ಸಿಂದಗಿ: ನಗರದ ಲಿಟಲ್ ವಿಂಗ್ಸ್ ಪ್ರಿ ಸ್ಕೂಲ್, ಶನಿವಾರ ಬೆಳಿಗ್ಗೆ ೧೦.೩೦ ಗಂಟೆಗೆ ಮಾಂಗಲ್ಯ ಭವನದಲ್ಲಿ ಲಿಟಲ್ ವಿಂಗ್ಸ್ ಫೆಸ್ಟಿವಲ್ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಸಮಾರಂಭ ಜರುಗುವುದು.
ಈ ಕಾರ್ಯಕ್ರಮದಲ್ಲಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಪವಿತ್ರಾಜಿ ಸಾನಿಧ್ಯ ವಹಿಸುವರು. ಶಾಸಕ ಅಶೋಕ ಮನಗೂಳಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸಿಪಿಆಯ್ ನಾನಾಗೌಡ ಪೊಲೀಸ್ ಪಾಟೀಲ, ಪ್ರಥಮ ದರ್ಜೆ ಗುತ್ತಿಗೆದಾರ ಶ್ರೀಶೈಲಗೌಡ ಬಿರಾದಾರ, ಕನ್ನಡ ಸಾಹಿತ್ಯ ಪರಿಷತ್ತು ನಿಕಟ ಪೂರ್ವ ಅಧ್ಯಕ್ಷ ರಾಜಶೇಖರ ಕೂಚಬಾಳ, ಪ್ರಶಾಂತಗೌಡ ಪಾಟೀಲ, ಉಪನ್ಯಾಸಕ ಸಿದ್ದಲಿಂಗ ಕಿಣಿಗಿ, ಪಾಲಕ ಪ್ರತಿನಿಧಿ ಸುರೇಶ ಯರನಾಳ ಭಾಗವಹಿಸುವರು. ಶಹಾಪುರದ ಶಿಕ್ಷಕ ತಿಪ್ಪಣ್ಣ ಕ್ಯಾತನಾಳ, ಶರಣಗೌಡ ಬಿರಾದಾರ, ಪಂಚಾಕ್ಷರಿ ಸ್ಥಾವರಮಠ, ವೀರಭದ್ರ ಬಡಿಗೇರ, ಶ್ರೀಶೈಲ ಖೇಡಗಿ, ನಾಗಪ್ಪ ಯಲಗಟ್ಟಿ, ರಾಮನಗೌಡ ದರ್ಶನಾಪುರ, ಸಿಂದಗಿಯ ಎಚ್.ಕೆ ನಾಗಣಸುರ, ಕುದರತಲಿ ಭೂಸನೂರ, ಸಿದ್ದಪ್ಪ ಮಾರಿಯಾಳ, ಜೆ.ಬಿ.ಪಾಟೀಲ, ನಾಗರಾಜ ಪತ್ತಾರ, ಎಚ್.ಎನ್.ಚೌದರಿ, ಬಸವರಾಜ ಹಡಪದ, ಬಸವಂತರಾಯ ಹೂಗಾರ, ರಾಯಪ್ಪ ಇವಣಗಿ,ಮಲ್ಲಮ್ಮ ಅಡಕಿ, ವಿಜಯಪುರದ ಬಸವರಾಜ ಬೇನೂರ ಇವರಿಗೆ ಪ್ರಸಕ್ತ ಸಾಲಿನ ಮಂದಾರ ಸಿರಿ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ರಾಷ್ಟ್ರ ಮಟ್ಟದ ಕ್ರೀಡಾಪಟು ಪ್ರಜ್ವಲ ತಳವಾರ, ರಾಜ್ಯ ಮಟ್ಟದ ಸಂಗೀತ ಪ್ರಶಸ್ತಿ ವಿಜೇತೆ ಕಾವ್ಯಾ ನಾಯ್ಕ, ನಿವೃತ್ತ ಶಿಕ್ಷಕ ಪ್ರಭುಲಿಂಗ ಲೋಣಿ, ಬಿ.ಸಿ.ಬಿರಾದಾರ, ಸಿದ್ದಣ್ಣ ಚೌಧರಿ, ಶಿವಶಂಕರ ಚೌಧರಿ, ಬಸವರಾಜ ಕಟಗಿಗಾಣ, ಲಕ್ಷ್ಮಿ ರೆಬಿನಾಳ, ವಿದ್ಯಾ ಬಡಿಗೇರ, ಬಸವರಾಜ ಗುರುಶೆಟ್ಟಿ, ಎಂ.ಬಿ.ಅಲ್ದಿ, ವಿಜಯಲಕ್ಷ್ಮಿ ಸಗರ, ಜ್ಞಾನೇಶ ಗುರವ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಶಾಲೆಯ ಮುಖ್ಯೋಪಾದ್ಯಾಯಿನಿ ಪೂಜಾ ಗಾಯಕವಾಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Subscribe to Updates
Get the latest creative news from FooBar about art, design and business.
Related Posts
Add A Comment
