Author: editor.udayarashmi@gmail.com

ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ವಿಜಯಪುರದಲ್ಲಿ ಬಿಜೆಪಿ ಪ್ರತಿಭಟನೆ ವಿಜಯಪುರ: ರಾಜ್ಯ ಕಾಂಗ್ರೆಸ್ ಸರಕಾರ ಎಸ್.ಸಿ./ಎಸ್.ಟಿ. ಸಮುದಾಯಕ್ಕೆ ಮೀಸಲಾದ ಎಸ್.ಇ.ಪಿ. ಟಿ.ಇ.ಪಿ. ಯೋಜನೆಯಲ್ಲಿನ ಅಂದಾಜು ೧೧,೬೦೦ ಕೋಟಿ ಅನುದಾನವನ್ನು ಕಡಿತ ಮಾಡಿ ಬೇರೆ ಯೋಜನೆಗಳಿಗೆ ಉಪಯೋಗಿಸಿ ಈ ಸಮುದಾಯಕ್ಕೆ ಅನ್ಯಾಯ ಮಾಡಿದ್ದನ್ನು ಖಂಡಿಸಿ ಬಿಜೆಪಿ ಜಿಲ್ಲಾ ಎಸ್.ಸಿ. ಮತ್ತು ಎಸ್.ಟಿ. ಮೋರ್ಚಾ ವತಿಯಿಂದ ಪ್ರತಿಭಟನೆ ಶುಕ್ರವಾರ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ನಗರದ ಗಾಂಧಿ ಸರ್ಕಲ್‌ನಿಂದ ಪ್ರತಿಭಟನೆ ಹೊರಟು ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ, ರಾಜ್ಯ ಕಾಂಗ್ರೆಸ್ ಸರಕಾರದ ಬಿಟ್ಟಿ ಭಾಗ್ಯ ಯೋಜನೆಗಳಿಂದ ಇಡೀ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರದಿಂದ ಪ್ರತಿ ವರ್ಷ ೬ ಸಾವಿರ ರೂ. ರಾಜ್ಯ ಸರಕಾರದಿಂದ ೪ ಸಾವಿರ ರೂ. ಸೇರಿ…

Read More

ಚಡಚಣ: ನೆಹರು ಯುವಕ ಕೇಂದ್ರ, ಎಂಇಎಸ್ ಶಿಕ್ಷಣ ಸಂಸ್ಥೆ ಮತ್ತು ಸಂಗೋಳ್ಳಿ ರಾಯಣ್ಣ ಬಿಗ್ರೇಡ್ ನಿವರಗಿ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ ಹಮ್ಮಿಕೊಳಲಾಯಿತು.ಇದೇ ಸಂಧರ್ಭದಲ್ಲಿ ಮುಖ್ಯ ಗುರುಮಾತೆ ಗಚ್ಚಿನಕಟ್ಟಿ ಮಾತನಾಡಿ, ಮಕ್ಕಳು ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು, ಕ್ರೀಡೆಯಿಂದ ಮಕ್ಕಳ ಮನಸ್ಸು ಪರಿಶುದ್ಧವಾಗುವುದು ಎಂದರು.ಐಟಿಐ ಕಾಲೇಜಿನ ಪ್ರಾಚಾರ್ಯ ಹಿರೇಮಠ ಮಾತನಾಡಿದರು. ಸಂಸ್ಥೆಯ ಜನ ಸಂಪರ್ಕಾಧಿಕಾರಿ ಗಚ್ಚಿನಕಟ್ಟಿ ಮಾತನಾಡಿ, ಶಾರೀರಿಕ ಹಾಗೂ ಮಾನಸಿಕವಾಗಿ ಸದೃಢವಾಗಲು ಕ್ರೀಡೆ ಅತೀ ಮುಖ್ಯ ಎಂದರು.ಮಾಳಿ ಸರ್, ಶಿಕ್ಷಕಿಯರಾದ ವೈಶಾಲಿ ಪಾಟೀಲ, ಎಮ್ ಎಸ್ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.ಶಿಕ್ಷಕರಾದ ಮಾನೆ ನಿರೂಪಣೆ ಮಾಡಿದರು. ನೆಹರು ಯುವಕ ಕೇಂದ್ರದ ಸ್ವಯಂ ಸೇವಕ ಬೀರಪ್ಪ ಕಲಕುಟಗಿ ಕ್ರಾರ್ಯಕ್ರಮ ನಡೆಸಿಕೊಟ್ಟರು.

Read More

ಕೆಂಭಾವಿ: ನಮ್ಮ ಸಂವಿಧಾನ ಜಗತ್ತಿನ ಶ್ರೇಷ್ಠ ಸಂವಿಧಾನವಾಗಿದೆ ಎಂದು ಮುಖ್ಯ ಗುರು ಮಲ್ಲಿಕಾರ್ಜುನ್ ಪಾಟೀಲ ಹೇಳಿದರು.ಅವರು ಮುದನೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಸಂವಿಧಾನ ಜಾಗೃತಿ ಜಾಥಾ ನಿಮಿತ್ಯವಾಗಿ ಪ್ರೌಢ ಶಾಲಾ ಮಕ್ಕಳಿಗೆ ಏರ್ಪಡಿಸಿದ ವಿವಿಧ ಭಾಷಣ, ರಸಪ್ರಶ್ನೆ, ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ನಿಂಗನಗೌಡ ದೇಸಾಯಿ ಮಾತನಾಡುತ್ತಾ” ನಮ್ಮ ಸಂವಿಧಾನ ನಮ್ಮ ಹೆಮ್ಮೆ” ನಮ್ಮ ಸಂವಿಧಾನ ನಮಗೆ ಮೂಲಭೂತ ಹಕ್ಕುಗಳು ನೀಡುವುದರ ಜೊತೆಗೆ, ಕರ್ತವ್ಯಗಳು ಕೂಡ ಕೊಟ್ಟಿದೆ. ಸಂವಿಧಾನದ ಶಿಲ್ಪಿಯಾದ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಸಂವಿಧಾನ ರಚನೆಯಲ್ಲಿ ಅಪಾರವಾಗಿದೆ. ಶ್ರೀಸಾಮಾನ್ಯನು ಕೂಡ ಅಸಾಮಾನ್ಯ ವ್ಯಕ್ತಿಯಾಗಿ ಬೆಳೆಯಲು ನಮ್ಮ ಸಂವಿಧಾನದಲ್ಲಿ ಅವಕಾಶವಿದೆ. ನಮ್ಮ ಸಂವಿಧಾನ ಸರ್ವರಿಗೂ ಸಮಾನತೆ ಸರ್ವರಿಗೂ ಸಹಭಾಗಿತ್ವದಕ್ಕೆ ಅವಕಾಶ ಮಾಡಿಕೊಟ್ಟಿದೆ. ಇಂತಹ ಮಹತ್ವಪೂರ್ಣ ಸಂವಿಧಾನವನ್ನು ಗೌರವಿಸುವುದರ ಜೊತೆಗೆ ಸದುಪಯೋಗ ಮಾಡಿಕೊಂಡು ತಾವು ಮುಂದೆ ಬರುವುದರ ಜೊತೆಗೆ ನಮ್ಮ ದೇಶಕ್ಕೆ ಒಳ್ಳೆಯ ಹೆಸರನ್ನು ತರಬೇಕೆಂದು ಮಕ್ಕಳಿಗೆ ಶಿಕ್ಷಕರು ಸಲಹೆ…

Read More

ನಿಡಗುಂದಿ: ಅಡುಗೆ ಮನೆ ಹಂತದಲ್ಲಿ ಕನ್ನಡ ಭಾಷೆಯನ್ನು ಇಂಗ್ಲಿಷ್ ಆವರಿಸುತ್ತಿರುವುದು ಆತಂಕದ ವಿಷಯ, ಹೀಗಾಗಿ ಮನೆ ಹಂತದಿಂದಲೇ ಕನ್ನಡ ಭಾಷೆ ಬಳಕೆ ಮಾಡುವ ಮೂಲಕ ಬೆಳೆಸುವ ಜವಾಬ್ದಾರಿ ಮಹಿಳೆಯರು ಮೇಲಿದೆ, ಕನ್ನಡ ಭಾಷೆಯಲ್ಲಿ ಅವ್ವ ಎನ್ನುವ ಪದಕ್ಕೆ ಅದರಲ್ಲಿ ಭಾವನೆಗಳು, ಬಂಧನಗಳು ಇವೆ ಅವ್ವ ಎನ್ನುವ ಪದಕ್ಕೆ ಸಾಕಷ್ಟು ಅರ್ಥಗಳು ಇವೆ ತಾಯಿ ,ಮಾತೃ , ಭೂಮಿ ,ಜನನಿ ಇವು ಎಲ್ಲಾ ಅರ್ಥಗಳು ಒಂದು ಶಬ್ದಕ್ಕೆ ನೂರಾರು ಪರ್ಯಾಯ ಶಬ್ದಗಳು ಎಲ್ಲಾದರೂ ಸಿಗುತ್ತವೆ ಅಂದ್ರೆ ನಮ್ಮ ಕನ್ನಡದಲ್ಲಿ ಮಾತ್ರ ಎಂದು ಸಿದ್ಧರೇಣುಕ ಶಿವಾಚಾರ್ಯ ಮಹಾಸ್ವಾಮಿಗಳು ಅರಳಲೇ ಕಟ್ಟಿಮನಿ ಚಿಮ್ಮಲಗಿ ಹೇಳಿದರು .ನಿಡಗುಂದಿ ತಾಲೂಕಿನ ಬಿದ್ನಾಳ ಗ್ರಾಮದಲ್ಲಿ ಹಮ್ಮಿಕೊಂಡಿರುವ ಗ್ರಾಮ ಘಟಕ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.ಕನ್ನಡಕ್ಕೆ ಅನ್ಯಾಯ ಆದಾಗ ಕನ್ನಡದ ನೆಲ ಜಲ ಭಾಷೆಗಾಗಿ ಪ್ರಪ್ರಥಮವಾಗಿ ಗಟ್ಟಿ ಧ್ವನಿ ಎತ್ತಿ ಬಿದಿಗಿಳಿದು ಹೊರಾಟ ಮಾಡಿರುವುದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ. ಇಂದು ಬಿದ್ನಾಳ ಗ್ರಾಮದಲ್ಲಿ ರಕ್ಷಣಾ…

Read More

ಮುದ್ದೇಬಿಹಾಳ: ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರ ಪಟ್ಟಾಧೀಕಾರ ಮಹೋತ್ಸವ ಅಂಗವಾಗಿ ಗ್ರಾಮದ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಫೆ.೨೫ ರಂದು ಸಂಜೆ ೭ಗಂಟೆಗೆ ಮಹಿಳಾ ಸಂಪದ (ಗೃಹ ಲಕ್ಷ್ಮೀಯರ ಸಮಾವೇಶ) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸುಗೂರಿನ ಚನ್ನರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದು, ಹಾವಗಿ ಶಾಂತಲಿಂಗೇಶ್ವರಮಠದ ಶಾಂತವೀರ ಶಿವಾಚಾರ್ಯ ಸ್ವಾಮಿಗಳು ಪುರಾಣ ನುಡಿಗಳನ್ನಾಡಲಿದ್ದಾರೆ. ಬಾಗಲಕೋಟೆ ಜಿ.ಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ವಿಜಯಪುರ ಡಿಸಿಸಿ ಬ್ಯಾಂಕ್ ನಿರ್ದೇಶಕಿ ಸಂಯುಕ್ತ ಪಾಟೀಲ, ದೀಕ್ಷ ಬಿಸೇ, ದೀಪಾ ಸುಂಕದ ಮುಖ್ಯ ಅತಿಥಿಗಳಾಗಿ, ಗಿರಿಜಾ ಕಡಿ, ನಂದಾ ಬಾಗೇವಾಡಿ, ಇಂದ್ರಬಾಯಿ ಪಾಟೀಲ, ಸಿದ್ದಮ್ಮ ಒಣರೊಟ್ಟಿ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Read More

ಸಿಂದಗಿ: ನಗರದ ಲಿಟಲ್ ವಿಂಗ್ಸ್ ಪ್ರಿ ಸ್ಕೂಲ್, ಶನಿವಾರ ಬೆಳಿಗ್ಗೆ ೧೦.೩೦ ಗಂಟೆಗೆ ಮಾಂಗಲ್ಯ ಭವನದಲ್ಲಿ ಲಿಟಲ್ ವಿಂಗ್ಸ್ ಫೆಸ್ಟಿವಲ್ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಸಮಾರಂಭ ಜರುಗುವುದು.ಈ ಕಾರ್ಯಕ್ರಮದಲ್ಲಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಪವಿತ್ರಾಜಿ ಸಾನಿಧ್ಯ ವಹಿಸುವರು. ಶಾಸಕ ಅಶೋಕ ಮನಗೂಳಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸಿಪಿಆಯ್ ನಾನಾಗೌಡ ಪೊಲೀಸ್ ಪಾಟೀಲ, ಪ್ರಥಮ ದರ್ಜೆ ಗುತ್ತಿಗೆದಾರ ಶ್ರೀಶೈಲಗೌಡ ಬಿರಾದಾರ, ಕನ್ನಡ ಸಾಹಿತ್ಯ ಪರಿಷತ್ತು ನಿಕಟ ಪೂರ್ವ ಅಧ್ಯಕ್ಷ ರಾಜಶೇಖರ ಕೂಚಬಾಳ, ಪ್ರಶಾಂತಗೌಡ ಪಾಟೀಲ, ಉಪನ್ಯಾಸಕ ಸಿದ್ದಲಿಂಗ ಕಿಣಿಗಿ, ಪಾಲಕ ಪ್ರತಿನಿಧಿ ಸುರೇಶ ಯರನಾಳ ಭಾಗವಹಿಸುವರು. ಶಹಾಪುರದ ಶಿಕ್ಷಕ ತಿಪ್ಪಣ್ಣ ಕ್ಯಾತನಾಳ, ಶರಣಗೌಡ ಬಿರಾದಾರ, ಪಂಚಾಕ್ಷರಿ ಸ್ಥಾವರಮಠ, ವೀರಭದ್ರ ಬಡಿಗೇರ, ಶ್ರೀಶೈಲ ಖೇಡಗಿ, ನಾಗಪ್ಪ ಯಲಗಟ್ಟಿ, ರಾಮನಗೌಡ ದರ್ಶನಾಪುರ, ಸಿಂದಗಿಯ ಎಚ್.ಕೆ ನಾಗಣಸುರ, ಕುದರತಲಿ ಭೂಸನೂರ, ಸಿದ್ದಪ್ಪ ಮಾರಿಯಾಳ, ಜೆ.ಬಿ.ಪಾಟೀಲ, ನಾಗರಾಜ ಪತ್ತಾರ, ಎಚ್.ಎನ್.ಚೌದರಿ, ಬಸವರಾಜ ಹಡಪದ, ಬಸವಂತರಾಯ ಹೂಗಾರ, ರಾಯಪ್ಪ ಇವಣಗಿ,ಮಲ್ಲಮ್ಮ ಅಡಕಿ, ವಿಜಯಪುರದ ಬಸವರಾಜ ಬೇನೂರ…

Read More

ಸಿಂದಗಿ: ತಾಲೂಕಿನ ನ್ಯಾಯಬೆಲೆ ಅಂಗಡಿಕಾರರ ಸಂಘದ ಅಧ್ಯಕ್ಷರಾಗಿ ಗಣಿಹಾರ ಗ್ರಾಮದ ಅಸ್ಲಾಂ ಗೋಟ್ಯಾಳ, ಕಾರ್ಯದರ್ಶಿಯಾಗಿ ಬೋರಗಿ ಗ್ರಾಮದ ಭೀಮನಗೌಡ ಪಾಟೀಲ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Read More

ವಿಜಯಪುರ: ವಿದ್ಯಾರ್ಥಿಗಳು ಮೊದಲು ಪರೀಕ್ಷಾ ಭಯದಿಂದ ಹೊರಬರಬೇಕು. ಆತ್ಮವಿಶ್ವಾಸವನ್ನು ಪಾಠ-ಪ್ರವಚನಗಳನ್ನು ಓದಿಕೊಂಡು ಮನನ ಮಾಡಿಕೊಳ್ಳಬೇಕು. ತರಗತಿಗಳಲ್ಲಿ ಶಿಕ್ಷಕರು ಕೇಳಿ ಕಲಿತ ಪಾಠ-ಪ್ರವಚನಗಳನ್ನು ಹಲವು ಸಲ ಓದಿ ಮತ್ತು ಬರೆದು ಪರೀಕ್ಷೆಯನ್ನು ಆತ್ಮ ವಿಶ್ವಾಸದಿಂದ ಬರೆಯಲು ಸಿದ್ಧರಾಗಬೇಕು ಎಂದು ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಿ.ಎಲ್.ಚವ್ಹಾಣ್‌ ಹೇಳಿದರು.ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶುಭಹಾರೈಕೆ ಸಮಾರಂಭದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು. ಆತ್ಮವಿಶ್ವಾಸ ಅನ್ನೋದು ಮನುಷ್ಯನಿಗೆ ತುಂಬಾನೇ ಮುಖ್ಯವಾಗುತ್ತದೆ. ನಮ್ಮಲ್ಲಿ ಎಷ್ಟೇ ಟ್ಯಾಲೇಂಟ್ ಇದ್ರೂ ಕೂಡ ನಾವು ಸಾಧನೆ ಮಾಡೋದಿಕ್ಕೆ ಸಾಧ್ಯವಿಲ್ಲ. ಇದರ ಜೊತೆಗೆ ಆತ್ಮ ವಿಶ್ವಾಸ ಇದ್ರೆ ಮಾತ್ರ ಜೀವನದಲ್ಲಿ ಮುಂದೆ ಸಾಗೋದಿಕ್ಕೆ ಸಾಧ್ಯ ಎಂದು ಹೇಳಿದರು.ಮುಖ್ಯ ಅತಿಥಿ ಸ್ಥಾನವಹಿಸಿದ್ದ ಬಂಜಾರಾ ಪಿಯು ಕಾಲೇಜು ಉಪನ್ಯಾಸಕ ಶಿವಕುಮಾರ ಬುಗಡಿ ಮಾತನಾಡಿದರು.ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಎ.ವಿ.ಪಾಟೀಲ ಮಾತನಾಡಿ, ಶ್ರದ್ಧೆಯಿಂದ ಅಭ್ಯಾಸ ಮಾಡುವವನು ದೊಡ್ಡ…

Read More

ವಿಜಯಪುರ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಖಾತೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ ಪಾಟೀಲ ಅವರು ಫೆ.೨೪ ರಿಂದ ಫೆ.೨೫ರವರೆಗೆ ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಫೆ.೨೪ರಂದು ಬೆಳಗ್ಗೆ ೧೧.೩೦ ಗಂಟೆಗೆ ಜಿಲ್ಲೆಯ ಇಂಡಿ ತಾಲೂಕು ಕ್ರೀಡಾಂಗಣದ ಹತ್ತಿರ ನಡೆಯುವ ಜಿಲ್ಲಾ ಗಾಣಿಗ ಸಮಾವೇಶದಲ್ಲಿ ಭಾಗವಹಿಸುವರು. ನಂತರ ಮಧ್ಯಾಹ್ನ ೧.೩೦ ಗಂಟೆಗೆ ಇಂಡಿಯಿಂದ ಹೊರಟು, ವಿಜಯಪುರಕ್ಕೆ ಆಗಮಿಸುವರು. ಮಧ್ಯಾಹ್ನ ೪ ಗಂಟೆಗೆ ಸಚಿವರ ನಿವಾಸದಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸುವರು. ಅಂದು ವಿಜಯಪುರದಲ್ಲಿ ವಾಸ್ತವ್ಯ ಮಾಡುವರು.ಫೆ.೨೫ರಂದು ಬೆಳಗೆ ೧೧.೧೫ಕ್ಕೆ ಜಿಲ್ಲೆಯ ಕಾತ್ರಾಳದಲ್ಲಿ ಭಕ್ತ ಕನಕದಾಸ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೂತನ ಪುತ್ಥಳಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ ೨ ಗಂಟೆಗೆ ಕಾತ್ರಾಳದಿಂದ ನರಗುಂದಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Read More

ಮುದ್ದೇಬಿಹಾಳ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆ.೨೫ ರಂದು ನಡೆಯಲಿರುವ ಸಂವಿಧಾನ ಜಾಗೃತಿ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಸಾರ್ವಜನಿಕರಿಗೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಉಚಿತ ಕೆಎಸ್‌ಆರ್‌ಟಿಸಿ ಕೆಂಪು ಬಸ್ ಸೌಲಭ್ಯ ಕಲ್ಪಿಸಲಾಗಿದೆ.ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕು ವ್ಯಾಪ್ತಿಯ ಸಾರ್ವಜನಿಕರು ಪಟ್ಟಣದ ಹುಡ್ಕೋದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಕಾರ್ಯಲಯದಲ್ಲಿ ಸಿಗುವ ಅರ್ಜಿಯನ್ನು ಸ್ವೀಕರಿಸಿ ಭರ್ತಿ ಮಾಡಿ ಜೊತೆಗೆ ಜಾತಿ ಪ್ರಮಾಣ ಪತ್ರ, ಆಧಾರ ಕಾರ್ಡ್, ಕುಟುಂಬ ಪಡಿತರ ಚೀಟಿಯ ಝರಾಕ್ಸ್ ಪ್ರತಿಗಳನ್ನು ಫೆ.೨೪ ರ ಮದ್ಯಾಹ್ನ ೧ ಗಂಟೆಯ ಒಳಗೆ ನೀಡಿದಲ್ಲಿ ಉಚಿತವಾಗಿ ಪ್ರಯಾಣಿಸಿ ಭಾಗವಹಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ ಲಮಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More