ದೇವರಹಿಪ್ಪರಗಿ: ಕನ್ನಡ ಸಾಹಿತ್ಯ ಲೋಕಕ್ಕೆ ವಚನಗಳ ಕೊಡುಗೆ ನೀಡಿದ ಸರ್ವಜ್ಞ ಸರ್ವಕಾಲಕ್ಕೂ ಸಲ್ಲುವ ಶ್ರೇಷ್ಠ ವಚನಕಾರನೆನಿಸಿದ್ದಾನೆ ಎಂದು ಕುಂಬಾರ ಸಮುದಾಯದ ಮುಖಂಡ ಶಿವಾನಂದ ಕುಂಬಾರ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಕವಿ ಸರ್ವಜ್ಞನ ಜಯಂತಿ ಅಂಗವಾಗಿ ತಾಲ್ಲೂಕು ಆಡಳಿತದಿಂದ ತಹಶೀಲ್ದಾರ ಕಾರ್ಯಾಲಯದಲ್ಲಿ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ತನ್ನ ಜೀವಿತದ ಅವಧಿಯಲ್ಲಿ ಸಮಾಜದ ಅಂಕುಡೊಂಕುಗಳನ್ನು ಜನರ ಆಡುಭಾಷೆಯಲ್ಲಿ ತ್ರಿಪದಿಗಳ ಮೂಲಕ ತಿಳಿಸಿ, ತಿದ್ದುವ ಮೂಲಕ ಸರ್ವಜ್ಞ ಕವಿ ಸಮಾಜ ಸುಧಾರಕರು ಹೌದು ಎಂದರು.
ಶಿರಸ್ತೇದಾರ ಡಿ.ಬಿ.ಭೋವಿ, ರಮೇಶ ಕುಂಬಾರ, ಅಕ್ಷಯ ಕುಂಬಾರ, ಪಿ.ಎಸ್.ಹುಡೇದ, ಸಂತೋಷ ಹೊಟಗಾರ, ಸಿ.ಎಚ್.ಪಡೇಕನೂರ, ಶಿವಶಂಕರ ಜಾಧವ, ಕಿಶೋರಕುಮಾರ ರಾಠೋಡ, ಕುಮಾರ ಅವರಾದಿ, ಮಹಾಂತೇಶ ಮನಗೂಳಿ, ಆಕಾಶ ಮೇತ್ರಿ, ಚನ್ನಬಸು ಹೊಸಮನಿ, ಆರ್.ಎಮ್.ಕಿಣಗಿ, ಸತೀಶ ಮಂಗಳವಾಡೆ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

