Subscribe to Updates
Get the latest creative news from FooBar about art, design and business.
Author: editor.udayarashmi@gmail.com
Udayarashmi kannada daily newspaper
ಕಾಂಗ್ರೆಸ್ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ | ಕಾಂಗ್ರೆಸ್ ನೀಡಿದ ಐದು ಭರವಸೆಗಳು ವಿಫಲ ಬೆಂಗಳೂರು: ನವೆಂಬರ್‌ನಲ್ಲಿ ನಡೆಯಲಿರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ, ಕಾಂಗ್ರೆಸ್ ತನ್ನ ಚುನಾವಣಾ ಪ್ರಚಾರದಲ್ಲಿ ಕರ್ನಾಟಕದಲ್ಲಿ ತಮ್ಮ ಗ್ಯಾರಂಟಿಗಳ ಉದಾಹರಣೆಯನ್ನು ಉಲ್ಲೇಖಿಸುತ್ತಿದೆ, ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳು ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದರು.ಕರ್ನಾಟಕದಲ್ಲಿ ಚುನಾವಣೆಗೂ ಮುನ್ನ ಕಾಂಗ್ರೆಸ್ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದು, ಈ ಎಲ್ಲ ಯೋಜನೆಗಳನ್ನು ದೇಶದಾದ್ಯಂತ ವಿಸ್ತರಿಸಿ ಜನರ ಮತ ಪಡೆಯಲು ಮುಂದಾಗಿದ್ದು, ಕರ್ನಾಟಕದಲ್ಲಿ ಈ ಐದು ಭರವಸೆಗಳು ವಿಫಲವಾಗಿವೆ ಎಂದು ಹೇಳಿದರು.ಭಾನುವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸಾಮಾನ್ಯ ನಾಗರಿಕರ ಹೆಸರಿನಲ್ಲಿ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.”ಖಾತರಿ ಯೋಜನೆಗಳ ಹೆಸರಿನಲ್ಲಿ, ಈ ಕರ್ನಾಟಕ ಸರ್ಕಾರ ಸಾಮಾನ್ಯ ನಾಗರಿಕರ ಹೆಸರಿನಲ್ಲಿ ಹಣವನ್ನು ದುರ್ಬಳಕೆ ಮಾಡುತ್ತಿದೆ” ಎಂದು ಕುಮಾರಸ್ವಾಮಿ ಹೇಳಿದರು.ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರವು ರೈತರಿಗೆ ನೀಡುತ್ತಿದ್ದ ವಿತ್ತೀಯ ಸವಲತ್ತುಗಳನ್ನು ಕಾಂಗ್ರೆಸ್ ಸರ್ಕಾರ ನೀಡುತ್ತಿಲ್ಲ ಎಂದು…
ವಿಜಯಪುರ: ಚುನಾವಣೆಗಳು ಪ್ರಜಾಪ್ರಭುತ್ವನ್ನು ಗಟ್ಟಿಗೊಳಿಸುತ್ತವೆ. ಈ ಪ್ರಕ್ರಿಯೆಯಲ್ಲಿ ಎಲ್ಲರೂ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸಬೇಕು ಎಂದು ತಿಕೋಟಾ ಬಿ. ಎಲ್. ಡಿ. ಇ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಪ್ರಕಾಶ ಸಿದ್ದಾಪೂರ ಹೇಳಿದ್ದಾರೆ.ತಿಕೋಟಾ ಪಟ್ಟಣದಲ್ಲಿರುವ ಬಿ. ಎಲ್. ಡಿ. ಇ ನರ್ಸಿಂಗ್ ಕಾಲೇಜಿನಲ್ಲಿ ಗುರುವಾರ ಚುನಾವಣೆ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ರಸಪ್ರಶ್ನೆ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.ಚುನಾವಣೆ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅವರು, ಮತದಾನ ಪ್ರತಿಯೊಬ್ಬರ ಹಕ್ಕು. ಎಲ್ಲರೂ ನರ್ಸಿಂಗ್ ವಿದ್ಯಾರ್ಥಿಗಳೂ ಕೂಡ ಈ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿ ಮತದಾನ ಪ್ರಮಾಣ ಹೆಚ್ಚಿಗೆ ಮಾಡಲು ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ನರ್ಸಿಂಗ್ ತರಗತಿಯ ಮೊದಲನೇ ಸೆಮಿಸ್ಟರ್ ಸಂಯೋಜಕಿ ಗೀತಾಂಜಲಿ ಕೊಣ್ಣೂರ, ರಾಣುಬಾಯಿ ಸೂರ್ಯವಂಶಿ ಮುಂತಾದವರು ಉಪಸ್ಥಿತರಿದ್ದರು.ತಿಕೋಟಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಈ ನಡೆದ ಈ ಕಾರ್ಯಕ್ರಮವನ್ನು ರಸಪ್ರಶ್ನೆ ಸ್ಪರ್ಧೆಯ ಸಂಚಾಲಕ ಎಂ. ಬಿ. ತಡಲಗಿ ನಡೆಸಿಕೊಟ್ಟರು.ಈ ಕಾರ್ಯಕ್ರಮದಲ್ಲಿ ತಲಾ ಇಬ್ಬರಂತೆ ಒಟ್ಟು 10…
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ “‘ಬ್ರಹ್ಮಾಂಡ ಗುರೂಜಿ ” ಎಂದು ಕರೆಯಲ್ಪಡುವ ನರೇಂದ್ರ ಬಾಬು ಶರ್ಮ ಎಂಬ ವ್ಯಕ್ತಿ ಮತ್ತು ಆ ರೀತಿಯ ಕೆಲವು ಜ್ಯೋತಿಷಿಗಳು ಬಹುತೇಕ ಅನೇಕ ಕನ್ನಡ ಟಿವಿ ಸುದ್ದಿ ಮಾಧ್ಯಮಗಳಲ್ಲಿ ಅವರ ಆಹ್ವಾನದ ಮೇರೆಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರತಿ ಹಬ್ಬ, ಹುಣ್ಣಿಮೆ, ಅಮವಾಸ್ಯೆ, ಗ್ರಹಣ, ಪ್ರಾಕೃತಿಕ ವಿಕೋಪ, ಆಕಸ್ಮಿಕ ದುರಂತಗಳು, ಸಾಂಕ್ರಾಮಿಕ ರೋಗಗಳು, ರಾಜಕೀಯ ಪಲ್ಲಟಗಳು ಮುಂತಾದ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಅದಕ್ಕೆ ಅವರಿಗಿರುವ ಅರ್ಹತೆ, ಜ್ಞಾನ, ಅಧ್ಯಯನ, ದೂರದೃಷ್ಟಿ, ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲವನ್ನೂ ಸಾರ್ವಜನಿಕ ವಿವೇಚನೆಗೆ ಬಿಡುತ್ತಾ..ಅತ್ಯಂತ ಜವಾಬ್ದಾರಿಯುತ ಮಾಧ್ಯಮಗಳಲ್ಲಿ ಕುಳಿತು, ಪೌರಾಣಿಕ, ಕಾಲ್ಪನಿಕ ಕಥೆಗಳು, ಘಟನೆಗಳು, ವ್ಯಕ್ತಿಗಳನ್ನು ಐತಿಹಾಸಿಕ ಎಂಬಂತೆ ಬಿಂಬಿಸಿ, ಅದನ್ನು ಭಕ್ತಿಯ ಹೆಸರಿನಲ್ಲಿ ತಾನೇ ದೇವರ ಪ್ರತಿನಿಧಿ ಎಂಬಂತೆ ವರ್ಣಿಸಿ ಜನರಲ್ಲಿ ಇರಬಹುದಾದ ಮೌಡ್ಯಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಿ ಸುಳ್ಳು – ಭ್ರಮೆಗಳನ್ನು ಸೃಷ್ಟಿಸುತ್ತಿರುವುದನ್ನು ಪ್ರಶ್ನಿಸಬೇಕಾಗಿರುವುದು ಯಾರು..ವಿವಿಧ ಕ್ಷೇತ್ರಗಳ ವಿಜ್ಞಾನಿಗಳು ತಮ್ಮ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿ ಈ ಬಗ್ಗೆ ದಿವ್ಯ…
ಮೋರಟಗಿ: ದೀಪಾವಳಿ ಎಂದರೆ ಭಕ್ತಿ ಪ್ರೀತಿಯ ಹಬ್ಬ ಮತ್ತು ಕೃತಜ್ಞತೆ ಸಮರ್ಪಣೆಗೆ ವೇದಿಕೆ. ಸಂಬಂಧಗಳ ನಂಟನ್ನು ಮತ್ತಷ್ಟು ಗಾಢವಾಗಿಸುವ ಬೆಸುಗೆ. ನಕ್ಷತ್ರಗಳ ಲೋಕದಂತೆ ಹೊಳೆಯುವ ಹಣತೆಗಳ ಸಾಲು ಮನೆ – ಮನಗಳನ್ನು ಬೆಳಗುತ್ತವೆ. ಇಂದು ಹಣತೆಗಳ ಬೆಳಕು ಬರೀ ಕಣ್ಣಿಗಲ್ಲ ಮುಚ್ಚಿದ ಮನದ ಬಾಗಿಲೋಳಗೂ ಬೆಳಕು ಸೋಕುತ್ತದೆ. ಹೊಸ ಬೆಳಕು ಚೆಲ್ಲಿ, ಹಳೆ ನೋವು ಸಂಕಟಗಳನ್ನು ಕಿತ್ತೆಸೆದು ಸಂಭ್ರಮಕ್ಕೆ ಮುನ್ನುಡಿ ಬರೆಯುವ ಈ ಬೆಳಕು ಕೃತಜ್ಞತೆ ಸಮರ್ಪಣೆಗೆ ವೇದಿಕೆ. ಏಕೆಂದರೆ ಶ್ರೀ ರಾಮನು ರಾವಣನನ್ನು ಗೆದ್ದು ಸೀತೆಯೊಂದಿಗೆ ಅಯೋದ್ಯೆಗೆ ಮರಳಿ ಹಣತೆಯೊಂದು ಹಚ್ಚಿದ ಸಮಯವೂ ಕೃತಜ್ಞತೆ ಸಮರ್ಪಣೆಗೆ ವೇದಿಕೆಯಾಗಿದೆ ಎಂಬ ವಾಡಿಕೆಯು ವಿಜಯಪುರದ ಮೋರಟಗಿಯಲ್ಲಿ ಇಂದಿಗೂ ಜೀವಂತವಾಗಿದೆ.ಇಲ್ಲಿನ ಕಲ್ಪವೃಕ್ಷ ವಿದ್ಯಾಸಂಸ್ಥೆಯ ಸಂಸ್ಥಾಪಕ ಶಿವಶರಣಗೌಡ ಬಿರಾದಾರ ಅವರು ಇಂದಿಗೂ ದೀಪಾವಳಿಯಂದು ಲಕ್ಷ್ಮೀದೇವಿಯ ಪೂಜೆಯೊಂದಿಗೆ ಶ್ರೀರಾಮನಿಗೂ ವಿಶೇಷ ಪೂಜೆ ಹಾಗೂ ಹನ್ನೊಂದು ದೇವರ ಫೋಟೋ ಪೂಜೆಯ ಗದ್ದುಗೆ ನಿರ್ಮಿಸಿ ಪ್ರತಿ ವರ್ಷ ವಿಶೇಷ ಪೂಜೆಸಲ್ಲಿಸುವ ಮೂಲಕ ಬೆಳಕಿನ ಹಬ್ಬಕ್ಕೆ ಹೊಸ ಮುನ್ನುಡಿ ಬರೆದಿದ್ದಾರೆ.ಹಣತೆಗಳಿಂದ ಬೆಳಕನ್ನು…
ಬಸವನಬಾಗೇವಾಡ: ಸಮಾನತೆ ಸಂಕೇತವಾಗಿ ವಿಶ್ವಗುರು ಬಸವಣ್ಣ, ಸ್ವಾತಂತ್ರ್ಯದ ಸಂಕೇತವಾಗಿ ಕಿತ್ತೂರು ರಾಣಿ ಚನ್ನಮ್ಮ ನಮ್ಮ ಕಣ್ಣು ಮುಂದೆ ಈ ಮಹನೀಯರು ನಿಲ್ಲುತಾರೆ. ಇಂತಹ ಮಹನೀಯರ ಆದರ್ಶಗಳನ್ನು ಎಲ್ಲರಿಗೂ ಅಗತ್ಯವಿದೆ ಎಂದು ಕೂಡಲಸಂಗಮದ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.ತಾಲೂಕಿನ ಅರಳಿಚಂಡಿ ಗ್ರಾಮದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ಅರಳಿಚಂಡಿ ಗ್ರಾಮ ಘಟಕವು ಶನಿವಾರ ಹಮ್ಮಿಕೊಂಡಿದ್ದ ವೀರರಾಣಿ ಕಿತ್ತೂರು ಚನ್ನಮ್ಮ ಜಯಂತೋತ್ಸವ ಹಾಗೂ ಪಂಚಮಸಾಲಿ ಸಮಾಜಕ್ಕೆ ೨ ಎ ಮೀಸಲಾತಿ ಹೋರಾಟದ ಹಕ್ಕೋತ್ತಾಯ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಕಿತ್ತೂರು ರಾಣಿ ಚನ್ನಮ್ಮ ಒಂದು ಜನಾಂಗದ ಸ್ವತ್ತಲ್ಲ. ಅವಳು ಇಡೀ ಸಮುದಾಯದ ಸ್ವತ್ತು. ಅವಳ ಸಂಸ್ಥಾನದಲ್ಲಿ ೧೮ ಜಾತಿಕ್ಕೆ ಸೇರಿದ ವೀರಯೋಧರು ಇದ್ದರು. ಆ ವೀರಯೋಧರ ಸಹಾಯದಿಂದ ಸಂಸ್ಥಾನದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದು ಇತಿಹಾಸ. ಹಾಲುಮತಕ್ಕೆ ಸೇರಿದ ಸಂಗೊಳ್ಳಿ ರಾಯಣ್ಣ ಚನ್ನಮ್ಮಳಿಗೆ ಮಾನಸ ಪುತ್ರರಾಗಿದ್ದರು. ಸರ್ಕಾರ ರಾಣಿ ಚನ್ನಮ್ಮಳ ಜಯಂತೋತ್ಸವವನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಜಾರಿಗೆ ತಂದ ನಂತರ ಎಲ್ಲ ಸಮಾಜ ಬಾಂಧವರು ಕೂಡಿಕೊಂಡು…
ದೇವರಹಿಪ್ಪರಗಿ: ಬೆಳಕಿನ ಹಬ್ಬ ದೀಪಾವಳಿಯ ಅಮವಾಸ್ಯೆ ಪೂಜೆಯ ಅಂಗವಾಗಿ ಹೂ, ಹಣ್ಣು, ಕುಂಬಳಕಾಯಿ ಸೇರಿದಂತೆ ಹಣತೆ, ಅಲಂಕಾರಿಕ ವಸ್ತುಗಳ ಮಾರಾಟ ಭರದಿಂದ ಜರುಗಿತು.ಪಟ್ಟಣದಲ್ಲಿ ದೀಪಾವಳಿ ಅಮವಾಸ್ಯೆಯನ್ನು ಭಾನುವಾರ ಹಾಗೂ ಸೋಮವಾರ ಎರಡು ದಿನಗಳಂದು ಆಚರಿಸಲಾಗುತ್ತಿದೆ. ವ್ಯಾಪಾರಸ್ಥರು ತಮ್ಮ ಅಂಗಡಿ, ಮಾರಾಟ ಮಳಿಗೆಗೆಳ ಲಕ್ಷ್ಮೀ-ಕುಬೇರರ ಪೂಜೆಗಾಗಿ ಬಾಳೇಗಿಡ, ಕಬ್ಬು, ತೆಂಗಿನ ಪರಕೆ, ಶೃಂಗಾರ ವಸ್ತಗಳ ಸಹಿತ ಖಾತೆಪುಸ್ತಕ, ಹೂಹಣ್ಣುಗಳನ್ನು ಬೆಳಿಗ್ಗೆಯೇ ಖರೀದಿಸಿದರು. ಪೂಜೆಗಾಗಿ ರಾತ್ರಿ ಅಂಗಡಿ ಮಳಿಗೆಗಳನ್ನು ಹೂ-ಹಾರ, ವಿದ್ಯುತ್ ದೀಪಗಳೊಂದಿಗೆ ಸಿಂಗರಿಸಿದರು. ಹೊಸ ಬಟ್ಟೆಗಳನ್ನು ಧರಿಸಿ ಮನೆ ಮಂದಿಯೆಲ್ಲಾ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮಹಿಳೆಯರು ವಿಶೇಷವಾಗಿ ಮುತೈದಿಯರ ಪೂಜೆಯಲ್ಲಿ ನಿರತರಾಗಿದ್ದರೆ, ಸರ್ಕಾರದ ಈ ಬಾರಿ ಪಟಾಕಿ ನಿಷೇದಿಸಿದ ಕಾರಣ ಮಕ್ಕಳಲ್ಲಿ ನಿರುತ್ಸಾಹ ಕಂಡು ಬಂತು. ಭಾನುವಾರ ಸಂಜೆ ಆರಂಭಗೊಂಡ ಪೂಜಾ ವಿಧಿವಿಧಾನಗಳು ತಡ ಮಧ್ಯರಾತ್ರಿಯವರೆಗೆ ಜರುಗಿದವು.ಸೋಮವಾರ ಬೆಳಿಗ್ಗೆ ಬಹುತೇಕ ಮನೆಗಳಲ್ಲಿ ಅಮವಾಸ್ಯೆ ಆಚರಿಸುತ್ತಿರುವುದರಿಂದ ಲಕ್ಷಿö್ಮ ಪೂಜೆಯ ಅಂಗವಾಗಿ ಕುಂಬಳಕಾಯಿ ಸೇರಿದಂತೆ ಪೂಜಾ ಕಾರ್ಯಕ್ರಮಗಳನ್ನು ಖರೀದಿಸಲು ಜನ ಬೆಳಿಗ್ಗೆ ಹಾಗೂ ಸಾಯಂಕಾಲ ಆಗಮಿಸಿದ್ದರು.…
ಚಡಚಣ: ಸಮೀಪದ ರೇವತಗಾಂವ ಗ್ರಾಮದಲ್ಲಿ ದೀಪಾವಳಿ ಅಮವಾಸ್ಯೆಯ ನಿಮಿತ್ತ ಗ್ರಾಮದ ಮಲಕಾರಿಸಿದ್ಧ ಹಾಗೂ ಲಗಮವ್ವ ದೇವಿ ದೇವರ ಭೇಟಿ ಕಾರ್ಯಕ್ರಮವು ಶ್ರೀ ರೇವಣಸಿದ್ದೇಶ್ವರ ದೇವಾಸ್ಥಾನದ ಮುಂಭಾಗದಲ್ಲಿ ಭಂಡಾರದೊಂದಿಗೆ ರವಿವಾರದಂದು ಅದ್ಧೂರಿಯಾಗಿ ಜರುಗಿತು.ನಸುಕಿನ ಜಾವ ಮಲಕಾರಿಸಿದ್ದ ಹಾಗೂ ಲಗಮವ್ವದೇವಿ ದೇವರುಗಳಿಗೆ ವಿಶೇಷ ರುದ್ರಾಭಿಷೇಕದೊಂದಿಗೆ ಪೂಜೆ ಜರುಗಿತು. ನಂತರ ಭಕ್ತರಿಂದ ಧೀರ್ಘದಿಂಡ ನಮಸ್ಕಾರವು ನಡೆಯಿತು. ಮಧ್ಯಾಹ್ನ ೧ ಗಂಟೆಯಿಂದ ಸ್ಥಳೀಯ ಕಲಾವಿದರಿಂದ ಡೊಳ್ಳಿನ ಪದಗಳು ನೆರವೇರಿದವು. ಸಾಯಂಕಾಲ ೦೪:೩೦ ಗಂಟೆಗೆ ಶ್ರೀ ಮಲಕಾರಿಸಿದ್ಧ ಹಾಗೂ ಲಗಮವ್ವದೇವಿ ದೇವರ ಪಲ್ಲಕ್ಕಿಗಳ ಭವ್ಯ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯ ವೈಭವದೊಂದಿಗೆ ಶ್ರೀ ರೇವಣಸಿದ್ದೇಶ್ವರ ದೇವಾಸ್ಥಾನದ ಮುಂಭಾಗ ನಾನಾ ಕಲಾವಿದರಿಂದ ಡೊಳ್ಳಿನ ವಾಲಗ ಜರುಗಿತು. ನಂತರ ಪಲ್ಲಕ್ಕಿಗಳ ಮೇಲೆ ಭಕ್ತರು ಭಂಡಾರ ತೂರುವದರೊಂದಿಗೆ ಭೇಟಿ ಜರುಗಿತು.ಈ ಭೇಟಿ ಕಾರ್ಯಕ್ರಮವನ್ನು ನೋಡಲು ಮಹಾರಾಷ್ಟ್ರ ಸೇರಿದಂತೆ ಕರ್ನಾಟಕದ ಸಹಸ್ರಾರು ಭಕ್ತರು ಸೇರಿದ್ದರು. ಭಕ್ತವೃಂದ ದೇವರ ಪಲ್ಲಕ್ಕಿಗಳ ಮೇಲೆ ಹೂ, ಭಂಡಾರ, ಚುರುಮುರಿ, ಶೇಂಗಾ, ಖಾರೀಕ್, ಬದಾಮಿ ಹಾರಿಸಿ ತಮ್ಮ…
ವಿಜಯಪುರ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ,ಮೂಲ ಸೌಲಭ್ಯ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಬಿ ಪಾಟೀಲ ಅವರು ನ.೧೪ ರಿಂದ ನ.೧೬ರವರೆಗೆ ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ನವೆಂಬರ್ ೧೪ರ ಸಂಜೆ ಬೆಂಗಳೂರಿನಿಂದ ಹೊರಟು, ರಾತ್ರಿ೧೧:೪೫ಕ್ಕೆ ವಿಜಯಪುರಕ್ಕೆ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ.ನವೆಂಬರ್ ೧೫ರ ಬೆಳಿಗ್ಗೆ ೯ ರಿಂದ ಸಂಜೆ ೫ಗಂಟೆಯವರೆಗೆ ಜಿಲ್ಲೆಯ ಬರಪೀಡಿತ ತಾಲೂಕುಗಳಿಗೆ ಭೇಟಿ ನೀಡಿ, ಬರ ನಿರ್ವಹಣೆ ಕುರಿತು ಕೈಗೊಂಡ ಕ್ರಮಗಳ ಪರಿಶೀಲನೆ ನಡೆಸುವರು.ಅಂದು ಸಂಜೆ ೫ ಗಂಟೆಗೆ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲ ಶಾಸಕರು,ಸಂಸದರು, ಜಿಲ್ಲಾ ಮತ್ತು ತಾಲೂಕ ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲೆಯ ವಿವಿಧ ತಾಲೂಕಗಳ ಬರ ಪರಿಸ್ಥಿತಿ ಹಾಗೂ ಬರ ನಿರ್ವಹಣೆ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನಾ ಸಭೆ ನಡೆಸಲಿದ್ದಾರೆ. ಅಂದು ವಿಜಯಪುರದಲ್ಲಿ ವಾಸ್ತವ್ಯ ಮಾಡುವರು.ನವೆಂಬರ್ ೧೬ರ ಸಂಜೆ ೪:೩೦ಕ್ಕೆ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಹುಲಜಂತಿ ಮಾಳಿಂಗರಾಯ ಜಾತ್ರೆಗೆಹರಿದು ಬಂದ ಭಕ್ತರ ಮಹಾಪೂರ ಚಡಚಣ: ಹಾಲುಮತ ಸಮಾಜದ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ಸಮೀಪದ ಹುಲಜಂತಿ ಗ್ರಾಮದ ಶ್ರೀ ಮಾಳಿಂಗರಾಯ ಜಾತ್ರೆಯ ಮುಂಡಾಸ್ ಹಾಗೂ ದೇವರುಗಳ ಪಲ್ಲಕ್ಕಿಗಳ ಭೇಟಿಯನ್ನು ನೋಡಲು ಭಕ್ತರ ಮಹಾಪೂರವೇ ಹರಿದು ಬಂದಿದೆ. ರಾಜ್ಯದ ಗಡಿಯಲ್ಲಿರುವ ಮಂಗಳವೇಡಾ ತಾಲೂಕಿನ ಹುಲಜಂತಿ ಗ್ರಾಮದಲ್ಲಿ ಮಾಳಿಂಗರಾಯನು ೧೪ನೇ ಶತಮಾನದಲ್ಲಿ ಬಾಳಿ ಬದುಕಿ, ಹಲವು ಪವಾಡಗಳನ್ನು ಮಾಡಿದ ಪವಾಡ ಪುರುಷ ಮಾಳಿಂಗರಾಯ. ಮಾಳಿಂಗರಾಯನ ಭಕ್ತಿಗೆ ಮೆಚ್ಚಿದ ಪರಶಿವನು ದೀಪಾವಳಿಯ ಅಮವಾಸ್ಯೆಯ ದಿನ ಬೀಜಗುಂತಿಯ ಹುತ್ತದ ಮೇಲೆ ಹತ್ತಿ ಬೀಜವನ್ನು ನಾಟಿ ಮಾಡಿ. ಅದು ಬೆಳದು ಹೂವಾಗಿ, ಕಾಯಾಗಿ, ಹತ್ತಿಯಾಗಿ ಒಡೆದು. ಆ ಹತ್ತಿಯನ್ನು ನೇಯ್ದು. ಮುಂಡಾಸವನ್ನು ತಯಾರು ಮಾಡಿ ಸಾಕ್ಷಾತ್ ಶಿವ-ಪಾರ್ವತಿಯರು ಕೈಲಾಸದಿಂದ ಧರೆಗಿಳಿದು ಬಂದು ಮುಂಡಾಸು ಸುತ್ತುತ್ತಾನೆ ಎಂಬುದು ಭಕ್ತರ ನಂಬಿಕೆ. ರವಿವಾರದ ಮಧ್ಯರಾತ್ರಿ ದೀಪಾವಳಿ ಅಮವಾಸ್ಯೆಯ ನಿಮಿತ್ತ ಮಾಳಿಂಗರಾಯನ ಮುಂಡಾಸ್‌ನ್ನು ನೋಡಲು ಜನಸಾಗರ ಮಧ್ಯರಾತ್ರಿಯಲ್ಲಿಯೇ ದೇವಾಸ್ಥಾನದ ಸುತ್ತಮುತ್ತ ಊಳಿದುಕೊಂಡಿದ್ದರು. ಇಲ್ಲಿಗೆ ಆಗಮಿಸುವ ಪ್ರತಿಯೊಬ್ಬ ಭಕ್ತರು ಭಂಡಾರವನ್ನು ದೇವಾಲಯದ…
