ಬಸವನಬಾಗೇವಾಡಿ: ಪಟ್ಟಣದ ಐತಿಹಾಸಿಕ ಮೂಲನಂದೀಶ್ವರ (ಬಸವೇಶ್ವರ) ದೇವಸ್ಥಾನದ ಹುಂಡಿಯನ್ನು ಶನಿವಾರ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತ ಬಸಪ್ಪ ಪೂಜಾರಿ ಸಮ್ಮುಖದಲ್ಲಿ ಸಿಬ್ಬಂದಿಗಳು ತೆಗೆದರು. ನಂತರ ದಾಸೋಹ ಭವನದಲ್ಲಿ ಎಣಿಕೆ ಕಾರ್ಯ ಜರುಗಿತು. ಇಂದು ರೂ.೮,೫೩,೫೩೦ ಹಣ ಸಂಗ್ರಹವಾದರೆ, ೩ ಗ್ರಾಂ, ೫೦೦ ಮಿಲಿ ಬಂಗಾರ, ೨೯೯ ಗ್ರಾಂ,೫೪೦ ಮಿಲಿ ಬೆಳ್ಳಿ ಸಂಗ್ರಹವಾಗಿದೆ. ಕಳೆದ ೨೦೨೩ ರ ಸೆ.೨೭ ರಂದು ಹುಂಡಿಯಿಂದ ರೂ.೬,೯೧,೨೩೩ ಸಂಗ್ರಹವಾಗಿತ್ತು. ಕಳೆದ ಬಾರಿಗಿಂತಲೂ ರೂ.೧.೫೦ ಲಕ್ಷಕ್ಕಿಂತಲೂ ಹೆಚ್ಚು ಹಣ ಸಂಗ್ರಹವಾಗಿದೆ.
ಎಣಿಕೆ ಕಾರ್ಯ ಸಂದರ್ಭದಲ್ಲಿ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಆಯುಕ್ತ ಬಸಪ್ಪ ಪೂಜಾರಿ, ಗ್ರೇಡ್-೨ ಪ್ರಭಾರಿ ತಹಸೀಲ್ದಾರ ಜೆ.ಎಸ್.ಚಿನಿವಾಲರ, ಲೆಕ್ಕ ಅಧಿಕ್ಷಕ ಬಿ.ಎಸ್.ಕಳ್ಳಿ, ಮುಖಂಡರಾದ ಬಸವರಾಜ ಹಾರಿವಾಳ, ಶೇಖರ ಗೊಳಸಂಗಿ, ಶೇಖರಗೌಡ ಪಾಟೀಲ, ಶಾಂತಪ್ಪ ಪಟ್ಟಣಶೆಟ್ಟಿ, ದೇವಸ್ಥಾನದ ಸಿಬ್ಬಂದಿಗಳಾದ ಎ.ಎಂ.ಸಿಂದಗಿ, ಉಮಾ, ಡಿ.ಎಸ್.ಹಿರೇಮಠ, ಸುರೇಶ ಪಡಶೆಟ್ಟಿ, ದೇವಸ್ಥಾನದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವೈ.ಎನ್.ಮಿಣಜಗಿ, ಎಸ್.ಎಸ್.ಹಡಪದ, ಬಿ.ಎಸ್.ನಂದಿಹಾಳ, ಎಸ್.ಎಸ್.ನಂದೈಗೋಳ, ಭಾರತೀಯ ಸ್ಟೇಟ್ ಬ್ಯಾಂಕಿನ ಸಿಬ್ಬಂದಿಗಳಾದ ಮೋಹನ ಭೂತನಾಳ, ಬಿ.ಎಂ.ಬೂಯ್ಯಾರ ಇತರರು ಇದ್ದರು.
ಪ್ರತಿ ಸಲ ಹುಂಡಿ ಎಣಿಕೆ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಿಂದ ಒಬ್ಬರು ಪೊಲೀಸ್ ಸಿಬ್ಬಂದಿ ಹಾಜರ್ ಇರುತ್ತಿದ್ದರು. ಈ ಸಲ ಯಾವ ಪೊಲೀಸ್ ಸಿಬ್ಬಂದಿ ಕಂಡುಬರಲಿಲ್ಲ.
Subscribe to Updates
Get the latest creative news from FooBar about art, design and business.
Related Posts
Add A Comment
