ವಿಜಯಪುರ: ವಿಜಯಪುರ ಲೋಕಸಭಾ ಮತಕ್ಷೇತ್ರದ ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಬಿ.ಎಲ್.ಎ.-೨ (ಬೂತ ಲೆವೆಲ್ ಎಜೆಂಟ) ನೇಮಕಾತಿ ಮತ್ತು ಬೂತ ಸಮಿತಿ ನೇಮಕಾತಿಯ ಪರಿಶೀಲನಾ ಸಭೆ ನಡೆಯಿತು.
ಬಿ.ಎಲ್.ಎ. ಮತ್ತು ಬೂತ ಸಮಿತಿ ವಿಜಯಪುರ ಜಿಲ್ಲಾ ಉಸ್ತುವಾರಿ ವಿಠ್ಠಲ ಜಿ. ಕೊಳ್ಳುರ ರವರು ಕರೆದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಹಾಗೂ ಜಿಲ್ಲಾ ಪದಾಧಿಕಾರಿಗಳ ತರಬೇತಿ ಶಿಬಿರದ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯ ಕುರಿತು ವಿವರಿಸಿ, ಎಲ್ಲ ಪ್ರಕ್ರಿಯೆಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಿ ಕೆಪಿಸಿಸಿಗೆ ಕಳುಹಿಸಿಕೊಡಬೇಕೆಂದು ಹೇಳಿದರು.
ತರಬೇತಿ ಶಿಬಿರದ ಹಾಗೂ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಆರ್. ಆಲಗೂರ ರವರು ವಹಿಸಿದ್ದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಹೇಬಗೌಡ ಬಿರಾದಾರ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರಅಹ್ಮದ ಬಕ್ಷಿ ತರಬೇತಿ ಶಿಬಿರದ ಕುರಿತು ಮಾತನಾಡಿದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ವಿಶ್ವನಾಥ ಮಠ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ರಫೀಕ ಪಕಾಲೆ, ಸಿದ್ದು ಗೌಡನ್ನವರ, ಬಾಳನಗೌಡ ಪಾಟೀಲ, ಬಶೀರ ಶೇಠ, ಅಂಗ ಘಟಕಗಳ ಅಧ್ಯಕ್ಷರುಗಳಾದ ರಮೇಶ ಗುಬ್ಬೇವಾಡ, ಹನೀಫ ಮಕಾನದಾರ, ನಿಂಗಪ್ಪ ಸಂಗಾಪೂರ, ಲಾಲಸಾಬ ಕೊರಬು, ಬೀರಪ್ಪ ಜುಮನಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಹೊನಮೊಡೆ, ಅಶ್ಫಾಕ ಮನಗೂಳಿ, ಹಾಜಿಲಾಲ ದಳವಾಯಿ, ವಿಜಯಕುಮಾರ ಘಾಟಗೆ, ಅಬುಬಕರ ಬಿಜಾಪುರ, ಅಬ್ದುಲ್‌ಪೀರಾ ಜಮಖಂಡಿ, ಗೌಸ ಮುಜಾವರ, ಸಂತೋಷ ಬಾಲಗಾಂವಿ, ಐ.ಎಂ. ಇಂಡಿಕರ, ಸುಂದರಪಾಲ ರಾಠೋಡ, ಮಲ್ಲಿಕಾರ್ಜುನ ಪರಸಣ್ಣವರ, ಸೈಪನ್ ಡಾಂಗೆ, ಬಾಬು ಯಾಳವಾರ, ತಾಜುದ್ದೀನ ಖಲೀಫಾ, ಇಲಿಯಾಸಅಹ್ಮದ ಸಿದ್ದಿಕಿ, ಪರಶುರಾಮ ಹೊಸಮನಿ, ಗಂಗೂಬಾಯಿ ಧುಮಾಳೆ, ರಾಜೇಶ್ವರಿ ಚೋಳಕೆ, ಸರಿತಾ ನಾಯಕ, ಲಕ್ಷ್ಮೀ ಕ್ಷೀರಸಾಗರ, ಫಿರೋಜ ಶೇಖ, ಗಿರೀಶ ಇಟ್ಟಂಗಿ, ಕಾಶಿಬಾಯಿ ಹಡಪದ, ಭಾರತಿ ಹೊಸಮನಿ, ಸಮಿಮಾ ಅಕ್ಕಲಕೋಟ, ಭಾರತಿ ಕಾಲೆಬಾಗ, ಮಲ್ಲಿಕಾರ್ಜುನ ಯಂಕಂಚಿ, ಮಂಜುನಾಥ ನಿಡೋಣಿ, ಲಕ್ಷö್ಮಣ ಚಲವಾದಿ, ಬಸಪ್ಪ ಕೋಲಕಾರ, ಸಂಗಮೇಶ ಬಿರಾದಾರ, ಅನುಸೂಯಾ ನಿಂಬರಗಿ, ಮೋತಿಸಾಬ ತಳೆವಾಡ, ಬಿ.ಎಸ್. ಗಸ್ತಿ, ಮಹಾದೇವ ಬನಸೋಡೆ, ರಾಜಅಹ್ಮದ ಬನ್ನಟ್ಟಿ, ಸಿದ್ದು ತೋಟದ ಮುಂತಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

