ದೇವರಹಿಪ್ಪರಗಿ: ದಿ:೨೧ ರಂದು ೧೧೦/೧೧ ಕೆ.ವ್ಹಿ ಅಸ್ಕಿ ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ ತುರ್ತು ಕಾಮಗಾರಿ ಕೈಗೊಂಡಿರುವುದರಿಂದ ಇದರ ಅಡಿಯಲ್ಲಿನ ೧೧ ಕೆ.ವ್ಹಿ ಫೀಡರ್‌ಗಳಲ್ಲಿ ಬೆಳಿಗ್ಗೆ ೧೦.೩೦ ರಿಂದ ಸಾಯಂಕಾಲ ೪ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ದಿ:೨೨ ರಂದು ಬಸವನಬಾಗೇವಾಡಿ ಹಾಗೂ ಸಿಂದಗಿ ನಡುವಿನ ೨೨೦ ಕೆವ್ಹಿ ಲೈನ್ ಗೋಪುರ ನಿರ್ಮಾಣ ಕಾರ್ಯನಿಮಿತ್ತ ಸದರಿ ಪರಿವರ್ತಕದಿಂದ ಹೊರಹೊಮ್ಮುವ ದೇವರಹಿಪ್ಪರಗಿ ೧೧೦ ಕೆ.ವ್ಹಿ. ವಿದ್ಯುತ್ ವಿತರಣಾ ಕೇಂದ್ರದ ಅಡಿಯಲ್ಲಿನ ೧೧ ಕೆ.ವ್ಹಿ. ಫಿಡರಗಳಾದ ಕನ್ನೋಳ್ಳಿ ಆಯ್.ಪಿ. ಕನ್ನೋಳ್ಳಿ ಎನ್.ಜೆ.ವಾಯ್ ಮತ್ತು ಬಮ್ಮನಜೋಗಿ ಆಯ್.ಪಿ ಗಳಲ್ಲಿ ಬೆಳಿಗ್ಗೆ ೧೦ ಗಂಟೆಯಿಂದ ಸಾಯಂಕಾಲ ೫ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ ಆ ದಿನ ಸಾಯಂಕಾಲ ೫ ಗಂಟೆಯಿಂದ ರಾತ್ರಿ ೧೨ಗಂಟೆಯವರೆಗೆ ವಿದ್ಯುತ್ ಪೂರೈಕೆ ಮಾಡಲಾಗುವುದು. ಈ ಮಾರ್ಗದಲ್ಲಿ ಬರುವ ಎಲ್ಲ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
