ವಿಜಯಪುರ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ವತಿಯಿಂದ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಫೆ.೨೧, ೨೨ ಹಾಗೂ ೨೩ರಂದು ಮೂರು ದಿನಗಳವರೆಗೆ ಬೆಳಿಗ್ಗೆ ೧೦ ರಿಂದ ರಾತ್ರಿ ೯ ಗಂಟೆಯವರೆಗೆ ಸಿದ್ಧ ಉಡುಪು, ಆಹಾರ ವಸ್ತುಗಳು, ಆಯುರ್ವೇದಿಕ ವಸ್ತುಗಳು, ಅಗರಬತ್ತಿ, ಆಟಿಕೆ ವಸ್ತುಗಳ ಮಾರಾಟ ಮೇಳ ಹಾಗೂ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಈ ಮೇಳದಲ್ಲಿ ಗ್ರಾಹಕರು ಉತ್ಪಾದಕರಿಂದ ನೇರವಾಗಿ ವಸ್ತುಗಳನ್ನು ಖರೀದಿಸಬಹುದಾಗಿದೆ. ಉದ್ದಿಮೆ ಆರಂಭಿಸಲು ಆಸಕ್ತಿವುಳ್ಳವರಿಗೆ ಉಚಿತವಾಗಿ ಮಾಹಿತಿಯನ್ನು ಮೇಳದಲ್ಲಿ ನೀಡಲಾಗುವುದು. ಮಾರುಕಟ್ಟೆ ವೃದ್ಧಿಗಾಗಿ ನುರಿತ ಅನುಭವಿಗಳಿಂದ ಉಚಿತವಾಗಿ ಸಲಹೆ-ಸೂಚನೆ ಒದಗಿಸಲಾಗುವುದು. ಸಾರ್ವಜನಿಕರು ಮಾರಾಟ ಹಾಗೂ ವಸ್ತು ಪ್ರದರ್ಶನದ ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
