ವಿಜಯಪುರ: ವಿದ್ಯಾರ್ಥಿಗಳು ಮೊದಲು ಪರೀಕ್ಷಾ ಭಯದಿಂದ ಹೊರಬರಬೇಕು. ಆತ್ಮವಿಶ್ವಾಸವನ್ನು ಪಾಠ-ಪ್ರವಚನಗಳನ್ನು ಓದಿಕೊಂಡು ಮನನ ಮಾಡಿಕೊಳ್ಳಬೇಕು. ತರಗತಿಗಳಲ್ಲಿ ಶಿಕ್ಷಕರು ಕೇಳಿ ಕಲಿತ ಪಾಠ-ಪ್ರವಚನಗಳನ್ನು ಹಲವು ಸಲ ಓದಿ ಮತ್ತು ಬರೆದು ಪರೀಕ್ಷೆಯನ್ನು ಆತ್ಮ ವಿಶ್ವಾಸದಿಂದ ಬರೆಯಲು ಸಿದ್ಧರಾಗಬೇಕು ಎಂದು ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಿ.ಎಲ್.ಚವ್ಹಾಣ್ ಹೇಳಿದರು.
ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶುಭಹಾರೈಕೆ ಸಮಾರಂಭದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು. ಆತ್ಮವಿಶ್ವಾಸ ಅನ್ನೋದು ಮನುಷ್ಯನಿಗೆ ತುಂಬಾನೇ ಮುಖ್ಯವಾಗುತ್ತದೆ. ನಮ್ಮಲ್ಲಿ ಎಷ್ಟೇ ಟ್ಯಾಲೇಂಟ್ ಇದ್ರೂ ಕೂಡ ನಾವು ಸಾಧನೆ ಮಾಡೋದಿಕ್ಕೆ ಸಾಧ್ಯವಿಲ್ಲ. ಇದರ ಜೊತೆಗೆ ಆತ್ಮ ವಿಶ್ವಾಸ ಇದ್ರೆ ಮಾತ್ರ ಜೀವನದಲ್ಲಿ ಮುಂದೆ ಸಾಗೋದಿಕ್ಕೆ ಸಾಧ್ಯ ಎಂದು ಹೇಳಿದರು.
ಮುಖ್ಯ ಅತಿಥಿ ಸ್ಥಾನವಹಿಸಿದ್ದ ಬಂಜಾರಾ ಪಿಯು ಕಾಲೇಜು ಉಪನ್ಯಾಸಕ ಶಿವಕುಮಾರ ಬುಗಡಿ ಮಾತನಾಡಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಎ.ವಿ.ಪಾಟೀಲ ಮಾತನಾಡಿ, ಶ್ರದ್ಧೆಯಿಂದ ಅಭ್ಯಾಸ ಮಾಡುವವನು ದೊಡ್ಡ ಸಾಧಕನಾಗುತ್ತಾನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಗಲುವ ವಿದ್ಯಾರ್ಥಿಗಳ ಅಂತರಾಳದಲ್ಲಿ ಹುದುಗಿದ್ದ ಸಿಹಿ-ಕಹಿ ನೆನಪುಗಳ ಬುತ್ತಿ ಒಂದೊಂದಾಗಿ ಬಿಚ್ಚ ತೊಡಗಿತು. ವಿದ್ಯಾರ್ಥಿಗಳ ಆ ಅಳು ಮುಖದಲ್ಲಿ ನೋವಿತ್ತು, ನಲಿವಿತ್ತು, ತೃಪ್ತಿ ಇತ್ತು. ಉನ್ನತ ಶಿಕ್ಷಣ ಪಡೆಯುವ ಆನಂದ. ಜತೆಗಿದ್ದವರನ್ನು ಕಳೆದುಕೊಳ್ಳುವ ನೋವು, ಶಾಲೆಯ ಸುಂದರ ರಸನಿಮಿಷಗಳನ್ನು ಸದುಪಯೋಗಪಡಿಸಲಾಗದ ಅಸಂತೃಪ್ತಿ, ಶಾಲೆ ಹಾಗೂ ಕಿರಿಯರನ್ನು ಅಗಲಿದ ವಿದ್ಯಾರ್ಥಿಗಳ ಮನದಲ್ಲಿ ಇನ್ನೂ ಅಚ್ಚಳಿಯದೆ ಉಳಿದುಕೊಂಡಿದೆ. ಕಿರಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಮ್ಮುಖದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಆಡಿದ ಮಾತುಗಳು ಶಾಲಾ ಜೀವನವನ್ನು ತೆರೆದಿಟ್ಟಿತು.
ಶಾಲಾ ವರದಿ ವಾಚನವನ್ನು ಆರ್.ವಿ.ಭುಜಂಗನವರ ಓದಿದರು.
ಆದರ್ಶ ವಿದ್ಯಾರ್ಥಿ ಅಜೀತ ಚವ್ಹಾಣ್, ಆದರ್ಶ ವಿದ್ಯಾರ್ಥಿನಿ ಅಶ್ವೀನಿ ಚವ್ಹಾಣ್, ಉತ್ತಮ ಕ್ರೀಡಾಪಟು ವಿಶಾಲ ವಾಲಿಕಾರ, ಉತ್ತಮ ಕ್ರೀಡಾಪಟು ವಿದ್ಯಾರ್ಥಿನಿ ತೇಜಶ್ವಿನಿ ರಾಠೋಡ, ಉತ್ತಮ ಗಾಯಕ ಪ್ರೀತಮ್ ಕರ್ಜಗಿ, ಉತ್ತಮ ಗಾಯಕಿ ರೇಖಾ ನಾಯಕ, ಆಂಗ್ಲ ಮಾಧ್ಯಮದಲ್ಲಿ ಆದರ್ಶ ವಿದ್ಯಾರ್ಥಿ ಸಂದೀಪ ಚವ್ಹಾಣ್, ಆದರ್ಶ ವಿದ್ಯಾರ್ಥಿನಿ ಐಶ್ವರ್ಯ ಪಟ್ಟದ, ಉತ್ತಮ ಕ್ರೀಡಾಪಟು ಆದರ್ಶ ರಾಠೋಡ, ಉತ್ತಮ ಗಾಯಕಿ ಸುಹಾಶಿನಿ ಕಿಟ್ಟಾರವರು ಪಡೆದರು.
ಈ ಸಂದರ್ಭದಲ್ಲಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಸಂದೀಪ ರಾಠೋಡ, ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಎಂ.ಬಿ.ಪೂಜಾರಿ ಸೇರಿದಂತೆ ಶಿಕ್ಷಕ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ವಾಗತ ಶಾಲೆಯ ಮುಖ್ಯ ಗುರು ಇ.ಡಿ.ಲಮಾಣಿ, ನಿರೂಪಣೆ ಎ.ಎಂ.ನಾಗೊಂಡ ಹಾಗೂ ವಂದನಾರ್ಪಣೆಯನ್ನು ಎಸ್.ಕೆ.ಶಿಂಧೆ ನೆರವೇರಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

