Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಚಿಮ್ಮಡ: ಗ್ರಾಮದ ದೇವಾಂಗ ಸಮಾಜದ ಆರಾದ್ಯ ದೇವತೆ ಶ್ರೀ ಬನಶಂಕರಿದೇವಿ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಕಾರ್ಯಕ್ರಮ ಶನಿವಾರದಂದು ವಿಜ್ರಂಭಣೆಯಿಂದ ಜರುಗಲಿದೆ.ಬೆಳಿಗ್ಗೆ ೬ ಘಂಟೆಗೆ ನಡೆಯುವ ಅಭಿಷೇಕ, ವಿಶೇಷ ಪೂಜೆಯೊಂದಿಗೆ ಪ್ರಾರಂಭಗೊಳ್ಳಲಿರುವ ಜಾತ್ರಾ ಮಹೋತ್ಸವದಲ್ಲಿ ಮದ್ಯಾಹ್ನ ಶ್ರೀ ದೇವಿಯ ಉಡಿತುಂಬುವ ಕಾರ್ಯಕ್ರಮದೊಂದಿಗೆ ಮಹಾಪ್ರಸಾದ ವಿನಿಯೋಗ ನಡೆಯಲಿದ್ದು ಮಹಾಪ್ರಸಾದದಲ್ಲಿ ಮುಂಬೈ ಮಾದೇಲಿ ಹಾಗೂ ಚಿಮ್ಮಡದ ವಿಶೇಷ ಕಿಚಡಿ ಪ್ರಸಾದ ಇರಲಿದೆ, ಸಂಜೆ ೫ ಘಂಟೆಗೆ ಜರುಗಲಿರುವ ರಥೋತ್ಸವ ಕಾರ್ಯಕ್ರಮದಲ್ಲಿ ಈ ಭಾಗದ ಜನಪದ ವಾದ್ಯವೃಂದಗಳಾದ ಕರಡಿ ಮಜಲು, ಡೊಳ್ಳು ಕುಣಿತ, ಬಾಜಾ ಬಜಂತ್ರಿ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ.ಜನಪದೋತ್ಸವ ಕಾರ್ಯಕ್ರಮ; ರಾತ್ರಿ ೧೦ ಗಂಟೆಗೆ ಶ್ರೀ ಬನಶಂಕರಿದೇವಿ ಸಾಂಸ್ಕೃತಿಕ ವೇದಿಕೆ ಹಾಗೂ ಶ್ರೀ ಬನಶಂಕರಿದೇವಿ ದೇವಸ್ಥಾನ ಸಮೀತಿ ಚಿಮ್ಮಡ ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಖ್ಯಾತ ಜನಪದ ಗಾಯಕ ವೀರಣ್ಣ ಅಂಗಡಿ ಹಾಗೂ ಶ್ರೀ ಸಿದ್ದಲಿಂಗೇಶ್ವರ ಹಾಸ್ಯ ಮತ್ತು ಜನಪದ ಕಲಾಸಂಘ ಅಡವಿಸೋಮಾಪೂರ ಇವರ…
ದೇವರಹಿಪ್ಪರಗಿ: ರಂಭಾಪುರಿಶ್ರೀಗಳಿಗೆ ಅಗೌರವ ತೋರಿ, ಅಮಾನವೀಯ ರೀತಿಯಲ್ಲಿ ವರ್ತಿಸಿದ ಘಟನೆ ಅತ್ಯಂತ ಖೇದಕರ ಹಾಗೂ ಖಂಡನೀಯ ಎಂದು ಜಡಿಮಠದ ಜಡಿಸಿದ್ಧೇಶ್ವರಶ್ರೀಗಳು ಹೇಳಿದರು.ಪಟ್ಟಣದಲ್ಲಿ ಶುಕ್ರವಾರ ಬಾಗಲಕೋಟೆ ಜಿಲ್ಲೆಯ ಕಲಾದಗಿಯಲ್ಲಿ ರಂಭಾಪುರಿಶ್ರೀಗಳಿಗೆ ಅಗೌರವ ತೋರಿ ಅಮಾನವೀಯ ರೀತಿಯಲ್ಲಿ ವರ್ತಿಸಿದ ಘಟನೆ ಖಂಡಿಸಿ ಹಾಗೂ ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡುವಂತೆ ಆಗ್ರಹಿಸಿ ರಂಭಾಪುರಿಶ್ರೀಗಳ ಸದ್ಭಕ್ತರಸಭೆ ಹಾಗೂ ಮನವಿ ಸಲ್ಲಿಕೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಶ್ರೀಗಳ ಕುರಿತು ಇಲ್ಲಸಲ್ಲದ ಆರೋಪ ಮಾಡುವುದರ ಜೊತೆಗೆ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಲಾಗಿದೆ. ಆರೋಪಿಗಳಿಗೆ ಕಾಲವೇ ತಕ್ಕ ಉತ್ತರ ನೀಡುತ್ತದೆ ಎಂದರು.ನಿವೃತ್ತ ನೌಕರರ ಸಂಘದ ತಾಲ್ಲೂಕಾಧ್ಯಕ್ಷ ಸಿ.ಕೆ.ಕುದರಿ ಮಾತನಾಡಿದರು.ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ, ಶ್ರೀಗಳಿಗೆ ಅಗೌರವ ತೋರಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ವರದಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.ಸ್ಥಳೀಯ ಶ್ರೀಗಳು, ಪ್ರಗತಿಪಟ್ಟಣ ಸಹಕಾರಿ ಬ್ಯಾಂಕ್ ನಿರ್ದೇಶಕ ಬಾಬುಗೌಡ ಪಾಟೀಲ(ಜಿಡ್ಡಿಮನಿ), ಜಂಗಮಾಭಿವೃದ್ಧಿ ಸಂಘದ ನಗರ ಅಧ್ಯಕ್ಷ ನೀಲಯ್ಯ ಅರಳಿಮಟ್ಟಿ, ತಾಲ್ಲೂಕಾಧ್ಯಕ್ಷ ಸೋಮಶೇಖರ ಹಿರೇಮಠ, ಉಮಾಕಾಂತ ಸೊನ್ನದ, ಪಿ.ಜಿ.ಹಿರೇಮಠ, ಬಸಯ್ಯ ಮಲ್ಲಿಕಾರ್ಜುನಮಠ, ರಮೇಶ…
ಮೋರಟಗಿಯಲ್ಲಿ ಜಂಗಿ ನಿಕಾಲಿ ಕುಸ್ತಿ | ಪ್ರೊ.ಅರವಿಂದ ಮನಗೂಳಿ ಅಭಿಮತ ಸಿಂದಗಿ: ಕ್ರೀಡಾಪಟುಗಳು ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಬೇಕು ಎಂದು ಪ್ರೊಫೆಸರ್ ಅರವಿಂದ ಮನಗೂಳಿ ಹೇಳಿದರು.ಹಜರತ್ ಮಿಟ್ಟೆವಾಲಿ ಉರುಸು ನಿಮಿತ್ತ ಗ್ರಾಮದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಆಟೋಟಗಳಲ್ಲಿ ಗೆದ್ದಾಗ ಅತಿಯಾಗಿ ಹಿಗ್ಗಬಾರದು. ಸೋತಾಗ ಕುಗ್ಗಬಾರದು. ಸೋಲು ಗೆಲುವಿನ ಮೆಟ್ಟಿಲು ಎಂಬುದನ್ನು ಮರೆಯಬಾರದು. ಯುವ ಜನತೆ ವಿದೇಶಿ ಕ್ರೀಡೆಗಳಿಂದ ಸ್ವದೇಶಿ ಆಟಗಳನ್ನು ಹೆಚ್ಚು ಪ್ರೀತಿಸಬೇಕು ಎಂದರು.ಕ್ರೀಡೆಗಳು ಬಾಂಧವ್ಯ ಬೆಸೆಯಲು ಸೂಕ್ತ ವೇದಿಕೆಯಾಗಿವೆ. ಹಜರತ್ ಮಿಟ್ಟೆವಾಲಿ ಜಾತ್ರೆ ಸಮಿತಿಯವರು ಕರ್ನಾಟಕ ಮತ್ತು ಮಹಾರಾಷ್ಟçದ ಪ್ರಸಿದ್ಧ ಪೈಲ್ವಾನರನ್ನು ಕರೆಸಿ ಕುಸ್ತಿ ಪಂದ್ಯಾವಳಿ ಆಯೋಜಿಸಿ ವಿಜೇತರಿಗೆ ನಗದು ಬಹುಮಾನ ಹಾಗೂ ಸೋತವರಿಗೆ ಸಮಾಧಾನಕರ ಬಹುಮಾನ ನೀಡಿ ದೇಶಿ ಕ್ರೀಡೆಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಸೌಹಾರ್ದ ಮೂಡಿಸುವ ಇಂಥ ಆಟಗಳನ್ನು ಉತ್ಸವಗಳಲ್ಲಿ ನಡೆಸುತ್ತಿರುವುದು ಶ್ಲಾಘನೀಯ. ಸಿಂದಗಿ ತಾಲೂಕಿನಲ್ಲೇ ಕುಸ್ತಿ ಆಯೋಜನೆಗೆ ಮೋರಟಗಿ ಗ್ರಾಮ ಹೆಸರುವಾಸಿಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ಎನ್.ಆರ್.ತಿವಾರಿ,…
“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ-ಗದಗ ಘಟನೆ ಒಂದು… ಕೆಲವು ವರ್ಷಗಳ ಹಿಂದೆ ಪೇಪರಿನಲ್ಲಿ ಓದಿದ ಸಂಗತಿ. ನೂತನ ವಿವಾಹಿತ ದಂಪತಿಗಳು ಪ್ರಥಮ ರಾತ್ರಿಯ ಕೋಣೆಯಲ್ಲಿಯೇ ಮರುದಿನ ಮುಂಜಾನೆ ಶವವಾಗಿ ದೊರೆತದ್ದು. ಘಟನೆ ಎರಡು… ಕೆಲವು ವರ್ಷಗಳ ಹಿಂದೆ ದೆಹಲಿಯಲ್ಲಿ ವಿಪರೀತ ಮಳೆಯಾದಾಗ ಕಾರಿನ ಟೈರಿನವರೆಗೆ ನೀರು ತುಂಬಿದ ಸಮಯದಲ್ಲಿ ಅದರಲ್ಲಿದ್ದ ಜೋಡಿಗಳ ಸಾವು. ಘಟನೆ ಮೂರು.. ವಸತಿ ಶಾಲೆಯೊಂದರಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಸ್ನಾನದ ಕೋಣೆಯಲ್ಲಿ ಸಾವನ್ನಪ್ಪಿರುವುದು. ಮೇಲಿನ ಎಲ್ಲ ಘಟನೆಗಳಿಗೆ ಕಾರಣವಾಗಿರುವುದು ಕಾರ್ಬನ್ ಮೋನಾಕ್ಸೈಡ್ ಎಂಬ ವಿಷಾನಿಲ.ಮೊದಲೆರಡು ಘಟನೆಗಳಲ್ಲಿಯೂ ಕಾರ್ಬನ್ ಮೋನಾಕ್ಸೈಡ್ ವಿಲೇವಾರಿಗೆ ಸೂಕ್ತ ಅವಕಾಶವಿಲ್ಲದೆ ಹೋದದ್ದು. ಸಂಪೂರ್ಣ ಕಿಟಕಿ ಬಾಗಿಲುಗಳನ್ನು ಮುಚ್ಚಿದ್ದುದು ಮೊದಲ ಆಕಸ್ಮಿಕ ಘಟನೆಯ ಕಾರಣವಾದರೆ, ಎರಡನೆಯ ಘಟನೆಯಲ್ಲಿ ಕಾರಿನ ಎಸಿ ವೆಂಟ್ನಲ್ಲಿ ನೀರು ತುಂಬಿದ್ದು ವಿಷಾನಿಲ ಹೊರಗೆ ಹೋಗಲು ಅವಕಾಶವಾಗದೆ ಹೋದದ್ದು. ಪ್ರತಿದಿನ ವಾಟ್ಸಪ್ ನಲ್ಲಿ ತಪ್ಪದೇ ಮೆಸೇಜ್ ಕಳುಹಿಸುವ ಸ್ನೇಹಿತೆಯಿಂದ ನಾಲ್ಕಾರು ದಿನಗಳಾದರೂ ಒಂದೇ ಒಂದು ಮೆಸೇಜ್ ಇಲ್ಲದಿರುವುದನ್ನು ನೋಡಿ ಆಕೆಗೆ ಫೋನ್…
Udayarashmi kannada daily newspaper Udayarashmi kannada daily newspaper
ನವದೆಹಲಿ: ಲೋಕಸಭೆ ಚುನಾವಣೆ ಹಿನ್ನೆಲೆ ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಸೀಟು ಹಂಚಿಕೆಯನ್ನು ಅಂತಿಮ ಮಾಡಿಕೊಂಡಿದೆ. ಹಲವು ಸುತ್ತಿನ ಚರ್ಚೆಗಳ ನಂತರ ದೆಹಲಿಯ ಏಳು ಲೋಕಸಭಾ ಸ್ಥಾನಗಳಿಗೆ ತಮ್ಮ ಸೀಟು ಹಂಚಿಕೆ ಮೈತ್ರಿಯನ್ನು ಅಂತಿಮಗೊಳಿಸಿವೆ ಎಂದು ಕಾಂಗ್ರೆಸ್ ಮತ್ತು ಎಎಪಿ ಮೂಲಗಳು ತಿಳಿಸಿದೆ.ಎಎಪಿ ನಾಲ್ಕು ಮತ್ತು ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಮೂಲಕ ನಾಲ್ಕು-ಮೂರು ಸೀಟು ಹಂಚಿಕೆ ಸೂತ್ರಕ್ಕೆ ಎಎಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಪ್ಪಿಗೆಯನ್ನು ನೀಡಿದೆ ಎಂದು ವರದಿಗಳು ತಿಳಿಸಿದೆ. ಸುದೀರ್ಘವಾದ ಮಾತುಕತೆಯ ನಂತರ ಕಾಂಗ್ರೆಸ್‌ನ ಪ್ರಸ್ತಾವನೆಗೆ ಎಎಪಿ ಒಪ್ಪಿಗೆ ನೀಡಿದ ನಂತರ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.ಕಾಂಗ್ರೆಸ್ ಮೂಲಗಳ ಪ್ರಕಾರ, ಕಾಂಗ್ರೆಸ್ ಪಕ್ಷವು ಪೂರ್ವ ಹಾಗೂ ವಾಯುವ್ಯ ದೆಹಲಿ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಹೇಳಲಾಗಿದೆ. ಉಭಯ ಪಕ್ಷಗಳ ನಡುವೆ ಸೀಟು ಹಂಚಿಕೆ ಮಾತುಕತೆ ಅಂತಿಮ ಹಂತಕ್ಕೆ ತಲುಪಿದೆ. ಇದರಿಂದ ಮೈತ್ರಿಗೆ ಎದುರಾಗಿರುವ ತೊಡಕು ನಿವಾರಣೆಯಾಗಿದೆ. ಸೀಟು ಹಂಚಿಕೆ ಸಂಬಂಧ…
ಯುಪಿಎ ಸರ್ಕಾರದ ಬಗ್ಗೆ ಮೋದಿ ಹೇಳಿದ್ದ ಮಾತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಯುಪಿಎ ಸರ್ಕಾರದ ಬಗ್ಗೆ ಮೋದಿ ಅವರು ಹಿಂದೆ ಹೇಳಿದ್ದ ಮಾತನ್ನು ಉಲ್ಲೇಖಿಸಿ ತಿರುಗೇಟು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಮೋದಿಯವರು ಒಕ್ಕೂಟ ವ್ಯವಸ್ಥೆಗೆ ಅಪಾಯ’ ಎಂದು ತಿರುಗೇಟು ನೀಡಿದರು.ಮೋದಿ ಅವರು ಸಿ.ಎಂ ಆಗಿದ್ದಾಗ ಗುಜರಾತ್ ರಾಜ್ಯಕ್ಕೆ ಶೇ.50 ರಷ್ಟು ತೆರಿಗೆ ಪಾಲು ಕೇಳಿದ್ದರು. ಈಗ ಅವರು ಪ್ರಧಾನಿ ಆಗಿ ಕರ್ನಾಟಕ ರಾಜ್ಯಕ್ಕೆ ಕೇವಲ ಶೇ.12 ರಷ್ಟು ವಾಪಾಸ್ ಕೊಡುತ್ತಿದ್ದಾರೆ. ಮೋದಿ ಅವರ ಮಾತು ಮತ್ತು ವರ್ತನೆಗೆ ಅಂಕಿ ಅಂಶಗಳ ಕನ್ನಡಿ ಹಿಡಿದಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.ವಿಧಾನ ಪರಿಷತ್ ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡುವಾಗ, ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ವಿವರಿಸುವಾಗ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಬಿಸಿ ಬಿಸಿ ವಾಗ್ವಾದ ನಡೆಯಿತು.ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿ ಇದ್ದಾಗ ನಡೆದಿದ್ದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಮುಖ್ಯಮಂತ್ರಿ ಆಗಿದ್ದ…
ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ತಾಲೂಕು ಉಸ್ತುವಾರಿ ಶಂಕರಗೌಡ ಸೋಮನಾಳ ಎಚ್ಚರಿಕೆ ಮುದ್ದೇಬಿಹಾಳ: ಸರ್ಕಾರಿ ಯೋಜನೆಗಳನ್ನ ಹುಡುಕಿಕೊಂಡು ರೈತರು ಬರೋ ಬದಲು, ರೈತರ ಬಳಿಗೇ ಹೋಗಿ ಸರ್ಕಾರದ ಯೋಜನೆಗಳನ್ನು ತಲುಪಿಸುವಂತಾಗಬೇಕು ಎಂದು ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಕುಲಸಚಿವರೂ ಆದ ತಾಲೂಕು ಉಸ್ತುವಾರಿ ಶಂಕರಗೌಡ ಸೋಮನಾಳ ಹೇಳಿದರು.ಪಟ್ಟಣದ ತಹಶೀಲ್ದಾರ ಕಚೇರಿಯ ಸಭಾಭವನದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.ತಾಲೂಕಿನಲ್ಲಿ ಬರ ಆವರಿಸಿ ರೈತರಿಗೆ ಸಂಕಷ್ಟ ಎದುರಾಗಿದೆ. ಕೆಬಿಜೆಎನ್‌ಎಲ್ ನ ಅಧಿಕಾರಿಗಳು ಎಲ್ಲ ಕೆರೆಗಳನ್ನು ತುಂಬಲು ಸೂಕ್ತ ಕ್ರಮ ವಹಿಸಬೇಕು. ನೀರು ತಡೆಹಿಡಿಯಲು ಯಾರಾದರೂ ಕಾಲುವೆಗಳನ್ನು ಬಂದ್ ಮಾಡಿದ್ದರೆ ಅಂಥವರ ಮೇಲೆ ಸೂಕ್ತ ಕ್ರಮ ಕೈಗೊಂಡು ಯಾವುದೇ ಅಡ್ಡಿ ಇಲ್ಲದೇ ಕೆರೆಗೆ ನೀರು ತಲುಪುವಂತೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.ತಾಲೂಕಿನೆಲ್ಲೆಡೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ಸರಿಯಾದ ಕ್ರಮಗಳನ್ನು ಅನುಸರಿಸುವಂತೆ ಪುರಸಭೆ ಅಧಿಕಾರಿಗಳಿಗೆ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.ತಾಲೂಕಿನ ವಿವಿಧೆಡೆ ಅಳವಡಿಸಲಾದ ಆರ್‌ಓ ಪ್ಲಾಂಟ್ ಗಳ…
ತಿಕೋಟಾ: ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಹೆಚ್ಚಿಸಲು ಹಾಗೂ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ವಿಜ್ಞಾನ ವಸ್ತು ಪ್ರದರ್ಶನಗಳು ಅಗತ್ಯವಾಗಿದ್ದು ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ವಿಜ್ಞಾನ ಸೇರಿದಂತೆ ಇನ್ನಿತರ ವಿಷಯಗಳಲ್ಲಿ ಆಸಕ್ತಿವಹಿಸಿ ಆ ಬಗ್ಗೆ ಮಾಹಿತಿ ಕಲೆಹಾಕಿದಾಗ ಅವರು ಪರಿಪೂರ್ಣ ವಿದ್ಯಾರ್ಥಿಗಳಾಗಲು ಸಾಧ್ಯ ಎಂದು ರಮೇಶ ಬಲಿದ ನುಡಿದರು.ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ವಿ ವಿ ಎಸ್ ಪ್ರೌಢ ಶಾಲೆಯ ಶಾಲಾ ಮಕ್ಕಳು ಗುರುವಾರದಂದು ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.ಪ್ರೌಢಶಾಲಾ ವಿದ್ಯಾರ್ಥಿಗಳು ವಿಜ್ಞಾನ, ಪರಿಸರ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸುಮಾರು ಹನ್ನೊಂದು ಮಾದರಿಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳು ತಾವು ತಯಾರಿಸಿರುವ ಮಾದರಿ ಅದರ ಉದ್ದೇಶ ಮತ್ತು ಅದರ ಪ್ರಾತ್ಯಕ್ಷಿಕೆ ಮಾಡಿ ತೋರಿಸಿದರು.ಪರಿಸರಕ್ಕೆ ಸಂಬಂಧಿಸಿದಂತೆ ಪ್ರದರ್ಶಿಸಿದ ಹಲವು ಮಾದರಿಗಳು ವಿದ್ಯಾರ್ಥಿಗಳ ಜ್ಞಾನ ವೃದ್ಧಿಸುವಂತಿದ್ದವು. ವಿಜ್ಞಾನ ಶಿಕ್ಷಕಿಯರಾದ ನಿವೇದಿತಾ ಹಿರೇಮಠ್ ,ಎಂ ಜಿ ಕುಲಕರ್ಣಿ ಅವರು ಮಾರ್ಗದರ್ಶಕರಾಗಿದ್ದರು.ಹೊರರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ, ಹೀಗೆ ಒಂದಿಷ್ಟು ಆಲೋಚನೆ, ಯೋಜನೆಗಳು, ಸಲಹೆ,…
ವಿಜಯಪುರ: ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರ ನೀಡಲಾಯಿತು.ಆದೇಶ ಪತ್ರ ವಿತರಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ ಮಾತನಾಡಿ, ದೇಶಾಭಿಮಾನ, ದೇಶದ ಪ್ರಗತಿಯನ್ನೇ ಉಸಿರಾಗಿಸಿಕೊಂಡಿರುವ ಹೆಮ್ಮೆಯ ಪಕ್ಷ ಬಿಜೆಪಿ. ಬಿಜೆಪಿಯ ಕಾರ್ಯಕರ್ತ ಎನ್ನುವುದೇ ಒಂದು ಅಭಿಮಾನದ ಸಂಗತಿ. ದೇಶದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸುವ ಸಂಕಲ್ಪ ಮಾಡಬೇಕಿದೆ, ಪ್ರಧಾನಮಂತ್ರಿ ಉಜ್ವಲ ಯೋಜನೆ, ಕಪ್ಪು ಹಣದ ವಿರುದ್ದ ಸಮರ, ಕಿಸಾನ್ ಸಮ್ಮಾನ್ ಮೊದಲಾದ ಯೋಜನೆಗಳು ಜನಸಾಮಾನ್ಯರಿಗೆ ಮುಟ್ಟಿವೆ, ಈ ರೀತಿಯ ಅಭಿವೃದ್ಧಿ ಪರಂಪರೆ ಮುಂದುವರೆಯಲು ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಲು ಪ್ರತಿಯೊಬ್ಬ ಕಾರ್ಯಕರ್ತ ಬಂಧುಗಳು ಶ್ರಮಿಸಬೇಕು, ಪಕ್ಷ ಅನೇಕ ಕಾರ್ಯಕರ್ತರಿಗೆ ನೂತನ ಜವಾಬ್ದಾರಿ ನೀಡಿದೆ, ಈ ಎಲ್ಲರೂ ತಮಗೆ ವಹಿಸಿದ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿ ಪಕ್ಷ ಸಂಘಟನೆಗೆ ಶ್ರಮಿಸಬೇಕು ಎಂದರು.ಇದೇ ಸಂದರ್ಭದಲ್ಲಿ ಬೆಳಗಾವಿ ವಿಭಾಗದ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಮಾತನಾಡಿದರು.ಇದೇ ಸಂದರ್ಭದಲ್ಲಿ ರಾಜ್ಯ ಓಬಿಸಿ ಮೋರ್ಚ ಉಪಾಧ್ಯಕ್ಷ…
