ನಿಡಗುಂದಿ: ಅಡುಗೆ ಮನೆ ಹಂತದಲ್ಲಿ ಕನ್ನಡ ಭಾಷೆಯನ್ನು ಇಂಗ್ಲಿಷ್ ಆವರಿಸುತ್ತಿರುವುದು ಆತಂಕದ ವಿಷಯ, ಹೀಗಾಗಿ ಮನೆ ಹಂತದಿಂದಲೇ ಕನ್ನಡ ಭಾಷೆ ಬಳಕೆ ಮಾಡುವ ಮೂಲಕ ಬೆಳೆಸುವ ಜವಾಬ್ದಾರಿ ಮಹಿಳೆಯರು ಮೇಲಿದೆ, ಕನ್ನಡ ಭಾಷೆಯಲ್ಲಿ ಅವ್ವ ಎನ್ನುವ ಪದಕ್ಕೆ ಅದರಲ್ಲಿ ಭಾವನೆಗಳು, ಬಂಧನಗಳು ಇವೆ ಅವ್ವ ಎನ್ನುವ ಪದಕ್ಕೆ ಸಾಕಷ್ಟು ಅರ್ಥಗಳು ಇವೆ ತಾಯಿ ,ಮಾತೃ , ಭೂಮಿ ,ಜನನಿ ಇವು ಎಲ್ಲಾ ಅರ್ಥಗಳು ಒಂದು ಶಬ್ದಕ್ಕೆ ನೂರಾರು ಪರ್ಯಾಯ ಶಬ್ದಗಳು ಎಲ್ಲಾದರೂ ಸಿಗುತ್ತವೆ ಅಂದ್ರೆ ನಮ್ಮ ಕನ್ನಡದಲ್ಲಿ ಮಾತ್ರ ಎಂದು ಸಿದ್ಧರೇಣುಕ ಶಿವಾಚಾರ್ಯ ಮಹಾಸ್ವಾಮಿಗಳು ಅರಳಲೇ ಕಟ್ಟಿಮನಿ ಚಿಮ್ಮಲಗಿ ಹೇಳಿದರು .
ನಿಡಗುಂದಿ ತಾಲೂಕಿನ ಬಿದ್ನಾಳ ಗ್ರಾಮದಲ್ಲಿ ಹಮ್ಮಿಕೊಂಡಿರುವ ಗ್ರಾಮ ಘಟಕ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಕನ್ನಡಕ್ಕೆ ಅನ್ಯಾಯ ಆದಾಗ ಕನ್ನಡದ ನೆಲ ಜಲ ಭಾಷೆಗಾಗಿ ಪ್ರಪ್ರಥಮವಾಗಿ ಗಟ್ಟಿ ಧ್ವನಿ ಎತ್ತಿ ಬಿದಿಗಿಳಿದು ಹೊರಾಟ ಮಾಡಿರುವುದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ. ಇಂದು ಬಿದ್ನಾಳ ಗ್ರಾಮದಲ್ಲಿ ರಕ್ಷಣಾ ವೇದಿಕೆ ಉದ್ಘಾಟನೆ ಆಗ್ತಾ ಇದೆ. ಊರಿನ ಗ್ರಾಮಸ್ಥರು ಹಾಗೂ ತಾಯಂದಿರು ನೀವು ಎಲ್ಲಾರೂ ಸೇರಿ ನಮ್ಮ ರಕ್ಷಣಾ ವೇದಿಕೆ ಪದಾಧಿಕಾರಿಗಳಿಗೆ ಬೆಂಬಲವನ್ನು ಕೊಡಿ, ಸಣ್ಣ ಸಮಸ್ಯೆ ಇಂದ ಹಿಡಿದು ದೊಡ್ಡ ಸಮಸ್ಯೆ ಇದ್ದರೂ ಕೂಡಾ ಈ ನಿಮ್ಮ ಸಮಸ್ಯೆಯನ್ನು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಬಗೆಹರಿಸುತ್ತದೆ ಎಂದು ತಾಲೂಕು ಅಧ್ಯಕ್ಷ ಆನಂದ ಹಡಗಲಿ ಹೇಳಿದರು.
ಬಸವರಾಜ ತಾಳಿಕೋಟಿ, ಗೌಸು ಮುಲ್ಲಾ, ಸತೀಶ್ ನರಸರಡ್ಡಿ, ಶಿವಾನಂದ ಹೊನ್ಯಾಳ್ ಮಾತನಾಡಿದರು.
ಪದಗ್ರಹಣ
ಕರ್ನಾಟಕ ರಕ್ಷಣಾ ವೇದಿಕೆ ನೂತನ ಅಧ್ಯಕ್ಷರಾಗಿ, ಸಂತೋಷ.ಮಾ.ಬಿರಾದಾರ, ಉಪಾಧ್ಯಕ್ಷರಾಗಿ ಸುರೇಶ .ಸಿ.ತುಪ್ಪದ, ಕಾರ್ಯದರ್ಶಿಯಾಗಿ ಗೌಸು ಮುಲ್ಲಾ, ಪ್ರಧಾನಕಾರ್ಯದರ್ಶಿಯಾಗಿ ಬಸನಗೌಡ ಮೇಟಿ, ಖಜಾಂಚಿಯಾಗಿ ಮಹಾಂತೇಂಶ ಬಿರಾದಾರ ಸೇರಿದಂತೆ ಎಲ್ಲ ಸದಸ್ಯರು ಪದಗ್ರಹಣ ಸ್ವೀಕರಿಸಿದರು.
ಸಿ ಎಸ್ ಭಾವಿಕಟ್ಟಿ ಮುಖ್ಯ ಗುರುಗಳು ಬಿದ್ನಾಳ, ಎಚ್.ಎನ್.ಮಾಶಟ್ಟಿ ಶಿಕ್ಷಕರು ಬಿದ್ನಾಳ ಕಾರ್ಯಕ್ರಮದ ನಿರೂಪಣೆ ಮಾಡಿದರು .
ಈ ಸಂದರ್ಭದಲ್ಲಿ ಶ್ರೀಕಾಂತ್ ರಾಠೋಡ, ರಮೇಶ ನರಸರಡ್ಡಿ, ಮುರುಗೇಶ್ ಗಣಾಚಾರಿ, ಬಸನಗೌಡ ಪಾಟೀಲ್, ಸಂತೋಷ ಕಡಿ, ಗುರುನಾಥ ಎಸ್ ಗಣಾಚಾರಿ, ಯಲಗೂರದಪ್ಪ ಸಿ.ದಂಡಿನ, ಬಾಷಾ ದಿಂಡವಾರ, ಶಂಕರಗೌಡ ಮೇಟಿ, ಸಂಗನಗೌಡ ಮೇಟಿ, ಈರಯ್ಯ ಬಂಗಾರಗುಂಡ, ಶರಣಯ್ಯ ಗಣಾಚಾರಿ, ಬೀಮನಗೌಡ ಬಿರಾದಾರ್, ನಜೀರಸಾಹೇಬ ಚಪ್ಪರಬಂದ, ಗುರುಸಿದ್ದಪ್ಪ ಗೌಡ ಬಿರಾದಾರ, ಮುಸ್ತಾಕಿನ ವಾಲಿಕಾರ, ಮಹಾಂತಗೌಡ ಪಾಟೀಲ್, ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

