ಮೋರಟಗಿ: ಇಂದಿನ ಸ್ಪರ್ಧಾ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಟ್ಟ ವಿದ್ಯಾರ್ಥಿಗಳ ಜೀವನ ಮಾತ್ರ ಮುಂದಿನ ದಿನಗಳಲ್ಲಿ ಉಜ್ವಜ ಭವಿಷ್ಯ ಕಂಡುಕೊಳ್ಳಲು ಸಾಧ್ಯವಾಗುತ್ತದೆ, ನಾವು ನೋಡಲು ಸುಂದರವಾಗಿದ್ದರೆ ಸಾಲದು, ನಮ್ಮ ಬದುಕು ಸುಂದರವಾಗಬೇಕೆಂದರೆ ಶಿಕ್ಷಣ ಅಗತ್ಯ, ಎಂದು ಅಭಿನವ ರುದ್ರಮುನಿ ಶಿವಾಚಾರ್ಯ ಕುಂಟೋಜಿ ಹಿರೇಮಠದ ಶ್ರೀ ಅಭಿಪ್ರಾಯ ವ್ಯಕ್ತಪಡಿಸಿದರು.
ರವಿವಾರ ಗ್ರಾಮದ ಕಲ್ಪವೃಕ್ಷ ಶಾಲೆಯಲ್ಲಿ ಕನ್ನಡ ಮಾಧ್ಯಮ ಪ್ರಾರ್ಥಮಿಕ, ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಶುಭೋಕೋರು ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಅಡಗಿರುವ ಅಜ್ಞಾನವನ್ನು ಅಳಿಸಿ ಸುಜ್ಞಾನದ ಬೀಜ ಬಿಟ್ಟುತ್ತಿರುವ ಶಿಕ್ಷರ ಪಾತ್ರ ಮಹತ್ವದ್ದು, ವಿದ್ಯೆಯೇ ಬಾಳಿನ ಬೆಳಕು ದಾನಗಳಲ್ಲಿ ವಿದ್ಯಾದಾನ ಕೂಡಾ ಶ್ರೇಷ್ಠವಾದುದ್ದು, ಶಿಕ್ಷಕರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆದು ಉತ್ತಮ ಸಂಸ್ಕಾರ ಕಲಿತುಕೊಂಡು ಸುಂದರವಾದ ಬದುಕು ಕಟ್ಟಿಕೊಳ್ಳಬೇಕು ಎಂದರು.
ನಂತರ ದೇವಣಗಾವ ಕ್ಷೇತ್ರದ ಮಾಜಿ ಜಿ. ಪಂ. ಸದಸ್ಯ ಯಶವಂತ್ರಾಯಗೌಡ ಪಾಟೀಲ್ ಮಾತನಾಡಿದರು.
ವಿಶೇಷ ಸನ್ಮಾನ: ಜೆಇಇ ಮೆನ್ಸ್ ಪರೀಕ್ಷೆಯಲ್ಲಿ ಶೇ.೯೨.೨೮ % ಫಲಿತಾಂಶ ಮಾಡಿ ಸಾಧನೆ ಮಾಡಿದ ಪಾಣಿಪುರಿ ವಿದ್ಯಾರ್ಥಿ ರಾಹುಲ್ ಬಗೇಲ್ ಗೆ ವಿಶೇಷವಾಗಿ ಸನ್ಮಾನಿಸಿ ಸಂಸ್ಥೆಯ ವತಿಯಿಂದ ಸಹಾಯದನ ನೀಡಲಾಯಿತು. ನಂತರ ವಿದ್ಯಾರ್ಥಿಗಳಿಂದ ವಿವಿಧ ರೀತಿಯ ರಸ ಮಂಜರಿ ಕಾರ್ಯಕ್ರಮ ನೃತ್ಯ ಸುಗಮ ಸಂಗೀತ ಜರುಗಿದವು.
ಸಂಸ್ಥಾಪಕ ಅಧ್ಯಕ್ಷ ಶಿವಶರಣಗೌಡ ಬಿರಾದಾರ, ಜನಪದ ಸಾಹಿತಿ ಉಪನ್ಯಾಸಕ ಗುರುರಾಜಾ ಕೆಂದೂಳಿ, ಸಿ. ಆರ್. ಪಿ. ರವಿ ಬಿರಾದಾರ, ಪ್ರಾಂಶುಪಾಲ ಎ.ಬಿ.ಸಿಂದಗಿ, ಪ್ರಾಚಾರ್ಯ ಎಸ್. ಬಿ. ಬಿರಾದಾರ, ಆಡಳಿತ ಅಧಿಕಾರಿ ಎಸ್ ಹೆಚ್ ಧೂಳಬಾ, ಸಮನ್ವಯ ಅಧಿಕಾರಿ ಎಸ್ ವ್ಹಿ ಬಿರಾದಾರ,ಎಸ್ ಎಂ ಲಂಗೋಟಿ, ಆರ್ ಐ ಚೌದರಿ, ಎಸ್ ಬಿ ತಮ್ಮಾಗೋಳ, ಜಿ. ಆರ್. ಧಾನಗೌಡ, ಜಿಲಾನಿ ನಾಗಾವಿ, ಸಿಬ್ಬಂದಿ ವರ್ಗ ಮತ್ತು ಆಡಳಿತ ಮಂಡಳಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

