ದೇವರಹಿಪ್ಪರಗಿ: ರಂಭಾಪುರಿಶ್ರೀಗಳಿಗೆ ಅಗೌರವ ತೋರಿ, ಅಮಾನವೀಯ ರೀತಿಯಲ್ಲಿ ವರ್ತಿಸಿದ ಘಟನೆ ಅತ್ಯಂತ ಖೇದಕರ ಹಾಗೂ ಖಂಡನೀಯ ಎಂದು ಜಡಿಮಠದ ಜಡಿಸಿದ್ಧೇಶ್ವರಶ್ರೀಗಳು ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಬಾಗಲಕೋಟೆ ಜಿಲ್ಲೆಯ ಕಲಾದಗಿಯಲ್ಲಿ ರಂಭಾಪುರಿಶ್ರೀಗಳಿಗೆ ಅಗೌರವ ತೋರಿ ಅಮಾನವೀಯ ರೀತಿಯಲ್ಲಿ ವರ್ತಿಸಿದ ಘಟನೆ ಖಂಡಿಸಿ ಹಾಗೂ ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡುವಂತೆ ಆಗ್ರಹಿಸಿ ರಂಭಾಪುರಿಶ್ರೀಗಳ ಸದ್ಭಕ್ತರಸಭೆ ಹಾಗೂ ಮನವಿ ಸಲ್ಲಿಕೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಶ್ರೀಗಳ ಕುರಿತು ಇಲ್ಲಸಲ್ಲದ ಆರೋಪ ಮಾಡುವುದರ ಜೊತೆಗೆ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಲಾಗಿದೆ. ಆರೋಪಿಗಳಿಗೆ ಕಾಲವೇ ತಕ್ಕ ಉತ್ತರ ನೀಡುತ್ತದೆ ಎಂದರು.
ನಿವೃತ್ತ ನೌಕರರ ಸಂಘದ ತಾಲ್ಲೂಕಾಧ್ಯಕ್ಷ ಸಿ.ಕೆ.ಕುದರಿ ಮಾತನಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ, ಶ್ರೀಗಳಿಗೆ ಅಗೌರವ ತೋರಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ವರದಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಸ್ಥಳೀಯ ಶ್ರೀಗಳು, ಪ್ರಗತಿಪಟ್ಟಣ ಸಹಕಾರಿ ಬ್ಯಾಂಕ್ ನಿರ್ದೇಶಕ ಬಾಬುಗೌಡ ಪಾಟೀಲ(ಜಿಡ್ಡಿಮನಿ), ಜಂಗಮಾಭಿವೃದ್ಧಿ ಸಂಘದ ನಗರ ಅಧ್ಯಕ್ಷ ನೀಲಯ್ಯ ಅರಳಿಮಟ್ಟಿ, ತಾಲ್ಲೂಕಾಧ್ಯಕ್ಷ ಸೋಮಶೇಖರ ಹಿರೇಮಠ, ಉಮಾಕಾಂತ ಸೊನ್ನದ, ಪಿ.ಜಿ.ಹಿರೇಮಠ, ಬಸಯ್ಯ ಮಲ್ಲಿಕಾರ್ಜುನಮಠ, ರಮೇಶ ಮಶಾನವರ, ಕಾಸಯ್ಯ ಸದಯ್ಯನಮಠ, ಕುಮಾರಸ್ವಾಮಿ ಹಿರೇಮಠ, ವೀರಭದ್ರಯ್ಯ ಇಂಡಿಮಠ, ಈರಣ್ಣಾ ಒಂಟೆತ್ತೀನ, ಮಲ್ಲು ಭಂಡಾರಿ, ತಿಪ್ಪಣ್ಣಾ ಮೇಲಿನಮನಿ, ಅಶೋಕ ಕೊಂಡಗೂಳಿ, ಶಿವಾನಂದ ರುದ್ರಗೌಡರ, ಶಿವಾನಂದ ವಸ್ತçದ, ಮಂಜುನಾಥ ಮಲ್ಲಿಕಾರ್ಜುನಮಠ, ವೀರೇಶ ಮಠಪತಿ, ವೀರಭದ್ರಯ್ಯ ಮಲ್ಲಿಕಾರ್ಜುನಮಠ, ಮಾದೇಶ ಹಿರೇಮಠ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

