Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಆಲಮಟ್ಟಿ ಜಲಾಶಯದಿಂದ ಫೆ.೧೯ರಿಂದ ಮಾರ್ಚ ೧೦ರವರೆಗೆ ಮುಳವಾಡ ಏತ ನೀರಾವರಿಯ ಹಾಗೂ ಚಿಮ್ಮಲಗಿ ಏತ ನೀರಾವರಿ ಕಾಲುವೆ ವ್ಯಾಪ್ತಿಯ ೯೬ ಕೆರೆಗೆಳಿಗೆ ೧.೮ ಟಿಎಂಸಿ ನೀರು ಕುಡಿಯುವ ಉದ್ಧೇಶಕ್ಕಾಗಿ ನೀರು ಹರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕಾಲುವೆಗಳ ಎಡ-ಬಲ ೧೦೦ ಅಡಿ ವ್ಯಾಪ್ತಿಯಲ್ಲಿ ಕಲಂ ೧೪೪ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಆದೇಶ ಹೊರಡಿಸಿದ್ದಾರೆ.
ಕಾಲುವೆ ಕೊನೆಯಂಚಿನವರೆಗೆ ನೀರು ತಲುಪಿಸಲು ಅಧಿಕಾರಿಗಳಿಗೆ ಡಿಸಿ ಟಿ.ಭೂಬಾಲನ್ ಸೂಚನೆ ವಿಜಯಪುರ: ಆಲಮಟ್ಟಿ ಜಲಾಶಯದಿಂದ ಫೆ.೧೯ರಿಂದ ಮಾರ್ಚ ೧೦ರವರೆಗೆ ಮುಳವಾಡ ಏತ ನೀರಾವರಿಯ ಹಾಗೂ ಚಿಮ್ಮಲಗಿ ಏತ ನೀರಾವರಿ ಕಾಲುವೆ ವ್ಯಾಪ್ತಿಯ ೯೬ ಕೆರೆಗೆಳಿಗೆ ೧.೮ ಟಿಎಂಸಿ ನೀರು ಕುಡಿಯುವ ಉದ್ಧೇಶಕ್ಕಾಗಿ ನೀರು ಹರಿಸಲಾಗುತ್ತಿದ್ದು, ಕೊನೆಯಂಚಿನವರೆಗೆ ಸಮರ್ಪಕವಾಗಿ ನೀರು ಹರಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.ಸೋಮವಾರ ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್ ಕಚೇರಿಯಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆದ ನೀರು ನಿರ್ವಹಣೆ ಸಭೆಯಲ್ಲಿ ಮಾತನಾಡಿದ ಅವರು, ಜನ-ಜಾನುವಾರುಗಳಿಗೆ ಕುಡಿಯುವ ಉದ್ದೇಶಕ್ಕಾಗಿ ನೀರು ಹರಿಸಲಾಗುತ್ತಿದ್ದು, ಅನ್ಯ ಉದೇಶಕ್ಕಾಗಿ ಬಳಸದೇ ಇರುವಂತೆ ನೋಡಿಕೊಂಡು ಕಾಲುವೆ ಜಾಲದ ವ್ಯಾಪ್ತಿಯಲ್ಲಿ ಬರುವ ಕೆರೆಗಳು ಪೂರ್ಣ ಭರ್ತಿಗೆ ಕ್ರಮವಹಿಸಬೇಕು ಎಂದು ಹೇಳಿದರು.ಕಾಲುವೆಯ ಮಾರ್ಗಗಳ ನಿರ್ವಹಣೆಯನ್ನು ಆಯಾ ತಾಲೂಕಿನ ತಹಶೀಲ್ದಾರ್‌ಗಳು ತಂಡಗಳನ್ನು ರಚಿಸಿಕೊಂಡು ನಿಗಾವಹಿಸಬೇಕು. ಪ್ರತಿ ಪಂಚಾಯತ್ ವ್ಯಾಪಿಯಲ್ಲಿ ಬರುವ ಹಳ್ಳಿಗಳಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ನೀರು ಹರಿಸಲಾಗಿದೆ. ಅನ್ಯ ಚಟುವಟಿಕೆಗಳಿಗೆ ಬಳಸದಂತೆ ಡಂಗೂರ ಸಾರಿಸಿ ಸಾರ್ವಜನಿಕರಿಗೆ ಮಾಹಿತಿ…
ಛತ್ರಪತಿ ಶಿವಾಜಿ ಜಯಂತಿ ಆಚರಣೆ | ಅಪರ ಜಿಲ್ಲಾದಿಕಾರಿ ಮಹಾದೇವ ಮುರಗಿ ಅಭಿಮತ ವಿಜಯಪುರ: ಛತ್ರಪತಿ ಶಿವಾಜಿಯ ಶೌರ್ಯ, ಸಾಹಸ, ರಾಷ್ಟçಭಕ್ತಿ ಹಾಗೂ ಅವರ ಆದರ್ಶ ಅರಿತುಕೊಳ್ಳುವುದರ ಜೊತೆಗೆ, ಅವರ ಜೀವನ ಮೌಲ್ಯಗಳು ಮುಂದಿನ ಜನಾಂಗಕ್ಕೆ ತಿಳಿಸಬೇಕು. ಅವರ ಜೀವನಾದರ್ಶ ಇಂದಿನ ಯುವಕರು ಮಾದರಿಯಾಗಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.ಸೋಮವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಛತ್ರಪತಿ ಶಿವಾಜಿಯ ದೈರ್ಯ, ಸಾಹಸದ ಚರಿತ್ರೆ, ಕತೆಗಳನ್ನು ಇಂದಿನ ಮಕ್ಕಳಿಗೆ ತಿಳಿಹೇಳಬೇಕು. ಈ ಮೂಲಕ ಮಕ್ಕಳಲ್ಲಿ ದೇಶಾಭಿಮಾನವನ್ನು ಬೆಳಸಬೇಕು. ಅವರ ಅಪಾರ ಸ್ವಾಭಿಮಾನ, ಮಹಿಳೆಯರ ಬಗ್ಗೆ ಗೌರವ ಇಟ್ಟುಕೊಂಡ ಶಿವಾಜಿಯವರ ಆದರ್ಶವನ್ನು ನಾವು ಯಾವತ್ತೂ ಪಾಲಿಸಬೇಕು. ವಿಜಯಪುರಕ್ಕೂ ಶಿವಾಜಿ ಅವರಿಗೂ ಅವಿನಾಭಾವ ಸಂಬಂಧ ಇದೆ ಎಂದು ಹೇಳಿದರು.ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ…
ಬಸವನಬಾಗೇವಾಡಿ: ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಅವರು ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ನಿವಾಸದಲ್ಲಿ ಭೇಟಿ ಮಾಡಿ ಔರಾದಕರ ವರದಿ ಅನುಷ್ಠಾನಗೊಳಿಸಿ ಆರಕ್ಷರಕ ಸಂಬಳ ಹೆಚ್ಚಿಸಬೇಕು, ಮೂರು ವರ್ಷ ಒಂದೇ ಕಡೆ ಸೇವೆ ಸಲ್ಲಿಸಿದ ಆರಕ್ಷಕರನ್ನು ಪತಿ, ಪತ್ನಿ ಪ್ರಕರಣದಲ್ಲಿ ಅಂತರ ಜಿಲ್ಲಾ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು.ನಂತರ ಸಚಿವರೊಂದಿಗೆ ಮಾತನಾಡಿ, ಹಿಂದಿನ ಪೊಲೀಸ್ ಮಹಾನಿರ್ದೇಶಕರಾಗಿದ್ದ ಔರಾದಕರ ಅವರು ರಾಜ್ಯ ಸರ್ಕಾರಕ್ಕೆ ವರದಿ ಶಿಪಾರಸ್ತು ಮಾಡಿದ್ದಾರೆ. ಇದುವರೆಗೆ ಅವರ ವರದಿ ಜಾರಿ ತಂದಿಲ್ಲ. ರಾಜ್ಯದ ನಾನಾ ಸರ್ಕಾರ ನೌಕರ ಬಾಂಧವರಿಗೆ, ಪೊಲೀಸ್ ಸಿಬ್ಬಂದಿಗಳ ಪಿಂಚಣಿ ಹೋಲಿಸಿದರೆ ವ್ಯತ್ಯಾಸವಿದೆ. ಇದರಿಂದಾಗಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರ ಮಲತಾಯಿ ಧೋರಣೆ ತೋರಿಸುತ್ತಿದೆ. ಹಗಲು-ರಾತ್ರಿ, ಮಳೆ-ಗಾಳಿ-ಚಳಿ ಎನ್ನದೇ ಪೊಲೀಸ್ ಇಲಾಖೆಯ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಾರೆ. ಇವರು ತಮ್ಮ ಬೇಡಿಕೆಗಾಗಿ ಹೋರಾಟ ಮಾಡುವಂತಿಲ್ಲ. ಒಂದೇ ವೇಳೆ ಹೋರಾಟ ಮಾಡಿದರೆ ಅಂತಹವರನ್ನು ಸೇವೆಯಿಂದ ವಜಾ ಮಾಡುತ್ತಾರೆ. ಇದರಿಂದಾಗಿ…
ಬಸವನಬಾಗೇವಾಡಿ: ಪಟ್ಟಣದ ಐತಿಹಾಸಿಕ ಮೂಲನಂದೀಶ್ವರ (ಬಸವೇಶ್ವರ) ದೇವಸ್ಥಾನದ ಹುಂಡಿಯನ್ನು ಶನಿವಾರ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತ ಬಸಪ್ಪ ಪೂಜಾರಿ ಸಮ್ಮುಖದಲ್ಲಿ ಸಿಬ್ಬಂದಿಗಳು ತೆಗೆದರು. ನಂತರ ದಾಸೋಹ ಭವನದಲ್ಲಿ ಎಣಿಕೆ ಕಾರ್ಯ ಜರುಗಿತು. ಇಂದು ರೂ.೮,೫೩,೫೩೦ ಹಣ ಸಂಗ್ರಹವಾದರೆ, ೩ ಗ್ರಾಂ, ೫೦೦ ಮಿಲಿ ಬಂಗಾರ, ೨೯೯ ಗ್ರಾಂ,೫೪೦ ಮಿಲಿ ಬೆಳ್ಳಿ ಸಂಗ್ರಹವಾಗಿದೆ. ಕಳೆದ ೨೦೨೩ ರ ಸೆ.೨೭ ರಂದು ಹುಂಡಿಯಿಂದ ರೂ.೬,೯೧,೨೩೩ ಸಂಗ್ರಹವಾಗಿತ್ತು. ಕಳೆದ ಬಾರಿಗಿಂತಲೂ ರೂ.೧.೫೦ ಲಕ್ಷಕ್ಕಿಂತಲೂ ಹೆಚ್ಚು ಹಣ ಸಂಗ್ರಹವಾಗಿದೆ.ಎಣಿಕೆ ಕಾರ್ಯ ಸಂದರ್ಭದಲ್ಲಿ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಆಯುಕ್ತ ಬಸಪ್ಪ ಪೂಜಾರಿ, ಗ್ರೇಡ್-೨ ಪ್ರಭಾರಿ ತಹಸೀಲ್ದಾರ ಜೆ.ಎಸ್.ಚಿನಿವಾಲರ, ಲೆಕ್ಕ ಅಧಿಕ್ಷಕ ಬಿ.ಎಸ್.ಕಳ್ಳಿ, ಮುಖಂಡರಾದ ಬಸವರಾಜ ಹಾರಿವಾಳ, ಶೇಖರ ಗೊಳಸಂಗಿ, ಶೇಖರಗೌಡ ಪಾಟೀಲ, ಶಾಂತಪ್ಪ ಪಟ್ಟಣಶೆಟ್ಟಿ, ದೇವಸ್ಥಾನದ ಸಿಬ್ಬಂದಿಗಳಾದ ಎ.ಎಂ.ಸಿಂದಗಿ, ಉಮಾ, ಡಿ.ಎಸ್.ಹಿರೇಮಠ, ಸುರೇಶ ಪಡಶೆಟ್ಟಿ, ದೇವಸ್ಥಾನದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವೈ.ಎನ್.ಮಿಣಜಗಿ, ಎಸ್.ಎಸ್.ಹಡಪದ, ಬಿ.ಎಸ್.ನಂದಿಹಾಳ, ಎಸ್.ಎಸ್.ನಂದೈಗೋಳ, ಭಾರತೀಯ ಸ್ಟೇಟ್ ಬ್ಯಾಂಕಿನ ಸಿಬ್ಬಂದಿಗಳಾದ ಮೋಹನ ಭೂತನಾಳ, ಬಿ.ಎಂ.ಬೂಯ್ಯಾರ ಇತರರು…
ಮೋರಟಗಿ: ಇಂದಿನ ಸ್ಪರ್ಧಾ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಟ್ಟ ವಿದ್ಯಾರ್ಥಿಗಳ ಜೀವನ ಮಾತ್ರ ಮುಂದಿನ ದಿನಗಳಲ್ಲಿ ಉಜ್ವಜ ಭವಿಷ್ಯ ಕಂಡುಕೊಳ್ಳಲು ಸಾಧ್ಯವಾಗುತ್ತದೆ, ನಾವು ನೋಡಲು ಸುಂದರವಾಗಿದ್ದರೆ ಸಾಲದು, ನಮ್ಮ ಬದುಕು ಸುಂದರವಾಗಬೇಕೆಂದರೆ ಶಿಕ್ಷಣ ಅಗತ್ಯ, ಎಂದು ಅಭಿನವ ರುದ್ರಮುನಿ ಶಿವಾಚಾರ್ಯ ಕುಂಟೋಜಿ ಹಿರೇಮಠದ ಶ್ರೀ ಅಭಿಪ್ರಾಯ ವ್ಯಕ್ತಪಡಿಸಿದರು.ರವಿವಾರ ಗ್ರಾಮದ ಕಲ್ಪವೃಕ್ಷ ಶಾಲೆಯಲ್ಲಿ ಕನ್ನಡ ಮಾಧ್ಯಮ ಪ್ರಾರ್ಥಮಿಕ, ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಶುಭೋಕೋರು ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳಲ್ಲಿ ಅಡಗಿರುವ ಅಜ್ಞಾನವನ್ನು ಅಳಿಸಿ ಸುಜ್ಞಾನದ ಬೀಜ ಬಿಟ್ಟುತ್ತಿರುವ ಶಿಕ್ಷರ ಪಾತ್ರ ಮಹತ್ವದ್ದು, ವಿದ್ಯೆಯೇ ಬಾಳಿನ ಬೆಳಕು ದಾನಗಳಲ್ಲಿ ವಿದ್ಯಾದಾನ ಕೂಡಾ ಶ್ರೇಷ್ಠವಾದುದ್ದು, ಶಿಕ್ಷಕರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆದು ಉತ್ತಮ ಸಂಸ್ಕಾರ ಕಲಿತುಕೊಂಡು ಸುಂದರವಾದ ಬದುಕು ಕಟ್ಟಿಕೊಳ್ಳಬೇಕು ಎಂದರು.ನಂತರ ದೇವಣಗಾವ ಕ್ಷೇತ್ರದ ಮಾಜಿ ಜಿ. ಪಂ. ಸದಸ್ಯ ಯಶವಂತ್ರಾಯಗೌಡ ಪಾಟೀಲ್ ಮಾತನಾಡಿದರು.ವಿಶೇಷ ಸನ್ಮಾನ: ಜೆಇಇ ಮೆನ್ಸ್ ಪರೀಕ್ಷೆಯಲ್ಲಿ ಶೇ.೯೨.೨೮ % ಫಲಿತಾಂಶ ಮಾಡಿ ಸಾಧನೆ ಮಾಡಿದ ಪಾಣಿಪುರಿ…
ಆಲಮಟ್ಟಿ: ಕರ್ನಾಟಕ ಗಾಂಧಿ ಮಂಜಪ್ಪ ಹರ್ಡೇಕರ, ವಚನಪಿತಾಮಹ ಫ.ಗು. ಹಳಕಟ್ಟಿ, ಬಂಥನಾಳ ಶಿವಯೋಗಿಗಳು ಈ ಮೂವರು ಜಿಲ್ಲೆಯ ಪಾಲಿಗೆ ಶೈಕ್ಷಣಿಕ ಹರಿಕಾರರು, ಈ ಅನರ್ಘ್ಯ ರತ್ನಗಳ ಕಾರ್ಯ ಚಿರಸ್ಥಾಯಿ ಎಂದು ವಚನಪಿತಾಮಹ ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ ಜಿ.ಎಸ್. ಮದಭಾವಿ ಅಭಿಪ್ರಾಯಪಟ್ಟರು.ಇಲ್ಲಿಯ ಕರ್ನಾಟಕ ಗಾಂಧಿ ಮಂಜಪ್ಪ ಹರ್ಡೇಕರ ಸ್ಮಾರಕದಲ್ಲಿ ಭಾನುವಾರ ಮಂಜಪ್ಪನವರ ಕಂಚಿನಪುತ್ಥಳಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.ಅವರು ಯಾವುದೇ ಮಠ ಮಾನ್ಯಗಳನ್ನು ಕಟ್ಟದೇ ಜನರಲ್ಲಿ ಶೈಕ್ಷಣಿಕ ಜಾಗೃತಿ, ವೈಚಾರಿಕ ಪ್ರಜ್ಞೆ, ಖಾದಿ ಬಳಕೆ, ಸ್ವ ಉದ್ಯೋಗ ಹೆಚ್ಚಿಸಲು ನೆರವಾದರು ಎಂದರು.೧೯೨೩ ರ ಕಾಲಘಟ್ಟದಲ್ಲಿಯೇ ಆಲಮಟ್ಟಿಯಲ್ಲಿ ಕಾಯಕ ತತ್ವದಡಿ ಶಾಲೆ ಸ್ಥಾಪಿಸಿ ಈ ಭಾಗದಲ್ಲಿ ಶೈಕ್ಷಣಿಕ ವಾತಾವರಣ ನಿರ್ಮಿಸಿ ನಾನಾ ವಿಧವಾದ ಪತ್ರಿಕೆಯನ್ನು ಆರಂಭಿಸಿ, ಖಾದಿವಾದವನ್ನು ಪ್ರಚುರಗೊಳಿಸಿದವರು ಮಂಜಪ್ಪನವರು ಎಂದರು.ಮಂಜಪ್ಪನವರ ಹಲವು ಕೃತಿಗಳು, ಅವರ ಮೂಲಕೃತಿಗಳನ್ನು ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿಡಲಾಗಿದೆ ಎಂದರು.ಮಂಜಪ್ಪ ಹರ್ಡೇಕರ ಸ್ಮಾರಕದ ಕಾರ್ಯದರ್ಶಿ ವಿ.ಎಂ. ಪಟ್ಟಣಶೆಟ್ಟಿ ಮಾತನಾಡಿ , ಈ ಬಾರಿ ಮಂಜಪ್ಪ ಹರ್ಡೇಕರ ಅವರು…
ಮುದ್ದೇಬಿಹಾಳ: ಚಿಕ್ಕ ವಯಸ್ಸಿನಲ್ಲಿ ನಿಮ್ಮ ಮಕ್ಕಳಿಗೆ ವಿವಾಹ ಮಾಡಲು ಮುಂದಾಗದೇ ಶಿಕ್ಷಣ ಕೊಡಿಸಬೇಕು ಎಂದು ಅಂಗನವಾಡಿ ಮೇಲ್ವಿಚಾರಕಿ ಶಾರದಾ ಪೂಜಾರಿ ಹೇಳಿದರು.ತಾಲೂಕಿನ ಚವನಭಾವಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಕಲಿಕೆಯ ಕುರಿತು ನಡೆದ ಪಾಲಕರ ಸಭೆಯಲ್ಲಿ ಅವರು ಮಾತನಾಡಿದರು.ಸರ್ಕಾರ ಬಾಲ್ಯ ವಿವಾಹವನ್ನು ತಡೆಯಲು ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳ ಪೈಕಿ ಉಚಿತ ಶಿಕ್ಷಣ ಪ್ರಮುಖವಾದದ್ದು. ಎಲ್ಲ ಮಕ್ಕಳಿಗೆ ಶಿಕ್ಷಣ ನೀಡಲು ಪಾಲಕರು ಮುಂದಾದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಬಹುದು. ೩ರಿಂದ೬ ವರ್ಷದೊಳಗಿನ ಮಕ್ಕಳನ್ನು ತಪ್ಪದೆ ಅಂಗನವಾಡಿ ಕೇಂದ್ರಕ್ಕೆ ಕಳುಹಿಸಲು ಮುಂದಾಗಬೇಕು ಎಂದರು.ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಆಂಜನೇಯ ಪವಾರ, ಬಸಮ್ಮ ಪಾಟೀಲ, ಲಕ್ಷ್ಮೀಬಾಯಿ ಪೂಜಾರಿ, ಬಸಮ್ಮ ಹೆಜೆಕಾರ, ಕಾವೇರಿ ಚಲವಾದಿ, ಪವಿತ್ರಾ ದೊಡಮನಿ, ನಿರ್ಮಾಲಾ ಚಲವಾದಿ, ಲಕ್ಷ್ಮೀ ಚಲವಾದಿ, ದೇವಮ್ಮ ಚಲವಾದಿ, ಹುಲಗಮ್ಮ ಚಲವಾದಿ, ಅಂಗನವಾಡಿ ಕೇಂದ್ರ ಕಾರ್ಯಕರ್ತೆ ಇಂದಿರಾ ಕುಂಬಾರ, ಅಂಗನವಾಡಿ ಕೇಂದ್ರ ಸಹಾಯಕಿರಾದ ಗೌರಮ್ಮ ನಾಲತವಾಡ, ಶ್ಯಾಂಭವಿ ಪಾಟೀಲ, ಆಶಾ ಕಾರ್ಯಕರ್ತೆ ಶಿವಲೀಲಾ ಪತ್ತಾರ ಇದ್ದರು.
ಮುದ್ದೇಬಿಹಾಳ: ಭಾರತೀಯ ಜನತಾ ಪಕ್ಷದ ನೂತನ ಜಿಲ್ಲಾ ಉಪಾಧ್ಯಕ್ಷರಾಗಿ ಎಂ.ಡಿ.ಕುಂಬಾರ ವಕೀಲರು, ಜಿಲ್ಲಾ ಕಾರ್ಯದರ್ಶಿಯಾಗಿ ಸಿದ್ದು ಹೆಬ್ಬಾಳ ಮತ್ತು ತಾಲೂಕು ಮಂಡಲ ಅಧ್ಯಕ್ಷರನ್ನಾಗಿ ಜಗದೀಶ ಪಂಪಣ್ಣವರ ಅವರನ್ನು ಆಯ್ಕೆ ಮಾಡಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಆದೇಶಿಸಿದ್ದಾರೆ.
ಇಂಡಿ: ತಾಲೂಕಿನ ಮಾವಿನಹಳ್ಳಿ ಗ್ರಾಮದ ಬಿಸಿಮಿಲ್ಲಾ ಸೈಪನಸಾಬ ನದಾಫ ಇವರು ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಅಡಿಯಲ್ಲಿ ಪ್ರತಿ ವರ್ಷಕ್ಕೆ ರೂ ೪೩೬ ರಂತೆ ಮೂರು ವರ್ಷಗಳ ವರೆಗೆ ವಿಮಾ ಪಾಲಸಿ ಕಂತು ಕಟ್ಟಿದ್ದರು.ಅವರ ಸಹಜ ಸಾವಿನ ನಿಮಿತ್ಯ ಅವರ ಪತಿ ಸೈಪನಸಾಬ ಇವರಿಗೆ ಎರಡು ಲಕ್ಷ ರೂ ಚೆಕ್ಕನ್ನು ಎಸ್‌ಬಿಐ ಆವರಣದಲ್ಲಿ ಮ್ಯಾನೆಜರ್ ರಾಮಸ್ವಾಮಿಯವರು ವಿತರಣೆ ಮಾಡಿದರು.ಎಸ್.ಬಿ.ಐ ಶಾಖಾ ಮುಖ್ಯ ಪ್ರಬಂಧಕ ಬಿ.ಜಿ.ರಾಮಸ್ವಾಮಿ ಮಾತನಾಡಿ, ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಅಡಿ ಪ್ರತಿ ವರ್ಷಕ್ಕೆ ೪೩೬ ರೂ ಕಟ್ಟಿದರೆ ಅವರ ಸಹಜ ಅಥವಾ ಯಾವದೇ ತರಹದ ಸಾವು ಆದರೆ ಅವರ ನಾಮ ನಿರ್ದೇಶಕರಿಗೆ ಎರಡು ಲಕ್ಷ ಮತ್ತು ಪಿಎಮ್‌ಎಸ್‌ಬಿವೈ ಯೋಜನೆ ಅಡಿ ಪ್ರತಿ ವರ್ಷ ರೂ ೨೦ ಕಟ್ಟಿದರೆ ಅಪಘಾತ ಉಂಟಾದರೆ ಅವರ ನಾಮ ನಿರ್ದೇಶಕರಿಗೆ ಎರಡು ಲಕ್ಷ ರೂ ಮತ್ತು ಎರಡೂ ಇನ್ಸುರೆನ್ಸ ಮಾಡಿದರೆ ನಾಲ್ಕು ಲಕ್ಷ ರೂ ಬರುತ್ತದೆ ಎಂದರು.ಮಹಾಂತೇಶ ಡೊಳ್ಳಿ,…
