ಬಸವನಬಾಗೇವಾಡಿ: ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಅವರು ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ನಿವಾಸದಲ್ಲಿ ಭೇಟಿ ಮಾಡಿ ಔರಾದಕರ ವರದಿ ಅನುಷ್ಠಾನಗೊಳಿಸಿ ಆರಕ್ಷರಕ ಸಂಬಳ ಹೆಚ್ಚಿಸಬೇಕು, ಮೂರು ವರ್ಷ ಒಂದೇ ಕಡೆ ಸೇವೆ ಸಲ್ಲಿಸಿದ ಆರಕ್ಷಕರನ್ನು ಪತಿ, ಪತ್ನಿ ಪ್ರಕರಣದಲ್ಲಿ ಅಂತರ ಜಿಲ್ಲಾ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ನಂತರ ಸಚಿವರೊಂದಿಗೆ ಮಾತನಾಡಿ, ಹಿಂದಿನ ಪೊಲೀಸ್ ಮಹಾನಿರ್ದೇಶಕರಾಗಿದ್ದ ಔರಾದಕರ ಅವರು ರಾಜ್ಯ ಸರ್ಕಾರಕ್ಕೆ ವರದಿ ಶಿಪಾರಸ್ತು ಮಾಡಿದ್ದಾರೆ. ಇದುವರೆಗೆ ಅವರ ವರದಿ ಜಾರಿ ತಂದಿಲ್ಲ. ರಾಜ್ಯದ ನಾನಾ ಸರ್ಕಾರ ನೌಕರ ಬಾಂಧವರಿಗೆ, ಪೊಲೀಸ್ ಸಿಬ್ಬಂದಿಗಳ ಪಿಂಚಣಿ ಹೋಲಿಸಿದರೆ ವ್ಯತ್ಯಾಸವಿದೆ. ಇದರಿಂದಾಗಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರ ಮಲತಾಯಿ ಧೋರಣೆ ತೋರಿಸುತ್ತಿದೆ. ಹಗಲು-ರಾತ್ರಿ, ಮಳೆ-ಗಾಳಿ-ಚಳಿ ಎನ್ನದೇ ಪೊಲೀಸ್ ಇಲಾಖೆಯ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಾರೆ. ಇವರು ತಮ್ಮ ಬೇಡಿಕೆಗಾಗಿ ಹೋರಾಟ ಮಾಡುವಂತಿಲ್ಲ. ಒಂದೇ ವೇಳೆ ಹೋರಾಟ ಮಾಡಿದರೆ ಅಂತಹವರನ್ನು ಸೇವೆಯಿಂದ ವಜಾ ಮಾಡುತ್ತಾರೆ. ಇದರಿಂದಾಗಿ ಈ ಇಲಾಖೆಯ ಸಿಬ್ಬಂದಿಗಳಿಗೆ ಅನ್ಯಾಯವಾಗುತ್ತಿದೆ. ಸಚಿವರು ಕೂಡಲೇ ಔರಾದಕರ ವರದಿ ಜಾರಿಗೆ ತರುವ ಮೂಲಕ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ನ್ಯಾಯ ಒದಗಿಸಬೇಕು. ಅವರ ಪಿಂಚಣಿ ಹೆಚ್ಚಿಸಬೇಕು. ಪತಿ, ಪತ್ನಿ, ಪ್ರಕರಣದಡಿ ಮೂರು ವರ್ಷದವರೆಗೆ ಒಂದೇ ಸ್ಥಳದಲ್ಲಿ ಸೇವೆ ಸಲ್ಲಿಸಿದವರನ್ನು ಅಂತರ ಜಿಲ್ಲಾ ವರ್ಗಾವಣೆ ಮಾಡಬೇಕು. ಈ ಕುರಿತು ಗಂಡ-ಹೆಂಡರ ಮದ್ಯ ಜಗಳ ಉಂಟಾಗಿ ಎಷ್ಟೋ ಕುಟುಂಬಗಳು ವಿವಾಹ ವಿಚ್ಛೇದನ ಪಡೆದುಕೊಂಡಿರುವ ಪ್ರಕರಣಗಳು ನಡೆದಿವೆ. ಕೂಡಲೇ ಸಚಿವರು ಅಂತರ ಜಿಲ್ಲಾ ವರ್ಗಾವಣೆ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದೇನೆ ಎಂದು ಅರವಿಂದ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

