ಮಣ್ಣೂರ ಗ್ರಾಮದಲ್ಲಿ ಸಂವಿಧಾನ ಜಾಗೃತಿ
ಬಸವನಬಾಗೇವಾಡಿ: ಸಮಾಜದಲ್ಲಿ ಶೋಷಣೆಗೆ ಒಳಗಾದರವ ಪರವಾಗಿ ಒಕ್ಕೂರಲಿನಿಂದ ಧ್ವನಿ ಎತ್ತಿದ ಮಹಾನ್ ನಾಯಕ ಡಾ, ಬಾಬಾಸಾಹೇಬ ಅಂಬೇಡ್ಕರ ಎಂದು ೫ನೇ ತರಗತಿ ವಿದ್ಯಾರ್ಥಿನಿ ಲಕ್ಷ್ಮೀ ಮನಹಳ್ಳಿ ಸಭೆಯ ಗಮನ ಸೆಳೆದಳು.
ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಬುಧವಾರ ಸಂವಿಧಾನ ಜಾಗೃತಿ ನಿಮಿತ್ಯ ಹಮ್ಮಿಕೊಂಡ ಕಾರ್ಯಕ್ರಮಲ್ಲಿ ವಿಶೇಷ ಭಾಷಣ ನೀಡಿ ಮಾತನಾಡಿದ ಅವರು, ಸಂವಿಧಾನದ ಹಕ್ಕುಗಳ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು, ಸಂವಿಧಾನದಲ್ಲಿ ಸರ್ವರಿಗೂ ಸಮಾನ ಹಕ್ಕಿದೆ, ಸಂವಿಧಾನ ಎನ್ನುವುದು ಕೇವಲ ಒಂದು ಜಾತಿಗೆ ಸೀಮಿತವಾಗಿಲ್ಲ, ಪ್ರತಿಯೊಬ್ಬರು ಬದುಕು ಸಾಗಿಸುತ್ತಿರುವುದು ಸಂವಿಧಾನದ ಅಡಿಯಲ್ಲಿಯೇ ಎನ್ನುವುದನ್ನು ಯಾರು ಮರೆಯಬಾರದು ಎಂದು ಹೇಳಿದರು.
ತಹಶೀಲ್ದಾರ ಯಮನಪ್ಪ ಸೋಮನಕಟ್ಟಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಅಪೇಕ್ಷಾ ಹೊಸಮಿನಿ, ಅನುಶ್ರೀ ಮಣ್ಣೂರ, ಹಾಗೂ ಶಿಕ್ಷಕ ಎಚ್ ಬಿ ಬಾರಿಕಾಯಿ ಮಾತನಾಡಿದರು. ಪಂಚಾಯಿತಿ ಅಧ್ಯಕ್ಷ ಬಾಲು ರಾಠೋಡ, ಉಪಾಧ್ಯಕ್ಷ ನಿವೇದಿತಾ ಪತ್ತಾರ, ಶಿವಾನಂದ ಡೋಣೂರ, ಮುಖಂಡರಾದ ಪರಶುರಾಮ ದಿಂಡವಾರ, ಅಶೋಕ ಚಲವಾದಿ, ಮಹಾಂತೇಶ ಸಾಸಾಬಾಳ, ಯಲ್ಲಪ್ಪ ಆರ್ಯರ, ಹೈದರ ಚಪ್ಪರಬಂದ, ನೂಡಲ್ ಅಧಿಕಾರಿ ಸಿ,ಬಿ ಪಾಟೀಲ, ಸಮಾಜ ಕಲ್ಯಾಣ ಇಲಾಖೆಯ ಭವಾನಿ ಪಾಟೀಲ, ಮಹೇಶ ಬಳಗಾನೂರ, ಸೇರಿದಂತೆ ಮುಂತಾದವರು ಇದ್ದರು.
ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ಸಂಚರಿಸಿತು, ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಲಂಬಾಣಿ ನೃತ್ಯ ಗಮನ ಸೆಳೆಯಿತು, ವಿದ್ಯಾರ್ಥಿಗಳ ಲೇಜಿಮ್ ಹಾಗೂ ಕೋಲಾಟ, ಡೊಳ್ಳು ಸೇರಿದಂತೆ ವಿವಿಧ ಕಲಾ ತಂಡಗಳು ಬಾಗವಹಿಸಿದ್ದವು.