಕೀರ್ತನೆ ಹಾಡಿದರು.
Subscribe to Updates
Get the latest creative news from FooBar about art, design and business.
Related Posts
Add A Comment