ತಿಕೋಟಾ: ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಹೆಚ್ಚಿಸಲು ಹಾಗೂ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ವಿಜ್ಞಾನ ವಸ್ತು ಪ್ರದರ್ಶನಗಳು ಅಗತ್ಯವಾಗಿದ್ದು ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ವಿಜ್ಞಾನ ಸೇರಿದಂತೆ ಇನ್ನಿತರ ವಿಷಯಗಳಲ್ಲಿ ಆಸಕ್ತಿವಹಿಸಿ ಆ ಬಗ್ಗೆ ಮಾಹಿತಿ ಕಲೆಹಾಕಿದಾಗ ಅವರು ಪರಿಪೂರ್ಣ ವಿದ್ಯಾರ್ಥಿಗಳಾಗಲು ಸಾಧ್ಯ ಎಂದು ರಮೇಶ ಬಲಿದ ನುಡಿದರು.
ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ವಿ ವಿ ಎಸ್ ಪ್ರೌಢ ಶಾಲೆಯ ಶಾಲಾ ಮಕ್ಕಳು ಗುರುವಾರದಂದು ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರೌಢಶಾಲಾ ವಿದ್ಯಾರ್ಥಿಗಳು ವಿಜ್ಞಾನ, ಪರಿಸರ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸುಮಾರು ಹನ್ನೊಂದು ಮಾದರಿಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳು ತಾವು ತಯಾರಿಸಿರುವ ಮಾದರಿ ಅದರ ಉದ್ದೇಶ ಮತ್ತು ಅದರ ಪ್ರಾತ್ಯಕ್ಷಿಕೆ ಮಾಡಿ ತೋರಿಸಿದರು.
ಪರಿಸರಕ್ಕೆ ಸಂಬಂಧಿಸಿದಂತೆ ಪ್ರದರ್ಶಿಸಿದ ಹಲವು ಮಾದರಿಗಳು ವಿದ್ಯಾರ್ಥಿಗಳ ಜ್ಞಾನ ವೃದ್ಧಿಸುವಂತಿದ್ದವು. ವಿಜ್ಞಾನ ಶಿಕ್ಷಕಿಯರಾದ ನಿವೇದಿತಾ ಹಿರೇಮಠ್ ,ಎಂ ಜಿ ಕುಲಕರ್ಣಿ ಅವರು ಮಾರ್ಗದರ್ಶಕರಾಗಿದ್ದರು.
ಹೊರರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ, ಹೀಗೆ ಒಂದಿಷ್ಟು ಆಲೋಚನೆ, ಯೋಜನೆಗಳು, ಸಲಹೆ, ಸೂಚನೆ, ಸಹಕಾರ ನೀಡುವಂತಹ ಮಕ್ಕಳ ಸ್ಮಾರ್ಟ್ ಸಿಟಿ ಕಲ್ಪನೆ ಅವರು ತಯಾರಿಸಿದ ಮಾದರಿಗೆ ಜೀವ ತುಂಬುವಂತಿತ್ತು ಎಂದು ಹಿರಿಯ ಉಪನ್ಯಾಸಕ ಎಸ್ ಜಿ ಲಕ್ಕುಂಡಿಮಠ ಹೇಳಿದರು.
ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿದ್ಯಾವರ್ಧಕ ವಿದ್ಯಾ ಸಂಸ್ಥೆಯ ಅಧ್ಯಕ್ಷ ನಳಿನಿಕಾಂತ ಸಾವಂತ , ಪ್ರಾಚಾರ್ಯ ಎಂ ಎ ಹಿರೇಮಠ್ ಸಂಸ್ಥೆಯ ಸದಸ್ಯರಾದ ಮಲ್ಲಪ್ಪ ಯಚ್ಚಿ , ಸಂಸ್ಥೆಯ ಸದಸ್ಯರು, ಎಸ್ ಎ ವಾಲಿಕಾರ, ಆರ್ ಬಿ ಶೇಡ್ಯಾಳ, ಐ ಕೆ ನದಾಫ್, ಧರೆಪ್ಪ ಸಿದ್ನಾಥ, ಶಿಕ್ಷಕರು ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

