ಮುದ್ದೇಬಿಹಾಳ: ಚಿಕ್ಕ ವಯಸ್ಸಿನಲ್ಲಿ ನಿಮ್ಮ ಮಕ್ಕಳಿಗೆ ವಿವಾಹ ಮಾಡಲು ಮುಂದಾಗದೇ ಶಿಕ್ಷಣ ಕೊಡಿಸಬೇಕು ಎಂದು ಅಂಗನವಾಡಿ ಮೇಲ್ವಿಚಾರಕಿ ಶಾರದಾ ಪೂಜಾರಿ ಹೇಳಿದರು.
ತಾಲೂಕಿನ ಚವನಭಾವಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಕಲಿಕೆಯ ಕುರಿತು ನಡೆದ ಪಾಲಕರ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರ ಬಾಲ್ಯ ವಿವಾಹವನ್ನು ತಡೆಯಲು ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳ ಪೈಕಿ ಉಚಿತ ಶಿಕ್ಷಣ ಪ್ರಮುಖವಾದದ್ದು. ಎಲ್ಲ ಮಕ್ಕಳಿಗೆ ಶಿಕ್ಷಣ ನೀಡಲು ಪಾಲಕರು ಮುಂದಾದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಬಹುದು. ೩ರಿಂದ೬ ವರ್ಷದೊಳಗಿನ ಮಕ್ಕಳನ್ನು ತಪ್ಪದೆ ಅಂಗನವಾಡಿ ಕೇಂದ್ರಕ್ಕೆ ಕಳುಹಿಸಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಆಂಜನೇಯ ಪವಾರ, ಬಸಮ್ಮ ಪಾಟೀಲ, ಲಕ್ಷ್ಮೀಬಾಯಿ ಪೂಜಾರಿ, ಬಸಮ್ಮ ಹೆಜೆಕಾರ, ಕಾವೇರಿ ಚಲವಾದಿ, ಪವಿತ್ರಾ ದೊಡಮನಿ, ನಿರ್ಮಾಲಾ ಚಲವಾದಿ, ಲಕ್ಷ್ಮೀ ಚಲವಾದಿ, ದೇವಮ್ಮ ಚಲವಾದಿ, ಹುಲಗಮ್ಮ ಚಲವಾದಿ, ಅಂಗನವಾಡಿ ಕೇಂದ್ರ ಕಾರ್ಯಕರ್ತೆ ಇಂದಿರಾ ಕುಂಬಾರ, ಅಂಗನವಾಡಿ ಕೇಂದ್ರ ಸಹಾಯಕಿರಾದ ಗೌರಮ್ಮ ನಾಲತವಾಡ, ಶ್ಯಾಂಭವಿ ಪಾಟೀಲ, ಆಶಾ ಕಾರ್ಯಕರ್ತೆ ಶಿವಲೀಲಾ ಪತ್ತಾರ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

