Subscribe to Updates
Get the latest creative news from FooBar about art, design and business.
Author: editor.udayarashmi@gmail.com
ದೇವರಹಿಪ್ಪರಗಿ: ದಿ:೨೧ ರಂದು ೧೧೦/೧೧ ಕೆ.ವ್ಹಿ ಅಸ್ಕಿ ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ ತುರ್ತು ಕಾಮಗಾರಿ ಕೈಗೊಂಡಿರುವುದರಿಂದ ಇದರ ಅಡಿಯಲ್ಲಿನ ೧೧ ಕೆ.ವ್ಹಿ ಫೀಡರ್‌ಗಳಲ್ಲಿ ಬೆಳಿಗ್ಗೆ ೧೦.೩೦ ರಿಂದ ಸಾಯಂಕಾಲ ೪ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.ದಿ:೨೨ ರಂದು ಬಸವನಬಾಗೇವಾಡಿ ಹಾಗೂ ಸಿಂದಗಿ ನಡುವಿನ ೨೨೦ ಕೆವ್ಹಿ ಲೈನ್ ಗೋಪುರ ನಿರ್ಮಾಣ ಕಾರ್ಯನಿಮಿತ್ತ ಸದರಿ ಪರಿವರ್ತಕದಿಂದ ಹೊರಹೊಮ್ಮುವ ದೇವರಹಿಪ್ಪರಗಿ ೧೧೦ ಕೆ.ವ್ಹಿ. ವಿದ್ಯುತ್ ವಿತರಣಾ ಕೇಂದ್ರದ ಅಡಿಯಲ್ಲಿನ ೧೧ ಕೆ.ವ್ಹಿ. ಫಿಡರಗಳಾದ ಕನ್ನೋಳ್ಳಿ ಆಯ್.ಪಿ. ಕನ್ನೋಳ್ಳಿ ಎನ್.ಜೆ.ವಾಯ್ ಮತ್ತು ಬಮ್ಮನಜೋಗಿ ಆಯ್.ಪಿ ಗಳಲ್ಲಿ ಬೆಳಿಗ್ಗೆ ೧೦ ಗಂಟೆಯಿಂದ ಸಾಯಂಕಾಲ ೫ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ ಆ ದಿನ ಸಾಯಂಕಾಲ ೫ ಗಂಟೆಯಿಂದ ರಾತ್ರಿ ೧೨ಗಂಟೆಯವರೆಗೆ ವಿದ್ಯುತ್ ಪೂರೈಕೆ ಮಾಡಲಾಗುವುದು. ಈ ಮಾರ್ಗದಲ್ಲಿ ಬರುವ ಎಲ್ಲ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇವರಹಿಪ್ಪರಗಿ: ಕನ್ನಡ ಸಾಹಿತ್ಯ ಲೋಕಕ್ಕೆ ವಚನಗಳ ಕೊಡುಗೆ ನೀಡಿದ ಸರ್ವಜ್ಞ ಸರ್ವಕಾಲಕ್ಕೂ ಸಲ್ಲುವ ಶ್ರೇಷ್ಠ ವಚನಕಾರನೆನಿಸಿದ್ದಾನೆ ಎಂದು ಕುಂಬಾರ ಸಮುದಾಯದ ಮುಖಂಡ ಶಿವಾನಂದ ಕುಂಬಾರ ಹೇಳಿದರು.ಪಟ್ಟಣದಲ್ಲಿ ಮಂಗಳವಾರ ಕವಿ ಸರ್ವಜ್ಞನ ಜಯಂತಿ ಅಂಗವಾಗಿ ತಾಲ್ಲೂಕು ಆಡಳಿತದಿಂದ ತಹಶೀಲ್ದಾರ ಕಾರ್ಯಾಲಯದಲ್ಲಿ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.ತನ್ನ ಜೀವಿತದ ಅವಧಿಯಲ್ಲಿ ಸಮಾಜದ ಅಂಕುಡೊಂಕುಗಳನ್ನು ಜನರ ಆಡುಭಾಷೆಯಲ್ಲಿ ತ್ರಿಪದಿಗಳ ಮೂಲಕ ತಿಳಿಸಿ, ತಿದ್ದುವ ಮೂಲಕ ಸರ್ವಜ್ಞ ಕವಿ ಸಮಾಜ ಸುಧಾರಕರು ಹೌದು ಎಂದರು.ಶಿರಸ್ತೇದಾರ ಡಿ.ಬಿ.ಭೋವಿ, ರಮೇಶ ಕುಂಬಾರ, ಅಕ್ಷಯ ಕುಂಬಾರ, ಪಿ.ಎಸ್.ಹುಡೇದ, ಸಂತೋಷ ಹೊಟಗಾರ, ಸಿ.ಎಚ್.ಪಡೇಕನೂರ, ಶಿವಶಂಕರ ಜಾಧವ, ಕಿಶೋರಕುಮಾರ ರಾಠೋಡ, ಕುಮಾರ ಅವರಾದಿ, ಮಹಾಂತೇಶ ಮನಗೂಳಿ, ಆಕಾಶ ಮೇತ್ರಿ, ಚನ್ನಬಸು ಹೊಸಮನಿ, ಆರ್.ಎಮ್.ಕಿಣಗಿ, ಸತೀಶ ಮಂಗಳವಾಡೆ ಇದ್ದರು.
ಮುದ್ದೇಬಿಹಾಳ: ಪಟ್ಟಣದ ನಾಲತವಾಡ ರಸ್ತೆಯಲ್ಲಿರುವ ಸರಕಾರಿ ಉರ್ದು ಪ್ರೌಢಶಾಲೆಯಲ್ಲಿ ಸಂತ ಕವಿ ಸರ್ವಜ್ಞರ ಜಯಂತಿಯನ್ನು ಆಚರಿಸಲಾಯಿತು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಎ.ಸಿ.ಕೆರೂರ, ಮುಖ್ಯ ಗುರು ಎಸ್.ವಿ.ಹಿರೇಮಠ, ಕೆ.ಎಸ್.ಚಟ್ಟಿ, ರೇಣುಕ್ಕವ್ವಾ ಎಸ್.ಬಿ, ತಬಸ್ಸುಮ ನಾಗರಬಾವಡಿ, ಯಾಸ್ಮೀನ ಮೊಘಲಾಯಿ, ಸಂತೋಷ ಬಿದರಿ, ಮಹಾನಂದಾ ಹತ್ತರಕಿಹಾಳ ಸೇರಿದಂತೆ ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿನಿ ಅಪ್ಸಾ ಬಿಜ್ಜರಗಿ ಕುರಾಣ ಪಠಿಸಿದಳು, ಸ್ವಾಲೇಹಾ ದೇಸಾಯಿ ಹಮ್ದ, ಮುಸಬ್ಬಿಯಾ ಮುರಾಳ ನಾಥ ಇದ್ದರು.
ವಿಜಯಪುರ: ನಗರದಲ್ಲಿರುವ ಐತಿಹಾಸಿಕ ಬಾವಿಯಾದ ತಾಜಬಾವಡಿ ಸ್ಮಾರಕವನ್ನು ಟಿ.ಭೂಬಾಲನ್ ಮಾನ್ಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ಮಂಗಳವಾರ ಸ್ಥಳ ಪರಿಶೀಲನೆ ಮಾಡಿದರು. ರಾಜ್ಯದ ಸ್ಮಾರಕ ಸಂರಕ್ಷಣೆ ಮತ್ತು ಮೂಲಭೂತ ಸೌಕರ್ಯಗಳ/ನ್ನು ಒದಗಿಸಿ ಸ್ಮಾರಕಗಳನ್ನು ಅಭಿವೃದ್ಧಿ ಪಡಿಸಿ ಕಾರ್ಫರೇಟ್ ಸಾಮಾಜಿಕ ಹೊಣೆಗಾರಿಕೆ (ಅSಖ) ಅಡಿಯಲ್ಲಿ ಸ್ಮಾರಕಗಳ ದತ್ತು ಪಡೆಯಲು ಅವಕಾಶವನ್ನು ಕಲ್ಪಿಸಿ ದತ್ತು ಯೋಜನೆಯನ್ನು ಜಾರಿಗೊಳಿಸಲಾಗಿರುತ್ತದೆ.ಸದರಿ Adopt A monument ಯೋಜನೆಯಡಿ ತಾಜಬಾವಡಿ ಸ್ಮಾರಕವನ್ನು World Monument Fund India Associations Mumbai ಸಂಸ್ಥೆಯು ದತ್ತು ಪಡೆದಿದ್ದು, ಈ ಸ್ಮಾರಕದಲ್ಲಿ ಸಂರಕ್ಷಣೆ ಮತ್ತು ಪ್ರವಾಸಿ ಮೂಲಭೂತ ಸೌಕರ್ಯಗಳು, ಸೌಂದರೀಕರಣ, ಸುಧಾರಿತ ಪ್ರವಾಸಿ ಸೌಕರ್ಯಗಳನ್ನು ಒದಗಿಸಿ ದೇಶ-ವಿದೇಶದ ಪ್ರವಾಸಿಗರನ್ನು ಆಕರ್ಷಿಸಿಲು ವಿವಿಧ ಯೋಜನೆ ಹಮ್ಮಿಕೊಂಡಿರುತ್ತಾರೆ. ಸದರಿ ವಿಷಯವಾಗಿ ಮಾನ್ಯ ಜಿಲ್ಲಾಧಿಕಾರಿಗಳು ತಾಜಬಾವಡಿ ಸ್ಮಾರಕದ ಸುತ್ತ-ಮುತ್ತಲಿರುವ ಪ್ರದೇಶಗಳಿಗೆ ಭೇಟಿ ನೀಡಿ ನಿವಾಸಿಗಳ ಜೊತೆ ಸಮಾಲೋಚನೆ ಮಾಡಿದರು ಹಾಗೂ ತಾಜಬಾವಡಿ ಸ್ಮಾರಕದ ಸುತ್ತಮುತ್ತಲಿರುವ ಶಿಥಿಲಾವಸ್ಥೆಯಲ್ಲಿರುವ ಗೋಡೆಗಳನ್ನು ಸಂರಕ್ಷಿಸಲು, ಸ್ಮಾರಕ ಅಭಿವೃದ್ಧಿಗೆ ಹಾಗೂ ಮೂಲಭೂತ ಸೌಕರ್ಯ ಒದಗಿಸಲು ಸಂಬAಧಪಟ್ಟ ಅಧಿಕಾರಿಗಳೊಂದಿಗೆ…
ವಿಜಯಪುರ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ವತಿಯಿಂದ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಫೆ.೨೧, ೨೨ ಹಾಗೂ ೨೩ರಂದು ಮೂರು ದಿನಗಳವರೆಗೆ ಬೆಳಿಗ್ಗೆ ೧೦ ರಿಂದ ರಾತ್ರಿ ೯ ಗಂಟೆಯವರೆಗೆ ಸಿದ್ಧ ಉಡುಪು, ಆಹಾರ ವಸ್ತುಗಳು, ಆಯುರ್ವೇದಿಕ ವಸ್ತುಗಳು, ಅಗರಬತ್ತಿ, ಆಟಿಕೆ ವಸ್ತುಗಳ ಮಾರಾಟ ಮೇಳ ಹಾಗೂ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.ಈ ಮೇಳದಲ್ಲಿ ಗ್ರಾಹಕರು ಉತ್ಪಾದಕರಿಂದ ನೇರವಾಗಿ ವಸ್ತುಗಳನ್ನು ಖರೀದಿಸಬಹುದಾಗಿದೆ. ಉದ್ದಿಮೆ ಆರಂಭಿಸಲು ಆಸಕ್ತಿವುಳ್ಳವರಿಗೆ ಉಚಿತವಾಗಿ ಮಾಹಿತಿಯನ್ನು ಮೇಳದಲ್ಲಿ ನೀಡಲಾಗುವುದು. ಮಾರುಕಟ್ಟೆ ವೃದ್ಧಿಗಾಗಿ ನುರಿತ ಅನುಭವಿಗಳಿಂದ ಉಚಿತವಾಗಿ ಸಲಹೆ-ಸೂಚನೆ ಒದಗಿಸಲಾಗುವುದು. ಸಾರ್ವಜನಿಕರು ಮಾರಾಟ ಹಾಗೂ ವಸ್ತು ಪ್ರದರ್ಶನದ ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಬೆಂಗಳೂರು ಅರಮನೆ ಮೈದಾನದಲ್ಲಿ ಫೆ.೨೬ ಹಾಗೂ ಫೆ.೨೭ರವರಗೆ ಎರಡು ದಿನಗಳ ಕಾಲ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಲಾಗಿದೆ.ಉದ್ಯೋಗ ಮೇಳಕ್ಕೆ ಮತ್ತು ೫೦೦ಕ್ಕೂ ಹೆಚ್ಚು ವಿವಿಧ ಬೃಹತ್, ಮಧ್ಯಮ, ಸಣ್ಣ ಮತ್ತು ಇತರೆ ವಲಯದ ಉದ್ಯೋಗದಾತ ಸಂಸ್ಥೆಗಳು ಭಾಗವಹಿಸಲಿವೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ನರ್ಸಿಂಗ್, ಸ್ನಾತಕ್ಕೋತ್ತರ ಪದವಿ, ಇಂಜನೀಯರಿಂಗ್ ಮತ್ತು ವಿವಿಧ ವಿದ್ಯಾರ್ಹತೆಯುಳ್ಳ ಉದ್ಯೋಗಾಕಾಂಕ್ಷಿಗಳು ಈ ಮೇಳದಲ್ಲಿ ಭಾಗವಹಿಸಿ ತಮಗೆ ಆಸಕ್ತಿಯಿರುವ ಕ್ಷೇತ್ರದಲ್ಲಿ ಉದ್ಯೋಗವನ್ನು ಪಡೆದುಕೊಳ್ಳಬಹುದಾಗಿದೆ.ಜಿಲ್ಲೆಯ ಆಸಕ್ತ ಅಭ್ಯರ್ಥಿಗಳು http:/skillconnect.kaushalkar.com ಗೆ ಭೇಟಿ ನೀಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.ಮೇಳಕ್ಕೆ ಆಗಮಿಸುವ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳೊಂದಿಗೆ ಭಾಗವಹಿಸಿಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿ ದೂ: ೦೮೩೫೨-೨೯೭೦೧೯, ಸಹಾಯವಾಣಿ ಸಂಖ್ಯೆ:೧೮೦೦೫೯೯೯೯೧೮ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಸರ್ವಜ್ಞ ಜನರ ಮಧ್ಯೆ ಬದುಕಿದ ಜನಸಾಮಾನ್ಯರ ಕವಿ. ಅವರು ತಮ್ಮ ತ್ರಿಪದಿಗಳ ಮೂಲಕ ಅತ್ಯಂತ ಸರಳವಾಗಿ ತತ್ವಾದರ್ಶಗಳನ್ನು ನೀಡಿದ್ದಾರೆ. ಅವರ ವಚನಗಳ ಸಾರವನ್ನು ಅರಿತುಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.ಮಂಗಳವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಹಮ್ಮಿಕೊಂಡ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಆಡುಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಹೇಳದ ವಿಷಯಗಳಿಲ್ಲ. ಕೃಷಿ, ಸಂಸಾರ, ಅನಿಷ್ಠ ಪದ್ಧತಿ, ಸಮಾಜದ ಪರಿಕಲ್ಪನೆ ಹೀಗೆ ಅನೇಕ ವಿಷಯಗಳ ಮೇಲೆ ತ್ರಿಪದಿಗಳನ್ನು ರಚಿಸಿದ್ದಾರೆ. ಮೂರೇ ಸಾಲಿನಲ್ಲಿ ಅಗಾಧವಾದ ಸಂದೇಶ ಕೊಡುವ ವಚನಗಳನ್ನು ರಚಿಸಿ ಈ ನಾಡಿಗೆ ಮಹತ್ವಪೂರ್ಣ ಕೊಡುಗೆ ನೀಡಿದ್ದಾರೆ.ತ್ರಿಪದಿಗಳು ತಮ್ಮ ಸರಳತೆ ಮತ್ತು ಪ್ರಾಸಬದ್ಧತೆಯಿಂದ ಜನಪ್ರಿಯವಾಗಿವೆ ಎಂದು ಹೇಳಿದರು.ಹೊನ್ನುಟಗಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಬಸವರಾಜ ಕುಂಬಾರ ಅವರು ವಿಶೇಷ ಉಪನ್ಯಾಸ ನೀಡಿ, ಸರ್ವರೊಳಗೊಂದು ನುಡಿಯ ಕಲಿತು ವಿದ್ಯೆಯ ಪರ್ವತವೇ ಆದವರು ಸರ್ವಜ್ಞ. ಅವರು…
ಮರಾಠ ಸಮುದಾಯಕ್ಕೆ ಶೇ.10ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆ | ಸರ್ವಾನುಮತದಿಂದ ಅಂಗೀಕಾರ ಮುಂಬಯಿ: ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗ ಎರಡರಲ್ಲೂ ಮರಾಠ ಸಮುದಾಯಕ್ಕೆ ಶೇ.10ರಷ್ಟು ಮೀಸಲಾತಿ ಕಲ್ಪಿಸುವ ಮರಾಠ ಮೀಸಲಾತಿ ಮಸೂದೆಯನ್ನು ಮಹಾರಾಷ್ಟ್ರ ವಿಧಾನಸಭೆ ಇಂದು ಸರ್ವಾನುಮತದಿಂದ ಅಂಗೀಕರಿಸಿದೆ. ಮಹಾರಾಷ್ಟ್ರ ರಾಜ್ಯ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಮಸೂದೆ 2024, ಒಮ್ಮೆ ಜಾರಿಗೆ ಬಂದರೆ, ಒಂದು ದಶಕದ ಅನುಷ್ಠಾನದ ನಂತರ ಸಂಪೂರ್ಣ ಪರಿಶೀಲನೆಗೆ ಒಳಪಡುತ್ತದೆ.ಸುಮಾರು 2.5 ಕೋಟಿ ಕುಟುಂಬಗಳನ್ನು ಒಳಗೊಂಡ ಸಮೀಕ್ಷೆಯ ಆಧಾರದ ಮೇಲೆ ಮಹಾರಾಷ್ಟ್ರ ರಾಜ್ಯ ಹಿಂದುಳಿದ ವರ್ಗ ಆಯೋಗವು ಸಲ್ಲಿಸಿದ ಸಮಗ್ರ ವರದಿಯನ್ನು ಈ ನಿರ್ಧಾರ ಅನುಸರಿಸಿದೆ. ಈ ಸಮೀಕ್ಷೆಯು ರಾಜ್ಯದಲ್ಲಿ ಮರಾಠ ಸಮುದಾಯ ಎದುರಿಸುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಸೂಕ್ಷ್ಮವಾಗಿ ಪರಿಶೋಧಿಸುತ್ತದೆ.ವರದಿಯ ಪ್ರಕಾರ, ಮಹಾರಾಷ್ಟ್ರದ ಜನಸಂಖ್ಯೆಯಲ್ಲಿ ಮರಾಠಾ ಸಮುದಾಯವು ಗಮನಾರ್ಹ ಶೇಕಡಾ 28 ರಷ್ಟಿದೆ. ‘ಸುಮಾರು 2-2.5 ಕೋಟಿ ಜನರ ಮೇಲೆ ಸಮೀಕ್ಷೆ ನಡೆಸಲಾಗಿದೆ. ಫೆಬ್ರವರಿ 20 ರಂದು ನಾವು ವಿಧಾನಸಭೆಯ ವಿಶೇಷ ಅಧಿವೇಶನವನ್ನು…
ಇಂದು ಕನ್ನಡದ ಜಗದ್ಗುರು ತೋಂಟದ ಸಿದ್ಧಲಿಂಗ ದೇವರ ಜನ್ಮದಿನದ ಸ್ಮರಣೆ.. – ರಂಗನಾಥ ಥೊರ್ಪೆ, ಸಿಂದಗಿ ಸಿದ್ದರಾಮರಿಗೆ ಪ್ರಾಥಮಿಕ ಶಾಲಿಯಲ್ಲಿ ಕನ್ನಡ ಅಕ್ಷರಗಳ ಶ್ರೀಕಾರ ಹಾಕಿದವರು ಗುರುಗಳಾದ ಶ್ರೀ ಸಿ.ಮ.ಮಣೂರ ಅವರು. ತಮ್ಮ ಪ್ರೌಢ ಶಿಕ್ಷಣದ ಹಂತದಲ್ಲಿ, ಪಠ್ಯ ವಿಷಯದ ಹೊರತಾಗಿಯೂ ಬೇರೆ ಬೇರೆ ವಿಷಯಗಳ ಓದಿನ ಕಡೆ ಗಮನ ಹರಿಸತೊಡಗಿದನು. ಅವರ ಓದುವ ಹುಚ್ಚು ಎಷ್ಟಿತ್ತೆಂದರೆ, ಕಿರಾಣಿ ಅಂಗಡಿಯವರು ಕಟ್ಟಿಕೊಡುವ ಬೆಲ್ಲ, ಸಕ್ಕರೆ, ಚಹಾಪುಡಿ, ಪೊಟ್ಟಣಗಳ ಕಾಗದದ ಚೂರನ್ನು ಸೀದಾಮಾಡಿ ಅದರ ಮೇಲಿನ ಸಾಹಿತ್ಯ ಓದುತ್ತಿದ್ದನು. ‘ಬಾಲಮಿತ್ರ’ ‘ಚಂದಮಾಮ’ ಪತ್ರಿಕೆಗಳ ಪುಟ ಯಾವುದಾದರೂ ಬಂದರಂತೂ ಅದನ್ನು ಓದಿ ಜೋಡಿಸುತ್ತಿದ್ದ. ಅದರಲ್ಲಿ ಬಂದ ವಿಷಯ ಅರ್ಧಮರ್ಧ ತಿಳಿದು ಮುಂದೇನಾಯಿತು? ಈ ಪುಟದ ಹಿಂದಿನ ವಿಷಯ ಏನಿದ್ದಿರಬಹುದು! ಎಂದು ತಡಬಡಿಸುತ್ತಿದ್ದ. ದೊಡ್ಡಪ್ಪ ಶಾಂತವೀರ ಪಟ್ಟಾಧ್ಯಕ್ಷರು ಯಾವಾಗಲೂ ಓದಿನಲ್ಲಿ ನಿರತರಾಗಿರುತ್ತಿದ್ದರೂ ಅವರ ಓದಿನ ಪುಸ್ತಕಗಳು ಬೇರೆಯೇ ಆಗಿರುತ್ತಿದ್ದವು. ಇವರ ಸಲುವಾಗಿ ಸಿದ್ಧರಾಮನ ಓದಿನ ಆಸಕ್ತಿಗೆ ಅವರು ನೀರೆರೆದು ಪೋಷಿಸಿದರು. ಅವರಿಗೆ ಬೇಕಾದ ಪತ್ರಿಕೆ, ಸಾಹಿತ್ಯದ…
ನವದೆಹಲಿ: ಇಂದು, ದೇಶದಲ್ಲಿ ಬಂಡಾಯ, ಭಯೋತ್ಪಾದನೆ ಮತ್ತು ನಕ್ಸಲಿಸಂ ಕೊನೆಯ ಉಸಿರನ್ನು ಎಣಿಸುತ್ತಿದೆ. ಮೋದಿ ಸರ್ಕಾರದ ಮೂರನೇ ಅವಧಿಯಲ್ಲಿ ದೇಶವು ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ನಕ್ಸಲಿಸಂನಿಂದ ಸಂಪೂರ್ಣ ಮುಕ್ತವಾಗಲಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದರು.ದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.2024ರಲ್ಲಿ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ದೇಶವೀಗ ನಿರ್ಧರಿಸಿದೆ. ಚುನಾವಣೆಗೂ ಮುನ್ನ ನಡೆಯುತ್ತಿರುವ ಈ ರಾಷ್ಟ್ರೀಯ ಸಮಾವೇಶದ ಗುರಿ, 2047ರ ವೇಳೆಗೆ ಪ್ರಧಾನಿ ಮೋದಿಯವರ ಅಭಿವೃದ್ಧಿ ಹೊಂದಿದ ಭಾರತದ ಲಕ್ಷ್ಯಕ್ಕಾಗಿ ನಮ್ಮ ಬದ್ಧತೆಯನ್ನು ತೋರಿಸುವುದಕ್ಕಾಗಿ. ಈ ಸಂದೇಶದೊಂದಿಗೆ ನಮ್ಮ ಪಕ್ಷವು ದೇಶದ ಪ್ರತಿಯೊಂದು ಭಾಗವನ್ನು ತಲುಪಲಿದೆ. ಬಿಜೆಪಿ ಮೂರನೇ ಬಾರಿಗೆ ಗೆದ್ದು ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.ಜಮ್ಮು ಮತ್ತು ಕಾಶ್ಮೀರದಿಂದ 370ನೇ ವಿಧಿಯನ್ನು ರದ್ದುಗೊಳಿಸಿದಾಗ ಪ್ರತಿಪಕ್ಷಗಳು ಸಾಕಷ್ಟು ಗದ್ದಲವೆಬ್ಬಿಸಿದ್ದವು. ಆದಾಗ್ಯೂ, ಇಂದು, ವಿಧಿ 370ನ್ನು ತೆಗೆದುಹಾಕಿದ ನಂತರ ಜಮ್ಮು ಮತ್ತು ಕಾಶ್ಮೀರವು ಹೊಸ ಬದಲಾವಣೆಗಳೊಂದಿಗೆ…
